ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಫೋಕ್ಸ್ ವ್ಯಾಗನ್ ಆ್ಯಮಿಯೋ
ಫೋಕ್ಸ್ ವ್ಯಾಗನ್ ಇಂಡಿಯಾ ಸದ್ದಿಲ್ಲದೆ ಆ್ಯಮಿಯೋ ಜಿಟಿ-ಲೈನ್ ಕಾರನ್ನು ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಪೋಕ್ಸ್ ವ್ಯಾಗನ್ ಹೊಸ ಪೊಲೊ ಮತ್ತು ವೆಂಟೊ ಫೇಸ್‍ಲಿಫ್ಟ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಫೋಕ್ಸ್ ವ್ಯಾಗನ್ ಆ್ಯಮಿಯೋ ಕಾರನ್ನು ಬಿಡುಗಡೆ ಮಾಡಿದ್ದಾರೆ. ಭಾರತದ ಎಕ್ಸ್ ಶೋ ರೂಂ ಪ್ರಕಾರ ಇದರ ಬೆಲೆ 9.90 ಲಕ್ಷ ವಾಗಿದೆ.

ಹೊಸ ಫೋಕ್ಸ್ ವ್ಯಾಗನ್ ಆ್ಯಮಿಯೋ ಜಿಟಿ ಲೈನ್ ಹೈಲೈನ್ ಡೀಸೆಲ್ ಟ್ರಿಮ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಹೊಸ ಕಾರು ತಮ್ಮ ಸಂಸ್ಥೆಯ ಇತರ ಕಾರುಗಳಂತೆ ಕಾಸ್ಮೆಟಿಕ್ ಅಪ್‍ಡೇಟ್‍ನಲ್ಲಿ ಬರುತ್ತಿದೆ. ಈ ಕಾರು ಬ್ಲ್ಯಾಕ್ ರೂಫ್, ಬ್ಲ್ಯಾಕ್ ಒಆರ್‍ವಿಎಂಎಸ್ ಮತ್ತು ಬ್ಲ್ಯಾಕ್ ಬೂಟ್ ಲಿಪ್ ಸ್ಪಾಯ್ಲರ್ ಮತ್ತು ಜಿಟಿ-ಲೈನ್ ಡೆಕಲ್‍ಗಳನ್ನು ಒಳಗೊಂಡಿದೆ. ಫೋಕ್ಸ್ ವ್ಯಾಗನ್ ಆ್ಯಮಿಯೋ ತಮ್ಮ ಸಂಸ್ಥೆಯ ಇತರ ಕಾರುಗಳಲ್ಲಿ ಇರುವಂತಹ ಸನ್‍ಸೆಟ್ ರೆಡ್ ಬಣ್ಣದಲ್ಲಿ ಲಭ್ಯವಿದೆ.

ಪೋಕ್ಸ್ ವ್ಯಾಗನ್ ಆ್ಯಮಿಯೋ ಜಿಟಿ-ಲೈನ್ ಕೆಲವು ಬದಲಾವಣೆನ್ನು ಮಾಡಿದ್ದು, ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಫ್ರಂಟ್ ಮತ್ತು ರೇರ್ ಸೆಂಟ್ರಲ್ ಆರ್ಮರೆಸ್ಟ್, ಆಟೋಮ್ಯಾಟಿಕ್ ರೈನ್ ಸೆನ್ಸಾರ್ ವೈಪರ್, ದೊಡ್ದ ಆಕಾರದ ಟಚ್‍ಸ್ಕ್ರೀನ್ ಇನ್ಪೋಟೈನ್‍ಮೆಂಟ್ ಸಿಸ್ಟಮ್ ನಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಫೋಕ್ಸ್ ವ್ಯಾಗನ್ ಆ್ಯಮಿಯೋ 1.5 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಹೊಂದಿದ್ದು, ಇದು 109ಬಿಎಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದೆ. ಎಂಜಿನ್‍ಗೆ 7-ಸ್ಪೀಡ್ ಆಟೊಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಫೋಕ್ಸ್ ವ್ಯಾಗನ್ ಇಂಡಿಯಾ ಇತ್ತೀಚೆಗೆ ಎರಡು ಮಾದರಿಗಳಲ್ಲಿ ಹೊಸ ಜಿಟಿ-ಲೈನ್‍ನೊಂದಿಗೆ ಪೊಲೊ ಮತ್ತು ವೆಂಟೊ ಫೇಸ್‍ಲಿಫ್ಟ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದರು. ಭಾರತದ ಎಕ್ಸ್ ಶೋ ರೂಂ ಪ್ರಕಾರ ಪ್ರಾರಂಭಿಕ ಬೆಲೆ ರೂ. 5.82 ಲಕ್ಷ ಮತ್ತು ರೂ 8.76 ಲಕ್ಷ ವಾಗಿದೆ.

ಬಿಡುಗಡೆಗೊಂಡ ಎರಡು ಮಾದರಿಗಳು ಹಲವು ಬದಲಾವಣೆಗಳನ್ನು ಹೊಂದಿದ್ದು, ಪೋಲೊ ಫೇಸ್‍ಲಿಫ್ಟ್ ನಲ್ಲಿ ಸ್ಪೋರ್ಟಿಯರ್ ಸೈಡ್ ಸ್ಕರ್ಟ್, ಸ್ಮೋಕ್ಡ್ ಎಲ್‌ಇಡಿ ಹೆಡ್‌ಲ್ಯಾಂಪ್, ಜಿಟಿಐ ಹನಿಕೂಂಬ್ ಫ್ರಂಟ್ ಗ್ರಿಲ್, ಹೊಸ ವಿನ್ಯಾಸದ ಫ್ರಂಟ್ ಹಾಗೂ ರೇರ್ ಬಂಪರ್, ಸ್ಮಾರ್ಟ್ ಲುಕಿಂಗ್ ಎಲ್ಇಡಿ ಟೇಲ್ ಲೈಟ್ ಹಾಗೂ ಹೊಸ ಡಿಫ್ಯೂಸರ್ ಅನ್ನು ಅಳವಡಿಸಿದೆ.

ಫೋಕ್ಸ್‌ವ್ಯಾಗನ್ ವೆಂಟೊ ಕಾರ್ ಅನ್ನು 1.2 ಲೀಟರಿನ ಟಿಎಸ್‌ಐ ಪೆಟ್ರೋಲ್, 1.5 ಲೀಟರಿನ ಟಿಡಿಐ ಡೀಸೆಲ್ ಹಾಗೂ 1.6 ಲೀಟರಿನ ಎಂಪಿಐ ಪೆಟ್ರೋಲ್ ಎಂಜಿನ್ ಹೊಂದಿದೆ. ಪೊಲೊ ಹಾಗೂ ವೆಂಟೊ ಕಾರುಗಳಲ್ಲಿ ಎಂಜಿನ್ ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 7 ಸ್ಪೀಡಿನ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅಳವಡಿಸಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಫೋಕ್ಸ್ ವ್ಯಾಗನ್ ಇತ್ತೀಚೆಗೆ ತಮ್ಮ ಹೊಸ ಇಂಡಿಯಾ 2.0 ಯೋಜನೆಯ ಭಾಗವಾಗಿ ಕಂಪನಿಯು ಸ್ಕೋಡಾ ಆಟೋ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ ಎಂದು ಘೋಷಿಸಿತು. ದೇಶಿಯ ಮಾರುಕಟ್ಟೆಯಲ್ಲಿ ಈ ಎರಡು ಕಂಪನಿಗಳ ವಿಲೀನದಿಂದ ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಇಂಡಿಯಾ ಎಂಬ ಹೊಸ ಉದ್ಯಮಕ್ಕೆ ನಾಂದಿ ಹಾಡಲಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಫೋಕ್ಸ್ ವ್ಯಾಗನ್ ಆ್ಯಮಿಯೋ ದೇಶದ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ತಮ್ಮ ಶ್ರೇಣಿಯಲ್ಲಿ ಜನಪ್ರಿಯತೆಯನ್ನು ಹೊಂದಿದ ಮಾದರಿಯಾಗಿದೆ. ಫೋಕ್ಸ್ ವ್ಯಾಗನ್ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಫೋಕ್ಸ್ ವ್ಯಾಗನ್ ಆ್ಯಮಿಯೋ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್, ಫೋರ್ಡ್ ಆಸ್ಪೈರ್ ಮತ್ತು ಹೋಂಡಾ ಅಮೇಜ್ ಕಾರಿಗೆ ಪೈಪೋಟಿಯನ್ನು ನೀಡಲಿದೆ.


Click it and Unblock the Notifications








