Just In
- 21 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇನ್ನು ನಾಲ್ಕು ವರ್ಷಗಳಲ್ಲಿ ರಸ್ತೆಗಿಳಿಯಲಿವೆ ಆಟೋಮ್ಯಾಟಿಕ್ ಆಗಿ ಚಲಿಸುವ ಆ್ಯಪಲ್ ಕಂಪನಿಯ ಕಾರುಗಳು
ಆ್ಯಪಲ್ ಕಂಪನಿಯು ದುಬಾರಿ ಬೆಲೆಯ ಮೊಬೈಲ್ ಫೋನ್'ಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಆ್ಯಪಲ್ ಕಂಪನಿಯು ಸಾಮಾನ್ಯವಾಗಿ ಐಫೋನ್, ಐಪ್ಯಾಡ್, ಮ್ಯಾಕ್‌ಬುಕ್'ಗಳನ್ನು ಉತ್ಪಾದಿಸುತ್ತದೆ.

ಆ್ಯಪಲ್ ಕಂಪನಿಯು ಈಗ ಆಟೋಮೊಬೈಲ್ ಉದ್ಯಮಕ್ಕೂ ಕಾಲಿಡಲು ಸಿದ್ದತೆಯನ್ನು ನಡೆಸುತ್ತಿದೆ ಎಂಬ ಮಾಹಿತಿ ಹೊರಬಂದಿದೆ. ವರದಿಗಳ ಪ್ರಕಾರ, ಆ್ಯಪಲ್ ಕಂಪನಿಯು ಆಟೋಮ್ಯಾಟಿಕ್ ಆಗಿ ಚಲಿಸುವ ಕಾರುಗಳನ್ನು ತಯಾರಿಸಲಿದೆ. ಈ ಕಾರುಗಳು 2024ರಲ್ಲಿ ರಸ್ತೆಗಿಳಿಯಲಿವೆ. ಈ ಕಾರುಗಳಿಗಾಗಿ ಆ್ಯಪಲ್ ಕಂಪನಿಯು ತನ್ನದೇ ಆದ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.

ಕಡಿಮೆ ಬೆಲೆಯನ್ನು ಹೊಂದಲಿರುವ ಈ ಬ್ಯಾಟರಿಗಳು, ಕಾರುಗಳು ಹೆಚ್ಚು ದೂರ ಚಲಿಸುವಂತೆ ಮಾಡುತ್ತವೆ. ಸದ್ಯಕ್ಕೆ ಈ ಕಾರಿನ ಬ್ಯಾಟರಿಯ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗಗೊಂಡಿಲ್ಲ. ಆ್ಯಪಲ್ ಕಾರುಗಳ ಆಪ್ಟಿಮೈಸೇಶನ್ ಬಗೆಗಿನ ಮಾಹಿತಿ ಮಾತ್ರ ಬಹಿರಂಗವಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಮಾಹಿತಿಯ ಆಧಾರದ ಮೇಲೆ ಆ್ಯಪಲ್ ಕಂಪನಿಯಿಂದ ಒಳ್ಳೆಯ ಕಾರನ್ನು ನಿರೀಕ್ಷಿಸಬಹುದು. ಕಂಪನಿಯು ಇತ್ತೀಚಿಗೆ ತನ್ನ ಲ್ಯಾಪ್‌ಟಾಪ್ ಬ್ಯಾಟರಿ ಅವಧಿಯನ್ನು ದ್ವಿಗುಣಗೊಳಿಸಿ ಟೆಕ್ ಜಗತ್ತಿಗೆ ದೊಡ್ಡ ಅಚ್ಚರಿಯನ್ನು ನೀಡಿತ್ತು.

ಬ್ಯಾಟರಿ ಅವಧಿಯನ್ನು ಹೆಚ್ಚಿಸಲು ಆ್ಯಪಲ್ ಕಂಪನಿಯು ಎಂ 1 ಚಿಪ್ ಅನ್ನು ಬಳಸಿದೆ. ಆದರೆ ಕಾರುಗಳು ಸಂಪೂರ್ಣವಾಗಿ ವಿಭಿನ್ನವಾಗಿರಲಿವೆ. ಆದರೆ ಆ್ಯಪಲ್ ಬ್ಯಾಟರಿ ಆಪ್ಟಿಮೈಸೇಶನ್‌ನಲ್ಲಿ ಪ್ರಮುಖ ಕಂಪನಿಯಾಗಿದೆ. ಕಂಪನಿಯು ಆಟೋಮ್ಯಾಟಿಕ್ ಆಗಿ ಚಲಿಸುವ ಕಾರನ್ನು ಉತ್ಪಾದಿಸಲಿದೆ ಎಂಬುದು ವಿಶೇಷ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆ್ಯಪಲ್ 2014ರಲ್ಲಿ ಪ್ರಾಜೆಕ್ಟ್ ಟೈಟಾನ್ ಅನ್ನು ಆರಂಭಿಸಿತು. ಇದರನ್ವಯ ಕಂಪನಿಯು ತನ್ನ ವಾಹನವನ್ನು ವಿನ್ಯಾಸಗೊಳಿಸಿತ್ತು. ಆದರೆ 2017ರಲ್ಲಿ ಸಾಫ್ಟ್‌ವೇರ್‌ನತ್ತ ಗಮನ ಹರಿಸುವ ಪ್ರಯತ್ನಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಯೋಜನೆಯು ಸ್ಥಗಿತಗೊಂಡಿತು.

ಈಗ ಕಂಪನಿಯು ಗ್ರಾಹಕರಿಗಾಗಿ ಆಟೋಮ್ಯಾಟಿಕ್ ಆಗಿ ಚಲಿಸುವ ಕಾರನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಬ್ಯಾಟರಿ ತಂತ್ರಜ್ಞಾನದಲ್ಲಿ ಯಶಸ್ಸನ್ನು ಕಂಡಿರುವ ಆ್ಯಪಲ್ ಕಂಪನಿಯು 2024ರ ವೇಳೆಗೆ ಪ್ಯಾಸೆಂಜರ್ ಕಾರನ್ನು ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆ್ಯಪಲ್ ಕಂಪನಿಯು ಮೂಲತಃ ಕಾರು ತಯಾರಕ ಕಂಪನಿಯಲ್ಲ. ಈ ಕಾರಣಕ್ಕೆ ಕಂಪನಿಯು ಕಾರನ್ನು ಉತ್ಪಾದಿಸಲು ಬೇರೆ ಕಾರು ತಯಾರಕ ಕಂಪನಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಆ್ಯಪಲ್ ಕಂಪನಿಯು ಆಟೋಮ್ಯಾಟಿಕ್ ಆಗಿ ಚಲಿಸುವ ಕಾರುಗಳಿಗಾಗಿ ಸಾಫ್ಟ್‌ವೇರ್ ಹಾಗೂ ಇಂಟೆಲಿಜೆನ್ಸ್ ಅನ್ನು ತಯಾರಿಸುವ ಸಾಧ್ಯತೆಗಳಿವೆ. ಆ್ಯಪಲ್ ಕಂಪನಿಯು 2024ರ ವೇಳೆಗೆ ಆಟೋಮ್ಯಾಟಿಕ್ ಆಗಿ ಚಲಿಸುವ ಕಾರುಗಳನ್ನು ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದ್ದರೂ ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಗಡುವು ಮತ್ತಷ್ಟು ಮುಂದೂಡಿಕೆಯಾಗಬಹುದು.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.