ಕರೋನಾ ವೈರಸ್ ಎಫೆಕ್ಟ್: ಶೋರೂಂಗೆ ಭೇಟಿ ನೀಡದೇ ಆನ್‌ಲೈನ್‌ನಲ್ಲೇ ಕಾರು ಖರೀದಿಸಿ

ಅಕೋಡ್ರೈವ್ ಭಾರತದ ವರ್ಚುವಲ್ ಕಾರ್ ಡೀಲರ್ ಕಂಪನಿಯಾಗಿದೆ. ಕರೋನಾ ವೈರಸ್ ಕಾರಣದಿಂದಾಗಿ ಇನ್ನು ಮುಂದೆ ಕಾರುಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಿದೆ. ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ಹಲವಾರು ಸೌಲಭ್ಯಗಳನ್ನು ನೀಡಲಿದೆ.

ಕರೋನಾ ವೈರಸ್ ಎಫೆಕ್ಟ್: ಶೋರೂಂಗೆ ಭೇಟಿ ನೀಡದೇ ಆನ್‌ಲೈನ್‌ನಲ್ಲೇ ಕಾರು ಖರೀದಿಸಿ

ತನ್ನ ಆನ್‌ಲೈನ್ ಪ್ಲಾಟ್‌ಫಾರಂ ಮೂಲಕ ಕಂಪನಿಯು ಹೋಂ ಡೆಲಿವರಿ, ನಿಗದಿಪಡಿಸಿದ ದಿನದಂದು ವಿತರಣೆ, ಕೈಗೆಟಕುವ ವ್ಯವಹಾರ ಹಾಗೂ ಸುಲಭವಾದ ಹಣಕಾಸು ಆಯ್ಕೆಗಳನ್ನು ನೀಡುತ್ತದೆ. ಅಕೋಡ್ರೈವ್ ಇಂಡಿಯಾದ ಮುಖ್ಯಸ್ಥರಾದ ಸಾಗರ್ ದಾಸ್ ಈ ಮಾಹಿತಿಯನ್ನು ಅಧಿಕೃತವಾಗಿ ನೀಡಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಶೋರೂಂಗೆ ಭೇಟಿ ನೀಡದೇ ಆನ್‌ಲೈನ್‌ನಲ್ಲೇ ಕಾರು ಖರೀದಿಸಿ

ಈ ಬಗ್ಗೆ ಮಾತನಾಡಿದ ಅವರು ಕರೋನಾ ವೈರಸ್ ಸೋಂಕಿನಿಂದಾಗಿ ಗ್ರಾಹಕರ ಮನಸ್ಥಿತಿಯಲ್ಲಿ ಬದಲಾವಣೆಗಳಾಗಿವೆ. ಜನರು ತಮ್ಮದೇ ಕಾರು ಹೊಂದಲು ಬಯಸಿದ್ದಾರೆ. ಕಾರು ಖರೀದಿಯನ್ನು ಸುರಕ್ಷಿತವಾಗಿ ಮಾಡಲು ಬಯಸುತ್ತಾರೆ ಎಂದು ಹೇಳಿದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಶೋರೂಂಗೆ ಭೇಟಿ ನೀಡದೇ ಆನ್‌ಲೈನ್‌ನಲ್ಲೇ ಕಾರು ಖರೀದಿಸಿ

ಕಾರುಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ನಮ್ಮ ಸಂಪೂರ್ಣ ಪ್ರಕ್ರಿಯೆಯು ಗ್ರಾಹಕರ ಸುರಕ್ಷತೆ ಹಾಗೂ ನಿಶ್ಚಿತತೆಯ ಮೇಲೆ ಕೇಂದ್ರೀಕೃತವಾಗಿದೆ. ಅಕೋಡ್ರೈವ್‌ನಲ್ಲಿ ಕಾರನ್ನು ಖರೀದಿಸುವ ಗ್ರಾಹಕರು ಸಂಪೂರ್ಣ ತೃಪ್ತಿಯನ್ನು ಹೊಂದಲಿದ್ದಾರೆ. ಇಲ್ಲಿ ಅವರಿಗೆ ಅತ್ಯುತ್ತಮವಾದ ಬೆಲೆ ಹಾಗೂ ತ್ವರಿತ ಹಣಕಾಸು ಸೌಲಭ್ಯಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಕರೋನಾ ವೈರಸ್ ಎಫೆಕ್ಟ್: ಶೋರೂಂಗೆ ಭೇಟಿ ನೀಡದೇ ಆನ್‌ಲೈನ್‌ನಲ್ಲೇ ಕಾರು ಖರೀದಿಸಿ

ಈ ಪ್ಲಾಟ್‌ಫಾರ್ಮ್‌ನ ಹೊಸ ಆವೃತ್ತಿಯಿಂದಾಗಿ ಗ್ರಾಹಕರು ಕಾರುಗಳ ಪೋರ್ಟ್‌ಪೊಲಿಯೊದಲ್ಲಿರುವ ಉತ್ತಮವಾದ ಕೊಡುಗೆಗಳ ಬಗ್ಗೆ ತಿಳಿಯಲು ಸಾಧ್ಯವಾಗಲಿದೆ. ಇದರ ಜೊತೆಗೆ ಕಂಪನಿಯು ತನ್ನ ಗ್ರಾಹಕರಿಗೆ ಹಣಕಾಸು ಹಾಗೂ ವಿಮಾ ಸೌಲಭ್ಯಗಳನ್ನು ನೀಡಲಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಶೋರೂಂಗೆ ಭೇಟಿ ನೀಡದೇ ಆನ್‌ಲೈನ್‌ನಲ್ಲೇ ಕಾರು ಖರೀದಿಸಿ

ಗಮನಿಸಬೇಕಾದ ಸಂಗತಿಯೆಂದರೆ ಗ್ರಾಹಕರು ಈ ಪ್ಲಾಟ್‌ಫಾರ್ಮ್‌ನಿಂದಾಗಿ ಇನ್ನು ಮುಂದೆ ಶೋ ರೂಂಗಳಿಗೆ ಭೇಟಿ ನೀಡುವ ಅವಶ್ಯಕತೆಯಿಲ್ಲ. ಕಾರು ಖರೀದಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದಾಗಿದೆ. ಗ್ರಾಹಕರಿಗೆ ಹಣಕಾಸು ಸೌಲಭ್ಯಗಳನ್ನು ಒದಗಿಸಲು ಅಕೋಡ್ರೈವ್ 30ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಕರೋನಾ ವೈರಸ್ ಎಫೆಕ್ಟ್: ಶೋರೂಂಗೆ ಭೇಟಿ ನೀಡದೇ ಆನ್‌ಲೈನ್‌ನಲ್ಲೇ ಕಾರು ಖರೀದಿಸಿ

ಅಕೋಡ್ರೈವ್ ತನ್ನ ಗ್ರಾಹಕರಿಗೆ 10 ನಿಮಿಷಗಳಲ್ಲಿ ಸಾಲದ ಅನುಮೋದನೆಯನ್ನು ನೀಡಲಿದೆ. ಕಂಪನಿಯು ಸದ್ಯಕ್ಕೆ ಬೆಂಗಳೂರು, ದೆಹಲಿ-ಎನ್‌ಸಿಆರ್, ಮುಂಬೈ ಹಾಗೂ ಪುಣೆ ನಗರಗಳಲ್ಲಿ ಈ ಸೇವೆಯನ್ನು ನೀಡುತ್ತಿದೆ. ಇತರ ನಗರಗಳಲ್ಲಿ ತನ್ನ ಸೇವೆಗಳನ್ನು ಆರಂಭಿಸುವ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.

Most Read Articles

Kannada
English summary
Ackodrive move to online vehicle sales platform post Covid 19 Lockdown. Read in Kannada.
Story first published: Saturday, June 6, 2020, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X