ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಜಾಜ್ ಕ್ಯೂಟ್ ಬಿಎಸ್-6 ವರ್ಷನ್

ಬಜಾಜ್ ಆಟೋ ಕಂಪನಿಯು ಕರೋನಾ ವೈರಸ್‌ನಿಂದಾಗಿ ಕ್ಯೂಟ್ ಕ್ವಾಡ್ರಿಸೈಕಲ್ ಬಿಎಸ್-6 ಮಾದರಿಯನ್ನು ತಡವಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಎಂಜಿನ್ ಪ್ರೇರಿತ ಕ್ಯೂಟ್ ವಾಹನವು ಇದೀಗ ಪೆಟ್ರೋಲ್ ಮಾದರಿಯ ಜೊತೆಗೆ ಸಿಎನ್‌ಜಿ ಆವೃತ್ತಿಯೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಹೊಸ ಬಜಾಜ್ ಕ್ಯೂಟ್

ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ದೇಶಿಯ ಮಾರುಕಟ್ಟೆಯಿಂದಲೇ ರಫ್ತುಗೊಳ್ಳುವ ಕ್ಯೂಟ್ ಕ್ವಾಡ್ರಿಸೈಕಲ್ ಮಾದರಿಯು ಭಾರತದಲ್ಲಿ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್‌ಗೆ ಅನುಸಾರವಾಗಿ ಉನ್ನತೀಕರಣಗೊಂಡಿದ್ದು, ಶೀಘ್ರದಲ್ಲೇ ಹೊಸ ಕ್ಯೂಟ್ ಕ್ವಾಡ್ರಿಸೈಕಲ್ ಮಾದರಿಯು ಪೆಟ್ರೋಲ್ ಮತ್ತು ಸಿಎನ್‌ಜಿ ಆೃತ್ತಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಹೊಸ ಬಜಾಜ್ ಕ್ಯೂಟ್

ಬಜಾಜ್ ಕ್ಯೂಟ್ ವಾಹನವು ಸ್ವಂತ ಬಳಕೆಯ ಜೊತೆಗೆ ವಾಣಿಜ್ಯ ಉದ್ದೇಶಗಳಿಗೂ ಬಳಸಿಕೊಳ್ಳಬಹುದಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಕ್ಯೂಟ್ ಪೆಟ್ರೋಲ್ ಮಾದರಿಯು ರೂ.2.48 ಲಕ್ಷಕ್ಕೆ ಮತ್ತು ಸಿಎನ್‌ಜಿ ಮಾದರಿಯು ರೂ. 2. 78 ಲಕ್ಷಕ್ಕೆ ಖರೀದಿ ಲಭ್ಯವಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಹೊಸ ಬಜಾಜ್ ಕ್ಯೂಟ್

ಬಿಎಸ್-6 ಕ್ಯೂಟ್ ಮಾದರಿಯು ಬಿಎಸ್-4 ಮಾದರಿಗಿಂತಲೂ ರೂ.20 ಸಾವಿರದಿಂದ ರೂ.40 ಸಾವಿರದಷ್ಟು ದುಬಾರಿಯಾಗುವ ಸಾಧ್ಯತೆಗಳಿದ್ದು, ಟ್ರಾಫಿಕ್ಸ್ ದಟ್ಟಣೆಯ ನಡುವೆಯೂ ವಾಹನ ಚಾಲನೆಯನ್ನು ಸುಲಭವಾಗಿಸಲು ಈ ಹೊಸ ವಾಹನವು ಸಾಕಷ್ಟು ಸಹಕಾರಿಯಾಗಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಹೊಸ ಬಜಾಜ್ ಕ್ಯೂಟ್

ಹೊಸ ಕ್ಯೂಟ್ ವಾಹನ ಮಾದರಿಯ ಮುಂದಿನ ತಿಂಗಳು ಅಕ್ಟೋಬರ್ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ವಾಹನವು 2752-ಎಂಎಂ ಉದ್ದ, 1312-ಎಂಎಂ ಅಗಲ, 1652-ಎಂಎಂ ಎತ್ತರದೊಂದಿಗೆ ಅಚ್ಚುಕಟ್ಟಾದ ನಾಲ್ಕು ಆಸನ ಸೌಲಭ್ಯ ಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಹೊಸ ಬಜಾಜ್ ಕ್ಯೂಟ್

ಕ್ಯೂಟ್ ಕ್ವಾಡ್ರಿಸೈಕಲ್ ಮಾದರಿಯಲ್ಲಿ 216.6-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 13-ಬಿಎಚ್‌ಪಿ ಮತ್ತು 18.9-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಹೊಸ ಬಜಾಜ್ ಕ್ಯೂಟ್

ಬಿಎಸ್-6 ಮಾದರಿಯು ಸಹ ಬಿಎಸ್-4 ಮಾದರಿಯಲ್ಲಿರುವಂತೆಯೇ 216.6-ಸಿಸಿ ಎಂಜಿನ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದ್ದು, ಸಿಎನ್‌ಜಿ ಮಾದರಿಯನ್ನು ಬಜಾಜ್ ಕಂಪನಿಯೇ ಅಳವಡಿಕೆ ಮಾಡಲಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಹೊಸ ಬಜಾಜ್ ಕ್ಯೂಟ್

ಇನ್ನು ಬಜಾಜ್ ಆಟೋ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಸಾಮಾನ್ಯ ಮಾದರಿಯ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೂ ಹೆಚ್ಚಿನ ಗಮನಹರಿಸಿದ್ದು, ಮೊದಲ ಬಾರಿಗೆ ತನ್ನ ಜನಪ್ರಿಯ ಕ್ಯೂಟ್ ಕ್ವಾಡ್ರಿಸೈಕಲ್ ಮಾದರಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗಾಗಿ ಸಿದ್ದತೆ ನಡೆಸಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಹೊಸ ಬಜಾಜ್ ಕ್ಯೂಟ್

ಕ್ಯೂಟ್ ಕ್ವಾಡ್ರಿಸೈಕಲ್ ಎಲೆಕ್ಟ್ರಿಕ್ ವಾಹನ ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳು ಸಹ ನಡೆಯುತ್ತಿದ್ದು, ಕ್ಯೂ ಕಾರ್ ಹೆಸರಿನಲ್ಲಿ ಎಲೆಕ್ಟ್ರಿಕ್ ಆವೃತ್ತಿಯು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದೆ.

Most Read Articles

Kannada
English summary
Bajaj Qute BS6 Spotted Testing Ahead Of Launch In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X