'ವರ್ಲ್ಡ್ ಬೆಸ್ಟ್ ಅರ್ಬನ್ ಕಾರ್' ಪ್ರಶಸ್ತಿಗೆ ಪಾತ್ರವಾದ ಹ್ಯುಂಡೈ ಸ್ಯಾಂಟ್ರೋ..!
ಕಾರುಗಳ ಉತ್ಪಾದನೆ ಮತ್ತು ವಿನ್ಯಾಸಗಳಿಗೆ ಜಾಗತಿಕ ಮಟ್ಟದಲ್ಲಿ ನೀಡಲಾಗುವ 'ವರ್ಲ್ಡ್ ಕಾರ್ ಆಫ್ ದಿ ಇಯರ್ 2019 ಪ್ರಶಸ್ತಿ'ಗಾಗಿ ವಿಜೇತ ಕಾರುಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತದ ಜನಪ್ರಿಯ ಹ್ಯುಂಡೈ ಸ್ಯಾಂಟ್ರೋ ಕಾರು ಕೂಡಾ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿದೆ.

ವರ್ಲ್ಡ್ ಕಾರ್ ಆಫ್ ದಿ ಇಯರ್ 2019 ಪ್ರಶಸ್ತಿಯನ್ನು ಒಟ್ಟು ಐದು ವಿಭಾಗಗಳಲ್ಲಿ ಪ್ರಕಟಿಸಲಾಗಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರ ನೆಚ್ಚಿನ ಆಯ್ಕೆಯಾಗಿರುವ ಹ್ಯುಂಡೈ ಸ್ಯಾಂಟ್ರೋ ಕಾರು ವರ್ಲ್ಡ್ ಅರ್ಬನ್ ಕಾರ್ ಆಫ್ ದಿ ಇಯರ್ ವಿಭಾಗದಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದೆ. ಹಾಗಾದ್ರೆ ವಿವಿಧ ವಿಭಾಗದಲ್ಲಿ ಆಯ್ಕೆಯಾದ ಕಾರುಗಳು ಯಾವವು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ವರ್ಲ್ಡ್ ಅರ್ಬನ್ ಕಾರ್ ಆಫ್ ದಿ ಇಯರ್
ಆಡಿ ಎ1
ಹ್ಯುಂಡೈ ಸ್ಯಾಂಟ್ರೋ
ಕಿಯಾ ಸೌಲ್
ಸೀಟ್ ಅರೋನಾ
ಸುಜುಕಿ ಜಿಮ್ನಿ

ವರ್ಲ್ಡ್ ಲಗ್ಷುರಿ ಕಾರ್ ಆಫ್ ದಿ ಇಯರ್
ಆಡಿ ಎ7
ಆಡಿ ಕ್ಯೂ8
ಮರ್ಸಿಡಿಸ್ ಬೆಂಝ್ ಸಿಎಲ್ಎಸ್
ಮರ್ಸಿಡಿಸ್ ಬೆಂಝ್ ಜಿಎಲ್ಇ
ಫೋಕ್ಸ್‌ವ್ಯಾಗನ್ ಟೌರೆಗ್

ವರ್ಲ್ಡ್ ಪರ್ಫಾಮೆನ್ಸ್ ಕಾರ್ ಆಫ್ ದಿ ಇಯರ್
ಆಸ್ಟನ್ ಮಾರ್ಟಿನ್ ವ್ಯಾಂಟೆಜ್
ಬಿಎಂಡಬ್ಲ್ಯು ಎಂ2 ಕಾಂಪಿಟೆಷನ್
ಹ್ಯುಂಡೈ ವೆಲೊಸ್ಟೆರ್ ಎನ್
ಮೆಕ್ಲೆರೆನ್ 720ಎಸ್
ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ 4-ಡೋರ್ ಕೂಪೆ

ವರ್ಲ್ಡ್ ಗ್ರೀನ್ ಕಾರ್ ಆಫ್ ದಿ ಇಯರ್(ಲಗ್ಷುರಿ ಎಲೆಕ್ಟ್ರಿಕ್ ಕಾರುಗಳು)
ಆಡಿ ಇ-ಟ್ರಾನ್
ಹೋಂಡಾ ಕ್ಲ್ಯಾರಿಟಿ
ಹ್ಯುಂಡೈ ನೆಕ್ಸೋ
ಜಾಗ್ವಾರ್ ಐ-ಪೇಸ್
ಕಿಯಾ ಇ-ನಿರೊ

ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್
ಸುಜುಕಿ ಜಿಮ್ನಿ
ವೊಲ್ವೋ ಎಕ್ಸ್‌ಸಿ40
ಜಾಗ್ವಾರ್ ಐ-ಪೇಸ್
ಜಾಗ್ವಾರ್ ಇ-ಪೇಸ್
ಸಿಟ್ರೊಯಿನ್ ಸಿ5 ಏರ್‌ಕ್ರಾಸ್

ಈ ಮೂಲಕ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಇತರೆ ಜನಪ್ರಿಯ ಕಾರುಗಳನ್ನು ಹಿಂದಿಕ್ಕಿರುವ ಸ್ಯಾಂಟ್ರೋ ಕಾರು ನಗರ ಪ್ರದೇಶಗಳ ಗ್ರಾಹಕರ ನೆಚ್ಚಿನ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪ್ರತಿಷ್ಠಿತ ಪ್ರಶಸ್ತಿ ಪಟ್ಟಿಯಲ್ಲಿ ಸುಜುಕಿ ನಿರ್ಮಾಣದ ಜಿಮ್ನಿ ಹೊರತುಪಡಿಸಿ ಇನ್ನುಳಿದ ಯಾವುದೇ ಭಾರತೀಯ ಕಾರುಗಳು ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿವೆ ಎನ್ನಬಹುದು.


Click it and Unblock the Notifications