ನಟ ನಾಗಚೈತನ್ಯ ಕಾರ್ ಕಲೆಕ್ಷನ್‌ಗೆ ಎಂಟ್ರಿ ಕೊಟ್ಟ ಟೊಯೊಟಾ ಐಷಾರಾಮಿ ಕಾರು...!
ಟಾಲಿವುಡ್‌ನ ಸ್ಟಾರ್ ನಟ ನಾಗಚೈತನ್ಯ ಇತ್ತೀಚೆಗೆ ಹೊಸ ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ್ದು, ಹೊಸ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟೊಯೊಟಾ ನಿರ್ಮಾಣದ ವೈಲ್‌ಪೈರ್ ಕಾರು ಖರೀದಿ ಮಾಡಲಾಗಿದ್ದು, ಟಾಲಿವುಡ್‌ನಲ್ಲಿ ಸದ್ಯಕ್ಕೆ ನಾಗಚೈತನ್ಯ ಹೊಸ ಕಾರು ಭಾರೀ ಸದ್ದು ಮಾಡುತ್ತಿದೆ.

ವಿನೂತ ಡಿಸೈನ್, ಹೊಸ ಮಾದರಿಯ ಆಸನ ಸೌಲಭ್ಯದೊಂದಿಗೆ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಪ್ರಮುಖ ಆಕರ್ಷಣೆಯಾಗುತ್ತಿರುವ ಟೊಯೊಟಾ ವೆಲ್‌ಫೈರ್ ಕಾರು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ನಟ ನಾಗಚೈತನ್ಯ ಕೂಡಾ ತಮ್ಮ ಐಷಾರಾಮಿ ಕಾರುಗಳ ಸಂಗ್ರಹದಲ್ಲಿ ವೈಲ್‌ಫೈರ್ ಎಂಪಿವಿ ಕಾರನ್ನು ಸೇರ್ಪಡೆಗೊಳಿಸಿದ್ದಾರೆ.

ವೆಲ್‌ಫೈರ್ ಕಾರು ಸದ್ಯಕ್ಕೆ 'ಎಕ್ಸಿಕ್ಯೂಟಿವ್ ಲೌಂಜ್' ಎನ್ನುವ ಸಿಂಗಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಹೊಂದಿರುವ ವೆಲ್‌ಫೈರ್ ಎಂಪಿವಿ ಕಾರು ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಮೇಲೆ ಅಭಿವೃದ್ದಿಗೊಂಡಿದೆ.

ನಟ ನಾಗಚೈತನ್ಯ ಖರೀದಿ ಮಾಡಿರುವ ವೈಲ್‌ಫೈರ್ ತುಸು ಮಾಡಿಫೈಗೊಳಿಸಲಾಗಿದ್ದು, ಹೊಸ ಕಾರಿಗೆ ಮತ್ತಷ್ಟು ಖದರ್ ನೀಡಲು ಬ್ಲ್ಯಾಕ್ ಔಟ್ ವೀಲ್ಹ್ ಜೋಡಣೆ ಮಾಡಲಾಗಿದೆ. ಅದರ ಹೊರತಾಗಿ ಕಾರಿನ ಬಹುತೇಕ ತಾಂತ್ರಿಕ ಅಂಶಗಳು ಮೂಲ ಮಾದರಿಯಂತಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ.79.50 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ವೆಲ್‌ಫೈರ್ ಕಾರು 4,935-ಎಂಎಂ ಉದ್ದ, 1,850-ಎಂಎಂ ಅಗಲ, 1,895-ಎಂಎಂ ಎತ್ತರ ಮತ್ತು 3,000-ಎಂಎಂ ವೀಲ್ಹ್ ಬೆಸ್‌ನೊಂದಿಗೆ 2,815 ಕೆಜಿ ತೂಕ ಹೊಂದಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ ಬರ್ನಿಂಗ್ ಬ್ಲ್ಯಾಕ್, ವೈಟ್ ಪರ್ಲ್, ಗ್ರಾಫೈಟ್ ಮತ್ತು ಬ್ಲ್ಯಾಕ್ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ ಕಾರಿನ ಮುಂಭಾಗದಲ್ಲಿ ಕ್ರೋಮ್ ಪಟ್ಟಿಗಳು, ಬಲಿಷ್ಠವಾದ ಬಂಪರ್, ಸ್ಪ್ಲಿಟ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಹಗಲಿನಲ್ಲಿ ಬೆಳಕು ಹೊರಸೂಸುವ ಗ್ರಿಲ್ ಸಿಸ್ಟಂ ನೀಡಲಾಗಿದ್ದು, 17 ಇಂಚಿನ ಅಲಾಯ್ ಚಕ್ರಗಳು, ಎಲೆಕ್ಟ್ರಿಕ್ ಕಂಟ್ರೊಲ್ ಸ್ಲೈಡಿಂಗ್ ಬಾಗಿಲುಗಳು, ದೊಡ್ಡದಾದ ಟೈಲ್ ಲೈಟ್ ಕ್ಲಸ್ಟರ್‌ಗಳು ಬಹಳ ಆಕರ್ಷಕವಾಗಿವೆ.
MOST READ: ರಾಕಿಂಗ್ ಸ್ಟಾರ್ ಯಶ್ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಹಾಗೆಯೇ ಕಾರಿನ ಒಳಭಾಗವು ಕೂಡಾ ಸಾಕಷ್ಟು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದ್ದು, 7 ಸೀಟರ್ ಸೌಲಭ್ಯದೊಂದಿಗೆ 10-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಚ್‌ಡಿಎಂಐನೊಂದಿಗ ವೈ-ಪೈ ಸೌಲಭ್ಯವನ್ನು ಹೊಂದಿರುವ 13-ಇಂಚಿನ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳು, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ಆಂಬಿಯೆಂಟ್ ರೂಫ್ ಲೈಟ್ ಸಿಸ್ಟಂ ಮತ್ತು 17-ಸ್ಪೀಕರ್ಸ್ ಹೊಂದಿರುವ ಜೆಬಿಎಲ್ ಆಡಿಯೋ ಸಿಸ್ಟಂ ಹೊಂದಿದೆ.

ಇದರಲ್ಲಿ ಕ್ಯಾಪ್ಟನ್ ಸೀಟುಗಳು ಪ್ರಮುಖ ಆಕರ್ಷಣೆಯಾಗಿದ್ದು, ಪುಷ್‌ಬ್ಯಾಕ್ ಸೌಲಭ್ಯವಲ್ಲದೆ ಆರ್ಮ್‌ರೆಸ್ಟ್ ಮತ್ತು ಲೆಗ್ ರೆಸ್ಟ್ ಒದಗಿಸುತ್ತದೆ. ಜೊತೆಗೆ ಕ್ಯಾಪ್ಟನ್ ಸೀಟುಗಳ ಮತ್ತೊಂದು ವೈಶಿಷ್ಟ್ಯತೆ ಅಂದರೆ ಚಳಿಗಾಲದಲ್ಲಿ ಬಿಸಿಯಾಗುತ್ತವೆ ಮತ್ತು ಬಿಸಿಯಾದ ವಾತಾವರಣವಿದ್ದಲ್ಲಿ ತಂಪು ಹೊರಸೂಸುವ ತಂತ್ರಜ್ಞಾನವನ್ನು ಹೊಂದಿವೆ.
MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಸುರಕ್ಷತಾ ವೈಶಿಷ್ಟ್ಯತೆಗಳು
ಐಷಾರಾಮಿ ವೆಲ್‌ಫೈರ್ ಕಾರಿನಲ್ಲಿ ವೆಹಿಕಲ್ ಡೈನಾಮಿಕ್ ಇಂಟೆಗ್ರೆಟೆಡ್ ಮ್ಯಾನೆಜ್‌ಮೆಂಟ್ ತಂತ್ರಜ್ಞಾನವನ್ನು(ವಿಡಿಐಎಂ) ಬಳಕೆ ಮಾಡಲಾಗಿದ್ದು, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, 7 ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೇರಿದಂತೆ ಹಲವು ಭದ್ರತಾ ವೈಶಿಷ್ಟ್ಯತೆಗಳಿವೆ.

ಎಂಜಿನ್ ಸಾಮರ್ಥ್ಯ
ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್‌ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಕಾರಿನಲ್ಲಿ ಸದ್ಯಕ್ಕೆ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್(ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್) ಮಾತ್ರವೇ ಬಿಡುಗಡೆ ಮಾಡಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ಎಂಜಿನ್ ಮಾದರಿಯು 115-ಬಿಎಚ್‌ಪಿ ಮತ್ತು 198-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಮುಂಭಾಗ ಚಕ್ರಗಳಿಗೆ ಎಲೆಕ್ಟ್ರಿಕ್ ಮೋಟಾರ್ ಒದಗಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ 16.35 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.


Click it and Unblock the Notifications