ಟ್ರಕ್ ಚಾಲಕರಿಗೆ ರೂ.50 ಲಕ್ಷ ವಿಮೆ ನೀಡಲು ಒತ್ತಾಯ
ಭಾರತದ ಟ್ರಕ್ ಚಾಲಕರ ಸಂಘವಾದ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ) ಅಗತ್ಯ ಸರಕುಗಳ ಪೂರೈಕೆಯಲ್ಲಿ ತೊಡಗಿರುವ ಎಲ್ಲಾ ಟ್ರಕ್ ಚಾಲಕರು ಹಾಗೂ ಕಾರ್ಮಿಕರಿಗೆ ರೂ.50 ಲಕ್ಷಗಳ ಜೀವ ವಿಮಾ ಪ್ಯಾಕೇಜ್ ಅನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಲಾಕ್‌ಡೌನ್ ನಡುವೆಯೂ ಟ್ರಕ್ ಚಾಲಕರು ದೇಶಾದ್ಯಂತ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದು ಇವರುಗಳಿಗೆ ಒಂದು ವೇಳೆ ಕರೋನಾ ವೈರಸ್ ಸೋಂಕು ಕಂಡುಬಂದಲ್ಲಿ ಅವರ ಆರೋಗ್ಯ ವೆಚ್ಚವನ್ನು ಭರಿಸುವಂತೆ ಟ್ರಕ್ ಚಾಲಕರ ಸಂಘವು ಒತ್ತಾಯಿಸಿದೆ.

ಈ ಬಗ್ಗೆ ಮಾತನಾಡಿರುವ ಎಐಎಂಟಿಸಿ ಅಧ್ಯಕ್ಷರಾದ ಕುಲ್ತರಣ್ ಸಿಂಗ್ ಅಟ್ವಾಲ್‌ರವರು ಟ್ರಕ್ ಚಾಲಕರು ದೇಶಾದ್ಯಂತ ಲಕ್ಷಾಂತರ ಜನರಿಗೆ ಅಗತ್ಯ ಸರಕುಗಳನ್ನು ಸಾಗಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವುದರಿಂದ ಅವರಿಗೆ ರೂ.50 ಲಕ್ಷಗಳ ವಿಮಾ ಸೌಲಭ್ಯವನ್ನು ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಒಂದು ಟ್ರಕ್‌ನಲ್ಲಿ ಸರಿಯಾದ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಐದು ಟ್ರಕ್ ಚಾಲಕರು ಸಂಚರಿಸಲು ಅನುಮತಿ ನೀಡುವಂತೆ ಕೋರಿದ್ದಾರೆ. ಲಾಕ್‌ಡೌನ್‌ನಿಂದಾಗಿ ಟ್ರಕ್ ಚಾಲನೆ ಮಾಡಲು ಡ್ರೈವರ್‌ಗಳು ಮುಂದೆ ಬರುತ್ತಿಲ್ಲ. ಇದರಿಂದಾಗಿ ಟ್ರಕ್ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಅಗತ್ಯವಿರುವ ಹಾಗೂ ಅನಿವಾರ್ಯವಾಗಿರುವ ಸರಕು ಲಾರಿ ಹಾಗೂ ಟ್ರಕ್‌ಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚಿಸಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್‌ನಿಂದಾಗಿ ಟ್ರಕ್‌ಗಳ ಸಂಚಾರದಲ್ಲಿ ಇಳಿಕೆ ಕಂಡುಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಟ್ರಕ್‌ಗಳ ಸಂಚಾರ ಕಡಿಮೆಯಾಗಿರುವ ಕಾರಣಕ್ಕೆ ದೇಶದ ಅನೇಕ ಭಾಗಗಳಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ.

ಈ ಪರಿಸ್ಥಿತಿಯನ್ನು ಹೋಗಲಾಡಿಸಲು, ಲಾಕ್‌ಡೌನ್ ಅವಧಿಯಲ್ಲಿ ಅಂತರ-ರಾಜ್ಯಗಳ ನಡುವೆ ಟ್ರಕ್‌ಗಳ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರವು ಹೇಳಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ರೀತಿಯ ಟ್ರಕ್ ಹಾಗೂ ಸರಕು ಲಾರಿಗಳ ಸಂಚಾರಕ್ಕೆ ಯಾವುದೇ ಪರವಾನಗಿ ಹಾಗೂ ಪಾಸ್‌ಗಳ ಕೊರೆತೆಯಾಗದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಗೃಹ ಸಚಿವಾಲಯವು ಹೇಳಿದೆ.

ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗಡಿ ಪ್ರದೇಶಗಳಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಕಾರ್ಮಿಕರಿಗೆ ಯಾವುದೇ ತೊಂದರೆಗಳಾಗದಂತೆ ವಿಶೇಷ ರೀತಿಯ ಕಾಳಜಿ ವಹಿಸಬೇಕು ಎಂದು ಸಹ ಕೇಂದ್ರ ಗೃಹ ಸಚಿವಾಲಯವು ಹೇಳಿದೆ.


Click it and Unblock the Notifications