ಕೃಷಿ ಕ್ಷೇತ್ರಕ್ಕೂ ಕಾಲಿಡಲಿವೆ ಡ್ರೋನ್‌ಗಳು

ಕೃಷಿಕರ ಅಗತ್ಯಕ್ಕೆ ತಕ್ಕಂತೆ ವಿಶೇಷ ಉದ್ದೇಶದ ಹಾಗೂ ಕಡಿಮೆ ವೆಚ್ಚದ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ಕೇಂದ್ರ ವಿಮಾನಯಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೂ ಕಾಲಿಡಲಿವೆ ಡ್ರೋನ್‌ಗಳು

ಎಫ್‌ಐಸಿಸಿಐ ಆಯೋಜಿಸಿದ್ದ ವೆಬ್‌ನಾರ್ ಅನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ವಿಮಾನಯಾನ ಇಲಾಖೆಯ ಜಂಟಿ ಕಾರ್ಯದರ್ಶಿ ಅಂಬರ್ ದುಬೆರವರು ದೇಶದಲ್ಲಿ ಸುಮಾರು 1 ಲಕ್ಷ ಗ್ರಾಮಗಳಿದ್ದು, ಇವುಗಳು ಡ್ರೋನ್‌ಗಳಿಂದ ಪ್ರಯೋಜನ ಪಡೆಯಬಹುದು ಎಂದು ಹೇಳಿದರು. ವಿಶೇಷ ಉದ್ದೇಶದ ಡ್ರೋನ್ ಗಳ ಅಗತ್ಯವಿದ್ದು, ಕಂಪನಿಗಳು ಕಡಿಮೆ ವೆಚ್ಚದ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕು ಎಂದು ಅವರು ಹೇಳಿದರು.

ಕೃಷಿ ಕ್ಷೇತ್ರಕ್ಕೂ ಕಾಲಿಡಲಿವೆ ಡ್ರೋನ್‌ಗಳು

ಸ್ಟಾರ್ಟ್ ಅಪ್ ಕಂಪನಿಗಳು ಕೃಷಿ ಕೇಂದ್ರಿತ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬರಬೇಕು ಎಂದು ಹೇಳಿದ ಅವರು ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಹಾಗೂ ಲಾಭದಾಯಕವಾಗಿಸಲು ಕಡಿಮೆ ವೆಚ್ಚದ ಡ್ರೋನ್‌ಗಳ ಅಗತ್ಯವಿದೆ ಎಂದು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕೃಷಿ ಕ್ಷೇತ್ರಕ್ಕೂ ಕಾಲಿಡಲಿವೆ ಡ್ರೋನ್‌ಗಳು

ಈ ವಿಷಯದ ಬಗ್ಗೆ ಮಾತನಾಡಿದ ಕೃಷಿ ಸಚಿವಾಲಯದ ಅಧಿಕಾರಿಯೊಬ್ಬರು ಮಣ್ಣಿನ ವಿಶ್ಲೇಷಣೆಯಲ್ಲಿ ಡ್ರೋನ್ ಟೆಕ್ನಾಲಜಿಯು ತುಂಬಾ ಉಪಯುಕ್ತವಾಗಿದೆ. ಇದರಿಂದ ನೀರಾವರಿಯ ನಿರ್ವಹಣೆ ಹಾಗೂ ನೈಟ್ರೋಜನ್ ಮಟ್ಟವನ್ನು ಸರಿಪಡಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಕೃಷಿ ಕ್ಷೇತ್ರಕ್ಕೂ ಕಾಲಿಡಲಿವೆ ಡ್ರೋನ್‌ಗಳು

ವೆಬ್‌ನಾರ್‌ನಲ್ಲಿ ಹಾಜರಿದ್ದ ಕೃಷಿ ಆಯುಕ್ತರಾದ ಎಸ್‌.ಕೆ.ಮಲ್ಹೋತ್ರಾರವರು ಮಾತನಾಡಿ, ಡ್ರೋನ್ ಪರಿಸರಕ್ಕೆ ಹಾಗೂ ರೈತರಿಗೆ ಸುರಕ್ಷಿತವಾಗಿದೆ. ಡ್ರೋನ್‌ಗಳ ನೆರವಿನಿಂದ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಉತ್ಪಾದಕತೆ ಹಾಗೂ ದಕ್ಷತೆ ಹೆಚ್ಚಾಗಿ ನೀರಿನ ಬಳಕೆ ಕಡಿಮೆಯಾಗುತ್ತದೆ ಎಂದು ಹೇಳಿದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕೃಷಿ ಕ್ಷೇತ್ರಕ್ಕೂ ಕಾಲಿಡಲಿವೆ ಡ್ರೋನ್‌ಗಳು

ಸುಸಜ್ಜಿತವಾದ ಡ್ರೋನ್ ತಂತ್ರಜ್ಞಾನವನ್ನು ಇತರ ಬೆಳೆಗಳು ಹಾಗೂ ಅನ್ವಯವಾಗುವ ಕ್ಷೇತ್ರಗಳಿಗೂ ವಿಸ್ತರಿಸಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೂ ಕಾಲಿಡಲಿವೆ ಡ್ರೋನ್‌ಗಳು

ಮಿಡತೆ ನಿಯಂತ್ರಣಕ್ಕಾಗಿ ಡ್ರೋನ್‌ಗಳನ್ನು ಬಳಸಲು ಇತ್ತೀಚಿಗೆ ಸರಕಾರವು ನೀಡಿರುವ ಅನುಮತಿಯ ಬಗ್ಗೆ ಮಾತನಾಡಿದ ಕಾರ್ಪ್‌ಲೈಫ್ ಇಂಡಿಯಾದ ಸಿಇಒರವರು ರಾತ್ರಿ ವೇಳೆಯಲ್ಲಿಯೂ ಸಹ ಹಾರಾಟ ನಡೆಸಬಲ್ಲ ಹಲವು ಶ್ರೇಣಿಯ ಡ್ರೋನ್‌ಗಳನ್ನು ಹೊಂದಿರುವ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ಹೇಳಿದರು.

Most Read Articles

Kannada
English summary
Aviation ministry asks startup companies to develop low cost drones for agriculture purpose. Read in Kannada.
Story first published: Thursday, July 30, 2020, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X