ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಭಾರತ, ಚೀನಾ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಚೀನಾದ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಭಾರತದಲ್ಲಿ ರೂ.1,000 ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಎಂಜಿ ಮೋಟಾರ್ ಬ್ರಿಟನ್ ಮೂಲದ ಕಂಪನಿಯಾಗಿದ್ದು, ಚೀನಾದ ವಾಹನ ತಯಾರಕ ಕಂಪನಿಯಾದ ಎಸ್‌ಐಸಿ ಸ್ವಾಧೀನದಲ್ಲಿದೆ.

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಹೂಡಿಕೆ ಮಾಡಲು ಭಾರತದ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಬದಲಿಸಿದೆ. ಈ ಹಿನ್ನೆಲೆಯಲ್ಲಿ ಉದ್ಯಮದಲ್ಲಿ ಹೂಡಿಕೆ ಮಾಡಲು ಹಾಗೂ ಉದ್ಯಮಗಳನ್ನು ವಿಸ್ತರಿಸಲು ಆಂತರಿಕ ವ್ಯಾಪಾರ ಇಲಾಖೆಯಿಂದ ಕಂಪನಿಗಳು ಅನುಮತಿ ಪಡೆಯಬೇಕಾಗುತ್ತದೆ.

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಈ ಬಗ್ಗೆ ಎಕನಾಮಿಕ್ ಟೈಮ್ಸ್ ಆಟೋಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಎಂಜಿ ಮೋಟಾರ್ ಇಂಡಿಯಾ ಅಧ್ಯಕ್ಷ ರಾಜೀವ್ ಛಾಬಾರವರು ಭಾರತ ಸರ್ಕಾರವು ತನಗೆ ಸರಿ ಎನಿಸಿದ್ದನ್ನು ಮಾಡುತ್ತಿದೆ. ಪ್ರತಿ ಸರ್ಕಾರವು ತನ್ನ ನಾಗರಿಕರ ಹಿತದೃಷ್ಟಿಗೆ ಅನುಸಾರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಕ್ತವಾಗಿದೆ ಎಂದು ಹೇಳಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಭಾರತ, ಚೀನಾ ನಡುವೆ ಉದ್ಭವಿಸಿರುವ ಪರಿಸ್ಥಿತಿಯು ತಾತ್ಕಾಲಿಕವಾಗಿದೆ. ಶೀಘ್ರದಲ್ಲೇ ಉಭಯ ದೇಶಗಳ ನಡುವೆ ಶಾಂತಿ ನೆಲೆಸಲಿ ಎಂದು ಹಾರೈಸಿದ ಅವರು, ಎರಡು ದೇಶಗಳ ನಡುವಿನ ಉದ್ವಿಗ್ನತೆಯು ವ್ಯಾಪಾರದ ಮೇಲೆ ಪರಿಣಾಮ ಬೀರದ ಅನೇಕ ಉದಾಹರಣೆಗಳಿವೆ ಎಂದು ಅವರು ಹೇಳಿದರು.

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ರೂ.3,000 ಕೋಟಿ ಹೂಡಿಕೆಯೊಂದಿಗೆ ಎಂಜಿ ಮೋಟಾರ್ ಕಂಪನಿಯು ಗುಜರಾತ್‌ನ ಹಲೋಲ್‌ನಲ್ಲಿ ಉತ್ಪಾದನಾ ಘಟಕವನ್ನು ತೆರೆದಿತ್ತು. ಕಂಪನಿಯು ಹಲೋಲ್‌ನಲ್ಲಿರುವ ಜನರಲ್ ಮೋಟಾರ್ಸ್ ಘಟಕವನ್ನು ಸಹ ಸ್ವಾಧೀನಪಡಿಸಿಕೊಂಡಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಈ ಸ್ಥಾವರವು ಪ್ರತಿ ವರ್ಷ 80,000 ಯುನಿಟ್ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜನರಲ್ ಮೋಟಾರ್ಸ್ 2017ರಲ್ಲಿ ಭಾರತದಲ್ಲಿನ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ನಂತರ ಈ ಉತ್ಪಾದನಾ ಸ್ಥಾವರವನ್ನು ಎಂಜಿ ಮೋಟಾರ್ ಖರೀದಿಸಿತು.

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಎಂಜಿ ಮೋಟಾರ್ ಕಂಪನಿಯು ಸದ್ಯಕ್ಕೆ ಭಾರತದಲ್ಲಿ ಎಂಜಿ ಹೆಕ್ಟರ್, ಝಡ್ಎಸ್ ಎಲೆಕ್ಟ್ರಿಕ್ ಸೇರಿದಂತೆ ಎರಡು ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಇತ್ತೀಚಿಗೆ ತನ್ನ ಮೂರನೇ ಕಾರ್ ಆದ ಗ್ಲೋಸ್ಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದ್ದು, ಬುಕ್ಕಿಂಗ್ ಗಳನ್ನು ಆರಂಭಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ರೂ.1 ಲಕ್ಷ ಮುಂಗಡ ಹಣ ಪಾವತಿಸಿ ಕಂಪನಿಯ ಡೀಲರ್ ಗಳ ಬಳಿ ಅಥವಾ ಆನ್‌ಲೈನ್‌ ಮೂಲಕ್ ಗ್ಲೋಸ್ಟರ್ ಎಸ್‌ಯುವಿಯನ್ನು ಬುಕ್ ಮಾಡಬಹುದು. ಎಂಜಿ ಗ್ಲೋಸ್ಟರ್ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಎಂಜಿ ಗ್ಲೋಸ್ಟರ್ ದೊಡ್ಡ ಗಾತ್ರದ ಪ್ರೀಮಿಯಂ ಎಸ್‌ಯುವಿಯಾಗಿದ್ದು, ಹಲವಾರು ಫೀಚರ್, ಅತ್ಯಾಧುನಿಕ ಟೆಕ್ನಾಲಜಿ ಹಾಗೂ ಬಲಶಾಲಿಯಾದ ಎಂಜಿನ್ ಅನ್ನು ಹೊಂದಿದೆ. ಹಲವು ಫೀಚರ್ ಗಳನ್ನು ಹೊಂದಿರುವ ಈ ಎಸ್‌ಯುವಿಯನ್ನು ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗುತ್ತಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಎಂಜಿ ಗ್ಲೋಸ್ಟರ್ ಈ ಸೆಗ್ ಮೆಂಟಿನಲ್ಲಿರುವ ಅತಿ ಉದ್ದ ಹಾಗೂ ಅತಿ ದೊಡ್ಡ ಎಸ್‌ಯುವಿಯಾಗಿದೆ. ಗ್ಲೋಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರಿನ ಟ್ವಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಗಡಿ ಉದ್ವಿಗ್ನತೆಯ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾದ ಚೀನಾ ಕಂಪನಿ

ಈ ಎಂಜಿನ್ 215 ಬಿಹೆಚ್‌ಪಿ ಪವರ್ ಹಾಗೂ 480 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 8-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

Most Read Articles

Kannada
English summary
Amidst border tension china based MG motor to invest Rs 1000 crore in India. Read in Kannada.
Story first published: Saturday, September 26, 2020, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X