ಮೊಬಿಲಿಟಿ ಸೇವೆ ನೀಡಲು ಡಬ್ಲ್ಯು‍ಆರ್‍ಐ ಜೊತೆ ಕೈಜೋಡಿಸಿದ ಟೊಯೊಟಾ

ಟೊಯೊಟಾ ಮೊಬಿಲಿಟಿ ಫೌಂಡೇಶನ್ ಪತ್ರಿಕಾ ಪ್ರಕಟಣೆಯ ಮೂಲಕ ಸ್ಟೇಷನ್ ಆಕ್ಸೆಸ್ ಅಂಡ್ ಮೊಬಿಲಿಟಿ ಪ್ರೋಗ್ರಾಂ (ಸ್ಟ್ಯಾಂಪ್) ಅನ್ನು ಆರಂಭಿಸುವ ಸಲುವಾಗಿ ಡಬ್ಲ್ಯುಆರ್‍ಐ ಇಂಡಿಯಾ ರಾಸ್ ಸೆಂಟರ್ ಫಾರ್ ಸಸ್ಟೈನಬಲ್ ಸಿಟೀಸ್ ಜೊತೆ ಪಾಲುದಾರಿಕೆ ಹೊಂದುವುದಾಗಿ ತಿಳಿಸಿದೆ. ಭಾರತದಲ್ಲಿ ಭವಿಷ್ಯದಲ್ಲಿ ಮೊಬಿಲಿಟಿ ಸೇವೆಗಳಿಗೆ ಹೆಚ್ಚು ಬೇಡಿಕೆ ಉಂಟಾಗಲಿದೆ. ಆದ ಕಾರಣ ಟೊಯೊಟಾ ಕಂಪನಿಯು ವಿಶ್ವಾಸಾರ್ಹವಾದ ಮೊಬಿಲಿಟಿ ಇಕೊಸಿಸ್ಟಂ ರಚಿಸುವ ಮೂಲಕ ಗಮನಾರ್ಹವಾದ ಕೊಡುಗೆ ನೀಡಲು ಯೋಜಿಸಿದೆ.

ಮೊಬಿಲಿಟಿ ಸೇವೆ ನೀಡಲು ಡಬ್ಲ್ಯು‍ಆರ್‍ಐ ಜೊತೆ ಕೈಜೋಡಿಸಿದ ಟೊಯೊಟಾ

ಟೊಯೊಟಾ ಪ್ರಕಟಣೆಯ ಮೂಲಕ, ಈ ಇಕೊ ಸಿಸ್ಟಂ ನಿರ್ಮಿಸುವುದು ದಟ್ಟಣೆ ಹಾಗೂ ಮಾಲಿನ್ಯದಂತಹ ಸವಾಲುಗಳಿಂದ ಕೂಡಿದೆ. ಆದರೆ ಒರಿಜಿನಲ್ ಎಕ್ವಿಪ್‍‍ಮೆಂಟ್ ಮ್ಯಾನುಫ್ಯಾಕ್ಚರರ್ ಹಾಗೂ ವಿನ್ಯಾಸಕಾರರಿಗೆ ಕಾರ್ಯಸಾಧ್ಯವಾದ ಹಾಗೂ ಗಣನೀಯ ಪ್ರಮಾಣದ ಸಾರಿಗೆ ವಿಧಾನಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಅದು ವೆಚ್ಚ-ಪರಿಣಾಮಕಾರಿ, ಆರಾಮದಾಯಕವಾಗಿದ್ದು ಹಾಗೂ ಸುಲಭವಾಗಿ ಪಡೆಯಬಹುದು ಎಂದು ಹೇಳಿದೆ.

ಮೊಬಿಲಿಟಿ ಸೇವೆ ನೀಡಲು ಡಬ್ಲ್ಯು‍ಆರ್‍ಐ ಜೊತೆ ಕೈಜೋಡಿಸಿದ ಟೊಯೊಟಾ

ಸ್ಟೇಷನ್ ಆಕ್ಸೆಸ್ ಮೊಬಿಲಿಟಿ ಪ್ರೋಗ್ರಾಂ ಮೆಟ್ರೊದಂತಹ ನಗರಗಳಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಮೊದಲ ಹಾಗೂ ಕೊನೆಯ ಸಂಪರ್ಕ ಪರಿಹಾರಗಳನ್ನು ನೀಡುತ್ತದೆ. ಪ್ರಯಾಣಿಕರನ್ನು ಹೆಚ್ಚಿಸುವ ಮೂಲಕ ಹಾಗೂ ಸಾರ್ವಜನಿಕರಿಗೆ ತಡೆರಹಿತ ಮೊಬಿಲಿಟಿಯನ್ನು ಅಭಿವೃದ್ಧಿಪಡಿಸುವ ಮೂಲಕ ಸಾಮೂಹಿಕ ಸಾಗಣೆಗೆ ಅನುಕೂಲವಾಗುವಂತಹ ಈ ಕ್ರಮವು ಸರ್ಕಾರವನ್ನು ಬೆಂಬಲಿಸುತ್ತದೆ.

ಮೊಬಿಲಿಟಿ ಸೇವೆ ನೀಡಲು ಡಬ್ಲ್ಯು‍ಆರ್‍ಐ ಜೊತೆ ಕೈಜೋಡಿಸಿದ ಟೊಯೊಟಾ

ಟೊಯೊಟಾ ಮೊಬಿಲಿಟಿ ಫೌಂಡೇಶನ್‌ನ ಏಷ್ಯಾ ಪ್ರದೇಶದ ಕಾರ್ಯಕ್ರಮ ನಿರ್ದೇಶಕರಾದ ಪ್ರಾಸ್ ಗಣೇಶ್‍‍ರವರು ಮಾತನಾಡಿ, ಭಾರತೀಯ ಉಪಖಂಡದಲ್ಲಿ ನಗರ ಸಾರಿಗೆಯ ಜನಪ್ರಿಯತೆಯು ಹೆಚ್ಚಾಗುತ್ತಿರುವ ಕಾರಣಕ್ಕೆ ಕೊನೆಯ ಮೈಲಿ ಕನೆಕ್ಟಿವಿಟಿ ಕಲ್ಪಿಸಲು ಟೊಯೊಟಾ ಕೈಗೆಟಕುವ, ಹೊಸದಾದ ಹಾಗೂ ಸುಲಭವಾಗಿ ಪ್ರವೇಶಿಸಬಹುದಾದ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಮೊಬಿಲಿಟಿ ಸೇವೆ ನೀಡಲು ಡಬ್ಲ್ಯು‍ಆರ್‍ಐ ಜೊತೆ ಕೈಜೋಡಿಸಿದ ಟೊಯೊಟಾ

ಸಾರ್ವಜನಿಕರ ಸಹಕಾರವಿಲ್ಲದೇ ಬದಲಾವಣೆ ಸಾಧ್ಯವಿಲ್ಲವೆಂಬುದು ಟೊಯೊಟಾ ಕಂಪನಿಯ ಅಭಿಪ್ರಾಯವಾಗಿದೆ. ಇದರ ಜೊತೆಗೆ ಪ್ರಮುಖ ವಿಷಯಗಳ ಮೇಲೆ ಸಂವಾದಗಳು ಹಾಗೂ ಅವುಗಳಿಗೆ ಪರಿಹಾರಗಳೂ ಸಹ ಬೇಕಾಗಿವೆ. ಮೊಬಿಲಿಟಿ ಪಾಲುದಾರರೊಂದಿಗೆ ಕೈಜೋಡಿಸುವ ಮೂಲಕ ಹಾಗೂ ಮೊಬಿಲಿಟಿಯ ಅಗತ್ಯ ಹಾಗೂ ಅವುಗಳಿಗೆ ಪರಿಹಾರಗಳನ್ನು ಕಲ್ಪಿಸುವ ಮೂಲಕ ಸಮುದಾಯಗಳ ಮಹತ್ವವನ್ನು ಬಲಪಡಿಸಲು ಟೊಯೊಟಾ ಕಂಪನಿಯು ಉದ್ದೇಶಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮೊಬಿಲಿಟಿ ಸೇವೆ ನೀಡಲು ಡಬ್ಲ್ಯು‍ಆರ್‍ಐ ಜೊತೆ ಕೈಜೋಡಿಸಿದ ಟೊಯೊಟಾ

ಗಣೇಶ್‍‍ರವರು ಮಾತನಾಡಿ, ಸುಸ್ಥಿರ ಸಾರಿಗೆ ವ್ಯವಸ್ಥೆಯು ಸುಸ್ಥಿರ ನಗರ ಅಭಿವೃದ್ಧಿಯ ಪ್ರಮುಖ ಅಂಶವೆಂದು ನಾವು ನಂಬುತ್ತೇವೆ. ಸರ್ಕಾರಿ ಅಧಿಕಾರಿಗಳು, ಪ್ರಮುಖ ಪಾಲುದಾರರು, ನಮ್ಮ ಮೊಬಿಲಿಟಿಯ ಪಾಲುದಾರರು ಸೇರಿದಂತೆ ನಮ್ಮ ಪಾಲುದಾರರಿಂದ ಪಡೆದ ಸಕಾರಾತ್ಮಕ ಪ್ರತಿಕ್ರಿಯೆ ನಾವೆಲ್ಲರೂ ಹಂಚಿಕೊಳ್ಳುವ ಸಾಮಾನ್ಯ ನಂಬಿಕೆಯನ್ನು ನಿಜವಾಗಿಯೂ ತೋರಿಸುತ್ತದೆ. ನಾವು ಯಾವಾಗಲೂ ಹೊಸತನವನ್ನು ನೀಡುತ್ತಾ ಬಂದಿದ್ದು, ಗ್ರಾಹಕರಿಗೆ ತಡೆರಹಿತ ಮೊಬಿಲಿಟಿಯ ಅನುಭವವನ್ನು ನೀಡುತ್ತೇವೆ ಎಂದು ಹೇಳಿದರು.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಮೊಬಿಲಿಟಿ ಸೇವೆ ನೀಡಲು ಡಬ್ಲ್ಯು‍ಆರ್‍ಐ ಜೊತೆ ಕೈಜೋಡಿಸಿದ ಟೊಯೊಟಾ

ಟೊಯೊಟಾ ಮೊಬಿಲಿಟಿ ಫೌಂಡೇಶನ್ ಹಾಗೂ ಡಬ್ಲ್ಯುಆರ್‌ಐಗಳು ಭಾರತದಲ್ಲಿ ಮೊಬಿಲಿಟಿ ಸೇವೆಗಳನ್ನು ನೀಡುತ್ತಿರುವ ಬೌನ್ಸ್, ಮೊಬಿಸಿ, ಬೈಕರ್, ಕ್ವಿಕ್‌ರೈಡ್ ಹಾಗೂ ಕಾನ್‌ಸ್ಟಾಪಾರ್ಕ್‌ಗಳೊಂದಿಗೂ ಕಾರ್ಯನಿರ್ವಹಿಸುತ್ತವೆ.

ಮೊಬಿಲಿಟಿ ಸೇವೆ ನೀಡಲು ಡಬ್ಲ್ಯು‍ಆರ್‍ಐ ಜೊತೆ ಕೈಜೋಡಿಸಿದ ಟೊಯೊಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇದೊಂದು ಬೃಹತ್ ಯೋಜನೆಯಾಗಿದೆ. ನಾಲ್ಕು ಮೆಗಾ ನಗರಗಳಿಗೆ ಮೊಬಿಲಿಟಿ ಸೇವೆಗಳನ್ನು ನೀಡುವುದು ನಿಜಕ್ಕೂ ಸವಾಲಿನ ಕಾರ್ಯವಾಗಿದೆ, ಆದರೆ ಟೊಯೊಟಾ ಕಂಪನಿಯು ಸದಾ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. 814 ಮಿಲಿಯನ್ ಜನರಿಗೆ ಸೇವೆ ನೀಡುವುದು ನಿಜಕ್ಕೂ ಶ್ಲಾಘನೀಯ.

Article Published On: Thursday, November 14, 2019, 11:21 [IST]
English summary
Toyota Mobility Foundation Partners With WRI For New Mobility Solution In India - Read in Kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+