ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಟೊಯೊಟಾ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿ ತನ್ನ ಎರಡು ಎಂಟ್ರಿ ಲೆವೆಲ್ ಮಾದರಿಗಳಾದ ಇಟಿಯೋಸ್ ಮತ್ತು ಇಟಿಯೋಸ್ ಲಿವಾ ಮಾದರಿ ಕಾರುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. 2020ರ ಏಪ್ರಿಲ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಮಾದರಿಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಆಟೋಕಾರ್ ಇಂಡಿಯಾ ಪ್ರಕಾರ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಇಟಿಯೋಸ್ ಮತ್ತು ಇಟಿಯೋಸ್ ಲಿವಾ ಮಾದರಿಗಳನ್ನು ನವೀಕರಿಸಲು ಅಧಿಕ ವೆಚ್ಚವಾಗುತ್ತದೆ. ಎರಡು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿಲ್ಲ, ಇದರಿಂದ ಹೆಚ್ಚುವರಿ ಹೂಡಿಕೆಯು ಮಾಡಿದರೆ ವಿಫಲವಾಗಬಹುದು ಎಂದು ಟೊಯೊಟಾ ಕಂಪನಿ ಭಾವಿಸಿದೆ.

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಟೊಯೊಟಾ ಇಟಿಯೋಸ್ ಮತ್ತು ಇಟಿಯೋಸ್ ಲಿವಾ ಸ್ಥಗಿತಗೊಳ್ಳಲು ಮತ್ತೊಂದು ಕಾರಣವೆಂದರೆ ಈ ಕಾರುಗಳನ್ನು ಸುರಕ್ಷತಾ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿಲ್ಲ. 2020ರ ಅಕ್ಟೋಬರ್ ತಿಂಗಳಿನಿಂದ ಕಡ್ಡಾಯಗೊಳಿಸಲಿರುವ ಹೊಸ ಸುರಕ್ಷತಾ ನಿಯಮಕ್ಕೆ ಅನುಗುಣವಾಗಿ ಕಂಪನಿಯು ಶೀಟ್ ಮೆಟಲ್ ಅನ್ನು ಮತ್ತಷ್ಟು ನವೀಕರಿಸುವ ಅಗತ್ಯವಿದೆ, ಇದು ವೆಚ್ಚವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮುಂದಿನ ವರ್ಷದ ಏಪ್ರಿಲ್‍‍ನಿಂದ ಈ ಮಾದರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಇಟಿಯೋಸ್ ಲಿವಾ ಹ್ಯಾಚ್‍‍ಬ್ಯಾಕ್ ಮಾರಾಟದಲ್ಲಿ ಶೇ.63ರಷ್ಟು ಮತ್ತು ಎಟಿಯೋಸ್ ಸೆಡಾನ್ ಶೇ.70ರಷ್ಟು ಡೀಸೆಲ್ ರೂಪಾಂತರಗಳಾಗಿವೆ ಎಂದು ವರದಿಯಾಗಿದೆ. ಎರಡೂ ಮಾದರಿಗಳು ಒಂದೇ 1.4 ಲೀಟರ್ ಡಿ-4ಡಿ ಡೀಸೆಲ್ ಎಂಜಿನ್ ಅನ್ನು ಹೊಂದಿವೆ. ಇದರಿಂದ ಇದರ ವೆಚ್ಚ ಅಧಿಕವಾಗಿದೆ. ಹೊಸ ಬಿಎಸ್-6 ಮಾಲಿನ್ಯ ನಿಯಮದ ಅನುಸಾರ ಡೀಸೆಲ್ ಎಂಜಿನ್‍‍ಗಳನ್ನು ನವೀಕರಿಸುವುದು ಪೆಟ್ರೋಲ್ ರೂಪಾಂತರಗಳಿಗೆ ಹೋಲಿಸಿದರೆ ದುಬಾರಿಯಾಗಿದೆ.

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಎಟಿಯೋಸ್ ಮತ್ತು ಎಟಿಯೋಸ್ ಲಿವಾ ಮಾದರಿಗಳನ್ನು ನವೀಕರಿಸಲು ಬೇಕಾದ ವೆಚ್ಚವು ಮಾರಾಟದಲ್ಲಿ ಲಭಿಸುವುದಿಲ್ಲವೆಂದು ಟೊಯೊಟಾ ಕಂಪನಿ ಭಾವಿಸಿದೆ. ಈ ಎರಡು ಮಾದರಿಗಳನ್ನು ನವೀಕರಿಸಲು ಬೇಕಾದ ವೆಚ್ಚವು ಹೆಚ್ಚಾಗಿದ್ದು, ಪ್ರತಿಸ್ಪರ್ಧಿ ಕಂಪನಿಯ ಮಾದರಿಗಳ ನವೀಕರಣ ವೆಚ್ಚಗಿಂತ ಹೆಚ್ಚಾಗಿರಲಿದೆ.

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಟೊಯೊಟಾ ಇಟಿಯೋಸ್ ಮತ್ತು ಇಟಿಯೋಸ್ ಲಿವಾ ಮಾದರಿಗಳು ಕಳೆದ ಒಂದು ದಶಕಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಟೊಯೊಟಾ ಇಟಿ‍ಯೋಸ್ ಸೆಡಾನ್‍ ಅನ್ನು ಮೊದಲ ಬಾರಿಗೆ 2010ರಲ್ಲಿ ಬಿಡುಗಡೆಗೊಳಿಸಿದ್ದರೆ, ಒಂದು ವರ್ಷದ ನಂತರ ಇಟಿಯೋಸ್ ಲಿವಾ ಹ್ಯಾಚ್‍‍ಬ್ಯಾಕ್ ಅನ್ನು ಬಿಡುಗಡೆಗೊಳಿಸಿತ್ತು.

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಕಂಪನಿಯು 10 ವರ್ಷಗಳಲ್ಲಿ ಎರಡೂ ಮಾದರಿಗಳಲ್ಲಿ ಸಣ್ಣ ಮಟ್ಟದ ನವೀಕರಣಗಳನ್ನು ಮತ್ತು ಬದಲಾವಣೆಗಳನ್ನು ನಡೆಸಿದೆ. ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರತಿ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡುವಲ್ಲಿ ವಿಫಲವಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

2020ರಲ್ಲಿ ಬಿಡುಗಡೆಯಾಗಲಿರುವ ಹೊಸ ಟೊಯೊಟಾ ಗ್ಲಾಂಝಾ ಕಂಪನಿಯ ಪ್ರಮುಖ ವಾಹನವಾಗಿರಲಿದೆ. ಟೊಯೊಟಾ-ಸುಜುಕಿ ಸಹಬಾಗಿತ್ವದಲ್ಲಿ ಈ ವಾಹನವನ್ನು ಅಭಿವೃದ್ದಿಪಡಿಸಲಾಗಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಮಾರುತಿ ಸುಜುಕಿ ಮಾದರಿಗಳ ರಿ-ಬ್ಯಾಡ್ಜ್ ಆವೃತ್ತಿಗಳನ್ನು ಅಭಿವೃದ್ದಿಪಡಿಸುವತ್ತ ಗಮನಹರಿಸಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಟೊಯೊಟಾ ಗ್ಲಾಂಝಾ ಮಾದರಿಯು ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ರಿ-ಬ್ಯಾಡ್ಜ್ ಕಾರ್ ಆಗಿದೆ. ಈ ಎರಡು ಜಪಾನ್ ಮೂಲದ ಜನಪ್ರಿಯ ಕಂಪನಿಗಳ ಒಪ್ಪಂದದಲ್ಲಿ ಎರ್ಟಿಗಾ ಮತ್ತು ವಿಟಾರಾ ಬ್ರಿಝಾ ಅಭಿವೃದ್ದಿಪಡಿಸಲಾಗಿದೆ. ಈ ಮೂರು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಟವಾಗುತ್ತಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯೋಸ್ ಕಾರುಗಳು

ಇಟಿಯೋಸ್ ಮತ್ತು ಇಟಿಯೋಸ್ ಲಿವಾ ಮಾದರಿಗಳನ್ನು ನವೀಕರಿಸಲು ಅಧಿಕ ವೆಚ್ಚವಾಗುತ್ತದೆ. ಎರಡು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿಲ್ಲ, ಈ ಕಾರಣದಿಂದ ಹೂಡಿಕೆಯು ಮಾಡಿದರೆ ವಿಫಲವಾಗಬಹುದು ಎಂದು ಕಂಪನಿಯುೀ ವಾಹನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

Most Read Articles

Kannada
Read more on ಟೊಯೊಟಾ toyota
English summary
Toyota To Discontinue Etios & Etios Liva In India Soon: Will Not Receive BS-VI Engine Updates - Read in Kannada
Story first published: Wednesday, November 20, 2019, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X