ಕರೋನಾ ಕರಿ ನೆರಳು: ರದ್ದುಗೊಂಡ ಆಸ್ಟ್ರೇಲಿಯಾ ಫಾರ್ಮುಲಾ ಒನ್ ಸ್ಪರ್ಧೆ

ಕರೋನಾ ವೈರಸ್ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಕರೋನಾ ವೈರಸ್ ವೇಗವಾಗಿ ಹರಡುವುದರಿಂದ ಪರಿಸ್ಥಿತಿ ಬದಲಾಗಿದ್ದು, ಜನರು ಹೊರಗೆ ಹೋಗಲು ಹೆದರುತ್ತಿದ್ದಾರೆ. 2020ರ ಸಾಲಿನ ಮೊದಲ ಫಾರ್ಮುಲಾ -1 ರೇಸ್ ಈ ವಾರಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು.

ಕರೋನಾ ಕರಿ ನೆರಳು: ರದ್ದುಗೊಂಡ ಆಸ್ಟ್ರೇಲಿಯಾ ಫಾರ್ಮುಲಾ ಒನ್ ಸ್ಪರ್ಧೆ

ಈ ಸಮಯದಲ್ಲಿ, ಮೆಕ್ಲಾರೆನ್ ತಂಡದ ಕೆಲವರಲ್ಲಿ ಕರೋನಾ ವೈರಸ್ ಹರಡಿರುವುದಾಗಿ ವರದಿಯಾಗಿದೆ. ಇದರಿಂದಾಗಿ ಫಾರ್ಮುಲಾ -1 ತಂಡದ ಆಟಗಾರರು ಹಾಗೂ ಸಿಬ್ಬಂದಿಗಳು ಭಯಪಡುತ್ತಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಕರೋನಾ ವೈರಸ್ ತಮಗೂ ಹರಡಬಹುದು ಎಂಬ ಭಯ ಇದಕ್ಕೆ ಪ್ರಮುಖ ಕಾರಣ.

ಕರೋನಾ ಕರಿ ನೆರಳು: ರದ್ದುಗೊಂಡ ಆಸ್ಟ್ರೇಲಿಯಾ ಫಾರ್ಮುಲಾ ಒನ್ ಸ್ಪರ್ಧೆ

ಫಾರ್ಮುಲಾ -1 ರೇಸ್ ಅನ್ನು ಆಯೋಜಿಸುತ್ತಿರುವ ಎಫ್‌ಐಎ ಹಾಗೂ ಆಸ್ಟ್ರೇಲಿಯಾದ ಗ್ರ್ಯಾಂಡ್ ಪ್ರಿಕ್ಸ್ ಫಾರ್ಮುಲಾ -1 ರೇಸಿಂಗ್ ತಂಡಗಳೊಂದಿಗೆ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ, ಕರೋನಾ ವೈರಸ್ ಇತರರಿಗೆ ಹರಡುವ ಸಾಧ್ಯತೆಯನ್ನು ಚರ್ಚಿಸಲಾಯಿತು.

ಕರೋನಾ ಕರಿ ನೆರಳು: ರದ್ದುಗೊಂಡ ಆಸ್ಟ್ರೇಲಿಯಾ ಫಾರ್ಮುಲಾ ಒನ್ ಸ್ಪರ್ಧೆ

ಕರೋನಾ ಸೋಂಕು ಹರಡುವ ಸಾಧ್ಯತೆಯನ್ನು ಪರಿಗಣಿಸಿ ಸ್ಪರ್ಧೆಯನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಈ ವರ್ಷದ ಮೊದಲ ಫಾರ್ಮುಲಾ -1 ಕಾರ್ ರೇಸ್ ರದ್ದುಗೊಂಡಿದೆ.

ಕರೋನಾ ಕರಿ ನೆರಳು: ರದ್ದುಗೊಂಡ ಆಸ್ಟ್ರೇಲಿಯಾ ಫಾರ್ಮುಲಾ ಒನ್ ಸ್ಪರ್ಧೆ

ಈ ನಡುವೆ ಫೆರಾರಿ ತಂಡದ ಸಹ ಆಟಗಾರ ಸೆಬಾಸ್ಟಿಯನ್ ವೆಟ್ಟೆಲ್ ಮತ್ತು ಆಲ್ಫಾ ರೋಮಿಯೋ ತಂಡದ ಸಹ ಆಟಗಾರ ಕಿಮಿ ರಾಯ್ಕೊನೆನ್ ವಿಮಾನದಲ್ಲಿ ತವರಿಗೆ ವಾಪಸಾಗಿರುವ ಬಗ್ಗೆ ವರದಿಗಳಾಗಿವೆ.

ಕರೋನಾ ಕರಿ ನೆರಳು: ರದ್ದುಗೊಂಡ ಆಸ್ಟ್ರೇಲಿಯಾ ಫಾರ್ಮುಲಾ ಒನ್ ಸ್ಪರ್ಧೆ

ಪಂದ್ಯವನ್ನು ರದ್ದುಗೊಳಿಸುವ ಕುರಿತು ಮಾತುಕತೆಗಳು ಮಧ್ಯರಾತ್ರಿಯವರೆಗೆ ನಡೆದ ಕಾರಣಕ್ಕೆ ಇನ್ನು ಕೆಲವು ಸ್ಪರ್ಧಿಗಳು ಆಸ್ಟ್ರೇಲಿಯಾದಲ್ಲಿಯೇ ಉಳಿದು ಕೊಂಡಿದ್ದಾರೆ.

ಕರೋನಾ ಕರಿ ನೆರಳು: ರದ್ದುಗೊಂಡ ಆಸ್ಟ್ರೇಲಿಯಾ ಫಾರ್ಮುಲಾ ಒನ್ ಸ್ಪರ್ಧೆ

ಅಧಿಕಾರಿಗಳು ಮಧ್ಯರಾತ್ರಿಯವರೆಗೆ ಈ ಸಮಾಲೋಚನಾ ಸಭೆಯ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ. ಮುಂದಿನ ತಿಂಗಳು ಬಹ್ರೇನ್‌ನಲ್ಲಿ ನಡೆಯಲಿರುವ ಫಾರ್ಮುಲಾ -1 ಸ್ಪರ್ಧೆಯನ್ನು ಪ್ರೇಕ್ಷಕರು ಇಲ್ಲದೆ ನಡೆಸಲು ನಿರ್ಧರಿಸಲಾಗಿದೆ.

ಕರೋನಾ ಕರಿ ನೆರಳು: ರದ್ದುಗೊಂಡ ಆಸ್ಟ್ರೇಲಿಯಾ ಫಾರ್ಮುಲಾ ಒನ್ ಸ್ಪರ್ಧೆ

ಕರೋನಾ ವೈರಸ್ ಸೋಂಕು ಹೆಚ್ಚಾಗಿರುವ ಕಾರಣಕ್ಕೆ ಆಟಗಾರರು ಭಾಗವಹಿಸಲು ಹಿಂದೇಟು ಹಾಕುತ್ತಿದ್ದು, ಸಮಸ್ಯೆ ಮತ್ತೆ ಉದ್ಭವಿಸುತ್ತಿದೆ. ಆಟಗಾರರ ಮನವೊಲಿಸಿ ಮೋಟೋ ಜಿಪಿ ಬೈಕ್ ರೇಸಿಂಗ್ ನಡೆಸಲು ಪ್ರಯತ್ನಗಳು ನಡೆಯುತ್ತಿವೆ.

Article Published On: Saturday, March 14, 2020, 14:46 [IST]
English summary
2020 Australian Formula One car race cancelled officially. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+