ವಿಮಾನಗಳ ಬುಕ್ಕಿಂಗ್ ನಿಲ್ಲಿಸಲು ಸೂಚಿಸಿದ ಡಿಜಿಸಿಎ

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಎಲ್ಲಾ ವಿಮಾನಯಾನ (ವಿಮಾನಯಾನ) ಕಂಪನಿಗಳಿಗೆ ತಕ್ಷಣವೇ ವಿಮಾನಗಳ ಟಿಕೆಟ್ ಬುಕ್ಕಿಂಗ್ ನಿಲ್ಲಿಸುವಂತೆ ಆದೇಶಿಸಿದೆ. ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯವರ ಆದೇಶದ ಮೇರೆಗೆ ಈ ಸೂಚನೆ ನೀಡಿರುವ ಡಿಜಿಸಿಎ, ಮೇ 3ರವರೆಗೆ ವಿಮಾನಗಳ ಟಿಕೆಟ್ ಬುಕ್ಕಿಂಗ್‌ಗಳನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿದೆ.

ವಿಮಾನಗಳ ಬುಕ್ಕಿಂಗ್ ನಿಲ್ಲಿಸಲು ಸೂಚಿಸಿದ ಡಿಜಿಸಿಎ

ನಾಗರಿಕ ವಿಮಾನಯಾನ ಇಲಾಖೆಯ ಆದೇಶವನ್ನು ಧಿಕ್ಕರಿಸಿ ವಿಮಾನಯಾನ ಸಂಸ್ಥೆಗಳು ಭಾನುವಾರದಿಂದ ಬುಕ್ಕಿಂಗ್ ಆರಂಭಿಸಿದ್ದವು. ಈ ಬಗ್ಗೆ ಪ್ರಯಾಣಿಕರು ನೀಡಿದ್ದ ದೂರುಗಳನ್ನು ಗಣನೆಗೆ ತೆಗೆದುಕೊಂಡ ನಾಗರಿಕ ವಿಮಾನಯಾನ ಇಲಾಖೆಯು ವಿಮಾನಯಾನ ಕಂಪನಿಗಳಿಂದ ಸ್ಪಷ್ಟನೆಯನ್ನು ಕೋರಿದೆ.

ವಿಮಾನಗಳ ಬುಕ್ಕಿಂಗ್ ನಿಲ್ಲಿಸಲು ಸೂಚಿಸಿದ ಡಿಜಿಸಿಎ

ಮುಂದಿನ ಆದೇಶದವರೆಗೆ ಎಲ್ಲಾ ವಿಮಾನಯಾನ ಸಂಸ್ಥೆಗಳು 2020ರ ಮೇ 3ರವರೆಗೆ ಎಲ್ಲಾ ಬುಕ್ಕಿಂಗ್‌ಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವರು ಹೇಳಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಿಮಾನಗಳ ಬುಕ್ಕಿಂಗ್ ನಿಲ್ಲಿಸಲು ಸೂಚಿಸಿದ ಡಿಜಿಸಿಎ

ಲಾಕ್‌ಡೌನ್‌ನಿಂದ ರದ್ದು ಪಡಿಸಿದ ವಿಮಾನಗಳ ಟಿಕೆಟ್ ಹಣವನ್ನು ರಿಫಂಡ್ ಮಾಡದೇ, ಮುಂದಿನ ಪ್ರಯಾಣಕ್ಕಾಗಿ ಕ್ರೆಡಿಟ್ ವೋಚರ್‌ಗಳನ್ನು ನೀಡಿದ ಇಂಡಿಯನ್ ಏರ್‌ಲೈನ್ಸ್ ಕಂಪನಿ ವಿರುದ್ಧ ಗ್ರಾಹಕರು ಸಾಮಾಜಿಕ ಜಾಲತಾಣಗಳ ಮೂಲಕ ದೂರು ನೀಡಿದ್ದಾರೆ.

ವಿಮಾನಗಳ ಬುಕ್ಕಿಂಗ್ ನಿಲ್ಲಿಸಲು ಸೂಚಿಸಿದ ಡಿಜಿಸಿಎ

ಮಾರ್ಚ್ 25ರಿಂದ ಮೇ 3ರವರೆಗೆ ಬುಕ್ಕಿಂಗ್ ಮಾಡಲಾದ ಟಿಕೆಟ್ ಮೊತ್ತವನ್ನು ವಿಮಾನಯಾನ ಕಂಪನಿಗಳಿಂದ ಪಡೆಯುವಂತೆ ನಾಗರಿಕ ವಿಮಾನಯಾನ ಇಲಾಖೆಯು ಗ್ರಾಹಕರಿಗೆ ಸೂಚಿಸಿದೆ. ಆದರೆ ಪೂರ್ಣ ಪ್ರಮಾಣದ ಹಣವನ್ನು ರಿಫಂಡ್ ಮಾಡಲಾಗುತ್ತದೆಯೇ ಇಲ್ಲವೇ ಎಂಬುದನ್ನು ನಾಗರಿಕ ವಿಮಾನಯಾನ ಇಲಾಖೆಯು ತಿಳಿಸಿಲ್ಲ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವಿಮಾನಗಳ ಬುಕ್ಕಿಂಗ್ ನಿಲ್ಲಿಸಲು ಸೂಚಿಸಿದ ಡಿಜಿಸಿಎ

ಕರೋನಾ ವೈರಸ್‌ ಹರಡದಂತೆ ತಡೆಯುವ ಕಾರಣಕ್ಕೆ ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ ಲಾಕ್‌ಡೌನ್ ಘೋಷಿಸಲಾಗಿತ್ತು. ಎರಡನೇ ಹಂತದ ಲಾಕ್‌ಡೌನ್ ಅನ್ನು ಏಪ್ರಿಲ್ 15ರಿಂದ ಮೇ 3ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಪ್ರಯಾಣಿಕ ವಿಮಾನಯಾನಗಳನ್ನು ರದ್ದುಪಡಿಸಲಾಗಿದೆ.

ವಿಮಾನಗಳ ಬುಕ್ಕಿಂಗ್ ನಿಲ್ಲಿಸಲು ಸೂಚಿಸಿದ ಡಿಜಿಸಿಎ

ಬುಕ್ಕಿಂಗ್ ಸ್ಥಗಿತಗೊಳಿಸುವ ವಿಷಯದ ಬಗ್ಗೆ ನಾಗರಿಕ ವಿಮಾನಯಾನ ಇಲಾಖೆಯಿಂದ ಯಾವುದೇ ನೋಟಿಸ್ ಬಂದಿಲ್ಲವೆಂದು ವಿಸ್ಟಾರಾ ಹಾಗೂ ಏರ್ ಏಷ್ಯಾ ಇಂಡಿಯಾ ಕಂಪನಿಗಳು ತಿಳಿಸಿವೆ. ಸ್ಪೈಸ್ ಜೆಟ್, ಇಂಡಿಗೊ ಹಾಗೂ ಗೋಏರ್ ಕಂಪನಿಗಳು ಬುಕ್ಕಿಂಗ್ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Most Read Articles

Kannada
English summary
Airlines cannot take bookings says DGCA details. Read in Kannada.
Story first published: Monday, April 20, 2020, 17:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X