ಫೆಬ್ರುವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

2019ರ ಫೆಬ್ರುವರಿ ತಿಂಗಳ ಕಾರು ಮಾರಾಟದ ಅಂಕಿ ಅಂಶಗಳು ಇದೀಗ ಬಹಿರಂಗಗೊಂಡಿದ್ದು, ಎಂದಿನಂತೆಯೆ ದೇಶಿಯ ವಾಹನ ತಯಾರಕ ಸಂಸ್ಥಯಾದ ಮಾರುತಿ ಸುಜುಕಿಯೆ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಜನವರಿಯಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳು ಯಾವುವು ಎಂದು ಇಲ್ಲಿ ತಿಳಿಯಿರಿ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

2019ರ ಫೆಬ್ರುವರಿ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಲ್ಲಿ ಸುಮಾರು 6 ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಕಾರುಗಳಾಗಿದ್ದು, ಇವುಗಳಿಗೆ ಪೋಟಿಯಾಗಿ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈಯ ಕಾರುಗಳು 3 ಸ್ಥಾನ ಮತ್ತು ಟಾಟಾ ಮೋಟಾರ್ಸ್ ಒಂದು ಸ್ಥಾನವನ್ನು ಪಡೆದುಕೊಂಡೊದೆ. ಮತ್ತು ಟಾಪ್ 10 ಕಾರುಗಳಲ್ಲಿ ಅಧಿಕವಾಗಿ ಹ್ಯಾಚ್‍‍ಬ್ಯಾಕ್ ಕಾರುಗಳೇ ಮಾರಾಟಗೊಂಡಿರುವುದು ಅಚ್ಚರಿ ವಿಷಯ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಮಾರುತಿ ಸುಜುಕಿ ಆಲ್ಟೋ

ಮಾರುತಿ ಆಲ್ಟೋ ಹ್ಯಾಚ್‍ಬ್ಯಾಕ್ ಕಾರು ಇಂದಿಗೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಅಚ್ಚುಮೆಚ್ಚಿನ ಕಾರು ಎಂದು ಹೇಳಿದರೆ ತಪ್ಪಾಗಲಾರದು. ಈ ಕಾರು ಮಾರುತಿ 800 ಕಾರಿನ ಉತ್ತರಾಧಿಕಾರಿಯಾಗಿದ್ದು, ಇದು 800cc ಮತ್ತು 1.0-ಲೀಟರ್ ಎಂಜಿನ್ ಆಯ್ಕೆಯಲ್ಲಿ ಹಾಗು ಆಟೋಮ್ಯಾಟಿಕ್ ಆಯ್ಕೆಯಲ್ಲಿ ಕೂಡಾ ಖರೀದಿಗೆ ಲಭ್ಯವಿದೆ.

Model February 2019 February 2018 Growth (%)
Maruti Alto 24,751 19,760 25

Maruti Swift 18,224 17,291 5

Maruti Baleno 17,944 15,807 14

Maruti Dzire 15,915 20,941 -24

Maruti Wagon R 15,661 14,029 12

Maruti Vitara Brezza 11,613 11,620 0

Hyundai i20 Elite 11,547 13,378 -14

Hyundai Creta 10,206 9,278 10

Hyundai i10 Grand 9,065 10,198 -11

Tata Tiago 8,286 6,718 23

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಕಾರು 2019ರ ಇಂಡಿಯನ್ ಕಾರ್ ಆಫ್ ದಿ ಇಯರ್ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಬಿಡಗಡೆಯಾದ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರು ಹೆಚ್ಚು ಬದಲಾವಣೇಗಳನ್ನು ಪಡೆದುಕೊಂಡಿದ್ದು, ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ ಕಾರು ಇತ್ತೀಚೆಗಷ್ಟೆ ಹಲವಾರು ಬದಲಾವಣೆಯನ್ನು ಪಡೆದುಕೊಂಡು, ಫೇಸ್‍ಲಿಫ್ಟ್ ಮಾದರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರು ಎಂಬ ಹೆಸರನ್ನು ಪಡೆದಿರುವ ಈ ಕಾರು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡು 'ಅರ್‍ಎಸ್' ಬ್ಯಾಡ್ಜಿಂಗ್ ಅನ್ನು ಹೊಂದಲಿದೆ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಮಾರುತಿ ಸುಜುಕಿ ಡಿಜೈರ್

ಮಾರುತಿ ಡಿಜೈರ್ ಭಾರತದಲ್ಲೇ ಉತ್ತಮ ಮಾರಾಟವಾದ ಕಾಂಪ್ಯಾಕ್ಟ್-ಸೆಡನ್ ಅಲ್ಲ, ಆದರೆ ಅತ್ಯಂತ ಯಶಸ್ವಿ ಸೆಡನ್ ಆಗಿದೆ. ಇದು ಸಾಂದರ್ಭಿಕವಾಗಿ ಮಾರಾಟ ಪಟ್ಟಿಯಲ್ಲಿ ಮೇಲ್ಭಾಗದಲ್ಲಿದೆ ಮತ್ತು ಆಲ್ಟೊವನ್ನು ಎರಡನೇ ಸ್ಥಾನಕ್ಕೆ ತರುತ್ತದೆ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮೊದಲ ಬಾರಿಗೆ 1999 ರಲ್ಲಿ ಬಿಡುಗಡೆಗೊಂಡಿದ್ದರೂ, 20 ವರ್ಶಗಳಾದರು ಈ ಕಾರಿನ ಕ್ರೇಜ್ ಮಾರುಕಟ್ಟೆಯಲ್ಲಿ ಇನ್ನು ಹಾಗೆಯೆ ಇದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಹಿಂದಿನ ತಲೆಮಾರಿಗಿಂತಾ ಹೆಚ್ಚಿನ ಬದಲಾವಣೆಗಳನ್ನು ನೀಡಿ ಬಿಡುಗಡೆ ಮಾಡಿದೆ ಮತ್ತು ಈ ಕಾರು ಈ ಬಾರಿ ಸಂಸ್ಥೆಯ ಹಾರ್ಟ್‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು ಹೆಚ್ಚಾಗಿ ಹ್ಯಾಚ್‍‍ಬ್ಯಾಕ್ ಕಾರುಗಳಲ್ಲಿ ಇರಬೇಕಾದ ಗುಣಗಳನ್ನು ಹೊಂದಿದ್ದರೂ ಸಹ ಇದಿಂದು ಜನಪ್ರಿಯವಾದ ಸಬ್-4-ಮೀಟರ್ ಕಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಇದು ಕೇವಲ ಡೀಸೆಲ್ ವೇರಿಯಂಟ್‍ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು ಕೂಡಾ, ಈ ಸೆಗ್ಮೆಂಟ್ ಕಾರುಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಹ್ಯುಂಡೈ ಎಲೈಟ್ ಐ20

ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍ನಲ್ಲಿ ಮಾರುತಿ ಸುಜುಕಿ ಬಲೆನೊ ಕರು ನಂತರ ಹ್ಯುಂಡೈ ಸಂಸ್ಥೆಯ ಎಲೈಟ್ ಐ20 ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಾರು ಪ್ರತೀ ಬಾರಿ ಬದಲಾವಣೇಗಳನ್ನು ಪಡೆಯುತ್ತಿದ್ದು, ಇತ್ತೀಚೆಗೆ ಈ ಕಾರಿನ ಎಲೈಟ್ ಐ20 ಆಕ್ಟೀವ್ ವೇರಿಯಂಟ್ ಕೂಡಾ ಬಿಡುಗಡೆಗೊಂಡಿದೆ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ದಕ್ಷಿಣ ಕೊರಿಯಾದ ಬ್ರ್ಯಾಂಡ್‍ನಿಂದ ಪ್ರೀಮಿಯಂ ಕೊಡುಗೆಯಾಗಿದ್ದು, ಪ್ರಸ್ತುತ ಅದರ ಎರಡನೆಯ ಪುನರಾವರ್ತನೆಯಲ್ಲಿ, ಕ್ರೆಟಾ ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಆಕರ್ಷಕವಾಗಿ ಕಾಣುತ್ತದೆ. ಈ ಕಾರು ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಹ್ಯುಂಡೈ ಗ್ರ್ಯಾಂಡ್ ಐ10

ಹುಂಡೈ ಗ್ರ್ಯಾಂಡ್ ಐ10 ಹೊಸ ಸ್ಯಾಂಟ್ರೊ ಮತ್ತು ಪ್ರೀಮಿಯಂ ಎಲೈಟ್ ಐ20 ನಡುವಿನ ಅಂತರವನ್ನು ತುಂಬುತ್ತದೆ. ಇದು ದೊಡ್ಡ ಎಲೈಟ್ ಐ 20 ರಂತೆಯೇ ಸುಮಾರು ಅದೇ ಮಟ್ಟದ ಮೂಲಭೂತ ಸಾಧನಗಳೊಂದಿಗೆ ಬರುತ್ತದೆ ಮತ್ತು ಹೆಚ್ಚಿನದಾಗಿ ಒಳಭಾಗದಲ್ಲಿ ಹಾಗು ಒಳಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿದೆ.

ಫೆಬ್ರವರಿಯಲ್ಲಿ ಮಾರಾಟಗೊಂಡ ಟಾಪ್10 ಕಾರುಗಳಿವು...

ಟಾಟಾ ಟಿಯಾಗೊ

ಟಾಟಾ ಮೋಟಾರ್ಸ್ ಹಲವು ತಿಂಗಳ ನಂತರ ಟಾಪ್ 10 ಕಾರುಗಳ ಮಾರಾಟದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಟಿಯಾಗೊ ಹ್ಯಾಚ್‍ಬ್ಯಾಕ್ ಕಾರು ಈ ಬಾರಿ ಹೊಸ ಉಪಕರಣಗಳು ಮತ್ತು ಫೀಚರ್‍‍‍ನೊಂದಿಗೆ ಬಿಡುಗಡೆಗೊಂಡಿದ್ದು, ಈ ಕಾರು ಡೀಸೆಲ್ ಮಾದರಿಯನ್ನು ಶೀಘ್ರದಲ್ಲೆ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎಂದು ಟಾಟಾ ಮೋಟಾರ್ಸ್ ಸುಳಿವು ನೀಡಿದೆ.

Most Read Articles

Kannada
English summary
Top-Selling Cars In India For February 2019. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X