ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

2019 ವರ್ಷದ ಮೊದಲ ತಿಂಗಳ ಕಾರು ಮಾರಾಟದ ಅಂಕಿ ಅಂಶಗಳು ಇದೀಗ ಬಹಿರಂಗಗೊಂಡಿದ್ದು, ಎಂದಿನಂತೆಯೆ ದೇಶಿಯ ವಾಹನ ತಯಾರಕ ಸಂಸ್ಥಯಾದ ಮಾರುತಿ ಸುಜುಕಿಯೆ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಜನವರಿಯಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳು ಯಾವುವು ಎಂದು ಇಲ್ಲಿ ತಿಳಿಯಿರಿ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

2019ರ ಜನವರಿ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಲ್ಲಿ ಸುಮಾರು 6 ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಕಾರುಗಳಾಗಿದ್ದು, ಇವುಗಳಿಗೆ ಪೋಟಿಯಾಗಿ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈಯ ಕಾರುಗಳು 4 ಸ್ಥಾನವನ್ನು ಪಡೆದುಕೊಂಡೊದೆ. ಮತ್ತು ಟಾಪ್ 10 ಕಾರುಗಳಲ್ಲಿ ಅಧಿಕವಾಗಿ ಹ್ಯಾಚ್‍‍ಬ್ಯಾಕ್ ಕಾರುಗಳೇ ಮಾರಾಟಗೊಂಡಿರುವುದು ಅಚ್ಚರಿ ವಿಷಯ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

Rank Model

Sales Figure

1 Maruti Alto

23,360
2

Maruti Dzire 19,073

3

Maruti Swift 18,795

4 Maruti Baleno 16,717
5 Maruti Brezza 13,172

6 Hyundai i20

11,749
7 Hyundai Creta 10,314

8 Hyundai Grand i10 10,285

9 Hyundai WagonR 10,048

10 Maruti Celerio 9,217

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಮಾರುತಿ ಸುಜುಕಿ ಆಲ್ಟೋ

ಮಾರುತಿ ಆಲ್ಟೋ ಹ್ಯಾಚ್‍ಬ್ಯಾಕ್ ಕಾರು ಇಂದಿಗೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಅಚ್ಚುಮೆಚ್ಚಿನ ಕಾರು ಎಂದು ಹೇಳಿದರೆ ತಪ್ಪಾಗಲಾರದು. ಈ ಕಾರು ಮಾರುತಿ 800 ಕಾರಿನ ಉತ್ತರಾಧಿಕಾರಿಯಾಗಿದ್ದು, ಇದು 800cc ಮತ್ತು 1.0-ಲೀಟರ್ ಎಂಜಿನ್ ಆಯ್ಕೆಯಲ್ಲಿ ಹಾಗು ಆಟೋಮ್ಯಾಟಿಕ್ ಆಯ್ಕೆಯಲ್ಲಿ ಕೂಡಾ ಖರೀದಿಗೆ ಲಭ್ಯವಿದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಮಾರುತಿ ಸುಜುಕಿ ಡಿಜೈರ್

ಮಾರುತಿ ಡಿಜೈರ್ ಭಾರತದಲ್ಲೇ ಉತ್ತಮ ಮಾರಾಟವಾದ ಕಾಂಪ್ಯಾಕ್ಟ್-ಸೆಡನ್ ಅಲ್ಲ, ಆದರೆ ಅತ್ಯಂತ ಯಶಸ್ವಿ ಸೆಡನ್ ಆಗಿದೆ. ಇದು ಸಾಂದರ್ಭಿಕವಾಗಿ ಮಾರಾಟ ಪಟ್ಟಿಯಲ್ಲಿ ಮೇಲ್ಭಾಗದಲ್ಲಿದೆ ಮತ್ತು ಆಲ್ಟೊವನ್ನು ಎರಡನೇ ಸ್ಥಾನಕ್ಕೆ ತರುತ್ತದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಕಾರು 2019ರ ಇಂಡಿಯನ್ ಕಾರ್ ಆಫ್ ದಿ ಇಯರ್ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಬಿಡಗಡೆಯಾದ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರು ಹೆಚ್ಚು ಬದಲಾವಣೇಗಳನ್ನು ಪಡೆದುಕೊಂಡಿದ್ದು, ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ ಕಾರು ಇತ್ತೀಚೆಗಷ್ಟೆ ಹಲವಾರು ಬದಲಾವಣೆಯನ್ನು ಪಡೆದುಕೊಂಡು, ಫೇಸ್‍ಲಿಫ್ಟ್ ಮಾದರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರು ಎಂಬ ಹೆಸರನ್ನು ಪಡೆದಿರುವ ಈ ಕಾರು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡು 'ಅರ್‍ಎಸ್' ಬ್ಯಾಡ್ಜಿಂಗ್ ಅನ್ನು ಹೊಂದಲಿದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು ಹೆಚ್ಚಾಗಿ ಹ್ಯಾಚ್‍‍ಬ್ಯಾಕ್ ಕಾರುಗಳಲ್ಲಿ ಇರಬೇಕಾದ ಗುಣಗಳನ್ನು ಹೊಂದಿದ್ದರೂ ಸಹ ಇದಿಂದು ಜನಪ್ರಿಯವಾದ ಸಬ್-4-ಮೀಟರ್ ಕಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಇದು ಕೇವಲ ಡೀಸೆಲ್ ವೇರಿಯಂಟ್‍ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು ಕೂಡಾ, ಈ ಸೆಗ್ಮೆಂಟ್ ಕಾರುಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಹ್ಯುಂಡೈ ಎಲೈಟ್ ಐ20

ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍ನಲ್ಲಿ ಮಾರುತಿ ಸುಜುಕಿ ಬಲೆನೊ ಕರು ನಂತರ ಹ್ಯುಂಡೈ ಸಂಸ್ಥೆಯ ಎಲೈಟ್ ಐ20 ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಾರು ಪ್ರತೀ ಬಾರಿ ಬದಲಾವಣೇಗಳನ್ನು ಪಡೆಯುತ್ತಿದ್ದು, ಇತ್ತೀಚೆಗೆ ಈ ಕಾರಿನ ಎಲೈಟ್ ಐ20 ಆಕ್ಟೀವ್ ವೇರಿಯಂಟ್ ಕೂಡಾ ಬಿಡುಗಡೆಗೊಂಡಿದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ದಕ್ಷಿಣ ಕೊರಿಯಾದ ಬ್ರ್ಯಾಂಡ್‍ನಿಂದ ಪ್ರೀಮಿಯಂ ಕೊಡುಗೆಯಾಗಿದ್ದು, ಪ್ರಸ್ತುತ ಅದರ ಎರಡನೆಯ ಪುನರಾವರ್ತನೆಯಲ್ಲಿ, ಕ್ರೆಟಾ ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಆಕರ್ಷಕವಾಗಿ ಕಾಣುತ್ತದೆ. ಈ ಕಾರು ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಹ್ಯುಂಡೈ ಗ್ರ್ಯಾಂಡ್ ಐ10

ಹುಂಡೈ ಗ್ರ್ಯಾಂಡ್ ಐ10 ಹೊಸ ಸ್ಯಾಂಟ್ರೊ ಮತ್ತು ಪ್ರೀಮಿಯಂ ಎಲೈಟ್ ಐ20 ನಡುವಿನ ಅಂತರವನ್ನು ತುಂಬುತ್ತದೆ. ಇದು ದೊಡ್ಡ ಎಲೈಟ್ ಐ 20 ರಂತೆಯೇ ಸುಮಾರು ಅದೇ ಮಟ್ಟದ ಮೂಲಭೂತ ಸಾಧನಗಳೊಂದಿಗೆ ಬರುತ್ತದೆ ಮತ್ತು ಹೆಚ್ಚಿನದಾಗಿ ಒಳಭಾಗದಲ್ಲಿ ಹಾಗು ಒಳಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮೊದಲ ಬಾರಿಗೆ 1999 ರಲ್ಲಿ ಬಿಡುಗಡೆಗೊಂಡಿದ್ದರೂ, 20 ವರ್ಶಗಳಾದರು ಈ ಕಾರಿನ ಕ್ರೇಜ್ ಮಾರುಕಟ್ಟೆಯಲ್ಲಿ ಇನ್ನು ಹಾಗೆಯೆ ಇದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಹಿಂದಿನ ತಲೆಮಾರಿಗಿಂತಾ ಹೆಚ್ಚಿನ ಬದಲಾವಣೆಗಳನ್ನು ನೀಡಿ ಬಿಡುಗಡೆ ಮಾಡಿದೆ ಮತ್ತು ಈ ಕಾರು ಈ ಬಾರಿ ಸಂಸ್ಥೆಯ ಹಾರ್ಟ್‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ.

ಜನವರಿ ತಿಂಗಳ ಕಾರು ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿಯದ್ದೆ ಮೇಲು ಗೈ

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ ಕಾರು ಸಂಸ್ಥೆಯ ಮೊದಲ ಬಡ್ಜೆಟ್ ಹಾಗು, ಆಟೋಮ್ಯಾಟಿಕ್ ಡ್ರೈವರ್‍‍ಟ್ರೈನ್ ಪಡೆದ ಮೊದಲ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರು ಸಂಸ್ಥೆಯ ಆಟೋ ಗೇರ್ ಶಿಫ್ಟ್ ಆಯ್ಕೆಯಲ್ಲಿ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಕೂಡಾ ಖರೀದಿಗ್ ಲಭ್ಯವಿದೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಸಿಗುವ ಕಾರಣ ಗ್ರಾಹಕರು ಇದನ್ನು ಖರೀದಿಸುತ್ತಿದ್ದಾರೆ.

More from DriveSpark

Article Published On: Thursday, February 7, 2019, 12:23 [IST]
English summary
Top-Selling Cars In India (January 2019) — Maruti Suzuki Models Come In The Top-Five. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+