ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಟೊಯೊಟಾ ಕಂಪನಿಯು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸುತ್ತಾ ಬಂದಿದೆ. ಈಗ ಟೊಯೊಟಾ ಕಂಪನಿಯು ತನ್ನ ಹೊಸ ಎಂಪಿವಿಯಾದ ವೆಲ್‍‍ಫೈರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ವೆಲ್‍‍ಫೈರ್ ಟೊಯೊಟಾ ಕಂಪನಿಯ ಹೈ ಎಂಡ್ ಮಾದರಿಯಾಗಿದ್ದು, ಟೊಯೊಟಾ ಅಲ್ಫರ್ಡ್ ಲಗ್ಷುರಿ ಮಿನಿ ವ್ಯಾನ್ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ಲಗ್ಷುರಿ ವ್ಯಾನ್ ಅನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಈ ಹೊಸ ಕಾರ್ ಅನ್ನು ಕಳೆದ ಜುಲೈನಲ್ಲಿ ಟೊಯೊಟಾದ ಡೀಲರ್‍‍ಶಿಪ್‍‍ಗಳ ವಾರ್ಷಿಕ ಸಭೆಯಲ್ಲಿ ಅನಾವರಣಗೊಳಿಸಲಾಗಿತ್ತು. ಅನಾವರಣಗೊಳಿಸಿದ ನಂತರ ಟೊಯೊಟಾ ಕಂಪನಿಯು ಡೀಲರ್‍‍ಗಳಿಂದ ಪ್ರತಿಕ್ರಿಯೆಯನ್ನು ಕೇಳಿತ್ತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಡೀಲರ್‍‍ಗಳಿಂದ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾದರೆ ಟೊಯೊಟಾ ಕಂಪನಿಯು ಈ ಎಂ‍‍ಪಿವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಬಯಸಿದೆ. ಸದ್ಯಕ್ಕೆ ಟೊಯೊಟಾ ವೆಲ್‍‍ಫೈರ್ ದೇಶದ ಮಹಾನಗರಗಳಲ್ಲಿರುವ ಡೀಲರ್‍‍ಗಳಿಗೆ ಕಳುಹಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಕಳೆದ ತಿಂಗಳು ಟೊಯೊಟಾ ಎರಡು ವೆಲ್‍‍ಫೈರ್‍ ವಾಹನಗಳನ್ನು ಡೀಲರ್‍‍ಗಳಿಗೆ ಕಳುಹಿಸಿರುವ ಬಗ್ಗೆ ವರದಿಗಳಾಗಿವೆ. ಹೊಸ ಟೊಯೊಟಾ ವೆಲ್‍‍ಫೈರ್ ಎಂ‍‍ಪಿವಿಯನ್ನು ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಈ ಕಾರ್ ಅನ್ನು ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಾಗುವುದು. ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಹೈ ಎಂಡ್ ಲಗ್ಷುರಿ ಎಂಪಿವಿಯಾಗಿದೆ. ಹೊಸ ಟೊಯೊಟಾ ವೆಲ್‍‍ಫೈರ್ ಎಂ‍‍ಪಿವಿ 4,935 ಎಂಎಂ ಉದ್ದವಿದ್ದು, 1,850 ಎಂಎಂ ಅಗಲ ಹಾಗೂ 1,935 ಎಂಎಂ ಎತ್ತರವಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಮಾದರಿ ಹಾಗೂ ಟೆಕ್ನಿಕಲ್ ಅಂಶಗಳ ಆಧಾರದ ಮೇಲೆ ಈ ಕಾರು 160 ಎಂಎಂನಿಂದ 170 ಎಂಎಂವರೆಗಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಲಿದೆ. ಈ ಲಗ್ಷುರಿ ಕಾರು 2.5 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಈ ಎಂಜಿನ್ 179 ಬಿ‍‍ಹೆಚ್‍‍ಪಿ ಪವರ್ ಹಾಗೂ 235 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್‍‍ಗೆ ಸಿ‍‍ವಿ‍‍ಟಿ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಇನ್ನೊಂದು ಮಾದರಿಯ ಕಾರಿನಲ್ಲಿ 3.5 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಈ ಎಂಜಿನ್ 296 ಬಿ‍‍ಹೆಚ್‍‍ಪಿ ಪವರ್ ಹಾಗೂ 361 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುತ್ತದೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ವೆಲ್‍‍ಫೈರ್ ಎಂಪಿವಿಯು ಹೈಬ್ರಿಡ್ ಎಂಜಿನ್ ಹೊಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಈ ಹೈಬ್ರಿಡ್ ಎಂಪಿವಿಯಲ್ಲಿ ಅಳವಡಿಸಲಾಗಿರುವ 2.5 ಲೀಟರಿನ ಪೆಟ್ರೋಲ್ ಎಂಜಿನ್ 152 ಬಿ‍‍ಹೆಚ್‍‍ಪಿ ಪವರ್ ಹಾಗೂ 206 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟರ್ 140 ಬಿ‍‍ಹೆಚ್‍‍ಪಿ ಪವರ್ ಹಾಗೂ 270 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಈ ಹೈಬ್ರಿಡ್ ಮಾದರಿಯನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹೊಸ ಟೊಯೊಟಾ ವೆಲ್‍‍ಫೈರ್ ಕಾರು ಎಲ್‍ಇ‍‍ಡಿ ಹೆಡ್‍‍ಲೈಟ್, ಕಾರ್ನರಿಂಗ್ ಲೈಟ್, ಇನ್‍‍ಕ್ಯಾಂಡಿಸೆಂಟ್ ಲೈಟ್, ಇಂಡಿಕೇಟರ್ ಲೈಟ್, 7 ಏರ್‍‍ಬ್ಯಾಗ್, ವೆಂಟಿಲೇಟೆಡ್ ಸೀಟಿಂಗ್, ಇನ್ಫೋಟೇನ್‍‍ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮರಾ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೊಟಾ ವೆಲ್‍‍ಫೈರ್

ಹೊಸ ಟೊಯೊಟಾ ವೆಲ್‍‍ಫೈರ್ ಲಗ್ಷುರಿಯ ಎಂ‍ಪಿವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.75 ಲಕ್ಷಗಳಾಗಲಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಕಾರಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Monday, October 7, 2019, 18:31 [IST]
English summary
Toyota vellfire expected to launch soon in India - Read in Kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+