Just In
Don't Miss!
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Sports
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಮೆ ಇಲ್ಲದೇ ಸಂಚರಿಸುತ್ತಿವೆ ದೇಶದಲ್ಲಿರುವ 57%ನಷ್ಟು ವಾಹನಗಳು
ವಿಮಾ ಮಾಹಿತಿ ಬ್ಯೂರೋ ತನ್ನ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯಲ್ಲಿ ವಾಹನ ವಿಮೆಗೆ ಸಂಬಂಧಿಸಿದ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ನಮ್ಮ ದೇಶದಲ್ಲಿ ಸುಮಾರು 57%ನಷ್ಟು ವಾಹನಗಳು ವಿಮೆಯಿಲ್ಲದೆ ಅಥವಾ ವಿಮೆಯನ್ನು ನವೀಕರಿಸದೆ ಓಡಾಡುತ್ತಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರಗಳ ನಿಧಾನಗತಿಯ ಸಂಚಾರ ವ್ಯವಸ್ಥೆ, ಅನಿಯಂತ್ರಿತ ವಿಮಾ ಕಂಪನಿಗಳು ಹಾಗೂ ಹೆಚ್ಚುತ್ತಿರುವ ಥರ್ಡ್ ಪಾರ್ಟಿ ಇನ್ಸ್ಯೂರೆನ್ಸ್ ಬೆಲೆಗಳು ಈ ಪರಿಸ್ಥಿತಿಗೆ ಕಾರಣವೆಂದು ವಿಮಾ ಮಾಹಿತಿ ಬ್ಯೂರೋ ತನ್ನ ವರದಿಯಲ್ಲಿ ತಿಳಿಸಿದೆ. ಅಂಕಿಅಂಶಗಳ ಪ್ರಕಾರ 2018-2019ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ವಿಮೆ ಮಾಡದ ವಾಹನಗಳ ಸಂಖ್ಯೆ 54%ನಷ್ಟಿತ್ತು.

ಈ ಪ್ರಮಾಣವು 2018-2019ರ ಆರ್ಥಿಕ ವರ್ಷದಲ್ಲಿ 57%ಗೆ ಏರಿಕೆಯಾಗಿದೆ. 2019ರ ಮಾರ್ಚ್ ವೇಳೆಗೆ ದೇಶದಲ್ಲಿ 23 ಕೋಟಿ ನೋಂದಾಯಿತ ವಾಹನಗಳು ಕಾರ್ಯನಿರ್ವಹಿಸುತ್ತಿದ್ದವು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಪೈಕಿ 57%ನಷ್ಟು ವಾಹನಗಳು ವಿಮೆಯನ್ನು ಹೊಂದಿಲ್ಲ. ದೇಶದಲ್ಲಿರುವ ಸುಮಾರು 13.2%ನಷ್ಟು ವಾಹನಗಳು ಕಡ್ಡಾಯ ಥರ್ಡ್ ಪಾರ್ಟಿ ಇನ್ಸ್ಯೂರೆನ್ಸ್ ಇಲ್ಲದೇ ಚಲಿಸುತ್ತಿವೆ ಎಂದು ಹೇಳಲಾಗಿದೆ.

ಥರ್ಡ್ ಪಾರ್ಟಿ ಇನ್ಸ್ಯೂರೆನ್ಸ್ ಇಲ್ಲದ ವಾಹನಗಳಿಂದ ಅಪಘಾತಕ್ಕೀಡಾಗುವ ಜನರಿಗೆ ಪರಿಹಾರ ಸಿಗುವುದಿಲ್ಲ. ಇನ್ನು ಹೆಚ್ಚಿನ ವಾಹನ ಮಾಲೀಕರಿಗೆ ಜನರಿಗೆ ಉಂಟಾಗುವ ಹಾನಿಯನ್ನು ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ವಾಹನ ಮಾಲೀಕರಿಂದ ಪರಿಹಾರ ಪಡೆಯಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

2018ರಿಂದ 2019ರವರೆಗೆ ವಿಮಾ ರಕ್ಷಣೆಯಿಲ್ಲದ ವಾಹನಗಳ ಸಂಖ್ಯೆ 2 ಕೋಟಿ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಹೆಚ್ಚುತ್ತಿರುವ ವಿಮೆಯ ಬೆಲೆಯು ಸಹ ಇಷ್ಟು ದೊಡ್ಡ ಸಂಖ್ಯೆಯ ಜನರು ವಿಮೆಯನ್ನು ತೆಗೆದುಕೊಳ್ಳದಿರಲು ಕಾರಣವಾಗಿದೆ.

ಕಳೆದ ಕೆಲವು ವರ್ಷಗಳಿಂದೀಚಿಗೆ ಫಸ್ಟ್ ಪಾರ್ಟಿ ಹಾಗೂ ಥರ್ಡ್ ಪಾರ್ಟಿ ವಾಹನ ವಿಮೆಯ ಬೆಲೆಗಳು ಏರಿಕೆಯಾಗಿವೆ. ಇದರಿಂದಾಗಿ ವಿಮೆ ಖರೀದಿಸಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೇಶದಲ್ಲಿರುವ ಒಟ್ಟು ವಾಹನಗಳ ಪೈಕಿ 75%ನಷ್ಟು ವಾಹನಗಳು ದ್ವಿಚಕ್ರ ವಾಹನಗಳಾಗಿವೆ ಎಂದು ವರದಿ ಹೇಳಿದೆ. ಈ ಪೈಕಿ 66%ನಷ್ಟು ದ್ವಿಚಕ್ರ ವಾಹನಗಳು ವಿಮಾ ರಕ್ಷಣೆಯಿಲ್ಲದೆ ಸಂಚರಿಸುತ್ತಿವೆ.

ದೇಶದ 15 ರಾಜ್ಯಗಳಲ್ಲಿ 60%ನಷ್ಟು ವಾಹನಗಳು ವಿಮೆಯಿಲ್ಲದೆ ಚಲಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಮೆ ಮಾಡಿಸಿದ ವಾಹನಗಳಿಗೆ ಸಂಬಂಧಿಸಿದ ಡೇಟಾಬೇಸ್ ಇರುವುದರಿಂದ ವಿಮೆ ಮಾಡದ ವಾಹನಗಳನ್ನು ಗುರುತಿಸಲು ರಾಜ್ಯ ಸರ್ಕಾರಗಳಿಗೆ ಸಾಧ್ಯವಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆದರೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಸಮಸ್ಯೆಯಾಗಿದೆ. 2019ರಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪಿದವರಿಗೆ ಸರಾಸರಿ ರೂ.9,01,207 ಪಡೆಯಲಾಗಿದ್ದರೆ, ಗಾಯಾಳುಗಳಿಗೆ ಸರಾಸರಿ ರೂ.2,51,094 ಪಡೆಯಲಾಗಿದೆ.

ಈ ಪ್ರಮಾಣವು ಆದಾಯ ಹಾಗೂ ಹಣದುಬ್ಬರಕ್ಕೆ ಅನುಗುಣವಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ವಿಮಾ ಕಂಪನಿಗಳು ವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತಿವೆ. ಇದರಿಂದ ಕಡಿಮೆ ಆದಾಯವನ್ನು ಹೊಂದಿರುವ ಜನರಿಗೆ ವಿಮೆಯನ್ನು ಖರೀದಿಸಲು ಕಷ್ಟವಾಗುತ್ತಿದೆ.