ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ 2021ರ ರೋಗ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ನಿಸ್ಸಾನ್ ರೋಗ್ ಎಸ್‍ಯುವಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್-ಟ್ರಯಲ್ ಎಂಬ ಹೆಸರಿನಲ್ಲಿ ಈ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. 2021ರ ನಿಸ್ಸಾನ್ ಎಸ್‍ಯುವಿಯು ಇದರ ಹಿಂದಿನ ಮಾದರಿಗೆ ಹೋಲುತ್ತದೆ. ಆದರೆ ಹೊಸ ನಿಸ್ಸಾನ್ ರೋಗ್ ಎಸ್‍ಯುವಿಯು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ರೋಗ್ ಎಸ್‍ಯುವಿಯು ನಿಸ್ಸಾನ್ ವಿಷನ್ 2.0 ಕಾನ್ಸೆಪ್ಟ್‌ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

ಹೊಸ ರೋಗ್ ಎಸ್‍ಯುವಿಯು ನಿಸ್ಸಾನ್ ವಿಷನ್ 2.0 ಕಾನ್ಸೆಪ್ಟ್‌ ವಿ-ಮೋಷನ್ ಗ್ರಿಲ್ ಹೊಂದಿದೆ. ಈ ಹೊಸ ಮಾದರಿಯು ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಿದ ಬಂಪರ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

ಈ ಎಸ್‍ಯುವಿಯ ಮುಂಭಾಗ ಏರ್‍‍ಡ್ಯಾಮ್ ಮತ್ತು ಸ್ಕಫ್ ಪ್ಲೇಟ್ ಅನ್ನು ಹೊಂದಿದೆ. ಹೊಸ ತಲೆಮಾರಿನ ರೋಗ್ ಎಸ್‍ಯುವಿಯ ಹಿಂಭಾಗವು ಮಾರುಕಟ್ಟೆಯಲ್ಲಿರುವ ಮಾದರಿಯಂತೆ ಇರುತ್ತದೆ.

ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

ಹೊಸ ನಿಸ್ಸಾನ್ ಇಂಟಿರಿಯರ್ ನಲ್ಲಿ ಡ್ರೈವರ್ ಫಂಕ್ಷನ್ ಬಟನ್‌ಗಳೊಂದಿಗೆ ಹೊಸ ಸ್ಟೀಯರಿಂಗ್ ವ್ಹೀಲ್ಮತ್ತು ಫ್ಲೋಟಿಂಗ್ ಟೈಪ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

MOST READ: 370 ಕಿ.ಮೀ ಮೈಲೇಜ್ ನೀಡಲಿದೆ ಮಹೀಂದ್ರಾದ ಹೊಸ ಎಲೆಕ್ಟ್ರಿಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

ಈ ಇನ್ಫೋಟೈನ್‍ಮೆಂಟ್ ಸಿಸ್ಟಂ ನಲ್ಲಿ ಆಪಲ್ ಕಾರ್‍‍ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಹೋಂದಾಣಿಯಾಗಿದೆ. ಇದರೊಂದಿಗೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕಾಂಪ್ಯಾಕ್ಟ್ ಕ್ಲೈಮೇಂಟ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

ಹೊಸ ನಿಸ್ಸಾನ್ ಎಸ್‍ಯುವಿಯಲ್ಲಿ ಗ್ರಾಹಕರ ಸುರಕ್ಷತೆಗಾಗಿ ಹಲವಾರು ಫೀಚರ್‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಬಿಎಸ್ ಜೊತೆ ಇಬಿಡಿ, ಮಲ್ಟಿಪಲ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ಅಲಾರ್ಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಲೇನ್-ಅಸಿಸ್ಟ್ ಸಿಸ್ಟಂ, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್‌ಗಳು, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಇಮೊಬೈಲೈಸರ್ ಅನ್ನು ಒಳಗೊಂಡಿರುತ್ತದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ನಿಸ್ಸಾನ್ ರೋಗ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿರಲಿದೆ. ಭಾರತದಲ್ಲಿ ಯಾವ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯು ಇನ್ನು ಬಹಿರಂಗವಾಗಿಲ್ಲ.

ಅನಾವರಣವಾಯ್ತು ಹೊಸ ನಿಸ್ಸಾನ್ ರೋಗ್ ಎಸ್‍ಯುವಿ

2021ರ ನಿಸ್ಸಾನ್ ರೋಗ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಎಸ್‌ಯುವಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿರುವುದರಿಂದ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಬಹುದು. ನಿಸ್ಸಾನ್ ರೋಗ್ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2021 Nissan Rogue Revealed – Key Changes Explained. Read In Kanada.
Story first published: Wednesday, June 17, 2020, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X