ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಟೊಯೊಟಾ ಕಿರ್ಲೋಸ್ಕರ್ ಇಂಡಿಯಾ ಯಾರಿಸ್ ಸೆಡಾನ್‍ ಆವೃತ್ತಿಯ ಹೊಸ ರೂಪಾಂತರವನ್ನು ದೇಶಿಯ ಮಾರುಕಟ್ಟಿಯಲ್ಲಿ ಬಿಡುಗಡೆ ಮಾಡಿದೆ. ಸೆಡಾನ್ ಆವೃತ್ತಿಯ ಯಾರಿಸ್ ಹೊಸ ರೂಪಾಂತರವಾದ ಜಿ-ಅಪ್ಷನಲ್ ಕಾರಿಗೆ ಭಾರತದ ಎಕ್ಸ್ ಶೋ ರೂಂ ಪ್ರಕಾರ ಬೆಲೆ ರೂ.9.63 ಲಕ್ಷವಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಟೊಯೊಟಾ ಯಾರಿಸ್ ರೂಪಾಂತರವಾದ ಜೆ-ಅಪ್ಷನಲ್ ಮತ್ತು ವಿ-ಅಪ್ಷನಲ್ ಕಾರನ್ನು ಕೆಲವೇ ದಿನಗಳ ಹಿಂದೆ ಬಿಡುಗಡೆಗೊಳಿಸಿದ್ದರು. ಹೊಸ ಟೊಯೊಟಾ ಯಾರಿಸ್ ಜಿ-ಅಪ್ಷನಲ್ ರೂಪಾಂತರವು ಜೆ-ಅಪ್ಷನಲ್ ಮತ್ತು ಜಿ-ಅಪ್ಷನಲ್ ರೂಪಾಂತರ ಕಾರುಗಳ ಶ್ರೇಣಿಯಲ್ಲಿದೆ. ಟೊಯೊಟಾ ಜಿ-ಅಪ್ಷನಲ್ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಹೊಸ ಜಿ-ಅಪ್ಷನಲ್ ರೂಪಾಂತರದೊಂದಿಗೆ ಟೊಯೊಟಾ ಯಾರಿಸ್‍‍ನ ಎಲ್ಲಾ ಟಾಪ್-ಅಪ್-ಲೈನ್ ವಿಎಕ್ಸ್ ಮಾದರಿಯನ್ನು ಹೊರತುಪಡಿಸಿ ಹೆಚ್ಚುವರಿ ಅಪ್ಷನಲ್ ಸ್ಪೆಕ್ ನೊಂದೆಗೆ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಇತರ ಮಾದರಿಗಳಂತೆಯೇ ಹೊಸ ಜಿ-ಅಪ್ಷನಲ್ ಕಾರು ಕೂಡ ಮ್ಯಾನುವಲ್ ಮತ್ತು ಸಿವಿಟಿ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಆದರೆ ಜಿ-ಅಪ್ಷನಲ್ ಸಿವಿಟಿ ಆವೃತ್ತಿಯ ಬೆಲೆ ತುಸು ಹೆಚ್ಚಾಗಿದ್ದು, ಭಾರತದ ಎಕ್ಸ್ ಶೋ ರೂಂ ಪ್ರಕಾರ 10.83 ಲಕ್ಷವಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಟೊಯೊಟಾ ಯಾರಿಸ್ ಜಿ-ಅಪ್ಷನಲ್ ಕಾರು ಹಲವಾರು ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಟ್ಟಿದೆ, ಇದನ್ನು ಜೆ ಮತ್ತು ಜಿ-ಸ್ಪೆಕ್ಸ್ ಮಾದರಿಯಿಂದ ಹಲವು ವೈಶಿಷ್ಟ್ಯಗಳನ್ನು ಪದೆದುಕೊಂಡಿದೆ. ಇದರಲ್ಲಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಕ್ರೋಮ್ ಗ್ರಿಲ್, ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್ ಮತ್ತು 15 ಇಂಚಿನ ಸಿಲ್ವರ್ ಅಲಾಯ್ ವ್ಹೀಲ್‍‍ಗಳು ಹೊಂದಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಹೊಸ ವೆರಿಯಂಡ್ ಕಾರು ಕೂಡ ಅದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 108 ಬಿ‍ಎಚ್‍‍ಪಿ ಪವರ್ ಮತು 140 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ಗೆ 6-ಸ್ಪೀಡ್ ಅಥವಾ 7-ಸ್ಪೀಡ್ ಸಿ‍ವಿ‍ಟಿ-ಐ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಇಂಟಿರಿಯರ್ ವೈಶಿಷ್ಟೈಗಳ ವಿಷಯಕ್ಕೆ ಬಂದರೆ ಡ್ಯುಯಲ್-ಟೋನ್ ಕ್ಯಾಬಿನ್, ವಾಟರ್‍‍ಫಾಲ್ ವಿನ್ಯಾಸದ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 4.2 ಇಂಚಿನ ಟಿಎಫ್‍ಟಿ ಕಲರ್ ಇನ್ಸ್ಟೋಮೆಂಟ್ ಕ್ಲಸ್ಟರ್ ಡಿಸ್ಪ್ಲೇ, ಕೂಲ್ಡ್ ಗ್ಲೋವ್‍‍ಬಾಕ್ಸ್, ರೂಫ್-ಮೌಟೆಂಡ್, ಕೀ ಲೆಸ್ ಎಂಟ್ರಿ, ಹ್ಯಾಬೆಯೆಂಡ್ ಲೈಟ್, ಸ್ಟಿರೀಂಗ್ ಮೌಂಟಡ್ ಕಂಟ್ರೋಲ್ ಅನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಟೊಯೊಟಾ ಯಾರಿಸ್ ಫೇಸ್‍‍ಲಿಫ್ಟ್ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 106 ಬಿಎಚ್‍‍ಪಿ ಪವರ್ ಮತ್ತು 140 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಿದೆ. ಟೊಯೊಟಾ ಯಾರಿಸ್ ಫೇಸ್‍ಲಿಫ್ಟ್ ನಲ್ಲಿ ಜೆ-ಅಪ್ಷನಲ್ ಕಾರು ಮ್ಯಾನುವಲ್ ಮತ್ತು ಸಿಪಿಟಿ ಎರಡು ಅಫರ್ ಅನ್ನು ನೀಡುತ್ತಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಹೊಸ ಟೊಯೊಟಾ ಯಾರಿಸ್ ಜಿ-ಅಪ್ಷನಲ್ ಕಾರು ಸುರಕ್ಷತೆಗೆ ಹೆಚ್ಚಿನ ಅಧ್ಯತೆಗಳನ್ನು ನೀಡಿದೆ. ಗ್ರಾಹಕರ ಸುರಕ್ಷೆಗಾಗಿ ಎ‍‍ಬಿಎಸ್ ಇ‍ಬಿಡಿ, ಬ್ರೇಕ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, 3 ಏರ್‍‍ಬ್ಯಾಗ್ ಮತ್ತು ಹೈ‍ಸ್ಪೀಡ್ ಅಲರ್ಟ್ ಅಳವಡಿಸಿದ್ದಾರೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಯಾರಿಸ್ ಜಿ-ಅಪ್ಷನಲ್

ಟೊಯೊಟಾ ಯಾರಿಸ್ ಕಾರನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಿದ್ದರು, ಸೆಡಾನ್ ಕಾರು ಆರಂಭದಲ್ಲಿ ಉತ್ತಮವಾಗಿ ಮಾರಾಟವಾಗುತಿತ್ತು, ಆದರೆ ದಿನಗಳು ಕಳಿದಂತೆ ಮಾರಾಟದ ಸಂಖ್ಖೆ ಕಡಿಮೆಯಾಗುತ್ತ ಬಂತು. ಟೊಯೊಟಾ ಯಾರಿಸ್ ಸೆಡಾನ್ ಮಾದರಿಯಲ್ಲಿ ಜಿ-ಅಪ್ಷನಲ್ ಕಾರು ಹೊಸ ವೈಶಿಷ್ಟೈಗಳ ಜೊತೆ ಬಿಡುಗಡೆಗೊಂಡಿದೆ. ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುವ ಮೂಲಕ ಮಾರಾಟದ ಸಂಖ್ಖೆ ಹೆಚ್ಚಿಸಲು ಹೊಸ ತಂತ್ರ ರೂಪಿಸಿದೆ.

Article Published On: Monday, September 9, 2019, 12:54 [IST]
English summary
New Toyota Yaris Variant (G-Optional) Launched In India: Priced At Rs 9.63 Lakh -Read in Kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+