ಕರೋನಾ ವೈರಸ್ ಎಫೆಕ್ಟ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬರಲಿವೆ ವಿಶೇಷ ಬಸ್ಸುಗಳು

ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (ಎಪಿಎಸ್‌ಆರ್‌ಟಿಸಿ) ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ 26 ಸೀಟುಗಳನ್ನು ಹೊಂದಿರುವ ವಿಶೇಷ ಬಸ್ ಅನ್ನು ವಿನ್ಯಾಸಗೊಳಿಸಿದೆ. ಆಂಧ್ರಪ್ರದೇಶ ಸರ್ಕಾರವು ಈ ರೀತಿಯ ವಿಶೇಷ ಬಸ್ಸುಗಳನ್ನು ಸಿದ್ಧಪಡಿಸುತ್ತಿದ್ದು, ಲಾಕ್‌ಡೌನ್ ಮುಗಿದ ನಂತರ ಬಳಸಲಾಗುವುದು.

ಕರೋನಾ ವೈರಸ್ ಎಫೆಕ್ಟ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬರಲಿವೆ ವಿಶೇಷ ಬಸ್ಸುಗಳು

ಈ ಬಸ್‌ನ ವಿನ್ಯಾಸದ ಮೂಲಮಾದರಿಯನ್ನು ಪರಿಶೀಲನೆಗಾಗಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಿಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಬಸ್ಸುಗಳ ಸೇವೆಯನ್ನು ಪುನರಾರಂಭಿಸಲಾಗುವುದೆಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿರವರು ಇತ್ತೀಚೆಗೆ ತಿಳಿಸಿದ್ದರು. ಈ ಕಾರಣಕ್ಕೆ ಎಪಿಎಸ್‌ಆರ್‌ಟಿಸಿ ವಿಶೇಷ ಬಸ್ಸುಗಳನ್ನು ವಿನ್ಯಾಸಗೊಳಿಸುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬರಲಿವೆ ವಿಶೇಷ ಬಸ್ಸುಗಳು

ಇದರ ಅಂಗವಾಗಿ ಎಪಿಎಸ್ಆರ್‌ಟಿಸಿ ಅಧಿಕಾರಿಗಳು ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು 36 ಸೀಟುಗಳ ಸೂಪರ್ ಐಷಾರಾಮಿ ಬಸ್ ಬಳಸಿ ಮೂರು ಸಾಲಿನ 26 ಸೀಟುಗಳ ಬಸ್ ಅನ್ನು ವಿನ್ಯಾಸಗೊಳಿಸಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬರಲಿವೆ ವಿಶೇಷ ಬಸ್ಸುಗಳು

ತನ್ನ ಪಾಲುದಾರ ಬಸ್‌ಗಳಲ್ಲಿ ನಗದು ರಹಿತ ಟಿಕೆಟಿಂಗ್ ವ್ಯವಸ್ಥೆಯನ್ನು ಉತ್ತೇಜಿಸಲು ನಿಯಮಗಳನ್ನು ಮಾಡಲಾಗುತ್ತಿದೆ. ಇದರ ಅಡಿಯಲ್ಲಿ ಆನ್‌ಲೈನ್ ಮೂಲಕ ಟಿಕೆಟ್‌ಗಳನ್ನು ಮೊದಲೇ ಬುಕ್ಕಿಂಗ್ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬರಲಿವೆ ವಿಶೇಷ ಬಸ್ಸುಗಳು

ಕರೋನಾ ವೈರಸ್ ರಾಜ್ಯದಲ್ಲಿ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಎಪಿಎಸ್ಆರ್‌ಟಿಸಿ ಮಾರ್ಚ್ 25ರಿಂದ ಎಲ್ಲಾ ಪ್ರಯಾಣಿಕರ ಸೇವೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಮೇ 17ರಂದು ಲಾಕ್‌ಡೌನ್ ಮುಗಿದ ನಂತರ ಮೇ 18ರಿಂದ ಆಂಧ್ರದಲ್ಲಿ ಬಸ್ ಸೇವೆ ಪುನರಾರಂಭವಾಗಲಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬರಲಿವೆ ವಿಶೇಷ ಬಸ್ಸುಗಳು

ಮೇ 18ರೊಳಗೆ ಈ ರೀತಿಯ 100 ಬಸ್‌ಗಳನ್ನು ಸಿದ್ಧಪಡಿಸಲಾಗುವುದೆಂದು ಎಪಿಎಸ್ಆರ್‌ಟಿಸಿ ತಿಳಿಸಿದೆ. ಈ ಎಲ್ಲಾ ಬಸ್ಸುಗಳು ತಮ್ಮ ಸಾಮರ್ಥ್ಯಕ್ಕಿಂತ 70%ನಷ್ಟು ಕಡಿಮೆ ಪ್ರಯಾಣಿಕರನ್ನು ಸಾಗಿಸಲಿವೆ. ಲಾಕ್‌ಡೌನ್ ಮುಗಿದ ನಂತರ ಎಪಿಎಸ್ಆರ್‌ಟಿಸಿ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸುತ್ತಿಲ್ಲ.

ಕರೋನಾ ವೈರಸ್ ಎಫೆಕ್ಟ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬರಲಿವೆ ವಿಶೇಷ ಬಸ್ಸುಗಳು

ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಿಗೆ ಮನವಿ ಮಾಡುತ್ತಿರುವುದಾಗಿ ಎಪಿಎಸ್ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಸೂಚನೆ: ಕೆಲವು ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Article Published On: Tuesday, May 12, 2020, 19:07 [IST]
English summary
APSRTC designs 26 seat bus prototype to maintain social distancing. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+