ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ತಂತ್ರ ರೂಪಿಸಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಭಾರತದಲ್ಲಿ ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳನ್ನು ಉತ್ಪಾದನೆ ಮಾಡುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಮಾರುತಿ ಸುಜುಕಿ ಜನಪ್ರಿಯ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಟೊಯೊಟಾ ಸಂಸ್ಥೆಯ ಬ್ಯಾಡ್ಜ್‌ನೊಂದಿಗೆ ಮರುಬಿಡುಗಡೆಗಾಗಿ ಸಜ್ಜುಗೊಳಿಸಲಾಗುತ್ತಿದೆ.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಹೌದು, 2017ರ ಆರಂಭದಲ್ಲೇ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್ ಜಂಟಿಯಾಗಿ ಕಾರು ಉತ್ಪಾದಿಸುವ ಬಗ್ಗೆ ಮಾತುಕತೆ ನಡೆಸಿದ್ದವು. ಆದ್ರೆ ಕಾರಣಾಂತರಗಳಿಂದ ಹೊಸ ಯೋಜನೆ ಬಗ್ಗೆ ತಟಸ್ಥವಾಗಿದ್ದ ಎರಡು ಸಂಸ್ಥೆಗಳು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, ಹೊಸ ಕಾರುಗಳ ಉತ್ಪಾದನೆ ಮತ್ತು ಪೂರೈಕೆಗೆ ಪರಸ್ಪರ ಸಹಾಯ ಮಾಡುವುದರ ಜೊತೆಗೆ ಎಲೆಕ್ಟ್ರಿಕ್, ಹೈಬ್ರಿಡ್ ಎಂಜಿನ್ ಕಾರುಗಳನ್ನು ಜಂಟಿಯಾಗಿ ಉತ್ಪಾದಿಸುವ ಯೋಜನೆಯನ್ನು ಹಮ್ಮಿಕೊಂಡಿವೆ.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಇದರಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಕಾರಿನ ಉತ್ಪಾದನಾ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿರುವ ಟೊಯೊಟಾ ಸಂಸ್ಥೆಯು ಬಲೆನೊ ಕಾರಿನ ಬ್ಯಾಡ್ಜ್ ಅನ್ನು ಸಹ ತನ್ನ ಹೆಸರಿನಲ್ಲೇ 2019ರ ಜೂನ್ ಅಂತ್ಯಕ್ಕೆ ಮಾರಾಟ ಮಾಡುವುದಾಗಿ ಸಂದರ್ಶನವೊಂದರಲ್ಲಿ ಅಧಿಕೃತವಾಗಿಯೇ ಹೇಳಿಕೊಂಡಿತ್ತು.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಇದಕ್ಕೆ ಪೂರಕವಾಗಿ ಇದೀಗ ಗ್ಲಾಂಜ್ ಹೆಸರಿನಲ್ಲಿ ಬಲೆನೊ ಕಾರನ್ನು ಮರುಅಭಿವೃದ್ಧಿಪಡಿಸಿ ಟೀಸರ್ ಬಿಡುಗಡೆ ಮಾಡಿದ್ದು, ಹೊಸ ಗ್ಲಾಂಜ್ ಕಾರು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿರುವುದು ಸ್ಪಷ್ಟವಾಗಿದೆ.

ಆದ್ರೆ ಹೊಸ ಗ್ಲಾಂಜ್ ಕಾರಿನ ಹಿಂಭಾಗದ ವಿನ್ಯಾಸವನ್ನು ಹೊರತುಪಡಿಸಿ ಮುಂಭಾಗದ ವಿನ್ಯಾಸಗಳು ಮತ್ತು ಇಂಟಿರಿಯರ್ ಕುರಿತಾಗಿ ಯಾವುದೇ ಮಾಹಿತಿ ಬಿಟ್ಟುಕೊಡದ ಟೊಯೊಟಾ ಸಂಸ್ಥೆಯು ಜೂನ್ ಆರಂಭದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿದ್ದು, ಹೊಸ ಕಾರಿನ ಎಂಜಿನ್ ಕುರಿತಾಗಿ ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ. ಮಾಹಿತಿ ಪ್ರಕಾರ, ಹೊಸ ಗ್ಲಾಂಜ್ ಕಾರು ಸ್ಮಾರ್ಟ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅನಾವರಣಗೊಳ್ಳಲಿದ್ದು, 2020ರ ಎಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್- 6 ನಿಯಮಗಳಿಗೆ ಅನುಗುಣವಾಗಿ ಹೊಸ ಕಾರುಗಳನ್ನು ಉನ್ನತಿಕರಿಸಲಾಗುತ್ತಿದೆ.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಈ ಮೂಲಕ ಹ್ಯುಂಡೈ ಸಂಸ್ಥೆಗೆ ಮತ್ತಷ್ಟು ಪೈಪೋಟಿ ನೀಡಲು ಸಜ್ಜಾಗಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಹೊಸ ಯೋಜನೆಯ ಮೂಲಕ ಭಾರೀ ಪ್ರಮಾಣದ ಆದಾಯ ಗಳಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಯೋಜನೆಯು ಎರಡು ಸಂಸ್ಥೆಗಳಿಗೂ ಆರ್ಥಿಕವಾಗಿ ಸದೃಡಗೊಳ್ಳಲು ಸಹಕಾರಿಯಾಗಲಿದೆ.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಮತ್ತಷ್ಟು ವಿಸ್ತರಣೆಯಾಗಲಿದೆ ಬಿಡದಿ ಟೊಯೊಟಾ ಘಟಕ..!

ಸದ್ಯ ಭಾರತದಲ್ಲಿ ಮೂರು ಕಾರು ಉತ್ಪಾದನಾ ಘಟಕಗಳನ್ನ ಹೊಂದಿರುವ ಸುಜುಕಿ ಸಂಸ್ಥೆಯು ಹರಿಯಾಣದಲ್ಲಿ ಎರಡು ಮತ್ತು ಗುಜರಾತ್‌ನಲ್ಲಿ ಒಂದು ಉತ್ಪಾದನಾ ಘಟಕವನ್ನ ಹೊಂದಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕ ಇಲ್ಲದಿರುವುದು ಸುಜುಕಿ ಸಂಸ್ಥೆಗೆ ಕಾರುಗಳ ಸರಬರಾಜು ಒಂದು ಸವಾಲಿನ ವಿಚಾರವೇ ಸರಿ.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಹೀಗಿರುವಾಗ ಬೆಂಗಳೂರು ಬಳಿ ಇರುವ ಬಿಡದಿಯಲ್ಲಿ ನೆಲೆಗೊಂಡಿರುವ ಟೊಯೊಟಾ ಸಂಸ್ಥೆಯ ಕಾರು ಉತ್ಪಾದನಾ ಘಟಕದಿಂದ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳಾದ ವಿಟಾರಾ ಬ್ರೆಝಾ ಮತ್ತು ಬಲೆನೊ ಕಾರುಗಳನ್ನು ಇಲ್ಲಿಯೇ ಉತ್ಪಾದನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿನ ಡೀಲರ್ಸ್‌ಗಳಿಗೆ ಸರಬರಾಜು ಮಾಡಲು ನಿರ್ಧರಿಸಿದೆ.

ಮಾರುತಿ ಬಲೆನೊ ಕಾರನ್ನು ಗ್ಲಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಇದಕ್ಕೆ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಕಳೆದ ನವೆಂಬರ್‌ನಲ್ಲಿ ಬಿಡದಿಗೆ ಭೇಟಿ ನೀಡಿದ್ದ ಸುಜುಕಿ ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡವು ಕಾರು ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ಸೌಲಭ್ಯಗಳನ್ನ ಪೂರೈಕೆ ಮಾಡುವುದಾಗಿ ಸಮ್ಮತಿ ಸೂಚಿಸಿದೆ.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ರೂ. 7 ಸಾವಿರ ಕೋಟಿ ಹೂಡಿಕೆ

ಸದ್ಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಉತ್ಪಾದನೆ ಮಾಡಲು ಸಾಕಷ್ಟು ಸ್ಥಳಾವಕಾಶ ಬೇಕಿದ್ದು, ಇದಕ್ಕಾಗಿ ಟೊಯೊಟಾ ಘಟಕವನ್ನು ವಿಸ್ತರಣೆ ಮಾಡಲು ಮುಂದಾಗಿರುವ ಸುಜುಕಿ ಸಂಸ್ಥೆಯು 1 ಬಿಲಿಯನ್ ಯುಎಸ್‌ ಡಾಲರ್( ಸುಮಾರು 7 ಸಾವಿರ ಕೋಟಿ) ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಜೊತೆಗೆ ಸುಜುಕಿ ಕಾರುಗಳನ್ನು ಉತ್ಪಾದನೆ ಮಾಡಲು ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಲಿರುವ ಟೊಯೊಟಾ ಸಂಸ್ಥೆಯು ಸುಜುಕಿ ಸಂಸ್ಥೆಯ ಉದ್ಯೋಗಿಗಳ ಜೊತೆಗೂಡಿ ಕಾರ್ಯನಿರ್ವಹಣೆ ಮಾಡಲಿದೆ.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಇದಕ್ಕೆ ಪ್ರತಿಯಾಗಿ ಸುಜುಕಿ ಸಂಸ್ಥೆಯು ತನ್ನ ಅಧಿಕೃತ ಡೀಲರ್ಸ್‌ಗಳಲ್ಲಿ ಟೊಯಾಟೊ ಕಾರುಗಳ ಮಾರಾಟಕ್ಕೆ ಅವಕಾಶ ನೀಡಲಿದ್ದು, ಹೈಬ್ರಿಡ್ ತಂತ್ರಜ್ಞಾನ ಅಭಿವೃದ್ಧಿಗೂ ಸಹಕಾರ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಲ್ಲದೇ ಕಾರುಗಳ ಇಂಧನ ಕಾರ್ಯಕ್ಷಮತೆ ಮತ್ತು ಕಾರುಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರುಗಳ ಬಿಡಿಭಾಗಗಳನ್ನು ಸಹ ಒದಗಿಸುವ ಒಪ್ಪಂದಕ್ಕೂ ಉಭಯ ಸಂಸ್ಥೆಗಳು ಕೈ ಜೋಡಿಸಿದ್ದು, ಭಾರತದಲ್ಲಿ ಆರಂಭಗೊಂಡಿರುವ 'ಮೆಕ್ ಇನ್ ಇಂಡಿಯಾ' ಯೋಜನೆ ಅಡಿ ಹೊಸ ಕಾರುಗಳ ಉತ್ಪಾದನೆಯನ್ನು ಆರಂಭಿಸಲಿವೆ.

ಮಾರುತಿ ಬಲೆನೊ ಕಾರನ್ನು ಗ್ಲ್ಯಾಂಜ್ ಹೆಸರಿನಲ್ಲಿ ಮರುಬಿಡುಗಡೆ ಮಾಡಲಿದೆ ಟೊಯೊಟಾ..!

ಒಟ್ಟಿನಲ್ಲಿ ಕಾರು ಉತ್ಪಾದಕ ದಿಗ್ಗಜರು ಇದೀಗ ಒಂದಾಗಿದ್ದು, ಹೊಸ ಕಾರು ಉತ್ಪನ್ನಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಲಿವೆ. ಜೊತೆಗೆ ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ.

Article Published On: Friday, April 26, 2019, 14:47 [IST]
English summary
Toyota Releases New Teaser Of The Upcoming Glanza Hatchback — Launch Expected In June.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+