ಲಾಕ್‌ಡೌನ್ ಎಫೆಕ್ಟ್: ದಿಢೀರ್ ಬೇಡಿಕೆ ಕಂಡ ಚೆನ್ನೈ ಹೊಟೇಲ್, ರೆಸಾರ್ಟ್ ಗಳು

ತಮಿಳುನಾಡಿನ ಚೆನ್ನೈ ಭಾರತದ ಪ್ರಮುಖ ವಾಹನ ತಯಾರಿಕಾ ನಗರವಾಗಿದೆ. ಹೊಸ ಲಾಕ್‌ಡೌನ್ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿರುವ ಚೆನ್ನೈನ ಆಟೋಮೊಬೈಲ್ ಕಂಪನಿಗಳ ಉತ್ಪಾದನಾ ಘಟಕಗಳ ಸುತ್ತಮುತ್ತಲಿರುವ ಹೋಟೆಲ್‌, ರೆಸಾರ್ಟ್‌ ಹಾಗೂ ರೆಸ್ಟ್ ಹೌಸ್ ಗಳಿಗೆ ದಿಢೀರನೆ ಬೇಡಿಕೆ ಹೆಚ್ಚಾಗಿದೆ.

ಲಾಕ್‌ಡೌನ್ ಎಫೆಕ್ಟ್: ದಿಢೀರ್ ಬೇಡಿಕೆ ಕಂಡ ಚೆನ್ನೈ ಹೊಟೇಲ್, ರೆಸಾರ್ಟ್ ಗಳು

ಹ್ಯುಂಡೈ, ಮಾರುತಿ ಸುಜುಕಿ, ಟಿವಿಎಸ್ ಮೋಟಾರ್, ನಿಸ್ಸಾನ್ ಹಾಗೂ ರಾಯಲ್ ಎನ್‌ಫೀಲ್ಡ್ ಸೇರಿದಂತೆ ಹಲವು ಕಂಪನಿಗಳು ಹೋಟೆಲ್‌ಗಳನ್ನು ಕಾಯ್ದಿರಿಸಿ ತಮ್ಮ ಉದ್ಯೋಗಿಗಳು ತಂಗಲು ಅವಕಾಶ ಮಾಡಿಕೊಡುತ್ತಿವೆ. ಚೆನ್ನೈನಲ್ಲಿ ಹೊಸದಾಗಿ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಉತ್ಪಾದನೆಯನ್ನು ನಿಲ್ಲಿಸಲು ಬಯಸದ ಕಂಪನಿಗಳು ಉದ್ಯೋಗಿಗಳಿಗೆ ತಾತ್ಕಾಲಿಕ ವಸತಿ ಒದಗಿಸಲು ಉತ್ಪಾದನಾ ಘಟಕದ ಸಮೀಪವಿರುವ ಹೋಟೆಲ್‌ಗಳನ್ನು ಕಾಯ್ದಿರಿಸುತ್ತಿವೆ.

ಲಾಕ್‌ಡೌನ್ ಎಫೆಕ್ಟ್: ದಿಢೀರ್ ಬೇಡಿಕೆ ಕಂಡ ಚೆನ್ನೈ ಹೊಟೇಲ್, ರೆಸಾರ್ಟ್ ಗಳು

ಹ್ಯುಂಡೈ ಮೋಟಾರ್ ಇಂಡಿಯಾ, ತನ್ನ ಉದ್ಯೋಗಿಗಳಿಗಾಗಿ ಶ್ರೀಪೆರುಂಬುದೂರ್‌ನಲ್ಲಿರುವ ತನ್ನ ಉತ್ಪಾದನಾ ಘಟಕದ ಸುತ್ತಮುತ್ತಲಿರುವ ಮೂರು ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಹಾಸ್ಟೆಲ್‌ಗಳನ್ನು ಬಳಸಿಕೊಳ್ಳುವ ಒಪ್ಪಂದವನ್ನು ಮಾಡಿಕೊಂಡಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ದಿಢೀರ್ ಬೇಡಿಕೆ ಕಂಡ ಚೆನ್ನೈ ಹೊಟೇಲ್, ರೆಸಾರ್ಟ್ ಗಳು

ಹ್ಯುಂಡೈ ಕಂಪನಿಯು ಈ ಪ್ರದೇಶದ ಸುತ್ತಮುತ್ತ ಸುಮಾರು 1,200 ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿದೆ. ಇದರ ಜೊತೆಗೆ ಕಂಪನಿಯು ತನ್ನ ಮಾರಾಟಗಾರರಿಗೆ ಹತ್ತಿರದ ಹಾಸ್ಟೆಲ್‌ಗಳಲ್ಲಿ ತಾತ್ಕಾಲಿಕ ವಸತಿ ಒದಗಿಸಿದೆ.

ಲಾಕ್‌ಡೌನ್ ಎಫೆಕ್ಟ್: ದಿಢೀರ್ ಬೇಡಿಕೆ ಕಂಡ ಚೆನ್ನೈ ಹೊಟೇಲ್, ರೆಸಾರ್ಟ್ ಗಳು

ಲಾಕ್‌ಡೌನ್ ವಿನಾಯಿತಿಯ ನಂತರ ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನು 50%ನಷ್ಟು ಕಡಿಮೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ಪಾದನೆಯು ಸಹಜ ಸ್ಥಿತಿಗೆ ಬರಲಿದೆ ಎಂದು ಹ್ಯುಂಡೈ ಕಂಪನಿ ಹೇಳಿದೆ. ಪ್ರತ್ಯಕ್ಷವಾಗಿ 1.4 ಲಕ್ಷ ಉದ್ಯೋಗಿಗಳನ್ನು ಹಾಗೂ ಪರೋಕ್ಷವಾಗಿ 4.5 ಲಕ್ಷ ಉದ್ಯೋಗಿಗಳನ್ನು ಹೊಂದಿರುವುದಾಗಿ ಹ್ಯುಂಡೈ ಹೇಳಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ದಿಢೀರ್ ಬೇಡಿಕೆ ಕಂಡ ಚೆನ್ನೈ ಹೊಟೇಲ್, ರೆಸಾರ್ಟ್ ಗಳು

ಹ್ಯುಂಡೈ ಕಂಪನಿಗೆ ಫ್ರಾನ್ಸ್ ಹಾಗೂ ಜಪಾನ್ ನಲ್ಲಿ ಪೈಪೋಟಿ ನೀಡುವ ರೆನಾಲ್ಟ್-ನಿಸ್ಸಾನ್ ತನ್ನ ಬಹುತೇಕ ಉದ್ಯೋಗಿಗಳನ್ನು ಹೋಟೆಲ್‌ಗಳಲ್ಲಿ ಉಳಿಸಿಕೊಂಡಿದೆ. ಸ್ಥಳೀಯ ದ್ವಿಚಕ್ರ ಹಾಗೂ ತ್ರಿಚಕ್ರ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್, ತನ್ನ ಕಾರ್ಮಿಕರನ್ನು ಹತ್ತಿರದ ಮ್ಯಾರೇಜ್ ಹಾಲ್‌ಗಳಲ್ಲಿರಿಸಿದೆ.

ಲಾಕ್‌ಡೌನ್ ಎಫೆಕ್ಟ್: ದಿಢೀರ್ ಬೇಡಿಕೆ ಕಂಡ ಚೆನ್ನೈ ಹೊಟೇಲ್, ರೆಸಾರ್ಟ್ ಗಳು

ಚೆನ್ನೈನಲ್ಲಿರುವ ಆಟೋಮೊಬೈಲ್ ಕಂಪನಿಗಳು ಪ್ರತಿವರ್ಷ ಅರವತ್ತು ಲಕ್ಷ ವಾಹನಗಳನ್ನು ಉತ್ಪಾದಿಸುತ್ತವೆ. ಇದು ದೇಶದ ವಾಹನ ಉತ್ಪಾದನೆಯ ಆರನೇ ಒಂದು ಭಾಗವಾಗಿದೆ. ಈ ವಾಹನಗಳಲ್ಲಿ ಮುಕ್ಕಾಲು ಭಾಗ ದ್ವಿಚಕ್ರ ವಾಹನಗಳಾದರೆ, 13.6% ಪ್ರಯಾಣಿಕ ವಾಹನಗಳು ಹಾಗೂ ಉಳಿದವು ಕಮರ್ಷಿಯಲ್ ವಾಹನಗಳಾಗಿವೆ.

Most Read Articles

Kannada
English summary
Auto companies in Chennai books hotels to keep workers close to production unit. Read in Kannada.
Story first published: Friday, July 3, 2020, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X