Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತನ್ನ ಮೊದಲ ಅಟಾನಾಮಸ್ ಎಲೆಕ್ಟ್ರಿಕ್ ವಾಹನದ ಕಾನ್ಸೆಪ್ಟ್ ಅನಾವರಣಗೊಳಿಸಿದ ಅಮೆಜಾನ್
ಇತ್ತೀಚಿನ ದಿನಗಳಲ್ಲಿ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಸ್ವಾಯತ್ತ ತಂತ್ರಜ್ಞಾನದೊಂದಿಗೆ (ಅಟಾನಾಮಸ್ ಟೆಕ್ನಾಲಜಿ) ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ದೇಶಿಯ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ ಎಂಜಿ ಮೋಟಾರ್ ಕಂಪನಿಯು ತನ್ನ ಪೂರ್ಣ ಗಾತ್ರದ ಎಂಜಿ ಗ್ಲೋಸ್ಟರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ವಾಯತ್ತ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳಿಸಿದೆ.

ಈಗ ಅಮೆಜಾನ್ ಕಂಪನಿಯು ತನ್ನ ಮೊದಲ ಸ್ವಾಯತ್ತ ರೋಬೋ-ಟ್ಯಾಕ್ಸಿ ಕಾನ್ಸೆಪ್ಟ್ ಅನ್ನು ಬಹಿರಂಗಪಡಿಸಿದೆ. ಅಮೆಜಾನ್ ಈ ವರ್ಷವಷ್ಟೇ ಸ್ವಾಯತ್ತ ವಾಹನ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಂಡಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅಮೆಜಾನ್‌ನ ಈ ಕಾನ್ಸೆಪ್ಟ್ ವಾಹನವು ಮಲ್ಟಿಡೈರೆಕ್ಷನಲ್ ವಾಹನವಾಗಿದ್ದು, ನಗರದ ಪರಿಸರಕ್ಕೆ ಸೂಕ್ತವಾಗಿದೆ. ಜೂಕ್ಸ್ ಇಂಕ್ ತಯಾರಿಸಿದ ವಾಹನದ ಕ್ಯಾರೇಜ್ ಶೈಲಿಯ ಇಂಟಿರಿಯರ್ ನಲ್ಲಿರುವ ಎರಡು ಸೀಟುಗಳನ್ನು ಎದುರು ಬದುರಾಗಿ ನೀಡಲಾಗಿದೆ.

ಈ ಸ್ವಾಯತ್ತ ವಾಹನವು ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿಲ್ಲ. ಕಂಪನಿಯು ಈ ವಾಹನದ ಉದ್ದವನ್ನು 12 ಅಡಿಗಿಂತ ಕಡಿಮೆಗೊಳಿಸಿದೆ. ಈ ಗಾತ್ರವು ಸ್ಟಾಂಡರ್ಡ್ ಮಿನಿ ಕೂಪರ್‌ಗಿಂತ ಕಡಿಮೆಯಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ವಾಹನದಲ್ಲಿ ಬೈಡೈರೆಕ್ಷನಲ್ ಕೆಪಾಸಿಟೆನ್ಸ್ ಹಾಗೋ ಫೋರ್-ವ್ಹೀಲ್ ಸ್ಟೀಯರಿಂಗ್ ಟೆಕ್ನಾಲಜಿಯನ್ನು ಬಳಸಲಾಗಿದೆ. ಈ ಟೆಕ್ನಾಲಜಿಯನ್ನು ಹೆಚ್ಚಿನ ಮೊಬಿಲಿಟಿ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ವಾಹನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 75 ಎಂಪಿಹೆಚ್ ಗಳಾಗಿದೆ.

ಈ ವಾಹನದ ಬಗ್ಗೆ ಮಾಹಿತಿ ನೀಡಿರುವ ಜೂಕ್ಸ್ ಇಂಕ್ ಕಂಪನಿಯು ವಾಹನವನ್ನು ಫೋಸ್ಟರ್ ಸಿಟಿ, ಕ್ಯಾಲಿಫೋರ್ನಿಯಾ, ಲಾಸ್ ವೇಗಾಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೋದ ಕಂಪನಿಯ ಜಾಗಗಳಲ್ಲಿ ಪರೀಕ್ಷಿಸಲಾಗುತ್ತಿದ್ದು, ಉತ್ತಮ ಪ್ರದರ್ಶನವನ್ನು ನೀಡುತ್ತಿದೆ ಎಂದು ಹೇಳಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಿಲಿಕಾನ್ ವ್ಯಾಲಿಯ ಫೋಸ್ಟರ್ ಸಿಟಿ ಮೂಲದ ಜೂಕ್ಸ್ ಅನ್ನು 2014ರಲ್ಲಿ ಸ್ಥಾಪಿಸಲಾಯಿತು. ಈ ಕಂಪನಿಯನ್ನು ಅಮೆಜಾನ್ ಕಂಪನಿಯು ಜೂನ್ ತಿಂಗಳಿನಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಜೂಕ್ಸ್ ಕಂಪನಿಯು ಅಮೆಜಾನ್‌ನಲ್ಲಿ ಸ್ವತಂತ್ರ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಇನ್ನು ಇತರ ಸುದ್ದಿಗಳತ್ತ ಗಮನ ಹರಿಸುವುದಾದರೆ ಇತ್ತೀಚಿಗೆ ಹೆವಿ ಡ್ಯೂಟಿ ಟ್ರಕ್ ಹಾಗೂ ಬಸ್ ತಯಾರಕ ಕಂಪನಿಯಾದ ಡೈಮ್ಲರ್ ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಟ್ರಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜರ್ಮನಿ ಮೂಲದ ಆಟೋಮೊಬೈಲ್ ಕಂಪನಿಯಾದ ಡೈಮ್ಲರ್, ಭಾರತ್‌ಬೆಂಝ್ ಹಾಗೂ ಫುಸೊ ಬ್ರಾಂಡ್‌ಗಳ ಅಡಿಯಲ್ಲಿ ಮಧ್ಯಮ ಗಾತ್ರದ ಹಾಗೂ ಭಾರೀ ಗಾತ್ರದ ಟ್ರಕ್ ಹಾಗೂ ಬಸ್‌ಗಳನ್ನು ಉತ್ಪಾದಿಸುತ್ತದೆ.

ಡೈಮ್ಲರ್ ಕಂಪನಿಯು ಮುಂದಿನ ವರ್ಷ ಫ್ಯೂಚರ್ ಮೊಬಿಲಿಟಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಿದೆ. ಫುಸೊ ಇ-ಸೆಂಟರ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಟ್ರಕ್ ಆಗಿದ್ದು, ಅದರ ಎರಡನೇ ತಲೆಮಾರಿನ ರೂಪಾಂತರವನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಾಗುವುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುವ ಈ ಟ್ರಕ್ 3,200 ಕೆ.ಜಿಗಳವರೆಗಿನ ಪೇಲೋಡ್‌ಗಳನ್ನು ಸಾಗಿಸಬಲ್ಲದು. ಅಂದ ಹಾಗೆ ಭಾರತದಲ್ಲಿ ಭಾರತ್ ಸ್ಟೇಜ್ 5 ಟ್ರಕ್'ಗಳನ್ನು ಬಿಡುಗಡೆಗೊಳಿಸಿದ ಏಕೈಕ ಕಂಪನಿ ಡೈಮ್ಲರ್.