ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಮಹಾಮಾರಿ ಕರೋನಾ ವೈರಸ್ ತಗ್ಗಿಸಲು ಮೇ 3ರ ತನಕ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಡಿಲಿಕೆ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಹೊಸ ನಿಯಮಾನುಸಾರವಾಗಿ ವಿವಿಧ ಉತ್ಪಾದನಾ ಕಂಪನಿಗಳು ಉತ್ಪಾದನಾ ಪ್ರಕ್ರಿಯೆಯನ್ನು ಪುನಾರಂಭಿಸಿವೆ.

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಏಪ್ರಿಲ್ 15ರಿಂದ ವಿಧಿಸಲಾಗಿದ್ದ 2ನೇ ಹಂತದ ಲಾಕ್‌ಡೌನ್ ಮುಗಿಯಲು ಇನ್ನು ಕೆಲ ದಿನಗಳು ಬಾಕಿ ಇರುವಾಗಲೇ ಹಸಿರು ವಲಯಗಳಲ್ಲಿರುವ ಕೈಗಾರಿಕೆಗಳ ಉತ್ಪಾದನಾ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗಿದ್ದು, ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಮತ್ತು ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕಳೆದ ಒಂದು ತಿಂಗಳ ನಂತರ ಉತ್ಪಾದನಾ ಪ್ರಕ್ರಿಯೆ ಪುನಾರಂಭಿಸಿವೆ.

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ವಾಹನ ಮತ್ತು ಬಿಡಿಭಾಗಗಳ ಉತ್ಪಾದನೆಗೆ ಮರುಚಾಲನೆ ನೀಡಿರುವ ವಿವಿಧ ಆಟೋ ಕಂಪನಿಗಳು ಸೋಂಕು ಹರಡದಂತೆ ಹಲವಾರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ನಿರ್ದಿಷ್ಟ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಮಾರುತಿ ಸುಜುಕಿ, ಬಜಾಜ್ ಆಟೋ, ಟಿವಿಎಸ್, ಟೊಯೊಟಾ, ಮಹೀಂದ್ರಾ ಸೇರಿದಂತೆ ಬಿಡಿಭಾಗಗಳ ಉತ್ಪಾದನಾ ಕಂಪನಿಗಳಾದ ಲುಮ್ಯಾಕ್ಸ್, ಸೆಟ್ಕೋ, ಪ್ರಿಕೊಲ್ ಮತ್ತು ಅಪೊಲೋ ಕಂಪನಿಗಳು ಕೂಡಾ ಉತ್ಪಾದನಾ ಚಟುವಟಿಕೆಗೆ ಮರುಚಾಲನೆ ನೀಡಿವೆ.

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಕೇಂದ್ರ ಸರ್ಕಾರ ನೀಡಿರುವ ಹೊಸ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಸದ್ಯ ಉತ್ಪಾದನೆಗೆ ಅನುಮತಿ ಪಡೆದುಕೊಂಡಿರುವ ಕೈಗಾರಿಕಾ ಸಂಸ್ಥೆಗಳು ಕೇವಲ ಶೇ.30 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿರಲಿದೆ.

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಯಾವುದೇ ಉತ್ಪಾದನಾ ಚಟುವಟಿಕೆಗಳಿಲ್ಲದೆ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದ ಕೈಗಾರಿಕೆ ವಲಯಕ್ಕೆ ಇದೀಗ ನೀಡಿರುವ ಕೆಲವು ವಿನಾಯ್ತಿಗಳಿಂದ ಉತ್ಪಾದನೆಗೆ ಮತ್ತೆ ಚಾಲನೆ ಸಿಕ್ಕಿರುವುದು ತುಸು ಸಮಾಧಾನ ತಂದಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಆದರೆ ಉತ್ಪಾದನಾ ಸ್ಥಳದಲ್ಲಿ ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ತೆಗೆದುಕೊಳ್ಳಬೇಕಿರುವುದು ಆಯಾ ಕಂಪನಿಗಳ ಆದ್ಯ ಕರ್ತವ್ಯವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಖಾತ್ರಿ ವ್ಯಕ್ತಪಡಿಸಿವೆ.

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಇನ್ನು ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿವೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಲಾಕ್‌ಡೌನ್ ಸಡಿಲಿಕೆ- ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದ ಆಟೋ ಕಂಪನಿಗಳು

ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪನ್ನಗಳನ್ನು ಸಿದ್ದಪಡಿಸುತ್ತಿವೆ.

Most Read Articles

Kannada
English summary
Auto Component Manufacturers Start Limited Operations: Lumax, Setco, Pricol, Apollo & More. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X