ಕ್ಯೂ8 ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ ಆಡಿ ಇಂಡಿಯಾ

ಆಡಿ ಇಂಡಿಯಾ ಕಂಪನಿಯು ತನ್ನ ಫ್ಲ್ಯಾಗ್‌ಶಿಫ್ ಎಸ್‌ಯುವಿ ಮಾದರಿಯಾದ ಕ್ಯೂ8 ನಲ್ಲಿ ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 98.98 ಲಕ್ಷ ಬೆಲೆ ಹೊಂದಿದೆ.

ಕ್ಯೂ8 ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ ಆಡಿ ಇಂಡಿಯಾ

ಕ್ಯೂ8 ಸೆಲೆಬ್ರೆಷನ್ ಮಾದರಿಯು ಸ್ಟ್ಯಾಂಡರ್ಡ್ ಕ್ಯೂ8 ಮಾದರಿಗಿಂತಲೂ ರೂ.34.02 ಲಕ್ಷ ಹೆಚ್ಚುವರಿ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಹೊಸ ಬಣ್ಣದ ಆಯ್ಕೆಯೊಂದಿಗೆ ಕೆಲವು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಸ್ಟ್ಯಾಂಡರ್ಡ್ ಮಾದರಿಯಂತೆ ತಾಂತ್ರಿಕ ಅಂಶಗಳ ಜೋಡಣೆ ಹೊಂದಿದೆ. ಹೊಸ ಕಾರು ಮಾದರಿಯ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಹೊಸ ಕಾರಿನ ವಿತರಣೆ ಆರಂಭವಾಗಲಿದೆ.

ಕ್ಯೂ8 ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ ಆಡಿ ಇಂಡಿಯಾ

ಕ್ಯೂ8 ಹೊಸ ಕಾರು ಮಾದರಿಯು ಕ್ವಾಟ್ರೊ ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಹೊಂದಿದ್ದು, 3.0-ಲೀಟರ್ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಮಾದರಿಯು 8-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ 338-ಬಿಎಚ್‌ಪಿ, 500-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಕ್ಯೂ8 ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ ಆಡಿ ಇಂಡಿಯಾ

ಹೊಸ ಎಂಜಿನ್ ಮಾದರಿಯು 5.9-ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100ಕಿ.ಮೀ ಸ್ಪೀಡ್ ಸಾಧಿಸುವ ವೈಶಿಷ್ಟ್ಯತೆ ಹೊಂದಿದ್ದು, ಗಂಟೆಗೆ ಗರಿಷ್ಠ 250ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಕ್ಯೂ8 ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ ಆಡಿ ಇಂಡಿಯಾ

ಹೊಸ ಕಾರಿನಲ್ಲಿ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ಆಡಿ ಫೋನ್ ಬಾಕ್ಸ್, ಆಡಿ ಮ್ಯೂಜಿಕ್ ಇಂಟರ್‌ಫೇಸ್, ಪನೋರಮಿಕ್ ಸನ್‌ರೂಫ್, ಆಡಿ ಪ್ರಿ ಸೆನ್ಸ್, 8-ಏರ್‌ಬ್ಯಾಗ್, ಕಾನ್ಟೂರ್ ಆ್ಯಂಬಿಯೆಂಟ್ ಮತ್ತು ಪಾರ್ಕ್ ಅಸಿಸ್ಟ್ ಸೌಲಭ್ಯಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕ್ಯೂ8 ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ ಆಡಿ ಇಂಡಿಯಾ

ಸೆಲೆಬ್ರೆಷನ್ ಮಾದರಿಯು ಕೆಲವು ಕೆಲವು ಫೀಚರ್ಸ್‌ಗಳನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ವಿನ್ಯಾಸ ಪಡೆದುಕೊಂಡಿದ್ದು, ಹೆಕ್ಸಾಗೊನಲ್ ಗ್ರಿಲ್, ಮಲ್ಟಿ ಎಲ್ಇಡಿ ಟೈಲ್ ಲ್ಯಾಂಪ್, ಬೂಟ್‌ಲಿಡ್‌ಗೆ ಹೊಂದಿಕೊಂಡಂತಿರುವ ಲೈಟ್‌ಬಾರ್ ಮತ್ತು 19-ಇಂಚಿನ 5-ಸ್ಪೋಕ್ ಅಯಾಲ್ ವೀಲ್ಹ್ ಸೌಲಭ್ಯ ಪಡೆದುಕೊಂಡಿದೆ.

ಕ್ಯೂ8 ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ ಆಡಿ ಇಂಡಿಯಾ

ಸೆಲೆಬ್ರೆಷನ್ ಮಾದರಿಯ ಆಕರ್ಷಣೆಗಾಗಿ ಹೆಚ್‌ಡಿ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಡೈನಾಮಿಕ್ ಲೈಟಿಂಗ್ಸ್, ಎಂಎಂಐ ನ್ಯಾನಿಗೇಷನ್ ಸಿಸ್ಟಂ, ವರ್ಚುವಲ್ ಕುಕ್‌ಪಿಟ್ ಸೌಲಭ್ಯಗಳು ಕಾರಿನ ಐಷಾರಾಮಿ ಸೌಲಭ್ಯಗಳಿಗೆ ಪೂರಕವಾಗಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕ್ಯೂ8 ಸೆಲೆಬ್ರೆಷನ್ ಮಾಡೆಲ್ ಬಿಡುಗಡೆ ಮಾಡಿದ ಆಡಿ ಇಂಡಿಯಾ

ಇದರೊಂದಿಗೆ ಕ್ಯೂ8 ಎಸ್‌ಯುವಿ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯೊಂದಿಗೆ ಸೆಲೆಬ್ರೆಷನ್ ಮತ್ತು ಆರ್‌ಎಸ್ ಮಾದರಿಗಳನ್ನು ಹೊಂದಿದ್ದು, ಮುಂಬರುವ ದೀಪಾವಳಿ ವಿಶೇಷತೆ ಹಿನ್ನಲೆಯಲ್ಲಿ ಹೊಸ ಮಾದರಿಯೊಂದಿಗೆ ಗ್ರಾಹಕರ ಆಕರ್ಷಣೆ ಕಾರಣವಾಗಲಿದೆ.

More from DriveSpark

Article Published On: Friday, October 9, 2020, 16:38 [IST]
English summary
Audi Q8 Celebration Model Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+