ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಟೊಯೊಟಾ ಇಂಡಿಯಾ ಕಂಪನಿಯು ಶೀಘ್ರದಲ್ಲೇ ಬಿಎಸ್-6 ಪ್ರೇರಿತ ಯಾರೀಸ್ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಟೊಯೊಟಾ ಯಾರೀಸ್ ಬಿಎಸ್-6 ಸೆಡಾನ್‍‍ಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗೆ ಹೋಲಿಸಿದರೆ ಬೆಲೆ ದುಬಾರಿಯಾಗಿರಲಿದೆ.

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಕಾರ್ ದೇಖೋ ಅವರ ಪ್ರಕಾರ, ಟೊಯೊಟಾ ಯಾರೀಸ್ ಬಿಎಸ್-6 ಸೆಡಾನ್ ಬೆಲೆಯು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗಿಂತ ರೂ.32 ಸಾವಿರ ಹೆಚ್ಚಾಗಬಹುದು. ಈ ಸೆಡಾನ್ ಎಲ್ಲಾ ನಾಲ್ಕು ರೂಪಾಂತರಗಳಲ್ಲಿ ಬಿಎಸ್-6 ಪ್ರೇರಿತ ಆವೃತ್ತಿಯನ್ನು ಪರಿಚಯಿಸಲಾಗುವುದು. ಲೋ ರೂಪಾಂತರಳು ಹೆಚ್ಚು ದುಬಾರಿಯಾಗರಲಿದೆ.

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಹೊಸ ಬಿಎಸ್-5 ಟೊಯೊಟಾ ಯಾರೀಸ್ ಸೆಡಾನ್‍‍ಗಾಗಿ ಬುಕ್ಕಿಂಗ್‍ ಅನ್ನು ಪ್ರಾರಂಭಸಿಲಿದೆ ಎಂದು ವರದಿಗಳಿವೆ. ಬಿಎಸ್-6 ಪ್ರೇರಿತ ಯಾರೀಸ್ ಸೆಡಾನ್‍‍ಗೆ ರೂ.50 ಸಾವಿರಗಳಿಂದ ರೂ.1 ಲಕ್ಷಗಳವರೆಗೆ ಟೋಕನ್ ಮೊತ್ತಕ್ಕೆ ಬುಕ್ಕಿಂಗ್ ಮಾಡಬಹುದು.

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಯಾರೀಸ್ ಸೆಡಾನ್ ಕಾರ್ ಅನ್ನು ಮಾರುಕಟ್ಟೆಯಲ್ಲಿ ಜೆ, ಜಿ, ವಿ, ವಿ‍ಎಕ್ಸ್ ಎಂಬ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟೊಯೊಟಾ ಯಾರೀಸ್ ಕಾರ್ ಅನ್ನು 2018ರ ಏಪ್ರಿಲ್‍‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗ ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.75 ಲಕ್ಷಗಳಾಗಿತ್ತು.

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಹೊಸ ಟೊಯೊಟಾ ಬಿಎಸ್-6 ಯಾರೀಸ್ ಕಾರಿನಲ್ಲಿ 1.5 ಲೀಟರಿನ 4 ಸಿಲಿಂಡರ್ ಬಿ‍ಎಸ್ 4 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 105 ಬಿ‍‍ಹೆಚ್‍‍ಪಿ ಪವರ್ ಹಾಗೂ 140 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅಥವಾ 7 ಸ್ಪೀಡಿನ ಸಿವಿಟಿ ಗೇರ್‍‍ಬಾಕ್ಸ್ ನೀಡಲಾಗುವುದು.

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಟೊಯೊಟಾ ಇಟಿಯೋಸ್‍‍ನಲ್ಲಿ ಅಳವಡಿಸಲಾಗಿರುವ ಪೆಟ್ರೋಲ್ ಎಂಜಿನ್ ಅನ್ನು ಯಾರೀಸ್‍‍ನಲ್ಲಿಯೂ ಅಳವಡಿಸಲಾಗಿದೆ. ಆದರೆ ಯಾರೀಸ್‍‍ನಲ್ಲಿರುವ ಎಂಜಿನ್ ಅನ್ನು ಡ್ಯುಯಲ್ ವಿವಿಟಿ - ಐ ಸಿಸ್ಟಂಗೆ ಅಪ್‍‍ಗ್ರೇಡ್ ಮಾಡಲಾಗಿದೆ. ವಿವಿಟಿ ಐ ಅಂದರೆ ವೆರಿಯಬಲ್ ವಾಲ್ವ್ ಟೈಮಿಂಗ್ ವಿತ್ ಇಂಟೆಲಿಜೆನ್ಸ್ ಎಂದು.

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಈ ಸಿಸ್ಟಂ ಎಂಜಿನ್‍‍ನಲ್ಲಿರುವ ವಾಲ್ವ್ ಗಳನ್ನು ಆರ್‍‍ಪಿ‍ಎಂ ಮೂಲಕ ನಿಯಂತ್ರಿಸುತ್ತದೆ. ಇದರಿಂದಾಗಿ ಎಂಜಿನ್ ಪರ್ಫಾಮೆನ್ಸ್ ಹಾಗೂ ಫ್ಯೂಯಲ್ ಎಫಿಶಿಯನ್ಸಿ ಹೆಚ್ಚುತ್ತದೆ. ಹೊಸ ಟೊಯೊಟಾ ಯಾರೀಸ್ ಕಾರಿನಲ್ಲಿ ಎಂಜಿನ್ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಹೊಸ ಕಾರು ಡ್ಯುಯಲ್ ಟೋನ್ ಬಣ್ಣ, ಪಿಯಾನೊ ಬ್ಲಾಕ್ ಫಿನಿಶ್ ಹೊಂದಿರುವ ಫ್ರಂಟ್ ಗ್ರಿಲ್, ಎಲ್‍ಇ‍‍ಡಿ ಡಿ‍ಆರ್‍ಎಲ್ ಹೊಂದಿರುವ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಟರ್ನ್ ಇಂಡಿಕೇಟರ್ ಹಾಗೂ ಡೈಮಂಡ್ ಕಟ್ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಪ್ರಯಾಣಿಕರ ಸುರಕ್ಷತೆಗಾಗಿ ಯಾರೀಸ್ ಕಾರಿನಲ್ಲಿ 7 ಏರ್‍‍ಬ್ಯಾಗ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎ‍‍ಬಿ‍ಎಸ್ ಹಾಗೂ ಇ‍‍ಬಿ‍ಡಿ, ಬ್ರೇಕ್ ಅಸಿಸ್ಟ್, ಟಿ‍ಪಿ‍ಎಂ‍ಎಸ್, ಫ್ರಂಟ್ ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮ್ಯಾಂಡರ್ ಹಾಗೂ ಹೈ ಸ್ಪೀಡ್ ಅಲರ್ಟ್ ಸಿಸ್ಟಂಗಳಿವೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ದುಬಾರಿಯಾಗಿರಲಿದೆ ಬಿಎಸ್-6 ಟೊಯೊಟಾ ಯಾರೀಸ್

ಟೊಯೊಟಾ ಯಾರೀಸ್ ಭಾರತದಲ್ಲಿ ಬ್ರ್ಯಾಂಡ್‍‍ನಿಂದ ಬಿಡುಗಡೆಯಾದ ಮೊದಲ ಮಧ್ಯಮ ಗಾತ್ರದ ಸೆಡಾನ್ ಆಗಿದೆ. ಬಿಎಸ್-6 ಯಾರೀಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಟಿ, ಹ್ಯುಂಡೈ ವರ್ನಾ, ಮಾರುತಿ ಸುಜುಕಿಯ ಸಿಯಾಜ್ ಹಾಗೂ ಸ್ಕೋಡಾ ರ‍್ಯಾಪಿಡ್. ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Thursday, December 26, 2019, 15:08 [IST]
English summary
Toyota Yaris BS6 Price Hike Expected: Here Are All The Details Ahead Of Its India Launch - Read in Kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+