Just In
Don't Miss!
- News
10 ಗಂಟೆ ಸ್ಪಾಟ್ ನಲ್ಲಿ ಬಿದ್ದಿದ್ದವು ಅತ್ಯಾಚಾರಿಗಳ ಮೃತದೇಹ!
- Finance
ದುಬೈನಲ್ಲಿ ಒಂಟೆಗಳಿಗೆ ಐಷಾರಾಮಿ ಆಸ್ಪತ್ರೆ: ಜಗತ್ತಿನ ಏಕೈಕ ಆಸ್ಪತ್ರೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
- Movies
ದಿಶಾ ಸುಟ್ಟ ಸ್ಥಳದಲ್ಲೇ ಕಾಮಪಿಪಾಸುಗಳನ್ನು ಸುಟ್ಟ ಪೊಲೀಸರಿಗೆ ಸೆಲ್ಯೂಟ್ ಎಂದ ತಾರೆಯರು.!
- Lifestyle
ನೀರಿನ ಉಪವಾಸ: ಏನಿದರ ಪ್ರಯೋಜನ ಮತ್ತು ಏನಿವೆ ಅಡ್ಡ ಪರಿಣಾಮಗಳು?
- Sports
South Asian Games: ಈ ಬಾರಿ ಭಾರತದಿಂದ ಭರ್ಜರಿ ಬಂಗಾರದ ಬೇಟೆ!
- Technology
ಕಡಿಮೆ ಬೆಲೆಗೆ 'ನೋಕಿಯಾ 2.3' ಫೋನ್ ಬಿಡುಗಡೆ!..ಬಿಗ್ ಬ್ಯಾಟರಿ ಹೈಲೈಟ್!
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಹೊಸ ಡಿಸೈನ್ ಪ್ರೇರಿತ ಟೊಯೊಟಾ ಫಾರ್ಚೂನರ್ ಟಿಡಿಆರ್ ಎಡಿಷನ್ ಬಿಡುಗಡೆ
ಟೊಯೊಟಾ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಎಸ್‍ಯುವಿ ಆವೃತ್ತಿಯಾದ ಫಾರ್ಚೂನರ್ ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದ್ದು, ಗ್ರಾಹಕರ ಬೇಡಿಕೆ ಮೇರೆಗೆ ಫಾರ್ಚೂನರ್ ಟಾಪ್ ಎಂಡ್ ಆವೃತ್ತಿಯಲ್ಲಿ ವಿನೂತನ ತಂತ್ರಜ್ಞಾನ ಪ್ರೇರಿತ ಟಿಡಿಆರ್ ಸೆಲೆಬ್ರೆಷನ್ ಎಡಿಷನ್ ಬಿಡುಗಡೆ ಮಾಡಿದೆ.

ಫಾರ್ಚೂನರ್ ಮಾದರಿಯು ಭಾರತದಲ್ಲಿ ಬಿಡುಗಡೆಯಾಗಿ 10 ವರ್ಷದ ಸಂಭ್ರಮಾಚರಣೆಗಾಗಿ ಟಿಡಿಆರ್ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಟಿಡಿಆರ್ ಎಡಿಷನ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.33.85 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಟೊಯೊಟಾ ಸಂಸ್ಥೆಯು ತನ್ನ ರೇಸಿಂಗ್ ಡೆವೆಲೆಪ್ಮೆಂಟ್ ತಂಡದೊಂದಿಗೆ ಈ ಕಾರನ್ನು ಅಭಿವೃದ್ದಿಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಫಾರ್ಚೂನರ್‌ಗಿಂತಲೂ ಹೆಚ್ಚಿನ ಮಟ್ಟದ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ.

ಟೊಯೊಟಾ ಫಾರ್ಚೂನರ್ ಟಿಆರ್‍ಡಿ ಕಾರು ಈಗಾಗಲೇ ಥಾಯ್ಲಾಂಡ್ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಬಿಡುಗಡೆಯಾಗಿರುವ ಹೊಸ ಕಾರು ಮಾದರಿಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ಟೊಯೊಟಾ ಫಾರ್ಚೂನರ್ ಟಿಆರ್‍ಡಿ ಕಾರಿನ ಮುಂಭಾಗದಲ್ಲಿ ಗ್ರಿಲ್ ಕ್ರೋಮ್ ಪಡೆದುಕೊಂಡಿದ್ದು, ಟಿಡಿಆರ್ ಬ್ಯಾಡ್ಜ್ ಹೊಸ ಲುಕ್ ನೀಡಿದೆ. ಹಾಗೆಯೇ ಹೊಸ ಕಾರು ಸಂಪೂರ್ಣವಾಗಿ ಬಿಳಿ ಬಣ್ಣದಲ್ಲಿ ಲಭ್ಯವಿರಲಿದ್ದು, ಡ್ಯುಯಲ್ ಟೋನ್ ಟಾಪ್ ರೂಫ್ ಅನ್ನು ಹೊಂದಿರಲಿದೆ.

ಫಾರ್ಚೂನರ್ ಟಿಡಿಆರ್ ಕಾರಿನ ಒಳಭಾಗವನ್ನು ವಿಶೇಷವಾಗಿ ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಬಾಗಿಲುಗಳಲ್ಲಿಯೂ ಸಹ ಟಿಆರ್‍ಡಿ ಬ್ಯಾಡ್ಜಿಂಗ್ ಅನ್ನು ಕಾಣಬಹುದಾಗಿದೆ. ಕಾರನ್ನು ಸ್ಟಾರ್ಟ್ ನಂತರ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೈನಲ್ಲಿ ಟಿಆರ್‍ಡಿ ಸ್ಪೋರ್ಟಿವೊ ಆನಿಮೇಷನ್ ಗೋಚರಿಸಲಿದ್ದು, ಕೀ ಫೋಬ್‍ನ ಮೇಲೆಯೂ ಕೂಡಾ ನೀವು ಟಿಆರ್‍ಡಿ ಟ್ರಿಟ್ಮೆಂಟ್ ಅನ್ನು ಕಾಣಬಹುದಾಗಿದೆ.

ಫಾರ್ಚೂನರ್ ಟಿಡಿಆರ್ ಕಾರಿನಲ್ಲಿ ಜೆಬಿಎಲ್‍ನಿಂದ ಎರವಲು ಪಡೆಯಲಾದ 11-ಸ್ಪೀಕರ್ ಆಡಿಯೋ ಸಿಸ್ಟಂ, ಟಿಆರ್‍ಡಿ ಸಸ್ಷೆಷನ್, ಅಗಲವಾದ ಡಿಸ್ಕ್ ಬ್ರೇಕ್, 20-ಇಂಚಿನ ಅಲಾಯ್ ವ್ಹೀಲ್ಸ್, ಸ್ಪೋರ್ಟಿ ಬ್ಯಾಕ್ ಮತ್ತು ಮರೂನ್ ಬಣ್ಣದ ಸೀಟ್‍ಗಳು, ಕಾರ್ಬನ್ ಕೆವ್ಲರ್ ಟ್ರಿಮ್ ಅನ್ನು ಗೇರ್ ಕ್ನಾಬ್‍ನ ಮೇಲೆ ಮತ್ತು ಸ್ಟೀರಿಂಗ್‍ನ ಮೇಲೆ ನೀಡಲಾಗಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಡಸ್ಕ್-ಸೆನ್ಸಿಂಗ್ ಬಿ-ಬಿಮ್ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಫ್ರಂಟ್ ಫಾಗ್ ಲ್ಯಾಂಪ್ಸ್, ರಿಯರ್ ಫಾಗ್ ಲ್ಯಾಂಪ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋಮ್ಯಾಟಿಕ್ ಐಡ್ಲಿಂಗ್ ಸ್ಟಾರ್ಟ್/ಸ್ಟಾಪ್, ಪವರ್ಡ್ ಟೈಲ್‌ಗೇಟ್, ಪುಶ್ ಬಟನ್, ಕೀ ಲೆಸ್ ಎಂಟ್ರಿ ಮತ್ತು 8 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಸೌಲಭ್ಯ ಇರಲ್ಲಿದೆ.

ಹಾಗೆಯೇ ಹೊಸ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕ್ರೂಸ್ ಕಂಟ್ರೊಲರ್, 7-ಏರ್‌ಬ್ಯಾಗ್, ಹಿಲ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೊಲರ್, ಎರ್ಮಜೆನ್ಸಿ ಬ್ರೇಕ್ ಸಿಗ್ನಲ್, ಸ್ಪೀಡ್ ಆಟೋ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಇನ್ನು ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಫಾರ್ಚೂನರ್ ಟಿಆರ್‍ಡಿ ಎಡಿಷನ್ 2.8 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 173- ಬಿಹೆಚ್‍ಪಿ ಮತ್ತು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಪೆಡಲ್ ಶಿಫ್ಟರ್ ಜೋಡಿಸಲಾಗಿದೆ.

ಇದರಲ್ಲಿ ಸಾಧಾರಣ ಟೊಯೊಟಾ ಫಾರ್ಚೂನರ್ ಕಾರು ಬಿಡುಗಡೆಗೊಂಡು ಸುಮಾರು 10 ವರ್ಷಗಳಾದರೂ ಇಂದಿಗೂ ಸಹ ಎಸ್‌ಯುವಿ ಸೆಗ್ಮೆಂಟ್‍ನಲ್ಲಿ ಮೊದಲ ಸ್ಥಾನನನ್ನು ಪಡೆದುಕೊಂಡಿದ್ದು, ಕಳೆದ ಹಣಕಾಸು ವರ್ಷದಲ್ಲಿ 21,141 ಯೂನಿಟ್ ಫಾರ್ಚೂನರ್ ಕಾರುಗಳು ಮಾರಾಟವಾಗಿದ್ದು, ವಿಶೇಷ ವಿನ್ಯಾಸದ 7 ಸೀಟರ್ ಸೌಲಭ್ಯದೊಂದಿಗೆ ಭಾರೀ ಬೇಡಿಕೆ ಪಡೆದುಕೊಂಡಿದೆ.