ಸೈಕಲ್ ಸವಾರರಿಗಾಗಿ ಹೊಸ ಫೀಚರ್ ನೀಡಿದ ಆಪಲ್ ಮ್ಯಾಪ್

ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸಲು ಪ್ರತಿಯೊಂದು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಮುಂದಾಗಿವೆ. ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವು ದೇಶಗಳು ಸಬ್ಸಿಡಿಯನ್ನು ನೀಡುತ್ತಿವೆ. ಪ್ರಪಂಚದಾದ್ಯಂತ ಜನರು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮುಂದಾಗಿದ್ದಾರೆ.

ಸೈಕಲ್ ಸವಾರರಿಗಾಗಿ ಹೊಸ ಫೀಚರ್ ನೀಡಿದ ಆಪಲ್ ಮ್ಯಾಪ್

ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಆಪಲ್ ತನ್ನ ಐಫೋನ್‌ಗಳಲ್ಲಿ ಎಲೆಕ್ಟ್ರಿಕ್ ವಾಹನ ಹಾಗೂ ಸೈಕಲ್‌ಗಳಿಗಾಗಿ ಮೀಸಲಾಗಿರುವ ಪ್ರತ್ಯೇಕ ಟ್ರ್ಯಾಕ್‌ಗಳ ಬಗೆಗಿನ ಮಾಹಿತಿಯನ್ನು ನೀಡಲು ಮುಂದಾಗಿದೆ. ಇದರಿಂದ ಇನ್ನು ಮುಂದೆ ಆಪಲ್ ಮ್ಯಾಪ್‌ನಲ್ಲಿ ಸೈಕಲ್ ಟ್ರ್ಯಾಕ್‌ಗಳನ್ನು ನೋಡುವುದು ಸುಲಭವಾಗಲಿದೆ. ಸೈಕಲ್ ಸವಾರರು ತಮ್ಮ ನಗರದಲ್ಲಿ ಸೈಕ್ಲಿಂಗ್‌ಗಾಗಿ ವಿನ್ಯಾಸಗೊಳಿಸಲಾದ ವಿಶೇಷ ಟ್ರ್ಯಾಕ್‌ಗಳನ್ನು ಈ ಮ್ಯಾಪ್ ಮೂಲಕ ಕಾಣಬಹುದು.

ಸೈಕಲ್ ಸವಾರರಿಗಾಗಿ ಹೊಸ ಫೀಚರ್ ನೀಡಿದ ಆಪಲ್ ಮ್ಯಾಪ್

ಈ ಫೀಚರ್ ಅನ್ನು ಆಪಲ್‌ನ ಐಒಎಸ್ 14ನಲ್ಲಿ ನೀಡಲಾಗುವುದು. ಇನ್ನು ಕೆಲ ದಿನಗಳಲ್ಲಿ ಈ ಅಪ್‌ಡೇಟ್ ಅನ್ನು ನೀಡಲಾಗುವುದು. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗಾಗಿ ಮೀಸಲಾದ ವಿಶೇಷ ಟ್ರ್ಯಾಕ್ ಅಥವಾ ರಸ್ತೆಯ ಬಗ್ಗೆಯೂ ಮಾಹಿತಿಯನ್ನು ಪಡೆಯ ಬಹುದು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸೈಕಲ್ ಸವಾರರಿಗಾಗಿ ಹೊಸ ಫೀಚರ್ ನೀಡಿದ ಆಪಲ್ ಮ್ಯಾಪ್

ಚಾರ್ಜಿಂಗ್ ಸ್ಟೇಷನ್, ಸರ್ವೀಸ್ ಸೆಂಟರ್, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಎಕ್ಸ್‌ಚೇಂಜ್ ಸೆಂಟರ್‌ಗಳ ಬಗ್ಗೆಯೂ ಈ ಮ್ಯಾಪ್‌ನಲ್ಲಿ ಮಾಹಿತಿ ದೊರೆಯಲಿದೆ. ಎಲೆಕ್ಟ್ರಿಕ್ ವಾಹನಗಳನ್ನು ಬಳಸುವವರು ತಮ್ಮ ವಾಹನಗಳ ಚಾರ್ಜಿಂಗ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ.

ಸೈಕಲ್ ಸವಾರರಿಗಾಗಿ ಹೊಸ ಫೀಚರ್ ನೀಡಿದ ಆಪಲ್ ಮ್ಯಾಪ್

ಈ ಮ್ಯಾಪ್‌ನಲ್ಲಿರುವ ಚಾರ್ಜಿಂಗ್ ಸ್ಟೇಷನ್‌ಗೆ ಸಂಬಂಧಿಸಿದ ಮಾಹಿತಿಯಿಂದಾಗಿ ಚಾರ್ಜ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮ್ಯಾಪ್ ರೂಟಿಂಗ್ ಬಳಕೆಯನ್ನು ಸುಲಭಗೊಳಿಸಲು ಆಪಲ್ ಕಂಪನಿಯು ಬಿಎಂಡಬ್ಲ್ಯು ಹಾಗೂ ಫೋರ್ಡ್ ಕಂಪನಿಗಳ ಜೊತೆಗೆ ಕೈಜೋಡಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸೈಕಲ್ ಸವಾರರಿಗಾಗಿ ಹೊಸ ಫೀಚರ್ ನೀಡಿದ ಆಪಲ್ ಮ್ಯಾಪ್

ಆಪಲ್ ಕಂಪನಿಯು ಮುಂಬರುವ ದಿನಗಳಲ್ಲಿ ಉಳಿದ ಕಾರು ತಯಾರಕ ಕಂಪನಿಗಳ ಜೊತೆಗೂ ಸಹಭಾಗಿತ್ವ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಆಪಲ್ ಈ ಮ್ಯಾಪ್‌ನಲ್ಲಿ ಟ್ರಾಫಿಕ್ ಜಾಮ್ ಇರುವ ಮಾರ್ಗಗಳಿಗೆ ಬದಲಿಗೆ ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆ.

ಸೈಕಲ್ ಸವಾರರಿಗಾಗಿ ಹೊಸ ಫೀಚರ್ ನೀಡಿದ ಆಪಲ್ ಮ್ಯಾಪ್

ಸೈಕಲ್ ಟ್ರಾಕ್‌ಗಳನ್ನು ಆಪಲ್ ಮ್ಯಾಪ್‌ನಲ್ಲಿ ಸೇರಿಸಲಾಗಿದೆ. ಈ ರೀತಿಯ ಫೀಚರ್‌ಗಾಗಿ ಜನರು ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿದ್ದರು. ಈ ಫೀಚರ್‌ನಿಂದಾಗಿ ಸೈಕಲ್ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ.

Article Published On: Wednesday, June 24, 2020, 17:58 [IST]
English summary
Apple adds cycling and electric vehicle routing to its map in IOS 14 update. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+