ಟೊಯೊಟಾ ಆಯೋಜಿಸಿದೆ ವಿಶೇಷ ಸರ್ವಿಸ್ ಕ್ಯಾಂಪೇನ್
ಟೊಯೊಟಾ ಕಂಪನಿಯು ಹೊಸ ಸರ್ವಿಸ್ ಕ್ಯಾಂಪೇನ್ ಅನ್ನು ಶುರು ಮಾಡಿದೆ. ಸರ್ವಿಸ್ ಕಾರ್ನಿವಲ್ ಎಂಬ ಹೆಸರಿನಲ್ಲಿ ನಡೆಸಲಾಗುವ ಈ ಕ್ಯಾಂಪೇನ್‍ನಲ್ಲಿ ಸರ್ವಿಸ್ ಹಾಗೂ ಬಿಡಿಭಾಗಗಳ ಮೇಲೆ ರಿಯಾಯಿತಿ ನೀಡಲಾಗುವುದು. ಗ್ರಾಹಕರು ಈ ಸೌಲಭ್ಯವನ್ನು ದೇಶಾದ್ಯಂತವಿರುವ ಡೀಲರ್‍ಗಳ ಬಳಿ ಪಡೆಯಬಹುದು.

ಅಕ್ಟೋಬರ್ 1ರಿಂದ ಶುರುವಾಗಿರುವ ಈ ಸರ್ವಿಸ್ ಕ್ಯಾಂಪೇನ್ ಡಿಸೆಂಬರ್ 31ರವರೆಗೆ ನಡೆಯಲಿದೆ. ಜಪಾನ್ ಮೂಲದ ಟೊಯೊಟಾ ಕಂಪನಿಯು ನಮ್ಮ ದೇಶದಲ್ಲಿ 1999ರಿಂದ ಕಾರ್ಯಾಚರಣೆ ನಡೆಸುತ್ತಿದೆ. 2019ಕ್ಕೆ ಕಂಪನಿಯು ಶುರುವಾಗಿ 20 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಈ ವಾರ್ಷಿಕೋತ್ಸವವನ್ನು ಆಚರಿಸಲು ಟೊಯೊಟಾ ಕಂಪನಿಯು ಸರ್ವಿಸ್ ಕಾರ್ನಿವಲ್ ಆಚರಿಸುತ್ತಿದೆ.

ಈ ಸರ್ವಿಸ್ ಕ್ಯಾಂಪೇನ್‍ನ ಭಾಗವಾಗಿ, ಟೊಯೊಟಾದ ಗ್ರಾಹಕರು ಸಾಮಾನ್ಯ ರಿಪೇರಿಯ ಮೇಲೆ ಹಾಗೂ ಸಂಬಂಧಪಟ್ಟ ಬಿಡಿಭಾಗ, ಕಾರು ಸರ್ವಿಸ್, ಮೆಂಟೆನೆನ್ಸ್ ಹಾಗೂ ಲೇಬರ್ ಖರ್ಚುಗಳ ಮೇಲೆ 20%ವರೆಗೂ ರಿಯಾಯಿತಿಯನ್ನು ಪಡೆಯಬಹುದು.

ಇನೊವಾ ಕ್ರಿಸ್ಟಾ ಹಾಗೂ ಫಾರ್ಚೂನರ್ ಕಾರುಗಳ ಮಾಲೀಕರು ಟೊಯೊಟಾ ವಿಕೇರ್ ಸರ್ವಿಸ್ ಮೇಲೆ 20%ನಷ್ಟು ರಿಯಾಯಿತಿಯನ್ನು ಪಡೆಯಲಿದ್ದಾರೆ. ಇದರಲ್ಲಿ 14 ಅಂಶಗಳ ಸುರಕ್ಷಾ ಪಾಯಿಂಟ್‍ಗಳು ಸೇರಿರಲಿವೆ.

ಈ ಮೆಂಟೆನೆನ್ಸ್ ಕೊಡುಗೆಯನ್ನು ವ್ಯಾಲ್ಯೂ ಆಡೆಡ್ ಸೇವೆಗಳಾದ ಟಯರ್ ಹಾಗೂ ಬ್ಯಾಟರಿಗಳ ಬದಲಾವಣೆಗಳ ಮೇಲೆ ನೀಡುವುದರ ಜೊತೆಗೆ ವಿಶೇಷ ಆಫರ್‍ಗಳೊಂದಿಗೆ ವಿಸ್ತರಿಸಲಾಗುವುದು. ಗ್ರಾಹಕರ ಅನುಭವ ಹಾಗೂ ಅವರ ವಾಹನಗಳ ಮೌಲ್ಯವನ್ನು ಹೆಚ್ಚಿಸಲು ಕಂಪನಿಯು ಗುಣಮಟ್ಟ, ಬಾಳಿಕೆ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ.

ಕಂಪನಿಯು ತನ್ನ ಗ್ರಾಹಕರಿಗೆ ವೇಗವಾದ, ವೆಚ್ಚ ಪರಿಣಾಮಕಾರಿಯಾದ, ಪಾರದರ್ಶಕವಾದ ಹಾಗೂ ವೈಯಕ್ತಿಕ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಟೊಯೊಟಾ ತನ್ನ ಈ ಕ್ಯಾಂಪೇನ್ ಮೂಲಕ ಗ್ರಾಹಕ ಕೇಂದ್ರಿತ ವಿಧಾನವನ್ನು ಎತ್ತಿ ತೋರಿಸುವ ನಂಬಿಕೆಯಲ್ಲಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‍ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಎನ್ ರಾಜಾರವರು ಮಾತನಾಡಿ, ಭಾರತದಲ್ಲಿ ನಮ್ಮ 20 ವರ್ಷಗಳ ಪ್ರಯಾಣದಲ್ಲಿ ನಮ್ಮ ಜೊತೆ ನಿಂತ ನಮ್ಮ ಎಲ್ಲ ಗ್ರಾಹಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಗ್ರಾಹಕರ ತೃಪ್ತಿಯು ನಮಗೆ ಅತ್ಯಂತ ಮಹತ್ವದ್ದಾಗಿದೆ. ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಉತ್ಪನ್ನ, ಮಾರಾಟ ಹಾಗೂ ಸೇವೆಯ ವಿಷಯದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಮೀರಿದ್ದೇವೆ. ನಾವು ನವೀನವಾದ ಹಾಗೂ ವಿಶೇಷವಾದ ಕೊಡುಗೆಗಳನ್ನು ನೀಡುತ್ತಲೇ ಇರುವುದರಿಂದ, ನಮ್ಮ ಗ್ರಾಹಕರನ್ನು ಈ ಕಾರ್ನೀವಲ್‌ನ ಭಾಗವಾಗಿ ಹಬ್ಬದ ಆಚರಣೆಯನ್ನು ಆಚರಿಸುವಂತೆ ಆಹ್ವಾನ ನೀಡುತ್ತೇವೆ ಎಂದು ಹೇಳಿದರು.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಟೊಯೊಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಪ್ರೀಮಿಯಂ ಎಂಪಿವಿಯಾದ ವೆಲ್‍ಫೈರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಎಂಪಿವಿ ವಾಹನವು ಟೊಯೊಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಎಂಪಿವಿ ಸೆಗ್‍ಮೆಂಟಿನಲ್ಲಿ ಬಿಡುಗಡೆಗೊಳಿಸುತ್ತಿರುವ ಪ್ರಮುಖ ವಾಹನವಾಗಿದೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಈ ವಾಹನವನ್ನು ಇನೊವಾ ಕ್ರಿಸ್ಟಾ ಬದಲಿಗೆ ಬಿಡುಗಡೆಗೊಳಿಸಲಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ವೆಲ್‍ಫೈರ್ ಮರ್ಸಿಡಿಸ್ ವಿ ಕ್ಲಾಸ್ ಹಾಗೂ ಕಿಯಾ ಕಾರ್ನಿವಲ್ ವಾಹನಗಳಿಗೆ ಪೈಪೋಟಿ ನೀಡಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ದೇಶಿಯ ಆಟೋಮೊಬೈಲ್ ಉದ್ಯಮವು ನಿಧಾನಗತಿಯ ಪ್ರಗತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹಲವಾರು ತಂತ್ರಗಳನ್ನು ಹೂಡುತ್ತಿವೆ. ಟೊಯೊಟಾ ಕಂಪನಿಯು ಇನ್ನೂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈ ಕ್ಯಾಂಪೇನ್ ಅನ್ನು ಆಯೋಜಿಸಿದೆ. ಈ ಕ್ಯಾಂಪೇನ್‍ನಿಂದ ಟೊಯೊಟಾ ಗ್ರಾಹಕರು ಹೆಚ್ಚಿನ ಸೌಲಭ್ಯಗಳನ್ನು ಪಡೆಯುವ ಸಾಧ್ಯತೆಗಳಿವೆ.


Click it and Unblock the Notifications