ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ದೇಶಾದ್ಯಂತ ಹೊಸ ಮೋಟಾರ್ ವೆಹಿಕಲ್ ಆಕ್ಟ್ ಜಾರಿಯಿಂದಾಗಿ ವಾಹನ ಸವಾರರು ದುಬಾರಿ ದಂಡ ಪಾವತಿಸಲಾಗದೇ ಪರದಾಟುವಂತ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಮತ್ತೊಂದು ಹೊಸ ನಿಯಮ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರವು ಹೆಚ್ಚು ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಹೆಚ್ಚುವರಿ ಇನ್ಸುರೆನ್ಸ್ ವಿಧಿಸುವ ನಿಯಮ ಜಾರಿಗೆ ಸಿದ್ದತೆ ನಡೆಸಿದೆ.

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ಪ್ರಸ್ತುತ ನಿಯಮಗಳ ಪ್ರಕಾರ ಪ್ರತಿ ವಾಹನವು ಕೂಡಾ ಥರ್ಡ್ ಪಾರ್ಟಿ ವಿಮೆ ಹೊಂದಿರಲೇಬೇಕಿದ್ದು, ಎದುರಾಳಿ ವಾಹನವು ಅಪಘಾತಕ್ಕೀಡಾಗಿ ಅದರಲ್ಲಿ ಜೀವಹಾನಿಯಾಗಿ ಇಲ್ಲವೇ ವಾಹನಕ್ಕೆ ಹಾನಿಯಾದ ಸಂದರ್ಭದಲ್ಲಿ ನಷ್ಟ ಪರಿಹಾರಕ್ಕಾಗಿ ಥರ್ಡ್ ಪಾರ್ಟಿ ವಿಮೆ ವಾಹನ ಮಾಲೀಕರ ನೆರವಿಗೆ ಬರಲಿದೆ. ಹೀಗಾಗಿ ಈ ನಿಯಮವನ್ನು ಈಗಾಗಲೇ ಕಡ್ಡಾಯಗೊಳಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಮುಂಬರುವ ದಿನಗಳಲ್ಲಿ ಇದೇ ಥರ್ಡ್ ಪಾರ್ಟಿ ವಿಮಾ ಪಾಲಿಸಿಯಲ್ಲಿ ಕೆಲವು ಬದಲಾವಣೆಗೆ ಮುಂದಾಗಿದೆ.

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ಹೌದು, ಅಪಘಾತದ ಸಂದರ್ಭದಲ್ಲಿ ಸಾವನ್ನಪ್ಪಿದವರಿಗೆ ಇತ್ತೀಚೆಗೆ ಪರಿಹಾರದ ಮೊತ್ತವನ್ನು ದ್ವಿಗುಣಗೊಳಿಸಿರುವ ಕೇಂದ್ರ ಸರ್ಕಾರವು ಥರ್ಡ್ ಪಾರ್ಟಿ ವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತಗಳ ಏರಿಕೆಗೆ ಮುಂದಾಗಿದ್ದು, ಇನ್ಸುರೆನ್ಸ್ ದರ ನಿಗದಿಯ ಮಾನದಂಡಗಳಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದೆ.

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ಹೀಗಾಗಿ ಕಾರು ಖರೀದಿ ಪ್ರಕ್ರಿಯೆಯು ಇನ್ಮುಂದೆ ಮತ್ತಷ್ಟು ದುಬಾರಿಯಾಗಿ ಪರಿಣಮಿಸಲಿದ್ದು, ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ (IRDAI) ಸಂಸ್ಥೆಯ ಶಿಫಾರಸ್ಸು ಅನ್ವಯ ಹೆಚ್ಚು ತಪ್ಪು ಮಾಡುವ ವಾಹನ ಮಾಲೀಕರಿಗೆ ಹೆಚ್ಚು ಇನ್ಸುರೆನ್ಸ್ ದರವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲು ಯೋಜನೆ ರೂಪಿಸಿದೆ.

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ವಿಮಾ ಪ್ರೀಮಿಯಂ ಮೊತ್ತ ಪಾವತಿಸುವಲ್ಲಿ ಆಗುತ್ತಿರುವ ಕೆಲವು ಲೋಪಗಳನ್ನು ಸರಿಪಡಿಸಲು ಟೆಲಿಮ್ಯಾಟ್ರಿಕ್ಸ್ ತಂತ್ರಜ್ಞಾನ ಬಳಕೆಗೆ ಮುಂದಾಗಿದ್ದು, ಕಾರು ಮಾಲೀಕರ ಚಾಲನಾ ಪದ್ದತಿಯ ಮೇಲೆ ಹೆಚ್ಚಿನ ಮಟ್ಟದ ದರ ನಿಗದಿ ಮಾಡುವ ಬಗೆಗೆ ಚಿಂತನೆ ನಡೆಸಲಾಗಿದೆ. ಈ ಯೋಜನೆಯನ್ನು ಪ್ರಾಯೋಗಿಕ ದೆಹಲಿ ಮತ್ತು ಸುತ್ತುಮತ್ತಲಿನ ಎನ್‌ಸಿಆರ್ ನಗರ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದ್ದು, ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ.

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ಟೆಲಿಮ್ಯಾಟ್ಕಿಕ್ಸ್ ತಂತ್ರಜ್ಞಾನವನ್ನು ಕಾರುಗಳಲ್ಲಿ ಅಳವಡಿಸಿದ್ದಲ್ಲಿ ಕಾರು ಮಾಲೀಕನು ಸಾರಿಗೆ ನಿಯಮಗಳಿಗೆ ಅನುಗುಣವಾಗಿ ಚಾಲನೆ ಮಾಡುತ್ತಿದ್ದಾನೋ ಇಲ್ಲವೋ ಅಥವಾ ಸಾರಿಗೆ ನಿಯಮಗಳಿಗೆ ವಿರುದ್ದವಾಗಿ ಬೇಕಾಬಿಟ್ಟಿ ಚಾಲನೆ ಮಾಡುತ್ತಾನೋ ಎನ್ನುವುದನ್ನ ಟೆಲಿಮ್ಯಾಟ್ರಿಕ್ ತಂತ್ರಜ್ಞಾನವು ಸಂಪೂರ್ಣ ಮಾಹಿತಿ ಕಲೆಹಾಕುತ್ತಿರುತ್ತೆ.

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ಒಂದು ವೇಳೆ ಅಪಘಾತಗಳನ್ನು ಮಾಡಿ ಪರಿಹಾರಕ್ಕಾಗಿ ವಿಮಾ ಸಂಸ್ಥೆಗಳಿಗೆ ಬಳಿ ಹೋದಾಗ ಟೆಲಿಮ್ಯಾಟ್ರಿಕ್ಸ್ ತಂತ್ರಜ್ಞಾನ ಸಹಾಯದಿಂದ ಕಾರು ಮಾಲೀಕನ ಬಂಡವಾಳವನ್ನು ಬಿಚ್ಚಿಡಲಾಗುತ್ತೆ. ಆಗ ಬೇಕೆಂದೇ ತಪ್ಪು ಮಾಡಿದ್ದಲ್ಲಿ ಕಾರು ಮಾಲೀಕನಿಂದ ಹೆಚ್ಚುವರಿ ವಿಮಾ ಮೊತ್ತವನ್ನು ವಸೂಲಿ ಮಾಡುವ ಪದ್ಧತಿ ಇದಾಗಿದೆ.

MOST READ: ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರಿಗೆ ಹೊಸ ಮಾರ್ಗ ಸೂಚಿಸಿದ ಬೆಂಗಳೂರು ಪೊಲೀಸರು..!

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ಈ ಹೊಸ ಪದ್ದತಿ ಈಗಾಗಲೇ ವಿದೇಶಿಗಳಲ್ಲಿ ಜಾರಿಗೆಯಲ್ಲಿದ್ದು, ಭಾರತದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಈ ಯೋಜನೆಯನ್ನು ಪರಿಚಯಿಸುವ ಸಲುವಾಗಿ ಕೇಂದ್ರ ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿರುವ ಐಆರ್‌ಡಿಎಆರ್ ಸಂಸ್ಥೆಯು ಸದ್ಯದಲ್ಲೇ ವಾಹನ ಮಾಲೀಕರಿಗೆ ಭರ್ಜರಿ ಶಾಕ್ ನೀಡಲು ತಯಾರಿ ನಡೆಸಿದೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ಮೋಟಾರು ವಿಮೆಯ ಅಗತ್ಯವೇನು?

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ.

MOST READ: ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡದ ಜೊತೆ ಹೆಚ್ಚುವರಿ ಇನ್ಸುರೆನ್ಸ್ ಪಾವತಿಸಬೇಕಾಗುತ್ತೆ ಹುಷಾರ್..!

ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

Most Read Articles

Kannada
English summary
Vehicle Insurance Premium To Increase Based On Traffic Violations. Read in Kannada.
Story first published: Monday, September 9, 2019, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more