ಮಾರಾಟದಲ್ಲಿ ಮುನ್ನುಗುತ್ತಿರುವ ಟೊಯೊಟಾ ಗ್ಲಾಂಝಾ
ಟೊಯೊಟಾ ಇಂಡಿಯಾ ವರ್ಷದ ಆರಂಭದಿಂದಲೂ ಆಟೋಮೊಬೈಲ್ ಕುಸಿತದ ಪಾರಿಣಾಮವನ್ನು ಎದುರಿಸುತ್ತಿದೆ. ಕಂಪನಿಯು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟಾರೆ ಶೇ.17 ರಷ್ಟು ಕುಸಿತವನ್ನು ಕಂಡಿದೆ. ಕಂಪನಿಯು ಇತ್ತೀಚೆಗೆ ಗ್ಲಾಂಝಾ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು.

ಗ್ಲಾಂಝಾ ಹ್ಯಾಚ್‍ಬ್ಯಾಕ್ ಟೊಯೊಟಾ ಮತ್ತು ಸುಜುಕಿ ನಡುವಿನ ಪಾಲುಗಾರಿಕೆಯಲ್ಲಿ ತಯಾರಿಸಲಾಗಿದೆ. ಟೊಯೊಟಾ ಗ್ಲಾಂಝಾ ಮೂಲವಾಗಿ ಮಾರುತಿ ಸುಜುಕಿ ಬಾಲೆನೊ ಕಾರಿನ ಮರುರೂಪಿಸಲಾದ ಆವೃತ್ತಿಯಾಗಿದೆ. ಇದು ದೇಶದಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಆಗಿದೆ.

ಟೊಯೊಟಾ ಗ್ಲಾಂಝಾ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಕಂಪನಿಯು ತಿಂಗಳಿಗೊಮ್ಮೆ ಬೆಳವಣಿಗೆಯನ್ನು ಕಾಣುತ್ತಿದ್ದು, ಹಿಂದಿನ ತಿಂಗಳಲ್ಲಿ ಹ್ಯಾಚ್‍ಬ್ಯಾಕ್ 2,773 ಯುನಿಟ್‍ಗಳು ಮಾರಾಟವಾಗಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ 2,322 ಯುನಿಟ್‍ಗಳು ಮಾರಾಟವಾಗುವ ಮೂಲಕ ಶೇ.19.42 ರಷ್ಟು ಬೆಳವಣಿಗೆಯನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಗ್ಲಾಂಝಾ ಮಾರಾಟದಲ್ಲಿ ಸ್ಥಿರವಾದ ಹೆಚ್ಚಳದ ಜೊತೆಯಲ್ಲಿ ಜಪಾನಿನ ಬ್ರ್ಯಾಂಡ್‍ನ ಅತಿ ಹೆಚ್ಚು ಮಾರಾಟವಾದ ಎರಡನೇ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾದರಿ ಪ್ರಕಾರ ಮಾರಾಟ ಪಟ್ಟಿಯಲ್ಲಿ ಗ್ಲಾಂಝಾ ಎರಡನೇ ಸ್ಥಾನವನ್ನು ಹೊಂದಿದೆ. ಇನ್ನೊವಾ ಕ್ರಿಸ್ಟಾ ಎಂಪಿವಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಟೊಯೊಟಾ ಇನ್ನೊವಾ ಕ್ರಿಸ್ಟಾ ಹಿಂದಿನ ಸೆಪ್ಟೆಂಬರ್ ತಿಂಗಳಲ್ಲಿ 4,225 ಯುನಿಟ್‍ಗಳ ಮಾರಾಟವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 6,477 ಯುನಿಟ್‍ಗಳ ಮಾರಾಟವಾಗಿತ್ತು. ವರ್ಷದಿಂದ ವರ್ಷಕ್ಕೆ ಶೇ.35 ರಷ್ಟು ಮಾರಾಟದಲ್ಲಿ ಕುಸಿತ ಕಾಣುತ್ತಿವೆ.
| ಸ್ಥಾನ | ಮಾದರಿಗಳು | ಮಾರಾಟ ಪ್ರಮಾಣ |
| 1 | ಟೊಯೊಟಾ ಇನ್ನೊವಾ | 4,225 |
| 2 | ಟೊಯೊಟಾ ಗ್ಲಾಂಝಾ | 2,773 |
| 3 | ಟೊಯೊಟಾ ಎಟಿಯಾಸ್ | 1,252 |
| 4 | ಟೊಯೊಟಾ ಫಾರ್ಚೂನರ್ | 920 |
| 5 | ಟೊಯೊಟಾ ಲಿವಾ ಪ್ಲಸ್ ಕ್ರಾಸ್ | 670 |
| 6 | ಟೊಯೊಟಾ ಯಾರಿಸ್ | 232 |
| 7 | ಟೊಯೊಟಾ ಕೊರೊಲ್ಲಾ | 84 |
| 8 | ಟೊಯೊಟಾ ಕ್ಯಾಮ್ರಿ | 34 |
| 9 | ಟೊಯೊಟಾ ಲ್ಯಾಂಡ್ ಕ್ರೂಸರ್ | 11 |
| 10 | ಟೊಯೊಟಾ ವೆಲ್‍ಫೈರ್ | 2 |

ಜನಪ್ರಿಯ ಎಂಪಿವಿ ಇನ್ನೊವಾ ಕಳೆದ ಆಗಸ್ಟ್ ತಿಂಗಳಲ್ಲಿ 4,796 ಯುನಿಟ್‍ಗಳಿಂದ ಸುಮಾರು 12% ರಷ್ಟು ಮಾಸಿಕ ಮಾರಾಟದಲ್ಲಿ ಕುಸಿತ ಕಂಡಿದೆ. ಟೊಯೊಟಾ ಇನ್ನೊವಾ ಕ್ರಿಸ್ಟಾ ಇತ್ತಿಚೆಗೆ ಮಾಸಿಕ ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಮುಂದೆ ಮಂಡಿಯೂರಿದೆ.

ಪ್ರಸ್ತುತ ಟೊಯೊಟಾ ಗ್ಲಾಂಝಾ ಶೀಘ್ರದಲ್ಲೇ ಇನ್ನೊವಾ ಕ್ರಿಸ್ಟಾವನ್ನು ಮಾರಾಟದಲ್ಲಿ ಹಿಂದಿಕ್ಕಬಹುದು. ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಜಾರಿಯಾಗುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಎಂಜಿನ್ ಅನ್ನು ನವೀಕರಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇದರಿಂದ ಗ್ಲಾಂಝಾ ಮಾರಾಟವು ಇನ್ನಷ್ಟು ಹೆಚ್ಚಾಗಬಹುದು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮಾರುತಿ ಬಲೆನೊ ಹ್ಯಾಚ್‍ಬ್ಯಾಕ್‍ನಿಂದ ಎರವಲು ಪಡೆದ ಬಿಎಸ್-6 ಪ್ರೇರಿತ ಪೆಟ್ರೋಲ್ ಎಂಜಿನ್‍ನೊಂದಿಗೆ ಗ್ಲಾಂಝಾ ಲಭ್ಯವಿದೆ. 1.2 ಲೀಟರ್ ಎಂಜಿನ್ ಮಿಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಈ ಎಂಜಿನ್ 82 ಬಿಎಚ್‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಮತ್ತು ಸಿವಿಟಿ ಗೇರ್‍ಬಾಕ್ಸ್ ಅನ್ನು ಹೊಂದಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟೊಯೋಟಾ ಗ್ಲಾಂಝಾ ಹೊರತಾಗಿ ಇನ್ನೂ ಬಿಡುಗಡೆಯಾಗಲಿರುವ ವೆಲ್‍ಫೈರ್ ಎಂಪಿವಿ 2 ಯುನಿಟ್‍ಗಳ ರಾವನೆಯನ್ನು ಸಹ ಪಟ್ಟೆಯಲ್ಲಿ ಒಳಗೊಂಡಿದೆ. ಹೊಸ ಟೊಯೊಟಾ ವೆಲ್‍ಫೈರ್ ದೇಶಿಯ ಮಾರುಕಟ್ಟೆಗೆ ಶೀಘ್ರದಲ್ಲೇ ಮಾರಾಟಕ್ಕೆ ಬರಲಿದ್ದು, ಎಂಪಿವಿ ವಿಭಾಗದಲ್ಲಿ ಇನ್ನೊವಾ ಕ್ರಿಸ್ಟಾಕ್ಕಿಂತ ಮೇಲಿನ ಸ್ಥಾನವನ್ನು ಹೊಂದಲಿದೆ. ವೆಲ್‍ಫೈರ್ ಈಗಾಗಲೇ ಡೀಲರ್‍ಗಳಿಗೆ ರಾವನೆಯಾಗಲು ಪ್ರಾರಂಭವಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟೊಯೊಟಾ ಗ್ಲಾಂಝಾ ಹ್ಯಾಚ್‍ಬ್ಯಾಕ್‍ಗೆ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪತ್ರಿಕಿಯೆ ಬಂದಿದೆ. ಗ್ಲಾಂಝಾ ಮಾರಾಟವು ತಿಂಗಳೊಮ್ಮೆ ಸುಧಾರಿಸುತ್ತಿದೆ. ಗ್ಲಾಂಝಾ ಈಗಾಗಲೇ ಭಾರತೀಯ ಪ್ರೀಮಿಯಂ ಹ್ಯಾಚ್‍ಬ್ಯಾಕ್ ವಿಭಾಗದಲ್ಲಿ ಪೋಕ್ಸ್ ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಅನ್ನು ಹಿಂದಿಕ್ಕಿದೆ. ಹ್ಯುಂಡೈ ಎಲೈಟ್ ಐ20 ಮತ್ತು ಮಾರುತಿ ಬಾಲೆನೊ ಮಾಸಿಕ ಮಾರಾಟದಲ್ಲಿ 10,000 ಯುನಿಟ್‍ಗಳು ಮುಂದಿದೆ.


Click it and Unblock the Notifications