ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಅತಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳ ಪಟ್ಟಿಯಲ್ಲಿ ಹ್ಯುಂಡೈ ಕಂಪನಿಯ ವೆನ್ಯೂ ಮೊದಲ ಸ್ಥಾನದಲ್ಲಿದ್ದರೆ, ಮಾರುತಿ ಸುಜುಕಿಯ ವಿಟಾರಾ ಬ್ರಿಝಾ ಎರಡನೇ ಸ್ಥಾನದಲ್ಲಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಸತತ ಎರಡನೇ ತಿಂಗಳೂ ಸಹ ಹ್ಯುಂಡೈನ ವೆನ್ಯೂ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ವೆನ್ಯೂ ಎಸ್‍‍ಯುವಿಯನ್ನು ಕೆಲ ತಿಂಗಳ ಹಿಂದಷ್ಟೇ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ವೆನ್ಯೂ, ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯು ಮಾರಾಟ ಮಾಡುತ್ತಿರುವ ಮೊದಲ ಕಾಂಪ್ಯಾಕ್ಟ್ ಎಸ್‍‍ಯುವಿಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ಹ್ಯುಂಡೈ ವೆನ್ಯೂ ಎಸ್‍‍‍ಯುವಿಯ 9,342 ಯುನಿಟ್‍‍ಗಳು ಮಾರಾಟವಾಗಿವೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಕಳೆದ ಕೆಲ ತಿಂಗಳುಗಳವರೆಗೂ ಮೊದಲ ಸ್ಥಾನದಲ್ಲಿದ್ದ ಮಾರುತಿ ಸುಜುಕಿಯ ವಿಟಾರಾ ಬ್ರಿಝಾ, ಭಾರತದ ಎಸ್‍‍ಯುವಿ ಸೆಗ್‍‍ಮೆಂಟಿನ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ಈಗ ಈ ಎಸ್‍‍ಯುವಿಯು ಎರಡನೇ ಸ್ಥಾನದಲ್ಲಿದೆ. ಆಗಸ್ಟ್ ತಿಂಗಳಿನಲ್ಲಿ ಬ್ರಿಝಾ ಎಸ್‍‍ಯುವಿಯ 7,109 ಯುನಿಟ್‍‍ಗಳು ಮಾರಾಟವಾಗಿವೆ.

Rank Model August 2019 Sales
1 Hyundai Venue 9342
2 Maruti Suzuki Vitara Brezza 7109
3 Kia Seltos 6236
4 Hyundai Creta 6001
5 Ford EcoSport 2882
6 Mahindra Scorpio 2862
7 Mahindra XUV300 2532
8 Tata Nexon 2275
9 MG Hector 2018
10 Honda WR-V 1178
ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

2018ರ ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ 46%ನಷ್ಟು ಕುಸಿತ ಉಂಟಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 13,000 ಯುನಿಟ್‍‍ಗಳ ಮಾರಾಟವಾಗಿತ್ತು. ಕಿಯಾ ಸೆಲ್ಟೋಸ್ ಮೂರನೇ ಸ್ಥಾನದಲ್ಲಿದೆ. ಸೆಲ್ಟೋಸ್, ಕೊರಿಯಾ ಮೂಲದ ಕಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿಯಾಗಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಈ ಎಸ್‍‍ಯುವಿಯನ್ನು ಭಾರತದಲ್ಲಿ ಆಗಸ್ಟ್ 22ರಂದು ಬಿಡುಗಡೆಗೊಳಿಸಲಾಯಿತು. ತೀವ್ರ ಪೈಪೋಟಿಯಿರುವ ಮಧ್ಯಮ ಗಾತ್ರದ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿರುವ ಸೆಲ್ಟೋಸ್ ಬಿಡುಗಡೆಯಾದ ಕೇವಲ 8 ದಿನಗಳಲ್ಲಿ 6,236 ಯುನಿಟ್‍‍ಗಳಷ್ಟು ಮಾರಾಟವಾಗಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿತ್ತು.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ತೀವ್ರ ಸ್ಪರ್ಧೆ ನೀಡಿರುವ ಹ್ಯುಂಡೈನ ಕ್ರೆಟಾ 6,001 ಯುನಿಟ್‍‍ಗಳ ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 2018ರ ಆಗಸ್ಟ್ ತಿಂಗಳಿನಲ್ಲಿ ಕ್ರೆಟಾ ಎಸ್‍ಯುವಿಯ 10,000 ಯುನಿಟ್‍‍ಗಳ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್ ತಿಂಗಳ ಮಾರಾಟದಲ್ಲಿ 42%ನಷ್ಟು ಕುಸಿತವಾಗಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರಾ ಸ್ಕಾರ್ಪಿಯೊ, ಮಹೀಂದ್ರಾ ಎಕ್ಸ್ ಯುವಿ 300 ಹಾಗೂ ಟಾಟಾ ನೆಕ್ಸಾನ್ ನಂತರದ ಸ್ಥಾನಗಳಲ್ಲಿವೆ. ಐದನೇ ಸ್ಥಾನದಲ್ಲಿರುವ ಫೋರ್ಡ್ ಇಕೋಸ್ಪೋರ್ಟ್‍‍ನ 2,882 ಯುನಿಟ್‍‍ಗಳ ಮಾರಾಟವಾಗಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಮಹೀಂದ್ರಾ ಸ್ಕಾರ್ಪಿಯೊದ 2,862 ಯುನಿಟ್, ಎಕ್ಸ್ ಯುವಿ 300ನ 2,532 ಯುನಿಟ್ ಹಾಗೂ ಟಾಟಾ ನೆಕ್ಸಾನ್‍‍ನ 2,275 ಯುನಿಟ್‍‍ಗಳು ಆಗಸ್ಟ್ ತಿಂಗಳಿನಲ್ಲಿ ಮಾರಾಟವಾಗಿವೆ. ಎಂ‍‍ಜಿ ಹೆಕ್ಟರ್ ಎಸ್‍ಯುವಿಯು ಒಂಭತ್ತನೇ ಸ್ಥಾನದಲ್ಲಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಆಗಸ್ಟ್ ತಿಂಗಳಿನಲ್ಲಿ ಹೆಕ್ಟರ್ ವಾಹನದ 2,018 ಯುನಿಟ್‍‍ಗಳ ಮಾರಾಟವಾಗಿದೆ. ಹೆಕ್ಟರ್ ಎಸ್‍‍ಯುವಿಯ ಕಾಯುವ ಅವಧಿಯು ಸದ್ಯಕ್ಕೆ ಮೂರು ತಿಂಗಳಾಗಿದೆ. ಆದ ಕಾರಣ ಎಂಜಿ ಕಂಪನಿಯು ಹೆಕ್ಟರ್ ವಾಹನದ ಉತ್ಪಾದನೆಯನ್ನು ಹೆಚ್ಚಿಸಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಹೋಂಡಾ ಡಬ್ಲ್ಯು‍ಆರ್-ವಿ ಎಸ್‍‍ಯುವಿಯು ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಆಗಸ್ಟ್ ತಿಂಗಳಿನಲ್ಲಿ ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾದ ಈ ಎಸ್‍‍ಯುವಿಯ 1,178 ಯುನಿಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್ ನಲ್ಲಿ 2,822 ಯುನಿಟ್‍‍ಗಳ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 58%ನಷ್ಟು ಕುಸಿತ ಉಂಟಾಗಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯುವಿಗಳಿವು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈನ ವೆನ್ಯೂ ಭಾರತದ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಈ ಕಾಂಪ್ಯಾಕ್ಟ್ ಎಸ್‍‍ಯುವಿ ಜನಪ್ರಿಯವಾಗಿದೆ. ಪವರ್‍‍‍ಪುಲ್ ಪರ್ಫಾಮೆನ್ಸ್, ಮೂರು ಎಂಜಿನ್ ಆಯ್ಕೆ ಹಾಗೂ ಈ ಎಸ್‍‍ಯುವಿಯಲ್ಲಿರುವ ಅನೇಕ ಫೀಚರ್‍‍ಗಳ ಕಾರಣಕ್ಕೆ ಈ ಎಸ್‍‍ಯುವಿ ಜನಪ್ರಿಯವಾಗಿದೆ. ಕಿಯಾ ಸೆಲ್ಟೋಸ್ ಎಸ್‍‍ಯುವಿ ಸಹ ತೀವ್ರ ಪೈಪೋಟಿ ನೀಡುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಈ ಪಟ್ಟಿಯಲ್ಲಿ ಸಾಕಷ್ಟು ಏರು ಪೇರಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Top Selling SUVs In India For August 2019: Kia Seltos Enters The Top-3 While Hyundai Venue Leads - Read in kannada
Story first published: Thursday, September 19, 2019, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X