Just In
Don't Miss!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- News
ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೂಪರ್ ಕಾರುಗಳನ್ನು ಹೊಂದಿರುವ ಭಾರತೀಯ ಮಹಿಳೆಯರಿವರು..!
ಸೂಪರ್ ಕಾರ್‍ಗಳನ್ನು ರೈಡ್ ಮಾಡಬೇಕೆಂಬ ಕ್ರೇಜ್ ಹಲವರಿಗಿದೆ. ಅದರಲ್ಲೂ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಸೂಪರ್ ಕಾರ್ ಮೇಲೆ ಹೆಚ್ಚು ಕ್ರೇಜ್ ಹೊಂದಿರುತ್ತಾರೆ. ಭಾರತದಲ್ಲಿ ಕೇವಲ ಪುರುಷರು ಮಾತ್ರವಲ್ಲದೇ ಮಹಿಳೆಯರು ಕೂಡ ದುಬಾರಿ ಬೆಲೆಯ ಸೂಪರ್ ಕಾರುಗಳನ್ನು ಹೊಂದಿದ್ದಾರೆ.

ಕಳೆದ ಎರಡು ಮೂರು ವರ್ಷಗಳಿಂದ ಭಾರತದಲ್ಲಿ ದುಬಾರಿ ಕಾರುಗಳನ್ನು ಖರೀದಿಸುವವರ ಸಂಖ್ಖೆ ಅಧಿಕವಾಗಿದೆ. ಆದರೆ ನಮಗೆ ತಿಳಿದಿರುವ ಹಾಗೆ ಸ್ಟಾರ್ ಆಟಗಾರರು ಮತ್ತು ಸಿನಿಮಾ ನಟರು ದುಬಾರಿ ಸೂಪರ್ ಕಾರುಗಳನ್ನು ಹೊಂದಿರುತ್ತಾರೆ. ದುಬಾರಿ ಸೂಪರ್ ಕಾರುಗಳನ್ನು ಹೊಂದಿರುವ ಭಾರತದ ಮಹಿಳೆಯರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತೇವೆ.

ಶಿಲ್ಪಾ ಶೆಟ್ಟಿ- ಬಿಎಂಡಬ್ಲ್ಯು ಐ 8
ಮಂಗಳೂರು ಮೂಲದ ಶಿಲ್ಪಾ ಶೆಟ್ಟಿಯವರು ಬಾಲಿವುಡ್‍ನ ಪ್ರಖ್ಯಾತಿ ನಟಿ. ಇವರು ಬಾಜಿಗರ್ ಚಿತ್ರದ ಮೂಲಕ ಸಿನಿ ಪಯಣವನ್ನು ಆರಂಭಿಸಿ ಬಾಲಿವುಡ್ ಅಂಗಳದಲ್ಲಿ ಮಿಂಚಿದ ನಟಿ. ಇವರು ತನ್ನ ಪತಿಯೊಂದಿಗೆ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಇವರ ಪತಿ ಹೊಂದಿರುವ ಐಷಾರಾಮಿ ಕಾರುಗಳ ಜೊತೆಗೆ ಇವರೂ ಸಹ ದುಬಾರಿ ಬೆಲೆಯ ಬಿಎಂಡಬ್ಲ್ಯು ಐ 8 ಎಲೆಕ್ಟ್ರಿಕ್ ಸ್ಪೋಟ್ಸ್ ಕಾರ್ ಅನ್ನು ಹೊಂದಿದ್ದಾರೆ.

ಸುಪ್ರಸಿದ್ದ ಉದ್ಯಮಿ ರಾಜ್ ಕುಂದ್ರಾ ಅವರ ಪತ್ನಿ ಶಿಲ್ಪಾ ಶೆಟ್ಟಿ ಒಂದೆರೆಡು ವರ್ಷಗಳ ಹಿಂದೆ ಬಿಎಂಡಬ್ಲ್ಯು ಐ 8 ಕಾರನ್ನು ಖರೀದಿಸಿದ್ದಾರೆ. ಭಾರತದಲ್ಲಿ ಈ ಕಾರ್ ಅನ್ನು ಹೊಂದಿರುವರ ಕೆಲವೇ ಮಾಲೀಕರಲ್ಲಿ ಇವರು ಒಬ್ಬರು. ಬಿಎಂಡಬ್ಲ್ಯು ಐ 8 ಕಾರು ಹೈಬ್ರಿಡ್ ಸ್ಪೋಟ್ಸ್ ಕಾರ್ ಆಗಿದೆ. ಈ ಕಾರಿನಲ್ಲಿರುವ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 228 ಬಿಎಚ್‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಕೇವಲ 4.4 ಸೆಕೆಂಡ್‍ಗಳಲ್ಲಿ ಗಂಟೆಗೆ 0-100 ಕಿ.ಮೀ ಅಕ್ಸೆಲೆರೆಷನ್ ಅನ್ನು ಮುಟ್ಟುತ್ತದೆ ಮತ್ತು ಟಾಪ್ ಸ್ಫೀಡ್ ಪ್ರತಿ 250 ಕಿ.ಮೀ ವೇಗವನ್ನು ಹೊಂದಿರುತ್ತದೆ.

ಸುಮನ್ ಮೆಹ್ತಾ - ಲ್ಯಾಂಬೋರ್ಗಿನಿ ಹುರಾಕಾನ್
ಸುಮನ್ ಮೆಹ್ತಾ ಅವರು 2016ರಲ್ಲಿ ತಮ್ಮ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಹುರಾಕಾನ್ ಕಾರಿನಲ್ಲಿ ಅಪಘಾತವಾಗಿದ್ದ ಕಾರಣಕ್ಕೆ ಸುದ್ದಿಯಾಗಿದ್ದರು. ಈ ದುಬಾರಿ ಐಷಾರಾಮಿ ಕಾರನ್ನು ಅವರ ಪತಿ ಉಡುಗೊರೆಯಾಗಿ ನೀಡಿದ್ದರು. ಅವರ ಪತಿ ಪ್ರಖ್ಯಾತ ರಾಜಕಾರಣಿಯಾಗಿದ್ದಾರೆ.

ಹಾರ್ದ್ ಕೌರ್- ಫೆರಾರಿ 458 ಇಟಾಲಿಯಾ
ಭಾರತದಲ್ಲಿ ಫೆರಾರಿ ಕಾರುಗಳನ್ನು ಹೊಂದಿರುವ ಮಹಿಳೆಯಲ್ಲಿ ತರಣ್ ಕೌರ್ ಧಿಲ್ಲಾನ್ ಅಲಿಯಾಸ್ ಹಾರ್ದ್ ಕೌರ್ ಅವರು ಸಹ ಒಬ್ಬರು. ಇವರು 458 ಇಟಾಲಿಯಾ ಸ್ಪೋಟ್ಸ್ ಕೂಪೆ ಕಾರಿನ ಮಾಲೀಕರಾಗಿದ್ದಾರೆ. ಹಿಪ್ - ಹಾಪ್ ಗಾಯಕಿ, ಏಕ್ ಗ್ಲಾಸಿ ನಂತಹ ಸೂಪರ್‍ಹಿಟ್ ಟ್ರ್ಯಾಕ್‍ಗಳಿಂದ ಜನಪ್ರಿಯರಾಗಿದ್ದಾರೆ. ಇವರು ಬಾಲಿವುಡ್ ನಟಿ ಮತ್ತು ಹಿನ್ನಲೆ ಗಾಯಕಿ.

ಇವರು ಹೊಂದಿರುವ ಫೆರಾರಿ 458 ಇಟಾಲಿಯಾ ಕಾರು ಮರನೆಲ್ಲೋ ಕಂಪನಿಯು ತಯಾರಿಸಿದ ಕೊನೆಯ ನ್ಯಾಚುರಲ್ ವಿ 8 ಎಂಜಿನ್ ಸ್ಪೋಟ್ಸ್ ಕಾರುಗಳಲ್ಲಿ ಒಂದಾಗಿದೆ. ಇವರು ಜನಪ್ರಿಯ ಕಾರು ಡೀಲರ್ ಬಿಗ್ ಬಾಯ್ಜ್ ಟಾಯ್ಜ್(ಬಿಬಿಟಿ) ಯಿಂದ ಖರೀದಿಸಿದ್ದಾರೆ. ಫೆರಾರಿ 458 ಇಟಾಲಿಯ ಕಾರು 4.5 ಲೀಟರ್ ವಿ 8 ಎಂಜಿನ್ 9,000 ಆರ್‍ಪಿಎಂನಲ್ಲಿ 562 ಬಿಎಚ್‍ಪಿ ಪವರ್ ಮತ್ತು 6,000 ಆರ್‍ಪಿಎಂನಲ್ಲಿ 540 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಫೆರಾರಿ 458 ಇಟಾಲಿಯಾ ಟಾಪ್ ಸ್ಫೀಡ್ ಪ್ರತಿ ಗಂಟೆಗೆ ಕೇವಲ 0-100 ಕಿ.ಮೀ ಅಕ್ಸೆಲೆರೆಷನ್ ಅನ್ನು 3.4 ಸೆಕೆಂಡುಗಳಲ್ಲಿ ಮುಟ್ಟುತ್ತದೆ. ಗಂಟೆಗೆ 340 ಕಿ.ಮೀ ವೇಗವನ್ನು ಹೊಂದಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮಲ್ಲಿಕಾ ಶೆರಾವತ್- ಲಂಬೋಂರ್ಘಿನಿ ಅವೆಂಟಡಾರ್ ಎಸ್‍ವಿ
ಈ ಪಟ್ಟಿಯಲ್ಲಿರುವ ಅತ್ಯಂತ ದುಬಾರಿ ಮತ್ತು ಅತ್ಯಂತ ಪವರ್‍ಫುಲ್ ಕಾರು, ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಬಳಿ ಇರುವ ಲಂಬೋಂರ್ಘಿನಿ ಅವೆಂಟಡಾರ್ ಎಸ್‍ವಿ ಕಾರ್ ಆಗಿದೆ. ಇದನ್ನು ಖರೀದಿಸುವಾಗ ಸುಮಾರು 5 ಕೋಟಿ ರೊ. ವೆಚ್ಚವಾಗಿತ್ತು. ಅವೆಂಡಾರ್ 6.5 ಲೀಟರ್ ವಿ 12 ಎಂಜಿನ್ 740 ಬಿಎಚ್‍ಪಿ ಪವರ್ ಮತ್ತು 690 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 7-ಸ್ಪೀಡ್ ಸೆಮಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಅವೆಂಡಾರ್ ಎಸ್‍ವಿ ಗಂಟೆಗೆ 0-100 ಕಿ.ಮೀ ಅಕ್ಸೆಲೆರೆಷನ್ ಅನ್ನು ಕೇವಲ 2.8 ಸೆಕೆಂಡುಗಳಲ್ಲಿ ಮುಟ್ಟುತ್ತದೆ. ಟಾಪ್ ಸ್ಫೀಡ್ ಪ್ರತಿ ಗಂಟೆಗೆ 350 ಕಿ.ಮೀಗಳಾಗಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸ್ವಾತಿ ಬಗ್ಗಾ - ಫೆರಾರಿ ಕ್ಯಾಲಿಫೋರ್ನಿಯಾ ಟಿ
ಸ್ವಾತಿ ಬಗ್ಗಾ ಭಾರತದಲ್ಲಿ ಪ್ರಸಿದ್ದ ಮಹಿಳೆ ಉದ್ಯಮಿಯಾಗಿದ್ದಾರೆ. ದೆಹಲಿಯ ಸ್ವಾತಿ ಹಲವಾರು ದುಬಾರಿ ಕಾರುಗಳ ಒಡತಿ. ಅವರು ಎಫ್ 430 ಸ್ಪೈಡರ್ ಮತ್ತು 458 ಇಟಾಲಿಯಾ ಕಾರಿನ ಒಡತಿಯಾಗಿದ್ದಾರೆ. ಅವರು ಫೆರಾರಿ ಕ್ಯಾಲಿಫೋರ್ನಿಯಾ ಟಿ, ಬಿಎಂಡಬ್ಲ್ಯು ಝೀ4, ಜಾಗ್ವಾರ್ ಎಫ್-ಟೈಪ್ ವಿ 6ಎಸ್ ಕಾರ್ ಅನ್ನು ಹೊಂದಿದ್ದಾರೆ. ಇವರ ಬಳಿ ಇರುವ ಕ್ಯಾಲಿಫೋರ್ನಿಯಾ ಟೀ ಕನ್ವರ್ಟಿಬಲ್ ಕಾರ್ ಆಗಿದ್ದು, ಇದು ಇನ್ನು ಮುಂದೆ ಮಾರಾಟ ಮಾಡುವುದಿಲ್ಲ. ಈ ಕಾರು 3.9 ಲೀಟರ್ ಟ್ವಿನ್-ಟರ್ಬೊ ವಿ 8 ಎಂಜಿನ್ 553 ಬಿಎಚ್‍ಪಿ ಪವರ್ ಮತ್ತು 755 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂಭಾಗದ ವ್ಹೀಲ್‍ಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಿದ್ದಾರೆ. ಕ್ಯಾಲಿಫೋನಿಯಾ ಟಿ ಕೇವಲ 3.6 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ಅಕ್ಸೆಲೆರೆಷನ್ ಅನ್ನು ಮುಟ್ಟುತ್ತದೆ. ಟಾಪ್ ಸ್ಫೀಡ್ ಪ್ರತಿ ಗಂಟೆಗೆ 315 ಕಿ.ಮೀ ವೇಗವನ್ನು ಹೊಂದಿದೆ.

ಶೀತಲ್ ಡುಗರ್ - ಲ್ಯಾಂಬೋರ್ಗಿನಿ ಹುರಾಕನ್
ಫೆರಾರಿಗಿಂತ ಲ್ಯಾಂಬೋರ್ಗಿನಿ ಹೆಚ್ಚು ಮಾರಾಟವಾಗಿರುವ ಮಾರುಕಟ್ಟೆಗಳಲ್ಲಿ ಭಾರತವು ಸಹ ಒಂದಾಗಿದೆ. ರೇಜಿಂಗ್ ಬುಲ್‍ನ ಹೆಮ್ಮೆಯನ್ನು ಹೆಚ್ಚಿಸಿರುವುದು ಕೋಲ್ಕತ್ತಾದ ಶೀತಲ್ ಡುಗರ್ ಎಂಬ 40 ವರ್ಷದ ಮಹಿಳೆ. ಲ್ಯಾಂಬೋರ್ಗಿನಿ ಹುರಾಕನ್ ಖರೀದಿಸಿದ ಮೊದಲ ಭಾರತೀಯ ಮಹೆಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಆಕೆ ಹೊಂದಿರುವ ಕಾರು ಗೋಲ್ಡ್ ಮಾದರಿಯಾಗಿದೆ. ಹುರಾಕನ್ ಕಾರು 5.2 ಲೀಟರ್ ವಿ 10 ಎಂಜಿನ್ 8,250 ಆರ್‍ಪಿಎಂನಲ್ಲಿ 610 ಬಿಎಚ್‍ಪಿ ಪವರ್ ಮತ್ತು 6,500 ಆರ್‍ಪಿಎಂ ನಲ್ಲಿ 560 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹುರಾಕನ್ 3.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಅಕ್ಸೆಲೆರೆಷನ್ ಅನ್ನು ಮುಟ್ಟುತ್ತದೆ ಮತ್ತು ಟಾಪ್ ಸ್ಫೀಡ್ ಪ್ರತಿ ಗಂಟೆಗೆ 325 ಕಿ.ಮೀ ವೇಗವನ್ನು ಹೊಂದಿದೆ.