ಟೊಯೊಟಾ ಗ್ಲಾಂಝಾ ಕಾರಿನ ಮೇಲೆ ಭರ್ಜರಿ ಆಫರ್
ಟೊಯೊಟಾ ಇಂಡಿಯಾ ಕಂಪನಿಯು ತನ್ನ ಗ್ಲಾಂಝಾ ಹ್ಯಾಚ್‍ಬ್ಯಾಕ್ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಟೊಯೊಟಾ ಕಂಪನಿಯು ತನ್ನ ಗ್ಲಾಂಝಾ ಮಾದರಿಗೆ ಶೇ.100ರಷ್ಟು ಫೈನಾನ್ಸ್ ಮತ್ತು 7.99ರಷ್ಟು ಬಡ್ಡಿ ದರವನ್ನು ನೀಡುತ್ತಿದೆ.

ಕಂಪನಿಯು ಐದು ವರ್ಷಗಳ ವಾರಂಟಿ ಅಥವಾ 2.20 ಲಕ್ಷ ಕಿಲೋಮೀಟರ್ ವಾರಂಟಿಯನ್ನು ನೀಡುತ್ತದೆ. ಟೊಯೊಟಾ ಗ್ಲಾಂಝಾ ಹ್ಯಾಚ್‍ಬ್ಯಾಕ್‍ಗೆ ಎರಡು ವರ್ಷಗಳವರೆಗೆ ವಿಶೇಷ ನಿರ್ವಹಣಾ ಪ್ಯಾಕೇಜ್ ಆಫರ್ ಅನ್ನು ನೀಡಿದೆ. ಗ್ಲಾಂಝಾ ಟೊಯೊಟಾ ಕಂಪನಿಯ ಕಾರುಗಳ ಸರಣಿಯಲ್ಲಿ ಬಹುಬೇಡಿಕೆಯ ಹ್ಯಾಚ್‍ಬ್ಯಾಕ್ ಆಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಯೊಟಾ ಗ್ಲಾಂಝಾ ಕಾರು ಐದು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದೇ ಎಂಜಿನ್ ಅನ್ನು ಬಲೆನೊ ಹ್ಯಾಚ್‍ಬ್ಯಾಕ್‍ನಲ್ಲಿಯೂ ಅಳವಡಿಸಲಾಗಿದೆ.

ಈ ಎಂಜಿನ್ 83 ಬಿಎಚ್‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಜೋಡಿಸಲಾಗಿದೆ.

ಟೊಯೊಟಾ ಗ್ಲಾಂಝಾ ಜಿಎಂಟಿ ಮಾದರಿಯನ್ನು ಮಿಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ ಮಾದರಿಯಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 7 ಬಿಎಚ್‍ಪಿ ಪವರ್ ಅನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತದೆ.

ಟೊಯೊಟಾ ಗ್ಲಾಂಝಾ ಕಾರು, ಮಾರುತಿ ಸುಜುಕಿಯ ಬಲೆನೊದ ರೀ-ಬ್ಯಾಡ್ಜ್ ಆವೃತ್ತಿಯಾಗಿದೆ. ಹೊಸ ಗ್ಲಾಂಝಾದಲ್ಲಿ ಬಲೆನೊ ಕಾರಿನಲ್ಲಿದ್ದ ಯುನಿಟ್, ವೈಶಿಷ್ಟ್ಯಗಳು ಮತ್ತು ಸ್ಪೆಕ್‍ಗಳನ್ನು ಮುಂದುವರೆಸಲಾಗಿದೆ.

ಟೊಯೊಟಾ ಗ್ಲಾಂಝಾ ರೀ-ಬ್ಯಾಡ್ಜ್ ಮಾಡಿದ ಹ್ಯಾಚ್‍ಬ್ಯಾಕ್ ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಗ್ಲಾಂಝಾ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‍ಬ್ಯಾಕ್ ಕಾರುಗಳ ಪೈಕಿ ಒಂದಾಗಿದೆ.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಆಟೋ ಉದ್ಯಮದಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಕಾರು ಮಾರಾಟವು ಪಾತಳಕ್ಕೆ ಕುಸಿದಿತ್ತು. ಆದರೆ ಟೊಯೊಟಾ ಗ್ಲಾಂಝಾ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಟೊಯೊಟಾ ಗ್ಲಾಂಝಾ ಕಾರಿನ ಮಾರಾಟವು ಹೆಚ್ಚಾಗುತ್ತಿದೆ.
MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಗ್ಲಾಂಝಾ ಕಾರಿನಲ್ಲಿ ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್ ಹೆಡ್‌ಲ್ಯಾಂಪ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವ್ಹೀಲ್‍ಗಳು ಮತ್ತು ಎಲ್ಇಡಿ ರೇರ್ ಕಾಂಬಿನೇಷನ್ ಟೇಲ್‌ಗೇಟ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಇದರೊಂದಿಗೆ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್‌ನೊಂದಿಗೆ ಸ್ಮಾರ್ಟ್ ಎಂಟ್ರಿ, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಫೋಲ್ಡಿಂಗ್ , ಟೆಲಿಸ್ಕೋಪಿಕ್ ಸ್ಟೀರಿಂಗ್ ಮತ್ತು ಎಲೆಕ್ಟ್ರಿಕ್ ಪವರ್ ಸ್ಟೀಯರಿಂಗ್ ಅನ್ನು ಅಳವಡಿಸಲಾಗಿದೆ.

ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ನಾಲ್ಕು ಬದಿಯಲ್ಲೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಗ್ಲಾಂಝಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.98 ಲಕ್ಷದಿಂದ ರೂ.8.90 ಲಕ್ಷಗಳಾಗಿದೆ.


Click it and Unblock the Notifications