ಭಾರತದಲ್ಲಿರುವ ಪ್ರಮುಖ ಎಲೆಕ್ಟ್ರಿಕ್ ಕಾರುಗಳಿವು
ದೀಪಾವಳಿ ಹಬ್ಬವು ಹತ್ತಿರದಲ್ಲಿದ್ದು, ದೆಹಲಿಯಲ್ಲಿ ಮತ್ತೊಮ್ಮೆ ವಾಯು ಮಾಲಿನ್ಯವು ಹೆಚ್ಚಾಗುವ ಆತಂಕಗಳಿವೆ. ದೆಹಲಿಯಲ್ಲಿ ಮಾಲಿನ್ಯ ಪ್ರಮಾಣವು ಮಿತಿ ಮೀರಿದೆ. ಮಾಲಿನ್ಯ ಪ್ರಮಾಣವನ್ನು ಕಡಿಮೆಗೊಳಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ವರದಿಗಳ ಪ್ರಕಾರ ವಾಹನಗಳಿಂದ ಉಂಟಾಗುವ ಮಾಲಿನ್ಯವು ಪ್ರತಿದಿನವು ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ದೆಹಲಿಯಲ್ಲಿ ಹತ್ತು ವರ್ಷ ಹಳೆಯದಾದ ಡೀಸೆಲ್ ಕಾರುಗಳನ್ನು ನಿಷೇಧಿಸಲಾಗುತ್ತಿದೆ. ಈ ಕಾರಣಕ್ಕೆ ಸರ್ಕಾರವು ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳ ಬದಲಿಗೆ, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಮುಂದಾಗಿದೆ.

ಮುಂಬರುವ ದಿನಗಳಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಈ ಕಾರಣಕ್ಕಾಗಿ ಹಲವಾರು ವಾಹನ ತಯಾರಕ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್, ಸಿಎನ್‍ಜಿ ಹಾಗೂ ಹೈಬ್ರಿಡ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಈಗಾಗಲೇ ಹಲವು ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿವೆ. ಮಹೀಂದ್ರಾದಂತಹ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುತ್ತಿವೆ. ಹ್ಯುಂಡೈ ಹಾಗೂ ಟಾಟಾ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿವೆ.

ಲಗ್ಷುರಿ ಕಾರು ತಯಾರಕ ಕಂಪನಿಗಳೂ ಸಹ ಪೂರ್ತಿ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಹೈಬ್ರಿಡ್ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಮಹೀಂದ್ರಾ ಇ20
ಚೇತನ್ ಮೈನಿರವರು ಮೊದಲಿಗೆ ಈ ಬೇಬಿ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದರು. ನಂತರ ಮಹೀಂದ್ರಾ ಕಂಪನಿಯು ಈ ಕಾರ್ ಅನ್ನು ಖರೀದಿಸಿತು. ನಂತರ ಇ20 ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.

ಈ ಕಾರಿನಲ್ಲಿ ಇಬ್ಬರು ಮಾತ್ರ ಕುಳಿತು ಪ್ರಯಾಣ ಮಾಡಬಹುದಾಗಿದೆ. ಮಹೀಂದ್ರಾ ಕಂಪನಿಯು ಇ20 ಪ್ಲಸ್ ಕಾರ್ ಅನ್ನು ಬಿಡುಗಡೆಗೊಳಿಸುವ ಆಲೋಚನೆಯಲ್ಲಿದೆ. ಈ ಕಾರಿನಲ್ಲಿ ನಾಲ್ಕು ಜನರು ಕುಳಿತು ಪ್ರಯಾಣಿಸಬಹುದಾಗಿದೆ. ಈ ನಾಲ್ಕು ಸೀಟರ್ ಕಾರಿನ ಬೆಲೆಯು ರೂ.6.07 ಲಕ್ಷಗಳಾಗಿದೆ. ಕಂಪನಿಯ ಪ್ರಕಾರ ಈ ಕಾರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 80 ಕಿ.ಮೀವರೆಗೂ ಚಲಿಸಬಹುದು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟಾಟಾ ಟಿಗೊರ್ ಎಲೆಕ್ಟ್ರಿಕ್
ಈ ಎಲೆಕ್ಟ್ರಿಕ್ ಕಾರು ಹಲವಾರು ದಿನಗಳಿಂದ ಮಾರುಕಟ್ಟೆಯಲ್ಲಿದ್ದರೂ ಮೊದಲಿಗೆ ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಕಳೆದ ವಾರ ಕಂಪನಿಯು ಈ ವಾಹನವನ್ನು ಸಾರ್ವಜನಿಕರಿಗೂ ಮಾರಾಟ ಮಾಡುವುದಾಗಿ ತಿಳಿಸಿದೆ. ಈ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.9.44 ಲಕ್ಷಗಳಾಗಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 213 ಕಿ.ಮೀ ದೂರ ಚಲಿಸಬಹುದು.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹ್ಯುಂಡೈ ಕೋನಾ ಎಲೆಕ್ಟ್ರಿಕ್
ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಭಾರತದಲ್ಲಿ ಬಿಡುಗಡೆಯಾದ ಮೊದಲ ಎಲೆಕ್ಟ್ರಿಕ್ ಎಸ್‍ಯುವಿಯಾಗಿದೆ. ಬಿಡುಗಡೆಯಾದಾಗ ಈ ಎಸ್‍ಯುವಿಯ ಬೆಲೆ ರೂ.25.30 ಲಕ್ಷಗಳಾಗಿತ್ತು. ಜಿಎಸ್‍ಟಿ ದರವನ್ನು ಕಡಿಮೆಗೊಳಿಸಿದ ನಂತರ ಈ ಎಸ್‍ಯುವಿಯ ಬೆಲೆ ರೂ.23.71 ಲಕ್ಷಗಳಾಗಿದೆ.
MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಈ ಎಸ್‍ಯುವಿಯಲ್ಲಿ 39.2 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿ 134.13 ಬಿಹೆಚ್‍ಪಿ ಪವರ್ ಹಾಗೂ 395 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 452 ಕಿ.ಮೀ ದೂರ ಚಲಿಸಬಹುದು.

ಟೊಯೊಟಾ ಕ್ಯಾಮ್ರಿ
ದೇಶಿಯ ಮಾರುಕಟ್ಟೆಯಲ್ಲಿ ಕ್ಯಾಮ್ರಿ ಕಾರಿನ ಹೈಬ್ರಿಡ್ ಆವೃತ್ತಿಗಳು ಮಾರಾಟವಾಗುತ್ತಿವೆ. ಈ ಕಾರಿನ ಬೆಲೆಯು ರೂ.37.23 ಲಕ್ಷಗಳಾಗಿದೆ. 2.5 ಲೀಟರಿನ 4 ಸಿಲಿಂಡರ್ ಪೆಟ್ರೊಲ್ ಎಂಜಿನ್ 175.5 ಬಿಹೆಚ್‍ಪಿ ಪವರ್ ಹಾಗೂ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 245 ವೋಲ್ಟ್ ನ ಎಲೆಕ್ಟ್ರಿಕ್ ಮೋಟರ್ 118.3 ಬಿಹೆಚ್‍ಪಿ ಪವರ್ ಹಾಗೂ 202 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಟೊಯೊಟಾ ಪ್ರಿಯಸ್
ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾದ ಪ್ರಿಯಸ್ ಹೈಬ್ರಿಡ್ ಕಾರಿನ ಬೆಲೆಯು ರೂ.45.09 ಲಕ್ಷಗಳಾಗಿದೆ. ಕ್ಯಾಮ್ರಿ ಕಾರಿಗಿಂತ ರೂ.8 ಲಕ್ಷ ಹೆಚ್ಚು ಬೆಲೆಯನ್ನು ಹೊಂದಿದೆ. ಈ ಕಾರಿನಲ್ಲಿ 1.8 ಲೀಟರಿನ 4 ಸಿಲಿಂಡರ್ ಪೆಟ್ರೋಲ್ ಅಳವಡಿಸಲಾಗಿದೆ. ಈ ಎಂಜಿನ್ 97 ಬಿಹೆಚ್‍ಪಿ ಪವರ್ ಹಾಗೂ 142 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ಲಿಥಿಯಂ ಐಯಾನ್ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ.

ವೊಲ್ವೊ ಎಕ್ಸ್ ಸಿ 90 ಟಿ8
ಎಕ್ಸ್ ಸಿ90 ಟಿ8 ಭಾರತದ ಮೊದಲ ಪ್ಲಗ್ ಇನ್ ಹೈಬ್ರಿಡ್ ಎಸ್‍ಯುವಿಯಾಗಿದೆ. ಈ ಕಾರ್ ಅನ್ನು ಜನಪ್ರಿಯ ಎಕ್ಸ್ ಸಿ90 ಕಾರಿನ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ಕಾರಿನ ಬೆಲೆ ರೂ.1.27 ಕೋಟಿಗಳಾಗಿದೆ. ಎಕ್ಸ್ ಸಿ90 ಎಸ್‍ಯುವಿಯು ಪ್ರಪಂಚದಲ್ಲಿರುವ ಹೆಚ್ಚು ಸುರಕ್ಷಿತ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.


Click it and Unblock the Notifications