ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಸಿಯೆಟ್ ಟಯರ್ ಇಂಡಿಯಾ ಕಂಪನಿಯು ಎರಡು ವರ್ಷಗಳ ಅವಧಿಗೆ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಬ್ರಾಂಡ್ ಅಂಬಾಸಿಡರ್ ಆಗಿರುವ ಅಮೀರ್ ಖಾನ್ ಸಿಯೆಟ್ ಟಯರ್‌​ಗಳಿಗಾಗಿ ಎರಡು ಕಮರ್ಷಿಯಲ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಈ ಎರಡೂ ಜಾಹೀರಾತುಗಳನ್ನು ಐಪಿಎಲ್ 2020ರ ಅವಧಿಯಲ್ಲಿ ಪ್ರಸಾರ ಮಾಡಲಾಗುವುದು. ಈ ಜಾಹೀರಾತುಗಳಲ್ಲಿ ಅಮೀರ್ ಖಾನ್ ಸಿಯೆಟ್ ಸೆಕ್ಯುರಾ ಡ್ರೈವ್ ಪ್ರೀಮಿಯಂ ಟಯರ್‌​ಗಳ ಬಳಕೆಯನ್ನು ಉತ್ತೇಜಿಸಲಿದ್ದಾರೆ. ಈ ಜಾಹೀರಾತುಗಳನ್ನು ಹಲವಾರು ಮೀಡಿಯಾ ಪ್ಲಾಟ್ ಫಾರಂಗಳಲ್ಲಿ ಪ್ರದರ್ಶಿಸಲಾಗುವುದು.

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಈ ಜಾಹೀರಾತಿನಲ್ಲಿ ಪ್ರತಿಯೊಂದು ಪರಿಸ್ಥಿತಿಗೂ ಹೊಂದಿಕೊಳ್ಳುವ ಟಯರ್‌​ಗಳ ಸಾಮರ್ಥ್ಯ ಹಾಗೂ ಗುಣಮಟ್ಟದ ಬಗ್ಗೆ ಹೇಳಲಾಗುವುದು. ಇದರ ಜೊತೆಗೆ ಸಿಯೆಟ್ ಟಯರ್‌​ಗಳು ಕಾರುಗಳಿಗೆ ಬ್ಯಾಲೆನ್ಸ್ ನೊಂದಿಗೆ ಉತ್ತಮವಾದ ಬ್ರೇಕಿಂಗ್ ಅನ್ನು ಹೇಗೆ ಒದಗಿಸುತ್ತವೆ ಎಂಬುದನ್ನು ವಿವರಿಸಲಾಗುವುದು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಸಿಯೆಟ್ ಸೆಕ್ಯುರಾ ಪ್ರೀಮಿಯಂ ಟಯರ್‌​ಗಳನ್ನು ಹೋಂಡಾ ಸಿಟಿ, ಸ್ಕೋಡಾ ಆಕ್ಟೇವಿಯಾ, ಟೊಯೋಟಾ ಕೊರೊಲ್ಲಾ, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹೋಂಡಾ ಡಬ್ಲ್ಯೂಆರ್-ವಿಗಳಂತಹ ಪ್ರೀಮಿಯಂ ಸೆಡಾನ್ ಹಾಗೂ ಕಾಂಪ್ಯಾಕ್ಟ್ ಎಸ್‌ಯುವಿಗಳಿಗಾಗಿ ತಯಾರಿಸಲಾಗಿದೆ.

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಭಾರತದಲ್ಲಿ ಜಾವಾ ಪೆರಾಕ್‌ ಬೈಕಿಗಾಗಿ ಟಯರ್‌​ಗಳನ್ನು ಉತ್ಪಾದಿಸುತ್ತಿರುವುದಾಗಿ ಸಿಯೆಟ್ ಕಂಪನಿ ತಿಳಿಸಿದೆ. ಜಾವಾ ಕಂಪನಿಯ ಪ್ರೀಮಿಯಂ ಬೈಕ್ ಆಗಿರುವ ಜಾವಾ ಪೆರಾಕ್‌ಗಾಗಿ ಸಿಯೆಟ್ ಕಂಪನಿಯು ಜೂಮ್ ಕ್ರೂಸ್ ಟಯರ್‌​ಗಳನ್ನು ತಯಾರಿಸುತ್ತಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಜೂಮ್ ಕ್ರೂಸ್ ಟಯರ್‌​ಗಳು ಪೆರಾಕ್‌ ಬೈಕಿಗೆ ಆರಾಮದಾಯಕವಾದ ಸವಾರಿಯೊಂದಿಗೆ ಉತ್ತಮವಾದ ಗ್ರಿಪ್ ಅನ್ನು ನೀಡುತ್ತವೆ. ಇವುಗಳು ಸಾಮಾನ್ಯ ಟಯರ್‌​ಗಳಿಗಿಂತ ಹೆಚ್ಚಿನ ಬ್ಯಾಲೆನ್ಸ್ ನೀಡುತ್ತವೆ ಎಂದು ಹೇಳಲಾಗಿದೆ.

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಸಿಯೆಟ್ ಕಂಪನಿಯು ಇತ್ತೀಚೆಗೆ ಬೈಕುಗಳಿಗಾಗಿ ಹೊಸ ಸರಣಿಯ ಪಂಕ್ಚರ್ಡ್ ಫ್ರೀ ಟಯರ್‌​ಗಳನ್ನು ಬಿಡುಗಡೆಗೊಳಿಸಿದೆ. ಈ ಟಯರ್‌​ಗಳು ಪಂಕ್ಚರ್ ಆದ ಸಂದರ್ಭದಲ್ಲಿ ಏರ್ ಪ್ರೆಷರ್ ಬೀಳದಂತೆ ತಡೆಯುತ್ತವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಇದರಿಂದಾಗಿ ಬೈಕ್ ಸಮತೋಲನದಲ್ಲಿರುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಈ ಟಯರ್‌​ಗಳಲ್ಲಿ ಏರ್ ಫ್ಲೋ ತಪ್ಪಿಸಲು ಹೊಸ ಟೆಕ್ನಾಲಜಿಯನ್ನು ಬಳಸಲಾಗಿದೆ. ಈ ಟಯರ್‌​ಗಳನ್ನು ಏಳು ವಿವಿಧ ಗಾತ್ರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಸಿಯೆಟ್ ಕಂಪನಿಯು ಟ್ರಕ್‌ಗಳು, ಬಸ್‌, ಕಾರು, ಬೈಕ್, ಸ್ಕೂಟರ್‌ ಸೇರಿದಂತೆ ವಿವಿಧ ವಾಹನಗಳಿಗಾಗಿ ಪ್ರತಿವರ್ಷ 15 ದಶಲಕ್ಷ ಟಯರ್‌​ಗಳನ್ನು ಉತ್ಪಾದಿಸುತ್ತದೆ. ಸಿಯೆಟ್ ಕಂಪನಿಯು ಜಾವಾ ಕಂಪನಿಯ ಪ್ರತಿಸ್ಪರ್ಧಿ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಗಾಗಿಯೂ ಟಯರ್‌​ಗಳನ್ನು ಉತ್ಪಾದಿಸುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಿಯೆಟ್ ಟಯರ್‌​ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್

ಸಿಯೆಟ್ ಕಂಪನಿಯು ಇತ್ತೀಚೆಗೆ ಗೋ-ಸೇಫ್ ಫೇಸ್ ಮಾಸ್ಕ್ ಅನ್ನು ಬಿಡುಗಡೆಗೊಳಿಸಿತ್ತು. ಗೋ-ಸೇಫ್ ಎಸ್ 95 ಹೆಸರಿನ ಈ ಮಾಸ್ಕ್ ನ ಬೆಲೆ ರೂ.295ಗಳಾಗಿದೆ. ಈ ಫೇಸ್ ಮಾಸ್ಕ್ ಅನ್ನು 30 ಬಾರಿ ಸ್ವಚ್ವಗೊಳಿಸಿ ಬಳಸಬಹುದು ಎಂದು ಕಂಪನಿ ಹೇಳಿದೆ.

Most Read Articles

Kannada
English summary
Aamir Khan appointed as Ceat Tyre brand ambassador. Read in Kannada.
Story first published: Saturday, September 26, 2020, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X