ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಸರ್ಕಾರಿ ಬಸ್ಸುಗಳು ಬಡವರ ಹಾಗೂ ಸಾಮಾನ್ಯ ಜನರ ಓಡಾಟದ ಪ್ರಮುಖ ಸಾರಿಗೆ ವ್ಯವಸ್ಥೆಗಳಾಗಿವೆ. ಕೆಲವು ರಾಜ್ಯ ಸರ್ಕಾರಗಳು ಈ ಸರ್ಕಾರಿ ಬಸ್ಸುಗಳನ್ನು ಸರಿಯಾಗಿ ನಿರ್ವಹಿಸಿದ ಕಾರಣಕ್ಕೆ ತಗಡಿನ ಡಬ್ಬಿಗಳಾಗಿವೆ.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಇದರಿಂದಾಗಿ ಜನರು ಪ್ರಯಾಣಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗುತ್ತದೆ. ಕೆಲವು ರಾಜ್ಯ ಸರ್ಕಾರಗಳು ಪ್ರಯಾಣಿಕ ಯೋಗ್ಯವಲ್ಲದ ಬಸ್ಸುಗಳನ್ನು ಬದಲಿಸಿ ಅವುಗಳ ಬದಲಿಗೆ ಹೊಸ ಬಸ್ಸುಗಳನ್ನು ರಸ್ತೆಗಿಳಿಸುತ್ತವೆ.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಇತ್ತೀಚಿಗೆ ತಮಿಳುನಾಡು ಸರ್ಕಾರವು ಹಲವು ಹೊಸ ಬಸ್ಸುಗಳನ್ನು ಖರೀದಿಸಿ ರಸ್ತೆಗಿಳಿಸಿತ್ತು. ಇದರ ಜೊತೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಸಹ ರಸ್ತೆಗಿಳಿಸಿದೆ. ಉತ್ತರಖಂಡದ ಸಾರಿಗೆ ಇಲಾಖೆಯು ಇತ್ತೀಚಿಗೆ ಟಾಟಾ ಮೋಟಾರ್ಸ್‍‍ನಿಂದ ಹಲವು ಹೊಸ ಬಸ್ಸುಗಳನ್ನು ಖರೀದಿಸಿತ್ತು.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಈಗ ಈ ಬಸ್ಸುಗಳನ್ನು ಟಾಟಾ ಮೋಟಾರ್ಸ್‍‍ಗೆ ಹಿಂದಿರುಗಿಸಲು ನಿರ್ಧರಿಸಿದೆ. ಸೆಂಟ್ರಲ್ ಇನ್ಸ್ ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್ ಪೋರ್ಟ್ ತಂಡವು ಈ ಬಸ್ಸುಗಳಲ್ಲಿರುವ ಗೇರ್ ಲಿವರ್‍‍ಗಳ ವಿನ್ಯಾಸದಲ್ಲಿ ದೋಷವನ್ನು ಪತ್ತೆ ಹಚ್ಚಿದ ನಂತರ ಬಸ್ಸುಗಳನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಈ ಬಗ್ಗೆ ಮಾತನಾಡಿದ ಉತ್ತರಖಂಡದ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ (ಯುಟಿ‍ಸಿ)ಯ ಎಂಡಿ ರಣ್‍‍ವೀರ್ ಸಿಂಗ್‍‍ರವರು ಕೇಂದ್ರ ತಂಡವು ಶನಿವಾರ ಈ ಬಸ್ಸುಗಳನ್ನು ತಪಾಸಣೆ ಮಾಡಿ, ಭಾನುವಾರ ತನ್ನ ವರದಿಯನ್ನು ನೀಡಿದೆ ಎಂದು ಹೇಳಿದರು.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಈ ವರದಿಯಲ್ಲಿ ಗೇರ್‍ ಲಿವರ್‍‍ನ ವಿನ್ಯಾಸದಲ್ಲಿ ದೋಷಗಳಿರುವುದರಿಂದ ಚಾಲಕರಿಗೆ ಈ ಬಸ್ಸುಗಳನ್ನು ಚಲಾಯಿಸಲು ಅನಾನುಕೂಲವಾಗುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ರಣ್‍‍ವೀರ್ ಸಿಂಗ್‍‍ರವರು ಕೇಂದ್ರ ತಂಡವು ಗೇರ್ ಲಿವರ್‍‍ಗಳ ಬಗ್ಗೆ ಕೆಲವು ಆಕ್ಷೇಪಗಳನ್ನು ಹೊಂದಿದೆ.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಇವುಗಳನ್ನು ಸರಿಪಡಿಸ ಬೇಕಿದೆ. ಆದ ಕಾರಣ ಈ ಬಸ್ಸುಗಳನ್ನು ಟಾಟಾ ಮೋಟಾರ್ಸ್‍‍ಗೆ ವಾಪಸ್ ಕಳುಹಿಸುತ್ತಿದ್ದೇವೆ. ಟಾಟಾ ಮೋಟಾರ್ಸ್ ಈ ಬಸ್ಸುಗಳನ್ನು ಅಪ್‍‍ಗ್ರೇಡ್ ಮಾಡಿದ ನಂತರ ಅವುಗಳನ್ನು ಮತ್ತೊಮ್ಮೆ ಕೇಂದ್ರ ತಂಡದಿಂದ ಪರೀಕ್ಷಿಸಿ, ಯಾವುದೇ ತೊಂದರೆಗಳು ಕಂಡು ಬರದಿದ್ದರೆ ರಸ್ತೆಗಿಳಿಸುತ್ತೇವೆ ಎಂದು ಹೇಳಿದರು.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಗಮನಿಸಬೇಕಾದ ಸಂಗತಿಯೆಂದರೆ, ಟಾಟಾ ಮೋಟಾರ್ಸ್ ತಯಾರಿಸಿರುವ ಇದೇ ಬಸ್ಸುಗಳನ್ನು ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದ ಸಾರಿಗೆ ಇಲಾಖೆಗಳಿಗೂ ಮಾರಾಟ ಮಾಡಲಾಗಿದೆ. ಉತ್ತರಖಂಡ ಸಾರಿಗೆ ಇಲಾಖೆಯು 300 ಹೊಸ ಬಸ್ಸುಗಳನ್ನು ಈ ವರ್ಷದ ಕೊನೆಯ ವೇಳೆಗೆ ಖರೀದಿಸುವುದಾಗಿ ಘೋಷಿಸಿತ್ತು.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಮೊದಲ ಹಂತದಲ್ಲಿ 150 ಬಸ್ಸುಗಳನ್ನು ಯುಟಿಸಿಗೆ ನೀಡಲಾಯಿತು. ಇವುಗಳಲ್ಲಿ 50 ಬಸ್ಸುಗಳು ಡೆಹ್ರಾಡೂನ್ ಡಿಪೋದಿಂದ, 65 ಬಸ್ಸುಗಳು ಕುಮೋನ್ ಡಿಪೋದಿಂದ ಹಾಗೂ 35 ಬಸ್ಸುಗಳು ತಾನಕಪುರ ಡಿಪೋದಿಂದ ಕಾರ್ಯನಿರ್ವಹಿಸಬೇಕಿತ್ತು.

ಹೊಸದಾಗಿ ಖರೀದಿಸಿದ ಬಸ್‍‍ಗಳನ್ನು ಹಿಂದಿರುಗಿಸಲಿರುವ ಸರ್ಕಾರ

ಅಕ್ಟೋಬರ್‍‍ನಲ್ಲಿ ಸಾರಿಗೆ ಸಚಿವರಾದ ಯಶ್‍‍ಪಾಲ್ ಆರ್ಯರವರು 20 ಹೊಸ ಬಸ್ಸುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಬಸ್ಸುಗಳ ಓಡಾಟವು ಶುರುವಾದ ನಂತರ ಇವುಗಳಲ್ಲಿರುವ ದೋಷವು ಕಂಡು ಬಂದಿದೆ. ಈಗ ಈ ಬಸ್ಸುಗಳನ್ನು ಹಿಂದಿರುಗಿಸುತ್ತಿರುವುದರಿಂದ ಸಾರಿಗೆ ಇಲಾಖೆಯು ಪ್ರತಿದಿನ ಲಕ್ಷಾಂತರ ರೂಪಾಯಿಗಳಷ್ಟು ನಷ್ಟ ಅನುಭವಿಸಲಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಸಂಸ್ಥೆಗೆ ರೂ.3.42 ಕೋಟಿ ದಂಡ..!

ಹೆಚ್ಚುತ್ತಿರುವ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾರ್ವಜನಿಕ ಸಾರಿಗೆ ವಲಯದಲ್ಲೂ ಮಹತ್ವದ ಬದಲಾವಣೆ ತರಲಾಗುತ್ತಿದೆ. ಆದ್ರೆ ಆಟೋ ಉತ್ಪಾದನಾ ಸಂಸ್ಥೆಗಳ ವಿಳಂಬ ಧೋರಣೆಯಿಂದಾಗಿ ಭವಿಷ್ಯ ಯೋಜನೆಗೆ ಹಿನ್ನಡೆಯಾಗುವಂತಾಗಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ದೇಶಾದ್ಯಂತ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ಸಂಬಂಧ ಕೇಂದ್ರ ಸರ್ಕಾರವು ಹಲವಾರುವ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಾರ್ವಜನಿಕ ಸಾರಿಗೆ ವಲಯದಲ್ಲೂ ಸುಧಾರಣೆ ತರುವ ಸಂಬಂಧ ಎಲೆಕ್ಟ್ರಿಕ್ ಬಸ್‌ಗಳ ಬಳಕೆಗಾಗಿ ನೂರಾರು ಕೋಟಿ ಹಣ ಬಿಡುಗಡೆ ಮಾಡಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಹೀಗಿದ್ದರೂ ಎಲೆಕ್ಟ್ರಿಕ್ ವಾಹನಗಳನ್ನು ಸರಿಯಾದ ಸಮಯಕ್ಕೆ ಉತ್ಪಾದನೆ ಮಾಡಿ ಬೇಡಿಕೆ ಪೂರೈಸಲು ವಿಫಲವಾಗುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳ ವಿಳಂಬದಿಂದಾಗಿ ಮಹತ್ವ ಯೋಜನೆಗೆ ಕನಸಾಗಿಯೇ ಉಳಿಯುವಂತಾಗಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

2017ರಲ್ಲಿ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 440 ಕೋಟಿ ಹಣ ಬಿಡುಗಡೆ ಮಾಡಿದ್ದು, ಹೊಸ ಯೋಜನೆಯ ಬಹುತೇಕ ಟೆಂಡರ್ ಅನ್ನು ಟಾಟಾ ಮೋಟಾರ್ಸ್ ಮತ್ತು ಅಶೋಕ್ ಲೇಲ್ಯಾಂಡ್ ಸಂಸ್ಥೆಗಳು ತಮ್ಮದಾಗಿಸಿಕೊಂಡಿದ್ದವು.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಅದರಲ್ಲೂ ಟಾಟಾ ಮೋಟಾರ್ಸ್ ಸಂಸ್ಥೆಯು ವಿವಿಧ ರಾಜ್ಯಗಳಿಗೆ ಸುಮಾರು 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುವ ಟೆಂಡರ್ ತನ್ನದಾಗಿಸಿಕೊಂಡಿದ್ದರೂ ಸಹ 2017ರಿಂದ ಇದುವರೆಗೆ ಕೇವಲ 40 ಬಸ್‌ಗಳನ್ನು ಮಾತ್ರವೇ ಪೂರೈಕೆ ಮಾಡಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಇದರಿಂದ ಟಾಟಾ ಮೋಟಾರ್ಸ್ ವಿರುದ್ಧ ಕಾನೂನು ಕ್ರಮಕೈಗೊಂಡಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯವು ನಿಗದಿ ಅವಧಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸದ ಟಾಟಾ ವಿರುದ್ದ ರೂ.3.42 ಕೋಟಿ ದಂಡ ವಿಧಿಸಿದ್ದು, ಇನ್ನುಳಿದ 60 ಬಸ್‌ಗಳನ್ನು ಮುಂದಿನ ಒಂದು ತಿಂಗಳ ಒಳಗಾಗಿ ಪೂರೈಕೆ ಮಾಡುವಂತೆ ಡೆಡ್‌ಲೈನ್ ನೀಡಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಇಲ್ಲವಾದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ನೀಡುತ್ತಿರುವ ಸಬ್ಸಡಿಯನ್ನು ಕೂಡಾ ಕಳೆದುಕೊಳ್ಳುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಕರೆಯಲಾಗುವ ಟೆಂಡರ್ ಪ್ರಕ್ರಿಯೆಗಳಿಂದ ದೂರವಿಡುವುದಾಗಿ ಎಚ್ಚರಿಕೆ ನೀಡಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಇನ್ನು ಬೆಂಗಳೂರಿನಲ್ಲೂ ಕೂಡಾ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಸಂಬಂಧ ಬಿಎಂಟಿಸಿ ಕೂಡಾ ಬರೋಬ್ಬರಿ 80 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಕೆ ಮಾಡುವಂತೆ ಬೇಡಿಕೆಗೆ ಸಲ್ಲಿಸಿದ್ದು, ಇದುವರೆಗೂ ಒಂದೇ ಒಂದು ಬಸ್ ಕೂಡಾ ಪೂರೈಕೆ ಮಾಡಲಾಗಿಲ್ಲ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಹೀಗಾಗಿ ಟಾಟಾ ಮೋಟಾರ್ಸ್‌ಗೆ ನೀಡಲಾಗಿರುವ ಟೆಂಡರ್ ಪ್ರಕ್ರಿಯೆಯನ್ನು ಕಡೆದುಕೊಳ್ಳಲು ಬಹುತೇಕ ರಾಜ್ಯ ಸರ್ಕಾರಗಳು ಚರ್ಚೆ ನಡೆಸುತ್ತಿದ್ದು, ಇದೀಗ ಹೊಸದಾಗಿ ನೀಡಲಾಗಿರುವ ಡೆಡ್‌ಲೈನ್ ಒಳಗಾಗಿ ಬಸ್ ಪೂರೈಕೆ ಮಾಡದೇ ಇದ್ದಲ್ಲಿ ಟಾಟಾ ಸಂಸ್ಥೆಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಟಾಟಾ ಸಂಸ್ಥೆಯು ಸಂಸ್ಥೆಯು ಸದ್ಯ ಚೀನಾ ಮೂಲದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಸಂಸ್ಥೆಯಾದ ಬಿವೈಡಿ ಜೊತೆಗೂಡಿ ಮುಂಬೈನಲ್ಲಿ ಹೊಸ ಬಸ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಬಿವೈಡಿ ಅಂಗಸಂಸ್ಥೆಯಾದ ಬ್ರಿಡ್ಜ್‌ಸ್ಟೋನ್ ಸಂಸ್ಥೆಯು ಟಾಟಾ ಎಲೆಕ್ಟ್ರಿಕ್ ಬಸ್‌ಗಳನ್ನು ಓಲೆಕ್ಟ್ರಾ ಹೆಸರಿನೊಂದಿಗೆ ಪರಿಚಯಿಸುತ್ತಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಇದರಿಂದಾಗಿ ಓಲೆಕ್ಟ್ರಾ ಬಸ್‌ಗಳ ಬ್ಯಾಟರಿ ಉತ್ಪಾದನೆಯಲ್ಲಿ ಕೆಲವು ಗೊಂದಲಗಳು ಸೃಷ್ಠಿಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದ ಬೇಡಿಕೆ ಪೂರೈಕೆ ಮಾಡಲು ತುಸು ಸಮಯಾವಕಾಶ ನೀಡುವಂತೆ ಟಾಟಾ ಸಂಸ್ಥೆಯು ಕೇಂದ್ರಕ್ಕೆ ಮನವಿ ಮಾಡಿದೆ.

ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಒಟ್ಟಿನಲ್ಲಿ ಎಲೆಕ್ಟ್ರಿಕ್ ಬಸ್ ಪೂರೈಕೆಗಾಗಿ ಬಹುತೇಕ ಟೆಂಡರ್‌ಗಳನ್ನು ತನ್ನದಾಗಿಸಿಕೊಂಡು ಸಂಕಷ್ಟಕ್ಕೆ ಸಿಲುಕಿರುವ ಟಾಟಾ ಸಂಸ್ಥೆಯು ನಿಗದಿತ ಅವಧಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲು ಹೊಸ ಯೋಜನೆಯ ಮೊರೆ ಹೋಗಿದೆ.

Most Read Articles

Kannada
English summary
Uttarakhand transport department to return newly bought buses - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X