ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್, ಭಾರ್ತಿ ಆಕ್ಸಾ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಎರಡೂ ಕಂಪನಿಗಳು ಈ ಸಹಭಾಗಿತ್ವದಲ್ಲಿ ಕಾರುಗಳಿಗೆ ಸಮಗ್ರ ವಿಮಾ ಯೋಜನೆಯನ್ನು ನೀಡುವುದಾಗಿ ಹೇಳಿವೆ.

ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಏರ್‌ಟೆಲ್ ಕಂಪನಿಯು ಏರ್‌ಟೆಲ್ ಪೇಮೆಂಟ್ಸ್ ಎಂಬ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನಿರ್ವಹಿಸುತ್ತದೆ. ಭಾರ್ತಿ ಕಂಪನಿಯು ಆಕ್ಸಾ ಜನರಲ್ ಇನ್ಶೂರೆನ್ಸ್‌ನೊಂದಿಗೆ ಸೇರಿ ಹಲವು ವಿಮಾ ಸೇವೆಗಳನ್ನು ನೀಡುತ್ತಿದೆ. ಹೊಸ ವಿಮಾ ಯೋಜನೆಯಲ್ಲಿ ಏರ್‌ಟೆಲ್ ಹಾಗೂ ಭಾರ್ತಿ ಆಕ್ಸಾ ಕಂಪನಿಗಳು ವಾಹನ ಕಳ್ಳತನ, ನೈಸರ್ಗಿಕ ಅಥವಾ ಮಾನವ ನಿರ್ಮಿತ ಹಾನಿಗಳಿಗೆ ಸೂಕ್ತ ಪರಿಹಾರವನ್ನು ನೀಡುತ್ತದೆ.

ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಇದರ ಜೊತೆಗೆ ಅಪಘಾತದಿಂದ ಉಂಟಾಗುವ ಗಾಯ ಅಥವಾ ಇತರ ನಷ್ಟಗಳಿಗೆ ಸೂಕ್ತ ಪರಿಹಾರವನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಎರಡೂ ಕಂಪನಿಗಳು ತಿಳಿಸಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಈ ಪರಿಹಾರವನ್ನು ಏರ್‌ಟೆಲ್ ಹಾಗೂ ಭಾರ್ತಿ ಆಕ್ಸಾ ಅಪಘಾತ ವಿಮಾ ಯೋಜನೆಯಡಿ ನೀಡಲಾಗುತ್ತದೆ. ಅಪಘಾತದಲ್ಲಿ ಭಾಗಿಯಾದ ಮೂರನೇ ವ್ಯಕ್ತಿಗೆ ಪರಿಹಾರವನ್ನು ನೀಡುವುದಾಗಿ ಏರ್‌ಟೆಲ್ ಹೇಳಿದೆ. ಇದರಿಂದಾಗಿ ಪಾಲಿಸಿದಾರರು ಈ ಯೋಜನೆಯಡಿಯಲ್ಲಿ ವಿವಿಧ ಪ್ರಯೋಜನಗಳನ್ನು ಪಡೆಯಬಹುದು.

ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಈ ಬಗ್ಗೆ ಏರ್‌ಟೆಲ್ ಸೆಲ್ ಫೋನ್ ಪ್ರೊಸೆಸರ್ನಲ್ಲಿ ಆಯ್ಕೆಗಳನ್ನು ನೀಡಲಾಗಿದೆ. ಸಂಬಂಧಿಸಿದ ವಿವರಗಳನ್ನು ಏರ್‌ಟೆಲ್ ಸ್ಟೋರ್ ಅಥವಾ ವೆಬ್‌ಸೈಟ್‌ನಿಂದಲೂ ಪಡೆಯಬಹುದು ಎಂದು ಹೇಳಲಾಗಿದೆ. ಏರ್‌ಟೆಲ್ ಈ ವಿಮೆಯನ್ನು ಯಾವುದೇ ಪೂರ್ವಭಾವಿ ಕಲ್ಪನೆಗಳಿಲ್ಲದೆ ನೀಡಲಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಪೇಪರ್ ಲೆಸ್ ಆಗಿ, ಸುರಕ್ಷಿತವಾಗಿ ಐದು ನಿಮಿಷಗಳಲ್ಲಿ ವಿಮಾ ಪಾಲಿಸಿಯನ್ನು ಪಡೆಯಬಹುದು ಎಂದು ಏರ್‌ಟೆಲ್ ಕಂಪನಿಯು ತಿಳಿಸಿದೆ.

ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಯಾವುದೇ ಪೂರ್ವ ಪರಿಶೀಲನೆ ಇಲ್ಲದೆ, ಗ್ರಾಹಕರು ವಾಹನದ ಬಗೆಗಿನ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ವಿಮೆಯನ್ನು ಅವರ ರಿಜಿಸ್ಟರ್ ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರಿಗೆ ತಕ್ಷಣವೇ ಕಳುಹಿಸಲಾಗುತ್ತದೆ. ಇದರಿಂದಾಗಿ ಈ ವಿಮಾ ಯೋಜನೆಯನ್ನು ಸುಲಭವೆಂದು ಪರಿಗಣಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಸದ್ಯಕ್ಕೆ ಈ ಯೋಜನೆಯನ್ನು ಕಾರುಗಳಿಗೆ ಮಾತ್ರ ನೀಡಲಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ವಿಮೆ ನೀಡುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ಸ್ಯೂರೆನ್ಸ್ ಅಪ್ ಡೇಟ್ ಮಾಡುವಾಗ ಗ್ರಾಹಕರಿಗೆ ಹೆಚ್ಚುವರಿ ಆಡ್-ಆನ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗುತ್ತದೆ.

ವಾಹನಗಳಿಗೆ ಇನ್ಶ್ಯೂರೆನ್ಸ್ ಸೇವೆಯನ್ನು ನೀಡಲಿದೆ ಈ ಮೊಬೈಲ್ ಕಂಪನಿ

ಆಡ್-ಆನ್ ಪ್ಯಾಕೇಜ್‌ಗಳಲ್ಲಿ ಕಾರಿನ ಕೀ ಕಳೆದುಕೊಳ್ಳುವುದು ಅಥವಾ ಬದಲಿಸುವುದು, ಕಾರು ಕೆಟ್ಟುಹೋದಾಗ ರೋಡ್ ಸೈಡ್ ಅಸಿಸ್ಟೆನ್ಸ್, ಎಂಜಿನ್ ಅಥವಾ ಗೇರ್‌ಬಾಕ್ಸ್‌ಗಳಿಗೆ ಹಾನಿ, ಪಾಲಿಸಿದಾರರಿಗೆ ಗಾಯವಾದರೆ ವೈದ್ಯಕೀಯ ವೆಚ್ಚ, ಆಸ್ಪತ್ರೆಗೆ ತಲುಪಲು ಆಂಬ್ಯುಲೆನ್ಸ್ ವೆಚ್ಚಗಳು ಸೇರಿವೆ.

Most Read Articles

Kannada
English summary
Airtel to provide car insurance through payments bank. Read in Kannada.
Story first published: Thursday, November 12, 2020, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X