ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಯು ಜೊತೆಗೂಡಿ ಇದೇ ಜೂನ್ 6ರಂದು ತಮ್ಮ ಹೊಸ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಟೊಯೊಟಾ ಗ್ಲಾಂಝಾ ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ ಸಂಗತಿ ನಮಗೆಲ್ಲರಿಗು ತಿಳಿದಿದ್ದೆ.

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಈ ಹಿಂದೆಯೆ ನಾವು ಟೊಯೊಟಾ ಗ್ಲಾಂಝಾ ಕಾರು ಬಿಡುಗಡೆಗೊಂಡ ಒಂದು ತಿಂಗಳೊಳಗೆ ಧಾಖಲೆಯ ಬುಕ್ಕಿಂಗ್ ಅನ್ನು ಪಡೆದ ಬಗ್ಗೆ ಮಾಹಿತಿಯನ್ನು ನೀಡಿದ್ದೆವು. ಇದೀಗ ಆಟೋ ಕಾರ್ ಇಂಡಿಯಾ ವರದಿ ಪ್ರಕಾರ ಟೊಯೊಟಾ ಸಂಸ್ಥೆಯ ಕೆಲ ಡೀಲರ್‍‍ಗಳು ಈ ಕಾರನ್ನು ಖರೀದಿ ಮಾಡಿದವರ ಕೈಗೆ ಯಾವಾಗ ಸೇರುತ್ತೆ ಎಂಬುದಕ್ಕೆ ಉತ್ತರ ನೀಡಿದ್ದು, ಟೊಯೊಟಾ ಗ್ಲಾಂಝಾ ಕಾರನ್ನು ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರ ಕೈಗೆ ವಾಹನ ಸೇರಬೇಕಾದರೆ ಒಂದು ತಿಂಗಳ ವರೆಗೂ ಕಾಯಲೇಬೇಕು ಎಂದು ಹೇಳಿದ್ದಾರೆ.

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಒಂದೇ ತಿಂಗಳಿನಲ್ಲಿ 2000ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್

ಮೇ ತಿಂಗಳಿನಲ್ಲಿ ಟೊಯೊಟಾ ಗ್ಲಾಂಝಾ ಕಾರು ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯು ಪಾರಂಭಿಸಲಾಗಿದ್ದು, ಬಿಡುಗಡೆದೂ ಮುನ್ನವೇ ಅಂದರೇ ಕೇವಲ ಮೇ ತಿಂಗಳಿನಲ್ಲಿಯೆ ಸುಮಾರು 2,142 ಯೂನಿಟ್ ಮಾರಾಟವಾಗಿದೆ ಎಂದರೆ ನೀವು ನಂಬಲೇಬೇಕು. ಹೌದು, ಜೂನ್ 6 ರಂದು ಈ ಕಾರು ಬಿಡುಗಡೆಗೊಂಡರೂ ಸಹ ಅದಕ್ಕೂ ಮುನ್ನವೇ ಡೀಲರ್‍‍ಗಳು ಈ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಲಾಗಿದ್ದು, 2000ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ಕಾರನ್ನು ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಮಾರುತಿ ಸುಜುಕಿ ಸಂಸ್ಥೆಯ ಬಲೆನೊ ಆವೃತ್ತಿಯನ್ನೇ ಕೆಲವು ತಾಂತ್ರಿಕ ಸೌಲಭ್ಯಗಳ ಬದಲಾವಣೆಗಳೊಂದಿಗೆ ಮರುನಾಮಕರಣಗೊಳಿಸಿ ಬಿಡುಗಡೆ ಮಾಡಲಾಗಿರುವ ಟೊಯೊಟಾ ಗ್ಲಾಂಝಾ ಕಾರು ಸಾಕಷ್ಟು ಆಕರ್ಷಣೆಯಾಗಿದ್ದು, ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7,21,900ಕ್ಕೆ ನಿಗದಿಪಡಿಸಲಾಗಿದೆ.

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಎಂಜಿನ್ ಸಾಮಾರ್ಥ್ಯ

ಗ್ಲಾಂಝಾ ಕಾರು ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆ 1.2-ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಮೂಲಕ ಮ್ಯಾನುವಲ್ ಆವೃತ್ತಿಯು 89.7 ಬಿಎಚ್‌ಪಿ ಉತ್ಪಾದನೆ ಮಾಡಿದ್ದಲ್ಲಿ ಎಎಂಟಿ ಮಾದರಿಯು 82-ಬಿಎಚ್‌ಪಿ ಉತ್ಪಾದನೆ ಮಾಡಲಿದೆ.

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಎರಡು ಆವೃತ್ತಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯಾದ ಜಿ ಮ್ಯಾನುವಲ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀ-ಅಯಾನ್ (66 ಕಿಲೋ ವ್ಯಾಟ್) ಬ್ಯಾಟರಿ ಅಳವಡಿಸುವ ಮೂಲಕ ಹೆಚ್ಚಿನ ಮಟ್ಟದ ಮೈಲೇಜ್ ನೀರಿಕ್ಷಿಸುವ ಗ್ರಾಹಕರಿಗಾಗಿಯೇ ವಿಶೇಷವಾಗಿ ಅಭಿವೃದ್ಧಿಪಡಿಸಿದೆ.

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಟೊಯೊಟಾ ಸಂಸ್ಥೆಯು ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ, ಹೊಸ ಕಾರಿನಲ್ಲಿ ಜಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 23.87 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ವಿ ಆವೃತ್ತಿಯ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ ಪೆಟ್ರೋಲ್‌ಗೆ 19.59 ಮತ್ತು ಸಿವಿಟಿ ಮಾದರಿಯು 21.01 ಮೈಲೇಜ್ ನೀಡುತ್ತದೆ.

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಹೊಸ ಕಾರಿನ ವೈಶಿಷ್ಟ್ಯತೆಗಳು

ಗ್ಲಾಂಝಾ ಕಾರು ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್, ಆಟೋ ಹೆಡ್‌ಲ್ಯಾಂಪ್, ಫಾಲೋ ಮೀ ಕಾರ್ ಫಂಕ್ಷನ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ರಿಯರ್ ಕಾಂಬಿನೇಷನ್ ಟೈಲ್‌ಗೇಟ್ ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಕಾರಿನ ಒಳಾಂಗಣ ವಿನ್ಯಾಸ

ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿರುವ ಗ್ಲಾಂಝಾ ಕಾರಿನಲ್ಲಿ ಸ್ಮಾರ್ಟ್ ಪ್ಲೇ ಕಾಸ್ಟ್, ಟಚ್ ಸ್ಕ್ರೀನ್ ಆಡಿಯೋ, 4-ಸ್ಪೀಕರ್ಸ್‌ಗಳು, ಸ್ಮಾರ್ಟ್ ಫೋನ್ ಕನೆಕ್ಟ್(ಆ್ಯಪಲ್ ಕಾರ್ ಪ್ಲೇ/ಅಂಡ್ರಾಯಿಡ್ ಆಟೋ), ನ್ಯಾವಿಗೇಷನ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ಕಾಲಿಂಗ್ ಕಂಟ್ರೋಲರ್, ವೈಸ್ ಕಮಾಂಡ್, ಮುಂಭಾಗದ ಸೀಟುಗಳಲ್ಲಿ ಆರ್ಮ್ ರೆಸ್ಟ್ ಮತ್ತು ಲಗೇಜ್ ರೂಂ ಬಳಿ ಲೈಟಿಂಗ್ ಸೌಲಭ್ಯ ಹೊಂದಿದೆ.

MOST READ: 2030ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣ ಬಂದ್..

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಹಾಗೆಯೇ ಹೊಸ ಕಾರಿನಲ್ಲಿ ಚಾಲಕ ಸೇರಿ ಐದು ಜನ ಅರಾಮಾದಾಯಕವಾಗಿ ಪ್ರಯಾಣಿಸುವ ಹಾಗೆ ಆಸನ ಸೌಲಭ್ಯವಿದ್ದು, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್‌ನೊಂದಿಗೆ ಸ್ಮಾರ್ಟ್ ಎಂಟ್ರಿ, 60:40 ಅನುಪಾತದಲ್ಲಿ ವಿಭಜಿಸಬಹುದಾದ ಹಿಂಬದಿ ಆಸನಗಳು, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಫೋಲ್ಡಿಂಗ್ ORVM, ಟೆಲಿಸ್ಕೋಪಿಕ್ ಸ್ಟೀರಿಂಗ್ ಮತ್ತು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಜೋಡಿಸಲಾಗಿದೆ.

MOST READ: ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ?

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಸುರಕ್ಷಾ ವೈಶಿಷ್ಟ್ಯತೆಗಳು

ಗ್ಲಾಂಝಾ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷಾ ವಿಚಾರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಬಿಎ, ಟೆಕ್ ಬಾಡಿ, ISOFIX ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ನಾಲ್ಕು ಬದಿಯಲ್ಲೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್ ಸಿಸ್ಟಂ ನೀಡಲಾಗಿದೆ.

ಟೊಯೊಟಾ ಗ್ಲಾಂಝಾ ನಿಮ್ಮ ಕೈ ಸೇರಬೇಕಾದರೆ ಇಷ್ಟು ದಿನ ಕಾಯಲೇಬೇಕಂತೆ

ಗ್ಲಾಂಝಾ ಖರೀದಿ ಮೇಲೆ ಭರ್ಜರಿ ವಾರಂಟಿ

ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್ ಗ್ಲಾಂಝಾ ಖರೀದಿ ಮೇಲೆ ಅತ್ಯುತ್ತಮ ವಾರಂಟಿ ಸೌಲಭ್ಯವನ್ನು ಘೋಷಣೆ ಮಾಡಿದ್ದು, 3 ವರ್ಷದ ಅವಧಿಗೆ ಇಲ್ಲವೇ 1 ಲಕ್ಷ ಕಿ.ಮಿ ರನ್ನಿಂಗ್ ಮೇಲೆ ವಾರಂಟಿಯನ್ನು ಆಯ್ಕೆಮಾಡಬಹುದಾಗಿದೆ.

More from DriveSpark

Article Published On: Wednesday, June 19, 2019, 12:43 [IST]
English summary
Toyota Glanza Sales Crossed 2000 One Month Waiting Period. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+