ಹೊಸ ಫೀಚರ್ ಗಳೊಂದಿಗೆ ಮೈ ಆಡಿ ಕನೆಕ್ಟ್ ಆ್ಯಪ್ ಪರಿಚಯಿಸಿದ ಆಡಿ
ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಗ್ರಾಹಕರಿಗಾಗಿ ಮೈ ಆಡಿ ಕನೆಕ್ಟ್ ಆ್ಯಪ್ ಅನ್ನು ಪರಿಚಯಿಸಿದೆ. ಈ ಡಿಜಿಟಲ್ ಯೋಜನೆಯಡಿಯಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ಆ್ಯಪ್ ಮೂಲಕ ಇತ್ತೀಚಿನ ಸೌಲಭ್ಯಗಳನ್ನು ಒದಗಿಸಲಿದೆ.

ಮೈ ಆಡಿ ಕನೆಕ್ಟ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯು ಗ್ರಾಹಕರ ಸುರಕ್ಷತೆ, ಚಾಲಕರ ನಡವಳಿಕೆ, ಸ್ಥಳದ ಮಾಹಿತಿ ಹಾಗೂ ಸರ್ವೀಸ್ ಬುಕಿಂಗ್‌ನಂತಹ ಹಲವು ಫೀಚರ್ ಗಳನ್ನು ಒದಗಿಸುತ್ತದೆ. ಅಪ್ಲಿಕೇಶನ್‌ನ ನವೀಕರಿಸಿದ ಆವೃತ್ತಿಗೆ ಹೊಸದಾಗಿ ಹೆಚ್ಚುವರಿ ಫೀಚರ್ ಗಳನ್ನು ಸೇರಿಸಲಾಗಿದೆ.

ಇವುಗಳಲ್ಲಿ ಲಾಗಿನ್, ಅಪ್ಲಿಕೇಶನ್‌ನಲ್ಲಿರುವ ಸರಕುಗಳು, ಆಡಿ ಕ್ಲಬ್ ಇಂಡಿಯಾ ಸದಸ್ಯರಿಗಾಗಿ ಪಾವತಿ ಆಯ್ಕೆ, ಆಡಿ ಕನ್ಸರ್ಟ್‌ನಿಂದ ವಿಶೇಷ ಕೊಡುಗೆ, ಕಾರ್-ಲೈಫ್ ಉತ್ಪನ್ನಗಳ ಕೊಡುಗೆಗಳು, ಆನ್‌ಲೈನ್ ಸಪೋರ್ಟ್ ಹಾಗೂ ಸರ್ವೀಸ್ ಗಳು ಸೇರಿವೆ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಈ ಫೀಚರ್ ಗಳನ್ನು ಎಲ್ಲಾ ಆಡಿ ಇಂಡಿಯಾ ಗ್ರಾಹಕರಿಗೆ ಸ್ಟಾಂಡರ್ಡ್ ಆಗಿ ನೀಡಲಾಗುವುದು. ಹೊಸ ಗ್ರಾಹಕರು ಹಾಗೂ ಆಡಿ ಕಾರಿನ ಉತ್ಸಾಹಿಗಳಿಗಾಗಿ ವರ್ಧಿತ ರಿಯಾಲಿಟಿ, ಟೆಸ್ಟ್ ಡ್ರೈವ್ ರಿಕ್ವೆಸ್ಟ್, ಪ್ರಾಡಕ್ಟ್ ಬ್ರೌಷರ್ ಹಾಗೂ ಸರ್ವೀಸ್ ಕಾಸ್ಟ್ ಕ್ಯಾಲ್ಕುಲೇಟರ್ ಸೇರಿದಂತೆ ಹಲವಾರು ಇತರ ಫೀಚರ್ ಗಳನ್ನು ನೀಡಲಾಗುವುದು.

ಆಡಿ ಗ್ರಾಹಕರ ಜೊತೆಗೆ, ಆಡಿ ಗ್ರಾಹಕರಲ್ಲದವರು ಸಹ ಈ ಅಪ್ಲಿಕೇಶನ್‌ನ ಲಾಭವನ್ನು ಪಡೆಯಬಹುದು. ಆಡಿ ಗ್ರಾಹಕರಲ್ಲದವರು ವರ್ಧಿತ ರಿಯಾಲಿಟಿ, ಟೆಸ್ಟ್ ಡ್ರೈವ್ ರಿಕ್ವೆಸ್ಟ್ ಹಾಗೂ ಇನ್ನಿತರ ಸೇವೆಗಳ ಕುರಿತು ಯಾವುದೇ ಹೆಚ್ಚುವರಿ ಮಾಹಿತಿಗಾಗಿ ಆಕ್ಸೆಸ್ ಹೆಲ್ಪ್ ಡೆಸ್ಕ್ ಪ್ರವೇಶಿಸಬಹುದು.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಆಡಿ ಕಂಪನಿಯು ಶೀಘ್ರದಲ್ಲಿಯೇ ತನ್ನ ಹೊಸ ಆರ್ ಎಸ್ ಕ್ಯೂ 8 ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಕಾರಿನ ಟೀಸರ್ ಅನ್ನು ಹಲವು ಬಾರಿ ಬಿಡುಗಡೆಗೊಳಿಸಿದೆ. ಕಂಪನಿಯು ಈ ಕಾರಿನ ಬುಕ್ಕಿಂಗ್ ಗಳನ್ನು ಆರಂಭಿಸಿದೆ.

ಮಾಹಿತಿಯ ಪ್ರಕಾರ, ಈ ಕಾರನ್ನು ಕಂಪನಿಯ ಡೀಲರ್ ಗಳ ಬಳಿ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ರೂ.15 ಲಕ್ಷ ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಬಹುದು. ಆಡಿ ಆರ್ ಎಸ್ ಕ್ಯೂ 8 ಕಂಪನಿಯ, ಕ್ಯೂ 8 ಎಸ್‌ಯುವಿಯ ಪರ್ಫಾಮೆನ್ಸ್ ಆವೃತ್ತಿಯಾಗಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಆಡಿ ಆರ್ ಎಸ್ ಕ್ಯೂ 8 ಕಾರಿನಲ್ಲಿ 4.0-ಲೀಟರಿನ ಟ್ವಿನ್-ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 600 ಬಿಹೆಚ್‌ಪಿ ಪವರ್ ಹಾಗೂ 800 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರ್ ಎಸ್ ಕ್ಯೂ 8-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ 4-ವ್ಹೀಲ್ ಡ್ರೈವ್ ಕಾರ್ ಆಗಿದೆ.


Click it and Unblock the Notifications








