ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಟೊಯೊಟಾ ಮೋಟಾರ್ ಕಾರ್ಪೊರೇಷನ್ ನವೆಂಬರ್ 5ರಿಂದ ಜಪಾನ್ ದೇಶಾದ್ಯಂತ ಟೊಯೊಟಾ ವಿತರಕರಲ್ಲಿ ಹೊಸ ರೈಜ್ ಮಾರಾಟವನ್ನು ಪ್ರಾರಂಭಿಸಿರುವುದಾಗಿ ಪ್ರಕಟಿಸಿದೆ. ಹೊಸ ರೈಜ್ ಕಾಂಪ್ಯಾಕ್ಟ್ ಎಸ್‌ಯುವಿ ಸಣ್ಣ ಪ್ರಯಾಣಿಕ ಕಾರ್ ಆಗಿದ್ದು, ನಾಲ್ಕು ಮೀಟರ್‌ಗಿಂತ ಕಡಿಮೆ ಉದ್ದವನ್ನು ಹೊಂದಿದೆ.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಇದು ಎಸ್‍‍ಯುವಿಯನ್ನು ಚಲಾಯಿಸ ಬಯಸುವ ಗ್ರಾಹಕರ ಆಸೆಗಳನ್ನು ಪೂರೈಸುತ್ತದೆ. ಗ್ರಾಹಕರು ತಮ್ಮ ಕಾರುಗಳಲ್ಲಿ ಸಾಕಷ್ಟು ಸಾಮಾನುಗಳನ್ನು ಲೋಡ್ ಮಾಡಲು ಬಯಸುತ್ತಾರೆ. ಇದರ ಜೊತೆಗೆ ಕಾಂಪ್ಯಾಕ್ಟ್ ಹಾಗೂ ಚಾಲನೆ ಮಾಡಲು ಸುಲಭವಾದ ಕಾರನ್ನು ಹೊಂದಲು ಬಯಸುತ್ತಾರೆ.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ರೈಜ್ ಕಾರನ್ನು ಸಕ್ರಿಯ, ಉಪಯುಕ್ತ ಹಾಗೂ ಕಾಂಪ್ಯಾಕ್ಟ್ ಆಗಿ ಅಭಿವೃದ್ಧಿಪಡಿಸಲಾಗಿದೆ. ರೈಜ್ ವಾರಾಂತ್ಯದ ಬಳಕೆಗೆ, ದೈನಂದಿನ ಬಳಕೆಗೆರಡಕ್ಕೂ ಬಳಸಲು ಸುಲಭವಾಗಿದೆ. ರೈಜ್ ಹಲವು ವಿಧದ ಗ್ರಾಹಕರಿಗೆ ನೆರವಾಗಲಿದೆ.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಹೊಸ ರೈಜ್, ಡೈಹಟ್ಸು ಮೋಟಾರ್ ಕಂಪನಿ ಲಿಮಿಟೆಡ್‍ ತಯಾರಿಸಿದ ಮೊದಲ ಕಾಂಪ್ಯಾಕ್ಟ್ ಕಾರ್ ಆಗಿದೆ. ತನ್ನ ಮುಂದಿನ ಪೀಳಿಗೆಯ ಕಾರು ತಯಾರಿಕೆ ವೇದಿಕೆಯಾದ ಡಿಎನ್‌ಜಿಎ 6 ಅನ್ನು ಸಂಯೋಜಿಸಲು ಡೈಹಟ್ಸು ಈ ಕಾರ್ ಅನ್ನು ತಯಾರಿಸಿದ್ದು, ಟೊಯೊಟಾ ಹಾಗೂ ಡೈಹಟ್ಸು ಕಂಪನಿಗಳ ಅಭಿವೃದ್ಧಿಯನ್ನು ನಿರೀಕ್ಷಿಸುತ್ತಿದೆ.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಡ್ರೈವಿಂಗ್ ಪರ್ಫಾಮೆನ್ಸ್, ಲಗ್ಷುರಿ, ಸುರಕ್ಷತೆ, ಮನಶಾಂತಿಯ ಅತ್ಯುತ್ತಮ ಮಟ್ಟವನ್ನು ಅರಿತುಕೊಳ್ಳುವ ಗುರಿಯೊಂದಿಗೆ ಕಾರಿನ ಎಲ್ಲಾ ಅಂಶಗಳನ್ನು ಅದರ ಪ್ಲಾಟ್‌ಫಾರ್ಮ್ ಹಾಗೂ ಎಂಜಿನ್ ಸೇರಿದಂತೆ ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಹೊಸ ರೈಜ್ 3,995 ಎಂಎಂ ಉದ್ದ ಹಾಗೂ 1,695 ಎಂಎಂ ಅಗಲದ ಕಾಂಪ್ಯಾಕ್ಟ್ ಬಾಡಿಯನ್ನು ಹೊಂದಿದೆ. ಈ ಕಾರಿನಲ್ಲಿ 17 ಇಂಚಿನ ದೊಡ್ಡ ಟಯರ್‌ಗಳು ಹಾಗೂ ಫೆಂಡರ್‌ಗಳಿದ್ದು, ಎಸ್‍‍ಯುವಿಗಳಿಗೆ ಬೇಕಾದ ಪವರ್ ಹಾಗೂ ಸ್ಟಾಬಿಲಿಟಿಯನ್ನು ನೀಡುತ್ತವೆ.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಈ ಕಾಂಪ್ಯಾಕ್ಟ್ ಎಸ್‌ಯುವಿ ಈ ಸೆಗೆಮೆಂಟಿನಲ್ಲಿಯೇ ದೊಡ್ಡದು ಎನ್ನಬಹುದಾದ 369 ಲೀಟರ್ ಲಗೇಜ್ ಸಾಮರ್ಥ್ಯವನ್ನು ಹೊಂದಿದೆ. ಲಭ್ಯವಿರುವ ಕಾರ್ಗೊ ಸ್ಪೇಸ್ ಅನ್ನು ಮತ್ತಷ್ಟು ಹೆಚ್ಚಿಸಲು ಹಿಂಭಾಗದ ಸೀಟುಗಳನ್ನು ಸಹ ಮಡಚಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ವಿಶೇಷವಾಗಿ ದೊಡ್ಡ ಅಥವಾ ಉದ್ದವಾದ ಸಾಮಾನು ಸರಂಜಾಮುಗಳನ್ನು ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಕ್ಯಾಬಿನ್‌ ತುಂಬಾ ಸ್ಟೋರೇಜ್‍‍ಗಳಿದ್ದು, ಇದರ ಪರಿಣಾಮವಾಗಿ ಇಂಟಿರಿಯರ್ ಸ್ಪೇಸ್ ಹೆಚ್ಚು ಅನುಕೂಲಕರವಾಗಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಡ್ರೈವಿಂಗ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ರೈಜ್ ಹೊಸದಾಗಿ ಅಭಿವೃದ್ಧಿಪಡಿಸಿದ ಕಡಿಮೆ ತೂಕದ, ಹೆಚ್ಚು ರಿಜಿಡ್ ಬಾಡಿ ಹಾಗೂ ಸಸ್ಪೆಂಷನ್ ಹ್ಯಾಂಡ್ಲಿಂಗ್ ಸ್ಟಾಬಿಲಿಟಿ ಹಾಗೂ ಆರಾಮದಾಯಕ ಸವಾರಿಯನ್ನು ನೀಡುತ್ತದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಟೊಯೊಟಾ ವಾಹನದಲ್ಲಿ ಮೊದಲ ಬಾರಿಗೆ ಬಳಸಲಾದ ಡಿ-ಸಿವಿಟಿ 1.0 ಯೊಂದಿಗೆ 1.0-ಲೀಟರ್ ಟರ್ಬೊ ಎಂಜಿನ್ ಅನ್ನು ಸಂಯೋಜಿಸುವ ಮೂಲಕ 1.5 ಲೀಟರ್ ಎಂಜಿನ್‌ನ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಅತ್ಯುತ್ತಮ ಇಂಧನ ದಕ್ಷತೆಯನ್ನು ನೀಡುತ್ತದೆ. ಡಿ-ಸಿವಿಟಿ ಅಸ್ತಿತ್ವದಲ್ಲಿರುವ ಸಿವಿಟಿ ಬೆಲ್ಟ್ ಡ್ರೈವ್‌ಗಳಿಗೆ ಸ್ಪ್ಲಿಟ್ ಗೇರ್‌ಗಳನ್ನು ಸೇರಿಸುತ್ತದೆ.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಸುಧಾರಿತ ಟ್ರಾನ್ಸ್ ಮಿಷನ್ ಎಫಿಶಿಯನ್ಸಿಗಾಗಿ ಬೆಲ್ಟ್ ಹಾಗೂ ಗೇರ್ ಡ್ರೈವ್‌ಗಳನ್ನು ಹೆಚ್ಚಿನ ವೇಗದಲ್ಲಿ ಬಳಸುತ್ತದೆ. ಕಡಿಮೆ ವೇಗದಲ್ಲಿ ಶಕ್ತಿಯುತವಾದ ವೇಗವರ್ಧನೆ ಹಾಗೂ ಹೆಚ್ಚಿನ ವೇಗದಲ್ಲಿ ಇಂಧನ ಸಾಮರ್ಥ್ಯ ಹಾಗೂ ಎಫಿಶಿಯನ್ಸಿ ನೀಡಲು ಗೇರ್ ರೆಶಿಯೊ ಶ್ರೇಣಿಯನ್ನು ವಿಸ್ತರಿಸಲಾಗಿದೆ.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ರೈಜ್ ಇತ್ತೀಚಿನ ಸ್ಮಾರ್ಟ್ ಅಸಿಸ್ಟ್ ಅನ್ನು ಹೊಂದಿದೆ. ವಾಹನಗಳು ಹಾಗೂ ಪಾದಚಾರಿಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿರುವ ಕ್ರ್ಯಾಶ್ ಅವಾಯ್ಡಿಂಗ್ ಬ್ರೇಕಿಂಗ್ ಫಂಕ್ಷನ್ ಹೊಂದಿದೆ. ಹೊಸ ರೈಜ್ ಅನ್ನು ಟೊಯೊಟಾ ಕಂಪನಿಯ ಕಿಂಟೊ ಒನ್ ಕಾರ್ ಸಬ್‍‍ಸ್ಕ್ರಿಪ್ಷನ್ ಸೇವೆಗೆ ಸೇರಿಸಲಾಗುವುದು.

ರೈಜ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಟೊಯೊಟಾ

ಹೊಸ ರೈಜ್‌ಗಾಗಿ ಕಿಂಟೊ ಒನ್ ಮಾಸಿಕ ಚಂದಾದಾರಿಕೆ ದರವು 39,820 ಯೆನ್‌ಗಳಿಂದ ಪ್ರಾರಂಭವಾಗಲಿದೆ. ಇದರಲ್ಲಿ ವಾಹನದ ಬೆಲೆ, ಕಡ್ಡಾಯ ವಿಮೆ, ಸ್ವಯಂಪ್ರೇರಿತ ವಿಮೆಯಂತಹ ಅಗತ್ಯ ವೆಚ್ಚಗಳು ಸೇರಿವೆ.

Article Published On: Wednesday, November 6, 2019, 18:05 [IST]
English summary
Toyota raize launched in japan price specs features details - Read in Kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+