ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಫಾರ್ಚೂನರ್ ಮತ್ತು ಇನ್ನೋವಾ ಕ್ರಿಸ್ಟಾ ಮಾದರಿಗಳ ಬೆಲೆಯನ್ನು ಹೆಚ್ಚಿಸಲಿದೆ. ಈ ಎರಡು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸುವುದರಿಂದ ಬೆಲೆಯನ್ನು ಹೆಚ್ಚಿಸಲು ಕಂಪನಿಯು ಚಿಂತಿಸುತ್ತಿದೆ.

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ದೇಶದಲ್ಲಿ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ಹೊಸ ಬಿಎಸ್-6 ಮಾಲಿನ್ಯ ನಿಯಮವನ್ನು ಮುಂದಿನ ವರ್ಷದ ಏಪ್ರೀಲ್ ತಿಂಗಳಿನಿಂದ ಜಾರಿಗೊಳಿಸುತ್ತಿದೆ. ಏಪ್ರಿಲ್ ತಿಂಗಳಿನಿಂದ ಬಿಎಸ್-4 ವಾಹನ ಮಾರಾಟವನ್ನು ನಿಷೇಧಿಸಲಾಗುತ್ತದೆ. ಇದರೊಂದಿಗೆ ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ನವೀಕರಿಸಲು ಪ್ರಾರಂಭಿಸಿವೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಕೂಡ ತಮ್ಮ ಸರಣಿಯ ಕಾರುಗಳನ್ನು ನವೀಕರಿಸುತ್ತಿದೆ.

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಇಟಿಯೋಸ್ ಸೆಡಾನ್, ಇಟಿಯೋಸ್ ಲಿವಾ ಹ್ಯಾಚ್‍‍ಬ್ಯಾಕ್ ಮತ್ತು ಕ್ರಾಸ್-ಹ್ಯಾಚ್‍‍ಬ್ಯಾಕ್ ಒಳಗೊಂಡಿರುವ ಟೊಯೊಟಾ ಇಟಿಯೊಸ್ ಸರಣಿಯ ಎಲ್ಲಾ ಮಾದರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಹೇಳಿದೆ. ಈ ವಾಹನಗಳು ದೇಶಿಯ ಮಾರಾಕಟ್ಟೆಯಲ್ಲಿ ಮಾರಾಟದಲ್ಲಿ ಕುಸಿತ ಕಂಡಿವೆ. ಅಲ್ಲದೇ ಈ ಕಾರುಗಳನ್ನು ನವೀಕರಿಸಲು ಅಧಿಕ ವೆಚ್ಚವಾಗುತ್ತದೆ, ಅದರಿಂದ ಹೆಚ್ಚಿನ ಲಾಭವಿಲ್ಲವೆಂದು ಕಂಪನಿ ಭಾವಿಸಿದೆ.

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಕಂಪನಿಯು ಟೊಯೊಟಾ ಇಟಿಯೋಸ್ ಕ್ರಾಸನ್ ಡೀಸೆಲ್ ರೂಪಾಂತರವನ್ನು ಸ್ಥಗಿತಗೊಳಿಸಿದೆ. ಎಟಿಯೋಸ್ ಕ್ರಾಸ್ 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಫಾರ್ಚೂನರ್ ಮತ್ತು ಇನ್ನೋವಾ ಕ್ರಿಸ್ಟಾ ಇದೇ ಮಾದರಿಯ ಎಂಜಿನ್ ಅನ್ನು ಹೊಂದಿದ್ದರು, ಮಾರುಕಟ್ಟೆಯಲ್ಲಿ ಬಹುಬೇಡಿಕೆಯನ್ನು ಹೊಂದಿರುವುದರಿಂದ ಈ ವಾಹನಗಳ ಎಂಜಿನ್ ಅನ್ನು ಬಿಎಸ್-6 ಆಗಿ ನವೀಕರಿಸುತ್ತಿದೆ.

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಟೊಯೊಟಾ ಕಂಪನಿಯ ಜನಪ್ರಿಯ ವಾಹನಗಳಾದ ಫಾರ್ಚೂನರ್ ಮತ್ತು ಇನ್ನೋವಾ ಕ್ರಿಸ್ಟಾವನ್ನು ನವೀಕರಿಸಲು ಹೆಚ್ಚಿನ ವೆಚ್ಚವಾಗಲಿದೆ. ಈ ಕಾರಣದಿಂದ ಈ ಎರಡೂ ಮಾದರಿಗಳ ಬೆಲೆಯು ರೂ.3 ಲಕ್ಷದಿಂದ 5 ಲಕ್ಷಗಳವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ. ಹೊಸ ಫಿಲ್ಟರ್‍‍ಗಳ ಅಳವಡಿಕೆ ಮತ್ತು ಮಾಲಿನ್ಯ ಕಡಿತಗೊಳಿಸಲು ಎಕ್ಸಾಸ್ಟ್ ಸಿಸ್ಟಂ ಅಳವಡಿಸುವುದು ದುಬಾರಿಯಾಗಲಿದೆ.

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಟೊಯೊಟಾ ಫಾರ್ಚೂನರ್ ಮತ್ತು ಇನ್ನೋವಾ ಕ್ರಿಸ್ಟಾ ಮಾದರಿಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂಬುದನ್ನು ಗಮನಿಸಬಹುದು. ಪೆಟ್ರೋಲ್ ಮಾದರಿಗಳು ತಮ್ಮ ಡೀಸೆಲ್ ಮಾದರಿಗಳಷ್ಟು ಜನಪ್ರಿಯವಾಗಿಲ್ಲ. ಇದರಿಂದಾಗಿ ಡೀಸೆಲ್ ಎಂಜಿನ್‍‍ಗಳ ಮಾದರಿಗಳನ್ನು ಮುಂದುವರೆಸಲಾಗುತ್ತದೆ.

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಫಾರ್ಚೂನರ್ ಟಿಆರ್‍‍ಡಿ ಎಡಿಷನ್ 2.8 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‍ಪಿ ಪವರ್ ಮತ್ತು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಟೊಯೊಟಾ ಇನ್ನೋವಾ ಕ್ರಿಸ್ಟಾದಲ್ಲಿ 2.4 ಲೀಟರಿನ ಡೀಸೆಲ್ ಎಂಜಿನ್‍ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಮತ್ತು 343 ಎನ್‍‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ಅಳವಡಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್, ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಎನ್ ರಾಜಾ ಅವರು ಮಾತನಾಡಿ, ನಾವು ನಮ್ಮ ಗ್ರಾಹಕರಿಗೆ ಮತ್ತು ನೌಕರರಿಗೆ ಎಲ್ಲರಿಗೂ ಬೆಲೆ ಏರಿಕೆಯ ಬಗ್ಗೆ ತಿಳಿಸಲಾಗುತ್ತದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸುವುದರಿಂದ ಹೆಚ್ಚಿನ ವೆಚ್ಚವಾಗಲಿದೆ. ಬೆಲೆ ಏರಿಕೆಯ ಬಗ್ಗೆ ಚಿಂತಿಸುವುದಾಗಿ ಮತ್ತು ಇತರ ಪರಿಹಾರವನ್ನು ಹುಡುಕುತ್ತೇವೆ ಎಂದು ಹೇಳಿದರು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಮತ್ತಷ್ಟು ದುಬಾರಿಯಾಗಲಿದೆ ಟೊಯೊಟಾ ಕಾರುಗಳು

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ತನ್ನ ಜನ್ನಪ್ರಿಯ ಫಾರ್ಚೂನರ್ ಮತ್ತು ಇನ್ನೋವಾ ಕ್ರಿಸ್ಟಾ ಮಾದರಿಗಳ ಬೆಲೆಯನ್ನು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ. ಈ ಎರಡು ಜನಪ್ರಿಯ ಮಾದರಿಗಳ ಮಾರಾಟದಲ್ಲಿ ಇದರ ಪರಿಣಾಮ ಬೀರುತ್ತಾ ಎಂಬುದನ್ನು ಕಾದು ನೋಡಬೇಕು.

Most Read Articles

Kannada
Read more on ಟೊಯೊಟಾ toyota
English summary
BS6 Toyota Fortuner, Innova Price To Rise By Rs. 3-5 Lakh - Read in Kannada
Story first published: Friday, November 22, 2019, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X