ಬಹಿರಂಗಗೊಂಡ ಟೊಯೊಟಾ ಯಾರೀಸ್ ಬಿಎಸ್ 6 ಪೆಟ್ರೋಲ್ ಕಾರಿನ ಬೆಲೆ
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ಮೋಟಾರ್ಸ್ ಶೀಘ್ರದಲ್ಲೇ ಬಿಎಸ್ 6 ಎಂಜಿನ್ ಹೊಂದಿರುವ ಯಾರೀಸ್ ಸೆಡಾನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಸೆಡಾನ್ ಕಾರಿನ ಬೆಲೆಯನ್ನು ಹೊಂದಿರುವ ದಾಖಲೆಗಳು ಇಂಟರ್‍ನೆಟ್‍ನಲ್ಲಿ ಬಹಿರಂಗವಾಗಿವೆ. ಈ ದಾಖಲೆಗಳ ಪ್ರಕಾರ ಹೊಸ ಬಿಎಸ್ 6 ಕಾರಿನ ಬೆಲೆಯು ರೂ.11,000ದಷ್ಟು ಏರಿಕೆಯಾಗಲಿದೆ. ಬಿಎಸ್ 6 ಎಂಜಿನ್‍ಗಳಲ್ಲಿ ಬದಲಾವಣೆ ಮಾಡುವುದರಿಂದ ಬೆಲೆ ಏರಿಕೆಯು ನಿರೀಕ್ಷಿತವಾಗಿದೆ.

ಎಂಟ್ರಿ ಲೆವೆಲ್‍ನಲ್ಲಿರುವ ಜೆ ಮ್ಯಾನುವಲ್ ಟೊಯೊಟಾ ಯಾರೀಸ್ ಕಾರಿನ ಬೆಲೆಯು ರೂ.8.70 ಲಕ್ಷಗಳಾಗಿದೆ. ಹೈ ಎಂಡ್ ಮಾದರಿಯಾದ ವಿಎಕ್ಸ್ ಆಟೋಮ್ಯಾಟಿಕ್ ಕಾರಿನ ಬೆಲೆಯು ರೂ.14.27 ಲಕ್ಷಗಳಾಗಿದೆ. ಪೆಟ್ರೋಲ್ ಎಂಜಿನ್‍ನಲ್ಲಿ ಮಾತ್ರ ಮಾರಾಟವಾಗುತ್ತಿರುವ ಯಾರೀಸ್ ಸೆಡಾನ್ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ.

ಈ ಸೆಡಾನ್ ಕಾರ್ ಅನ್ನು ಜೆ, ಜಿ, ವಿ, ವಿಎಕ್ಸ್ ಎಂಬ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟೊಯೊಟಾ ಯಾರೀಸ್ ಕಾರ್ ಅನ್ನು 2018ರ ಏಪ್ರಿಲ್‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗ ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.75 ಲಕ್ಷಗಳಾಗಿತ್ತು.

ಟೊಯೊಟಾ ಕಂಪನಿಯು ಈ ಮಧ್ಯಮ ಗಾತ್ರದ ಸೆಡಾನ್‍ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಜೆ ಮಾದರಿಯ ಕಾರಿನ ಬಿಡುಗಡೆಯ ನಂತರ ಕಾರಿನ ಬೆಲೆಯನ್ನು ರೂ.8.65 ಲಕ್ಷಗಳಿಗೆ ಇಳಿಸಲಾಯಿತು. ಯಾರೀಸ್ ಕಾರು ಕರೋಲಾ ಆಲ್ಟೀಸ್ ಕಾರಿನ ಕೆಳಗಿನ ಸ್ಥಾನದಲ್ಲಿರಲಿದೆ.

ಯಾರೀಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವರ್ನಾ ಹಾಗೂ ಮಾರುತಿ ಸುಜುಕಿಯ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಆದರೆ ಮಾರಾಟದಲ್ಲಿ ಈ ಎಲ್ಲಾ ಕಾರುಗಳಿಗಿಂತ ಸಾಕಷ್ಟು ಹಿಂದಿದೆ.

ಟೊಯೊಟಾ ಯಾರೀಸ್ ಕಾರಿನಲ್ಲಿ 1.5 ಲೀಟರಿನ 4 ಸಿಲಿಂಡರ್ ಬಿಎಸ್ 4 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 107 ಬಿಹೆಚ್‍ಪಿ ಪವರ್ ಹಾಗೂ 140 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍ಬಾಕ್ಸ್ ಅಥವಾ 7 ಸ್ಪೀಡಿನ ಸಿವಿಟಿ ಗೇರ್‍ಬಾಕ್ಸ್ ನೀಡಲಾಗುವುದು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟೊಯೊಟಾ ಇಟಿಯೋಸ್‍ನಲ್ಲಿ ಅಳವಡಿಸಲಾಗಿರುವ ಪೆಟ್ರೋಲ್ ಎಂಜಿನ್ ಅನ್ನು ಯಾರೀಸ್‍ನಲ್ಲಿಯೂ ಅಳವಡಿಸಲಾಗಿದೆ. ಆದರೆ ಯಾರೀಸ್‍ನಲ್ಲಿರುವ ಎಂಜಿನ್ ಅನ್ನು ಡ್ಯುಯಲ್ ವಿವಿಟಿ - ಐ ಸಿಸ್ಟಂಗೆ ಅಪ್‍ಗ್ರೇಡ್ ಮಾಡಲಾಗಿದೆ. ವಿವಿಟಿ ಐ ಅಂದರೆ ವೆರಿಯಬಲ್ ವಾಲ್ವ್ ಟೈಮಿಂಗ್ ವಿತ್ ಇಂಟೆಲಿಜೆನ್ಸ್ ಎಂದು.
MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಈ ಸಿಸ್ಟಂ ಎಂಜಿನ್‍ನಲ್ಲಿರುವ ವಾಲ್ವ್ ಗಳನ್ನು ಆರ್‍ಪಿಎಂ ಮೂಲಕ ನಿಯಂತ್ರಿಸುತ್ತದೆ. ಇದರಿಂದಾಗಿ ಎಂಜಿನ್ ಪರ್ಫಾಮೆನ್ಸ್ ಹಾಗೂ ಫ್ಯೂಯಲ್ ಎಫಿಶಿಯನ್ಸಿ ಹೆಚ್ಚುತ್ತದೆ. ಹೊಸ ಟೊಯೊಟಾ ಯಾರೀಸ್ ಕಾರಿನಲ್ಲಿ ಎಂಜಿನ್ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
MOST READ: ವಾಹನ ಡೀಲರ್‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಹೊಸ ಕಾರು ಡ್ಯುಯಲ್ ಟೋನ್ ಬಣ್ಣ, ಪಿಯಾನೊ ಬ್ಲಾಕ್ ಫಿನಿಶ್ ಹೊಂದಿರುವ ಫ್ರಂಟ್ ಗ್ರಿಲ್, ಎಲ್‍ಇಡಿ ಡಿಆರ್‍ಎಲ್ ಹೊಂದಿರುವ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್, ಟರ್ನ್ ಇಂಡಿಕೇಟರ್ ಹಾಗೂ ಡೈಮಂಡ್ ಕಟ್ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ.

ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡಿರುವ ಯಾರೀಸ್ ಕಾರಿನಲ್ಲಿ 7 ಏರ್‍ಬ್ಯಾಗ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಬಿಎಸ್ ಹಾಗೂ ಇಬಿಡಿ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್, ಫ್ರಂಟ್ ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮ್ಯಾಂಡರ್ ಹಾಗೂ ಹೈ ಸ್ಪೀಡ್ ಅಲರ್ಟ್ ಸಿಸ್ಟಂಗಳಿವೆ.
Source: Rushlane


Click it and Unblock the Notifications








