ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ದುಬಾರಿ ದಂಡಗಳ ಹೊರತಾಗಿಯೂ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಹೀಗಾಗಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಗ್ಗಿಸುವ ಸಂಬಂಧ ಕೇಂದ್ರ ಸರ್ಕಾರವು ಮತ್ತಷ್ಟು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಹೌದು, ಈ ಹೊಸ ರೂಲ್ಸ್ ಜಾರಿಯಾದಲ್ಲಿ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಿದ್ದು, ಇಲ್ಲವಾದಲ್ಲಿ ನಿಮ್ಮ ಜೇಬು ಸ್ಥಳದಲ್ಲಿಯೇ ಖಾಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮುಂಬರುವ ದಿನಗಳಲ್ಲಿ ಮೋಟಾರ್ ವೆಹಿಕಲ್ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುವ ಬದಲಾವಣೆಗಳನ್ನು ಜಾರಿಗೆ ತರುವ ಸಾಧ್ಯತೆಯಿವೆ ಎನ್ನಲಾಗಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಮೋಟಾರ್ ವೆಹಿಕಲ್ ಕಾಯ್ದೆ 1988 ಅನ್ನು ತಿದ್ದುಪಡಿ ಮಾಡಲು ಯತ್ನಿಸುವ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದು,ರಾಜ್ಯಸಭೆಯಲ್ಲಿ ಮಾತ್ರವೇ ಬಾಕಿ ಉಳಿದಿದೆ. ಈ ಹೊಸ ಮಸೂದೆಯು ರಾಜ್ಯಸಭೆಯಲ್ಲಿಯು ಸಹ ಅಂಗೀಕಾರ ಪಡೆದಿದ್ದೆ ಆದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರು ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು.

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಮಸೂದೆಯ ವಿಷಯಗಳು ಈಗಾಗಲೇ ಚಾಲ್ತಿಯಲ್ಲಿರುವುದೇ ಆಗಿರಲಿದ್ದು, ಮೂಲಗಳ ಪ್ರಕಾರ, ಲೈಸೆನ್ಸ್ ಮತ್ತು ನೋಂದಣಿ ಪ್ರಮಾಣಪತ್ರಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಿರಬೇಕಾಗಬಹುದು. ರಾಜ್ಯಗಳಾದ್ಯಂತ ಏಕರೂಪದ ನೋಂದಣಿ ಪ್ರಕ್ರಿಯೆಯನ್ನು ಪರಿಚಯಿಸುವ ಸಲುವಾಗಿ ಲೈಸೆನ್ಸ್ ನೀಡುವ ಅಧಿಕಾರಿಗಳನ್ನು ಗಣಕೀಕರಿಸಲು ಇದು ಪ್ರಯತ್ನಿಸುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಮಸೂದೆಯು ಸಾರಿಗೆ ವಾಹನಗಳಿಗೆ ಆಟೋಮೇಟೆಡ್ ಫಿಟ್‌ನೆಸ್ ಪರೀಕ್ಷೆಯ ನೀತಿಯನ್ನು ತರಬಹುದಾಗಿದ್ದು, ಜೊತೆಗೆ ಇತರೆ ಮಾಲಿನ್ಯ-ನಿಗ್ರಹ ಕ್ರಮಗಳನ್ನೂ ಸಹ ಮಾಡಬಹುದು. ಹಾಗೆಯೆ ಇವುಗಳ ಜೊತೆಗೆ, ಹೊಸ ಕಾನೂನಿನ ಅಡಿಯಲ್ಲಿ ಥರ್ಡ್ ಪಾರ್ಟಿ ವಿಮೆ ಮತ್ತು ಕ್ಯಾಬ್ ಅಗ್ರಿಗೇಟರ್‌ಗಳಲ್ಲಿ ಮಹತ್ವಾಕಾಂಕ್ಷೆಯನ್ನು ತರುತ್ತದೆ. ಈ ಮಸೂದೆಯು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಕೂಡಾ ತೀರ್ಮಾನಿಸಲಾಗಿರುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಜೊತೆಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ 1 ಲಕ್ಷ ರೂ.ಗಳವರೆಗೆ ಹೆಚ್ಚಿನ ದಂಡ ವಿಧಿಸಬೇಕೆಂದು ಕೋರಲಾಗಿದ್ದು, ಇದನ್ನು ರಾಜ್ಯ ಸರ್ಕಾರಗಳು 10 ಪಟ್ಟು ಹೆಚ್ಚಿಸಬಹುದು ಎಂದು ವರದಿಯೊಂದು ತಿಳಿಸಿದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಜಾರಿಯಾಗಲಿರುವ ಮಸೂದೆಯಲ್ಲಿನ ಅತ್ಯಂತ ಕ್ರಾಂತಿಕಾರಿ ರೀತಿಯ ಬದಲಾವಣೆಗಳೆಂದರೆ:

(ಎ) ವಿವಿಧ ರೀತಿಯ ಸಂಚಾರ ಉಲ್ಲಂಘನೆಗಳಿಗೆ ಭಾರಿ ಪ್ರಮಾಣದ ದಂಡ ವಿಧಿಸುವುದು.

(ಬಿ) ಬಾಲಾಪರಾಧಿಗಳಿಂದ ಉಂಟಾಗುವ ಅಪಘಾತಗಳು/ಉಲ್ಲಂಘನೆಗಳಿಗೆ ಕಾರು ಮಾಲೀಕರ ಮೇಲೆ ಕ್ರಿಮಿನಲ್ ಕೇಸ್

(ಸಿ) ವಾಹನ ಕಂಪೆನಿಗಳಿಂದ ದೋಷಯುಕ್ತ ಕಾರಿನ ಭಾಗಗಳನ್ನು ಮರುಪಡೆಯುವುದು

(ಡಿ) ಕಳಪೆ ನಿರ್ಮಾಣ ಗುಣಮಟ್ಟಕ್ಕೆ ಜವಾಬ್ದಾರರಾಗಿರುವ ಕಂಪನಿಗಳು

(ಇ) ಅಪಘಾತಕ್ಕೀಡಾದವರನ್ನು ರಕ್ಷಿಸಲು ಬರುವವರಿಗೆ ಸರ್ಕಾರದಿಂದ ರಕ್ಷಣೆ

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಮಹತ್ವದ ಮಸೂದೆಯಿಂದ ಪ್ರಸ್ತಾಪಿಸಲಾದ ಕ್ರಮಗಳಲ್ಲಿ ಪ್ರಮುಖವಾದವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

- ಹಿಟ್-ಅಂಡ್-ರನ್ ಮಾರಣಾಂತಿಕ ಪ್ರಕರಣಗಳಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡಬೇಕಿದೆ. ಪ್ರಸ್ತುತ ಈ ನಿಬಂಧನೆ ಕೇವಲ ರೂ. 25 ಸಾವಿರ ಇದೆ.

- ಬಾಲಾಪರಾಧಿಗಳ ಸಂಚಾರ ಉಲ್ಲಂಘನೆಯ ಪ್ರಕರಣಗಳಲ್ಲಿ, ವಾಹನ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ - ಅವರ ಅರಿವಿಲ್ಲದೆ ಅಪರಾಧ ನಡೆದಿದೆ ಎಂದು ಅವರು ಸಾಬೀತುಪಡಿಸದ ಹೊರತು ಅಥವಾ ಅವರು ಅದನ್ನು ತಡೆಯಲು ಪ್ರಯತ್ನಿಸಿದರು. ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಬಾಲಾಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ವಾಹನದ ನೋಂದಣಿ ರದ್ದುಗೊಳ್ಳುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

- ಕುಡಿದು ವಾಹನ ಚಲಾಯಿಸುವುದಕ್ಕೆ ಕನಿಷ್ಠ ದಂಡವನ್ನು 2,000 ರೂ.ಗಳಿಂದ 10,000 ರೂ.ಗೆ ಹೆಚ್ಚಿಸಲಾಗಿದೆ. ರಾಶ್ ಡ್ರೈವಿಂಗ್‍ಗಾಗಿ ದಂಡವನ್ನು 1,000 ರೂ.ಗಳಿಂದ 5,000 ರೂ.ಗೆ ಏರಿಸಲಾಗಿದೆ.

- ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದರಿಂದ ಕನಿಷ್ಠ 5,000 ರೂ. (ಇದು ಪ್ರಸ್ತುತ 500 ರೂ.) ದಂಡವನ್ನು ಏರಿಸಲಾಗುತ್ತದೆ. ಸ್ಪೀಡ್ ಡ್ರೈವಿಂಗ್‍‍ಗಾಗಿ ಪ್ರಸ್ತುತ ಇರುವ ರೂ. 400 ದಂಡದಿಂಡ ರೂ. 1 ರಿಂದ 2 ಸಾವಿರದ ವರೆಗು ಏರಿಸಬಹುದು. ಸೀಟ್‌ಬೆಲ್ಟ್ ರಹಿತ ವಾಹನ ಚಾಲನೆ ಮಾಡುವವರಿಗೆ ಪ್ರಸ್ತುತ ರೂ. 100 ಇರುವ ದಂಡವನ್ನು ರೂ. 1000ಕ್ಕೆ ಏರಿಸಲಾಗುತ್ತದೆ.

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

- ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸುವವರಿಗೆ ಪ್ರಸ್ತುತ ದಂಡ ರೂ. 1,000 ಇರುವುದದಿಂದ ರೂ. 5,000 ಏರಿಸಲಾಗುತ್ತದೆ.

- ಮೋಟಾರ್ ವಾಹನ ಅಪಘಾತ ನಿಧಿಯು ದೇಶದ ಎಲ್ಲಾ ರಸ್ತೆ ಬಳಕೆದಾರರಿಗೆ ಕೆಲವು ರೀತಿಯ ಅಪಘಾತಗಳಿಗೆ ಕಡ್ಡಾಯ ವಿಮಾ ರಕ್ಷಣೆಯನ್ನು ಒದಗಿಸಬೇಕಾಗುತ್ತದೆ.

- ಘಟಕಗಳು/ಇಂಜಿನ್ ಅಗತ್ಯವಿರುವ ಮಾನದಂಡಗಳನ್ನು ಪೂರೈಸದ ವಾಹನಗಳನ್ನು ಸಂಸ್ಥೆಯಗಳು ರೀ ಕಾಲ್ ಮಾಡತಕ್ಕದ್ದು. ಹೀಗಾಗಿದ್ದಲ್ಲಿ ತಯಾರಕರಿಗೆ ಉಪ-ಗುಣಮಟ್ಟದ ಘಟಕವನ್ನು ಅಥವಾ ಎಂಜಿನ್‌ ಅನ್ನು ನೀಡಿದ ಕಾರಣ ಆ ಸಂಸ್ಥೆಯ ಮೇಲೆ ರೂ.500 ಕೋಟಿ ದಂಡ ವಿಧಿಸಲಾಗುವುದು.

MOST READ: ರಾಜ್ಯದೆಲ್ಲೆಡೆ 650 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ಇನ್ಸ್ಟಾಲ್ ಮಾಡಲಿದೆ ಬೆಸ್ಕಾಂ

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

- ರಸ್ತೆ ಅಪಘಾತ ಪ್ರಕರಣಗಳಲ್ಲಿ ಹಕ್ಕುಗಳ ನ್ಯಾಯಮಂಡಳಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು 6 ತಿಂಗಳ ಕಾಲಾವಧಿಯನ್ನು ನಿರ್ದಿಷ್ಟಪಡಿಸಲಾಗಿರುತ್ತದೆ.

- ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪಡೆಯಲು ಆಧಾರ್ ಕಡ್ಡಾಯವಾಗಿರುತ್ತದೆ.

MOST READ: ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

- ಅಪಘಾತಗಳಿಗೆ ಕಾರಣವಾಗುವ ರಸ್ತೆಗಳ ದೋಷಯುಕ್ತ ವಿನ್ಯಾಸ, ನಿರ್ಮಾಣ ಅಥವಾ ಕಳಪೆ ನಿರ್ವಹಣೆಗೆ ಸಿವಿಕ್ ಏಜೆನ್ಸಿಗಳು, ಗುತ್ತಿಗೆದಾರರು, ಸಲಹೆಗಾರರು ಜವಾಬ್ದಾರರಾಗಿರುತ್ತಾರೆ.

- ಥರ್ಡ್ ಪಾರ್ಟಿ ವಿಮೆಯ ಹೊಣೆಗಾರಿಕೆಯನ್ನು ತೆಗೆದುಹಾಕಲಾಗುತ್ತದೆ. 2016 ರ ಮಸೂದೆಯು ಗರಿಷ್ಠ ಹೊಣೆಗಾರಿಕೆಗೆ ಸಾವಿಗೆ 10 ಲಕ್ಷ ರೂ. ಮತ್ತು ತೀವ್ರವಾದ ಗಾಯಕ್ಕೆ ರೂ. 5 ಲಕ್ಷ ನೀಡಬೇಕಾಗಿರುತ್ತದೆ.

- ಡ್ರೈವಿಂಗ್ ಲೈಸೆನ್ಸ್ ನವೀಕರಣದ ಸಮಯ ಮಿತಿಯನ್ನು ಒಂದು ತಿಂಗಳಿನಿಂದ ಒಂದು ವರ್ಷಕ್ಕೆ ಹೆಚ್ಚಿಸಲಾಗುತ್ತದೆ.

Most Read Articles

Kannada
English summary
Traffic Fines Increasing 10 Percent Extra. Read In Kannada
Story first published: Tuesday, June 18, 2019, 18:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X