ವರ್ಷಾಂತ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿವೆ ಬಹುನೀರಿಕ್ಷಿತ ಐವತ್ತು ಹೊಸ ವಾಹನಗಳು..!
ಭಾರತೀಯ ಆಟೋ ಉದ್ಯಮವು ಲೋಕಸಭಾ ಚುನಾವಣೆಯ ನಂತರ ಚೇತರಿಕೆ ಕಾಣುತ್ತಿದ್ದು, ಹೊಸ ವಾಹನ ಮಾರಾಟ ಪ್ರಮಾಣದಲ್ಲಿ ಏರಿಕೆ ದಾಖಲಾಗುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತನ್ನ ಬಹುನೀರಿಕ್ಷಿತ ವಾಹನ ಮಾದರಿಗಳನ್ನು ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ಮುಂದಿನ 2020ರ ಏಪ್ರಿಲ್ 1ರ ಒಳಗಾಗಿ ಸರಿಸುಮಾರು 50ಕ್ಕೂ ಹೆಚ್ಚು ಹೊಸ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ.

ಹೌದು, ಭಾರತೀಯ ಮಾರುಕಟ್ಟೆಯಲ್ಲಿನ ವಾಹನ ಬೇಡಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ವಾಹನ ಮಾಲೀಕರು ಸಮಯ, ಸಂದರ್ಭಕ್ಕೆ ಅನುಗುಣವಾಗಿ ವಿವಿಧ ಮಾದರಿಯ ವಾಹನಗಳ ಬಳಕೆಯ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ಗ್ರಾಹಕರ ಬೇಡಿಕೆಗೆ ಹೆಚ್ಚಿನ ಮನ್ನಣೆ ನೀಡುತ್ತಿರುವ ವಾಹನ ಉತ್ಪಾದನಾ ಸಂಸ್ಥೆಗಳು ಈ ಹಿಂದಿಗಿಂತಲೂ ಅತ್ಯುತ್ತಮ ಎಂಜಿನ್ ಮತ್ತು ತಾಂತ್ರಿಕ ಸೌಲಭ್ಯವುಳ್ಳ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಇವುಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಜೊತೆ ಸಾಮಾನ್ಯ ಮಾದರಿಯ ವಾಹನಗಳು ಕೂಡಾ ಬಿಡುಗಡೆಯಾಗುತ್ತಿವೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-4 ವಾಹನಗಳು ಮಾರಾಟವಾಗುತ್ತಿದ್ದು, ಮುಂಬರುವ 2020ರ ಏಪ್ರಿಲ್ 1ರಿಂದ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಮಾರಾಟ ಪ್ರಕ್ರಿಯೆ ಶುರುವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್-6 ನಿಯಮದಂತೆ ವಾಹನ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಲಾಗುತ್ತಿದ್ದು, ಈ ಹಿಂದಿಗಿಂತಲೂ ಹೆಚ್ಚಿನ ತಾಂತ್ರಿಕ ಸೌಲಭ್ಯಗಳನ್ನು ಈ ಕೆಳಗಿನ ವಾಹನಗಳು ಪಡೆದುಕೊಳ್ಳಲಿವೆ.

ಹೊಸದಾಗಿ ಬಿಡುಗಡೆಯಾಗಲಿರುವ ವಾಹನಗಳ ಪಟ್ಟಿಯಲ್ಲಿ ಕೆಲವು ನವೀಕೃತ ಮಾದರಿಗಳ ಜೊತೆಗೆ ಹೊಸ ಎಂಜಿನ್ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆಯಾಗಿ ಸಿದ್ದವಾಗುತ್ತಿದ್ದು, ಸುಮಾರು 30ಕ್ಕೂ ಹೆಚ್ಚು ಕಾರುಗಳು ಮತ್ತು 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹೊಸ ವಾಹನಗಳ ಬಿಡುಗಡೆಯ ಪಟ್ಟಿಯಲ್ಲಿ ಸ್ಥಾನಪಡೆದಿವೆ.

ಬಿಡುಗಡೆಯಾಗಲಿರುವ ಹೊಸ ಕಾರುಗಳು
*ಕಿಯಾ ಸೆಲ್ಟೊಸ್
*ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್
*ಮಾರುತಿ ಸುಜುಕಿ ಎಸ್-ಪ್ರೆಸೊ
*ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್
*ಮಾರುತಿ ಸುಜುಕಿ ವಿಟಾರಾ
*ಮಾರುತಿ ಸುಜುಕಿ ವಿಟಾರಾ ಬ್ರೆಝಾ ಪೆಟ್ರೋಲ್
*ಮಾರುತಿ ಸುಜುಕಿ ವ್ಯಾಗನ್‌ಆರ್ ಎಲೆಕ್ಟ್ರಿಕ್
* ಮಾರುತಿ ಸುಜುಕಿ ಸಾಲಿಯೋ ಹೈಬ್ರಿಡ್
*ಹ್ಯುಂಡೈ ಗ್ರಾಂಡ್ ಐ10 ಫೇಸ್‌ಲಿಫ್ಟ್
*ಹ್ಯುಂಡೈ ಗ್ರಾಂಡ್ ಐ20 ಫೇಸ್‌ಲಿಫ್ಟ್
*ಹ್ಯುಂಡೈ ಟಕ್ಸನ್ ಫೇಸ್‌ಲಿಫ್ಟ್
*ನ್ಯೂ ಹೋಂಡಾ ಸಿಟಿ
*ಹೋಂಡಾ ಹೆಚ್‌ಆರ್-ವಿ
*ಟಾಟಾ ಕ್ಯಾಸಿನಿ
*ಟಾಟಾ ಆಲ್‌ಟ್ರೋಜ್
*ಟಾಟಾ ಆಲ್‌ಟ್ರೋಜ್ ಎಲೆಕ್ಟ್ರಿಕ್
*ಎಂಜಿ ಹೆಕ್ಟರ(7 ಸೀಟರ್ ಆವೃತ್ತಿ)
*ಎಂಜಿ ಇಜೆಡ್ಎಸ್ ಎಲೆಕ್ಟ್ರಿಕ್
*ರೆನಾಲ್ಟ್ ಟ್ರೈಬರ್
*ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್
*ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್
*ಸ್ಕೋಡಾ ಕರೋಕ್
*ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೆಸ್
*ಜೀಪ್ ಮೊಬ್
*ಮಹೀಂದ್ರಾ ಇಕೆಯುವಿ100 ಎಲೆಕ್ಟ್ರಿಕ್
*ಆಡಿ ಇ-ಟ್ರಾನ್ ಎಲೆಕ್ಟ್ರಿಕ್

ಹೊಸ ಕಾರುಗಳ ಪೈಕಿ ಮಾರುತಿ ಸುಜುಕಿ ನಿರ್ಮಾಣದ ಕಾರು ಮಾದರಿಗಳು ಹೆಚ್ಚು ನೀರಿಕ್ಷೆ ಹುಟ್ಟುಹಾಕಿದ್ದು, ಸಾಂಪ್ರದಾಯಿಕ ಡೀಸೆಲ್ ಎಂಜಿನ್‌ಗೆ ಗುಡ್ ಬೈ ಹೇಳುತ್ತಿರುವ ಮಾರುತಿ ಸುಜುಕಿಯು ತನ್ನ ಜನಪ್ರಿಯ ಕಾರುಗಳನ್ನು ಪೆಟ್ರೋಲ್, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ. ಹಾಗೆಯೇ ಭಾರತಕ್ಕೆ ಹೊಸದಾಗಿ ಕಾಲಿಟ್ಟಿರುವ ಕಿಯಾ ಮೋಟಾರ್ಸ್ ಮತ್ತು ಎಂಜಿ ಮೋಟಾರ್ ಕೂಡಾ ಹೊಸ ಭರವಸೆ ಹುಟ್ಟುಹಾಕಿವೆ.

ಬಿಡುಗಡೆಯಾಗಲಿರುವ ಹೊಸ ದ್ವಿಚಕ್ರ ವಾಹನಗಳು
*ಹೋಂಡಾ ಸಿಬಿಆರ್300ಆರ್
*ಹೋಂಡಾ ಪಿಸಿಎಕ್ಸ್ 125
*ಹೋಂಡಾ ಆಕ್ಟಿವಾ 125 (ಫ್ಯೂಲ್ ಇಂಜೆಕ್ಷೆಡ್ ವೆರಿಯೆಂಟ್)
*ಬಜಾಜ್ ಪಲ್ಸರ್ 125ಎನ್ಎಸ್
*ಬಜಾಜ್ ಪಲ್ಸರ್ 180ಎನ್ಎಸ್
*ಬಜಾಜ್ ಅರ್ಬನೈಟ್
*ಹೀರೋ ಹಸ್ತೂರ್
*ಸುಜುಕಿ ಜಿಕ್ಸರ್ 250
*ಟಿವಿಎಸ್ ಕ್ರಿಯಾನ್
*ಟಿವಿಎಸ್ ಜೆಪ್ಪಿನ್
*ಕೆಟಿಎಂ 1050 ಅಡ್ವೆಂಚೆರ್
*ಕೆಟಿಎಂ 390 ಅಡ್ವೆಂಚೆರ್
*ರಿವೋಲ್ಟ್ ಆರ್‌ವಿ 400
*ಆಲ್ಟ್ರಾವೆಲಿಟ್ಟಿ ಎಫ್77

ಬೈಕ್ ವಿಭಾಗದಲ್ಲೂ ಈ ಬಾರಿ ಕೆಲವು ಹೊಸ ಮಾದರಿಗಳು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕೆಲವು ಬೈಕ್ ಮಾದರಿಗಳು ಇದೇ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯನ್ನು ಪರಿಚಯಿಸುತ್ತಿವೆ. ಇಷ್ಟು ದಿನಗಳ ಕಾಲ ಬೆಲೆ ಮತ್ತು ಮೈಲೇಜ್ ಹೆಚ್ಚು ಗಮನಹರಿಸುತ್ತಿದ್ದ ಭಾರತೀಯ ಗ್ರಾಹಕರು ಇದೀಗ ಪರ್ಫಾಮೆನ್ಸ್ ಕುರಿತಾಗಿ ಹೆಚ್ಚಾಗಿ ಗಮನಹರಿಸುತ್ತಿದ್ದು, ವಿದೇಶಿಯ ಮಾರುಕಟ್ಟೆಯಲ್ಲಿನ ಹಲವು ಹೊಸ ಬಗೆಯ ಬೈಕ್ ಮಾದರಿಗಳು ಭಾರತದಲ್ಲೂ ಅಧಿಕೃತವಾಗಿ ಮಾರಾಟವಾಗುವ ಸಜ್ಜಾಗುತ್ತಿವೆ.

ಇನ್ನು ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಮೇಲೂ ಹೆಚ್ಚು ಗಮನಹರಿಸುತ್ತಿದ್ದು, ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ ಮತ್ತು ಎಂಜಿ ಮೋಟಾರ್ ಸಂಸ್ಥೆಗಳು ತಮ್ಮ ನೆಚ್ಚಿನ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ.


Click it and Unblock the Notifications