ಸೋರಿಕೆಯಾದ ಟೊಯೊಟಾ ಗ್ಲಾಂಝಾ ಇಂಟಿರಿಯರ್ಸ್ ಚಿತ್ರಗಳು

ಟೊಯೊಟಾ ಗ್ಲಾಂಝಾ ಎಂದು ಮರುನಾಮಕರಣಗೊಂಡಿರುವ ಮಾರುತಿ ಬಲೆನೋ ವಾಹನವನ್ನು ಅತಿ ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಟೊಯೊಟಾ ಗ್ಲಾಂಝಾದ ಇಂಟಿರಿಯರ್ ಚಿತ್ರಗಳು ಸೋರಿಕೆಯಾಗಿವೆ.

ಸೋರಿಕೆಯಾದ ಟೊಯೊಟಾ ಗ್ಲಾಂಝಾ ಇಂಟಿರಿಯರ್ಸ್ ಚಿತ್ರಗಳು

ಸೋರಿಕೆಯಾಗಿರುವ ಚಿತ್ರಗಳ ಪ್ರಕಾರ, ಬಿಡುಗಡೆಯಾಗಿರುವ ಹ್ಯಾಚ್‍ಬ್ಯಾಕ್ ನ ಕ್ಯಾಬಿನ್ ಮಾರುತಿ ಬಲೆನೋದಂತೆಯೇ ಇರಲಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಎಲ್ಲಾ ಫೀಚರ್ ಗಳೂ ಬಲೆನೋ ರೀತಿಯಲ್ಲಿಯೇ ಇರಲಿದ್ದು, ಸ್ಟೀಯರಿಂಗ್ ನಲ್ಲಿ ಅಳವಡಿಸಿದ್ದ ಮಾರುತಿ ಬ್ಯಾಡ್ಜ್ ಬದಲಿಗೆ ಟೊಯೊಟಾ ಬ್ಯಾಡ್ಜ್ ಬರಲಿದೆ. ಟೊಯೊಟಾ ಗ್ಲಾಂಝಾದ ಇಂಟಿರಿಯರ್ ಮಾರುತಿ ಬಲೆನೋದಂತೆಯೇ ಇರಲಿದ್ದು, ಇದರಲ್ಲಿ ಗುಣಮಟ್ಟ ಮತ್ತು ಕ್ಯಾಬಿನ್ ನ ಫಿನಿಷಿಂಗ್ ಗಳೂ ಸೇರಿವೆ.

ಸೋರಿಕೆಯಾದ ಟೊಯೊಟಾ ಗ್ಲಾಂಝಾ ಇಂಟಿರಿಯರ್ಸ್ ಚಿತ್ರಗಳು

ಬಲೆನೋ ವಾಹನದಲ್ಲಿದ್ದಂತಹ ಫೀಚರ್‍‍ಗಳಾದ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಹೊಂದಿರುವ ಸ್ಮಾರ್ಟ್ ಸ್ಟುಡಿಯೋ ಇನ್ಫೊಟೇನ್ ಮೆಂಟ್ ಸಿಸ್ಟಂಗಳನ್ನು ಗ್ಲಾಂಝಾ ಸಹ ಹೊಂದಲಿದೆ. ಆದರೆ ಇನ್ಫೋ ಟೇನ್ ಮೆಂಟ್ ಸಿಸ್ಟಂ ನ ಮೇಲೆ ಮಾರುತಿ ಸುಜುಕಿ ಲೋಗೋ ಬದಲು ಟೊಯೊಟಾ ಲೋಗೋ ಇರಲಿದೆ.

ಸೋರಿಕೆಯಾದ ಟೊಯೊಟಾ ಗ್ಲಾಂಝಾ ಇಂಟಿರಿಯರ್ಸ್ ಚಿತ್ರಗಳು

ಇನ್ನು ಎಕ್ಸ್ ಟೀರಿಯರ್ ಸಹ ಬಲೆನೋದ ಡಿಸೈನ್ ಮತ್ತು ಸ್ಟೈಲ್ ಹೊಂದಿರಲಿದೆ. ಆದರೆ ಟೊಯೊಟಾ ಕಂಪನಿಯು ಮುಂಭಾಗದಲ್ಲಿರುವ ಗ್ರಿಲ್ ಅನ್ನು ತನ್ನ ಲೋಗೋವನ್ನು ಅಳವಡಿಸುವ ಸಲುವಾಗಿ ಸ್ವಲ್ಪ ಮಟ್ಟಿಗೆ ತಿರುಚಿದೆ.

ಸೋರಿಕೆಯಾದ ಟೊಯೊಟಾ ಗ್ಲಾಂಝಾ ಇಂಟಿರಿಯರ್ಸ್ ಚಿತ್ರಗಳು

ಟೊಯೊಟಾ ಗ್ಲಾಂಝಾ ವಾಹನವನ್ನು, ಬಲೆನೋದ ಟಾಪ್ ಮಾದರಿಗಳ ರೀತಿಯಲ್ಲಿ ಜೆಟಾ ಮತ್ತು ಆಲ್ಫಾ ಎಂಬ ಕೇವಲ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ. ಗ್ಲಾಂಝಾ ಹ್ಯಾಚ್ ಬ್ಯಾಕ್, ಬಲೆನೋ ಹೊಂದಿದ್ದ ಎಂಜಿನ್ ಮತ್ತು ವಿಶೇಷತೆಗಳನ್ನೇ ಹೊಂದಿರಲಿದೆ. ಇದರಲ್ಲಿ 1.2 ಲೀಟರಿನ ಬಿಎಸ್6 ನಿಯಮಕ್ಕೆ ಹೊಂದಿಕೊಳ್ಳುವ 83 ಬಿಹೆಚ್‍ಪಿ ಮತ್ತು 124 ಎನ್ಎಂ ಟಾರ್ಕ್ ಉತ್ಪಾದಿಸುವ, 5 ಸ್ಪೀಡಿನ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಪೆಟ್ರೋಲ್ ಎಂಜಿನ್ ಇರಲಿದೆ.

ಸೋರಿಕೆಯಾದ ಟೊಯೊಟಾ ಗ್ಲಾಂಝಾ ಇಂಟಿರಿಯರ್ಸ್ ಚಿತ್ರಗಳು

ಬಲೆನೋ ಹ್ಯಾಚ್‍ಬ್ಯಾಕ್ ವಾಹನದಲ್ಲಿದ್ದ ಫೀಚರ್ ಗಳನ್ನೆ ಟೊಯೊಟಾ ಗ್ಲಾಂಝಾದಲ್ಲೂ ಮುಂದುವರೆಸಲಾಗಿದೆ. ಅವುಗಳೆಂದರೆ ಎಲ್ಇಡಿ ಹೆಡ್ ಲ್ಯಾಂಪ್ಯ್ಸ್, ಎಲ್ಇಡಿ ಡಿಆರ್‍ಎಲ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಇಬಿಡಿ ಹೊಂದಿರುವ ಎಬಿಎಸ್, ಚಾಲಕರಿಗೆ ಮತ್ತು ಪ್ರಯಾಣಿಕರಿಗಾಗಿ ಏರ್ ಬ್ಯಾಗ್ಸ್, ಸೀಟ್ ಬೆಲ್ಟ್ ರಿಮ್ಯಾಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ನೀಡುವ ಸಿಸ್ಟಂಗಳನ್ನು ಒಳಗೊಂಡಿದೆ. ಮಾರುತಿ ಬಲೆನೋ ಮತ್ತು ಟೊಯೊಟಾ ಗ್ಲಾಂಝಾ ನಡುವೆ ಇರುವ ವ್ಯತ್ಯಾಸವೆಂದರೆ ವಾರಂಟಿ ಮಾತ್ರ. ಟೊಯೊಟಾ ಗ್ಲಾಂಝಾ ವಾಹನಕ್ಕೆ ಮೂರು ವರ್ಷಗಳ ಅಥವಾ 1 ಲಕ್ಷ ಕಿ.ಮೀಗಳ ವಾರಂಟಿ ನೀಡುತ್ತದೆ. ಇದರ ಜೊತೆಗೆ 5 ವರ್ಷಗಳ ಎಕ್ಸ್ ಟೆಂಡೆಡ್ ವಾರಂಟಿಯನ್ನು ನೀಡುತ್ತದೆ. ಟೊಯೊಟಾ ಗ್ಲಾಂಝಾ ವಾಹನವನ್ನು ಗುಜರಾತ್ ನಲ್ಲಿರುವ ಸುಜುಕಿ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಇದೇ ಘಟಕದಲ್ಲಿಯೇ ಬಲೆನೋ ವಾಹನವನ್ನು ಉತ್ಪಾದಿಸಿ , ಮಾರುತಿ ಸುಜುಕಿ ಕಂಪನಿಗೆ ಪೂರೈಕೆ ಮಾಡಲಾಗುತ್ತಿತ್ತು.

MOST READ: ಹ್ಯುಂಡೈ ಕ್ರೆಟಾ ಪಡೆಯುಲು ನೀವು ಇಷ್ಟು ದಿನ ಕಾಯಲೇ ಬೇಕು

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟೊಯೊಟಾ ಗ್ಲಾಂಝಾ ಎಂದು ಮರುನಾಮಕರಣಗೊಂಡಿರುವ ಮಾರುತಿ ಕಂಪನಿಯ ಬಲೆನೋ ಹ್ಯಾಚ್‍ಬ್ಯಾಕ್ ವಾಹನವನ್ನು ಜೂನ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ವಾಹನದ ಬೆಲೆಯು ಬಲೆನೋ ವಾಹನಕ್ಕಿಂತ ಸ್ವಲ್ಪ ಹೆಚ್ಚಿರಲಿದೆ. ಬಿಡುಗಡೆಯ ನಂತರ ಈ ವಾಹನವು ಹ್ಯುಂಡೈ ಐ20 ಎಲೈಟ್ ಮತ್ತು ಹೋಂಡಾ ಜಾಜ್ ವಾಹನಗಳಿಗೆ ಪೈಪೋಟಿ ನೀಡಲಿದೆ.

Source:ಮೋಟಾರ್‍ಆಕ್ಟೇನ್

Most Read Articles

Kannada
Read more on ಟೊಯೊಟಾ toyota
English summary
Toyota Glanza Interiors Spied — Exactly The Same As The Maruti Baleno - Read in kannada
Story first published: Monday, May 6, 2019, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X