Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗಾಗಿ ಸಿದ್ದವಾದ ನ್ಯೂ ಜನರೇಷನ್ ಮಹೀಂದ್ರಾ ಥಾರ್
ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ ತನ್ನ ಆಫ್-ರೋಡ್ ಕಾರು ಮಾದರಿಯಾದ ಥಾರ್ ಕಾರನ್ನು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸುತ್ತಿದ್ದು, 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಪರೀಕ್ಷಿಸಲು ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದೆ.

ದೇಶಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರಾ ಸಂಸ್ಥೆಯು 2010ರಲ್ಲಿ ಮೊದಲ ಬಾರಿಗೆ ಒಂದನೇ ತಲೆಮಾರಿನ ಥಾರ್ ಕಾರನ್ನು ಬಿಡುಗಡೆಗೊಳಿಸಿದ್ದನ್ನು ಬಿಟ್ಟರೆ ಅಂದಿನಿಂದಲೂ ಈ ಕಾರು ಯಾವುದೇ ಬದಲಾವಣೆಯನ್ನು ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಮಹೀಂದ್ರಾ ಸಂಸ್ಥೆಯು ಇದೀಗ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಥಾರ್ ಕಾರಿನಲ್ಲಿ ಹೆಚ್ಚಿನ ನವೀಕರಣ ತರಲು ಸಜ್ಜಾಗುತ್ತಿದ್ದು, ಹಲವಾರು ಬದಲಾವಣೆಗಳೊಂದಿಗೆ ಥಾರ್ ಹೊಸ ಕಾರು ಮಾರುಕಟ್ಟೆಗೆ ಪ್ರವೇಶಪಡೆಯಲಿದೆ.

ಹೊಸ ತಲೆಮಾರಿನ ಥಾರ್ ಕಾರಿನಲ್ಲಿ ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಮರಾಜೊ ಕಾರು ನಿರ್ಮಾಣಕ್ಕಾಗಿ ಬಳಸಲಾದ ಲ್ಯಾಡರ್ ಫ್ರೇಮ್ ಅನ್ನು ಈ ಕಾರಿನಲ್ಲಿಯೂ ಬಳಸಲಾಗಿದ್ದು, ಹೆಚ್ಚಿನದಾಗಿ ಆಧುನಿಕ ಲುಕ್ ಮತ್ತು ಮರುವಿನ್ಯಾಸಗೊಳಿಸಲಾದ ವಿನ್ಯಾಸವನ್ನು ಪಡೆದುಕೊಂಡಿರಲಿದೆ.

ಎಂಜಿನ್ ಸಾಮರ್ಥ್ಯ
ಹೊಸ ತಲೆಮಾರಿನ ಮಹೀಂದ್ರಾ ಥಾರ್ ಕಾರು ಹೊಸ ಡೀಸೆಲ್ ಎಂಜಿನ್ ಅನ್ನು ಪಡೆಯಲಿದ್ದು, ಪ್ರಸ್ತುತ ಇರುವ 2.5 ಲೀಟರ್ ಡೀಸೆಲ್ ಎಂಜಿನ್ ಅನ್ನು 2020ರ ಏಪ್ರಿಲ್1 ರಿಂದ ಜಾರಿಯಾಗಲಿರುವ ಹೊಸ ಎಮಿಷನ್ ಬಿಎಸ್-6 ನಿಬಂಧನೆಗಳಿಗೆ ಅನುಗುಣವಾಗಿ ಜೋಡಣೆ ಮಾಡಲಾಗಿದೆ.

ಹಾಗೆಯೇ ಈ ಬಾರಿ ಥಾರ್ ಕಾರಿನಲ್ಲಿ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ನೀಡಲಾಗುತ್ತಿದ್ದು, ಇದರಲ್ಲಿ ಡಿಐ ವೆರಿಯೆಂಟ್ ಮಾರಾಟವನ್ನು ಬಂದ್ ಮಾಡಿರುವ ಮಹೀಂದ್ರಾ ಸಂಸ್ಥೆಯು ಹೊಸದಾಗಿ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆ ವದಂತಿಗಳಿವೆ.

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ನೆಕ್ಟ್ಟ್ ಜನರೇಷನ್ ಥಾರ್ ಕಾರಿನಲ್ಲಿ ಈ ಬಾರಿ ಡ್ಯುಯಲ್ ಏರ್‍ಬ್ಯಾಗ್, ಬ್ರೇಕ್ ಅಸಿಸ್ಟ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಎಬಿಡಿ)ಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿರಲಿದೆ.

ಇದರ ಜೊತೆಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ಕ್ರಂಪಲ್ ಜೋನ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್ಲೈ, ಟ್ರೈ ಪಾಡ್ ಯೂನಿಟ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಎಸಿ ಕಂಟ್ರೋಲ್, ಅತ್ಯುತ್ತಮ ದರ್ಜೆಯ ಸೀಟುಗಳು ಮತ್ತು ಎಂಬ ಸೇಫ್ಟಿ ಫೀಚರ್‍ಗಳನ್ನು ವಿಶೇಷವಾಗಿದ್ದು, ಸುಗಮ ಸವಾರಿಗೆ ನಾಲ್ಕು ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಪಡೆದುಕೊಳ್ಳಲಿವೆ.

ಪ್ರಸ್ತುತ ತಲೆಮಾರಿನ ಥಾರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.29 ಲಕ್ಷದ ಮಾರಾಟವನ್ನು ಪಡೆದುಕೊಂಡಿದ್ದು, ಹೊಸ ಫೀಚರ್ಸ್ ಪಡೆಯಲಿರುವ ಹೊಸ ಥಾರ್ ಕಾರುಗಳು ಕನಿಷ್ಠ ಅಂದ್ರು ರೂ. 1.50 ಲಕ್ಷದಿಂದ ರೂ.2.50 ಲಕ್ಷ ಹೆಚ್ಚುವರಿ ಬೆಲೆ ಪಡೆಯಲಿವೆ.

ಇನ್ನು ಹೊಸ ತಲೆಮಾರಿನ ಥಾರ್ ಕಾರು ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಸಂಸ್ಥೆಯು ಪರಿಚಯಿಸಲಿರುವ ಹೊಸ ಜಿಮ್ನಿ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಆಫ್ ರೋಡ್ ಪ್ರಿಯರಿಗೆ ಹೊಸ ಥಾರ್ ಮತ್ತಷ್ಟು ಹೊಸ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
Source: Cartoq