ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಬೇಕು ಮತ್ತು ರಸ್ತೆಗಳಲ್ಲಿ ಬಹುತೇಕವಾಗಿ ಎಲೆಕ್ಟ್ರಿಕ್ ವಾಹನಗಳು ಸಂಚರಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶದ ಅನುಸಾರ ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿ ಮಾಡುವ ಕಾರ್ಯದಲ್ಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಸಧ್ಯ ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಜುಕಿ ಸೇರಿದಂತೆ ಇನ್ನು ಹಲವಾರು ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಅದೇ ಪಟ್ಟಿಯಲ್ಲಿ ನಿಸ್ಸಾನ್ ಸಂಸ್ಥೆಯು ಕೂಡಾ ಸ್ಥಾನವನ್ನು ಪಡೆದುಕೊಂಡಿದೆ. ನಿಸ್ಸಾನ್ ಸಂಸ್ಥೆಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಲೀಫ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಇದೀಗ ನಿಸ್ಸಾನ್ ಸಂಸ್ಥೆಯು ಹಲವಾರು ಬದಲಾವಣೆಗಳನ್ನು ಮಾಡಿ, ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೇಕಾದ ಬಹುತೇಕ ಫೀಚರ್‍‍ಗಳನ್ನು ಒಳಗೊಂಡ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರನ್ನು ತಯಾರಿ ಮಾಡುವ ಯೋಜನೆಯಲಿದ್ದು, ಬಿಡುಗಡೆಗು ಮುನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಕಾರ್ಯದಲ್ಲಿದೆ. ಹೀಗಿರುವಾದ ಪುಣೇ ಎಕ್ಸ್ಪ್ರೆಸ್ ವೇನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಲೀಫ್ ಕಾರ್‌ನ್ನು ಅಭಿವೃದ್ಧಿ ಮಾಡಿರುವ ನಿಸ್ಸಾನ್ ಸಂಸ್ಥೆಯು, ಇದುವರೆಗೆ ಯಾವುದೇ ಆಟೋ ಉತ್ಪಾದನಾ ಸಂಸ್ಥೆಗಳು ಬಳಸದ ಸುಧಾರಿತ ಮಾದರಿಯ ಎಲೆಕ್ಟ್ಕಿಕ್ ಎಂಜಿನ್ ಅಳವಡಿಸಿರುವುದು ಈ ಕಾರಿನ ಪ್ರಮುಖ ಆಕರ್ಷಣೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಇದೇ ಕಾರಣಕ್ಕೆ ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಬರೋಬ್ಬರಿ 400 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೇಳಿಕೊಂಡಿರುವ ನಿಸ್ಸಾನ್ ಸಂಸ್ಥೆಯು, 380 ಕಿಮಿ ಮೈಲೇಜ್ ರೇಂಜ್ ಹೊಂದಿರುವ ಟೆಸ್ಲಾ ಮಾಡೆಲ್ 3 ಕಾರಿಗಿಂತಲೂ ಅತ್ಯತ್ತಮ ಎಲೆಕ್ಟ್ರಿಕ್ ಕಾರು ಮಾದರಿ ಇದಾಗಿದೆ ಎಂದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರುಗಳಲ್ಲಿ 40kWh ಬ್ಯಾಟರಿ ಬಳಕೆ ಮಾಡಲಾಗಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಮಾಡಲು 8 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುತ್ತೆ. ಹಾಗೆಯೇ ಮತ್ತೊಂದು ವಿಶೇಷ ಅಂದ್ರೆ ಕೇವಲ 40 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗುವ ಇದರ ಗುಣಲಕ್ಷಣವಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಇದಲ್ಲದೇ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳ ಕುರಿತು ಪ್ರಚಾರಕ್ಕಾಗಿ ಎರಡು ಲೀಫ್ ಎಲೆಕ್ಟ್ರಿಕ್ ಕಾರುಗಳನ್ನು ಸಹ ಭಾರತದಲ್ಲಿ ಆಮದು ಮಾಡಿಕೊಳ್ಳಲಾಗಿದ್ದು, ಆಸಕ್ತ ಗ್ರಾಹಕರು ಟೆಸ್ಟ್ ಡ್ರೈವ್ ಮೂಲಕ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತು ಅನುಭವ ಪಡೆದುಕೊಳ್ಳಬಹುದಾಗಿದೆ.

MOST READ: ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಇದಕ್ಕಾಗಿಯೇ ಚೆನ್ನೈ ಬಳಿ 650 ಎಕರೆ ವಿಸ್ತಿರಣದ ಟ್ರ್ಯಾಕ್ ನಿರ್ಮಾಣ ಮಾಡಿರುವ ನಿಸ್ಸಾನ್ ಸಂಸ್ಥೆಯು ಅಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಮತ್ತು ಟೆಸ್ಟ್ ಡ್ರೈವ್ ಕಾರ್ಯವನ್ನು ನಡೆಸಲಿದೆ ಎಂಬ ಮಹತ್ವದ ಮಾಹಿತಿ ಕೂಡಾ ಲಭ್ಯವಾಗಿದೆ.

MOST READ: ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಕಾರು ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)

ವರದಿ ಪ್ರಕಾರ ಹೊಚ್ಚ ಹೊಸ ಲೀಫ್ ಕಾರು ಮಾದರಿಯನ್ನು 2019ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಐಷಾರಾಮಿ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಕಾರಿನ ಬೆಲೆಯು ರೂ.30 ಲಕ್ಷದಿಂದ ರೂ.35 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಆದ್ರೆ ಭಾರತದಲ್ಲೇ ಹೊಸ ಕಾರುಗಳು ನಿರ್ಮಾಣವಾದಲ್ಲಿ ಕಾರಿನ ಬೆಲೆಗಳು ಗಣನೀಯವಾಗಿ ತಗ್ಗಬಹುದು.

MOST READ: ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಇನ್ನು ಲೀಫ್ ಕಾರುಗಳಲ್ಲಿ ಒದಗಿಸಲಾಗಿರುವ ವಿಶ್ವದರ್ಜೆ ಸೌಲಭ್ಯಗಳು ಕಾರಿನ ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸಿದ್ದು, ಕಾರಿನ ಹೊರ ಮತ್ತು ಒಳ ವಿನ್ಯಾಸಗಳು ಸಾಕಷ್ಟು ಆಕರ್ಷಣೆಯಿಂದ ಕೂಡಿರುವುದಲ್ಲದೇ ಸ್ಪೋರ್ಟಿ ಲುಕ್ ಸಹ ಪಡೆದುಕೊಂಡಿವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರು

ಒಟ್ಟಿನಲ್ಲಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗುತ್ತಿರುವ ಲೀಫ್ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲೂ ಬಿಡುಗಡೆಯಾಗುವುದು ಖಚಿತವಾಗಿದ್ದು, ಲೀಫ್ ಬಿಡುಗಡೆಯ ನಂತರ ಹಲವು ಮಾದರಿಯ ಐಷಾರಾಮಿ ಕಾರುಗಳು ಉತ್ಪಾದನೆಯಿಂದ ಹಿಂದೆ ಸರಿಯಬಹುದಾದ ಸಾಧ್ಯತೆಗಳು ಕೂಡಾ ಇವೆ.

Source: Rushlane

More from DriveSpark

Article Published On: Wednesday, June 12, 2019, 12:00 [IST]
English summary
Upcoming Nissan Leafe Electric Car Spotted In Pune Expressway. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+