ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಧ್ಯಮ ವರ್ಗದವರಿಗೆ ಕಾರು ಓಡಿಸುವುದು ಕಷ್ಟಕರವಾಗುತ್ತಿದೆ. ಕಾರು ತಯಾರಕ ಕಂಪನಿಗಳು ಸಹ ಪರಿಸರ ಸ್ನೇಹಿ ವಾಹನಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸುತ್ತಿವೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

ಪರಿಸರ ಸ್ನೇಹಿ ವಾಹನಗಳಲ್ಲಿ ಸಿಎನ್‌ಜಿ ಅಂದರೆ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ವಾಹನಗಳೂ ಸಹ ಸೇರಿವೆ. ಕೆಲವು ಕಾರು ತಯಾರಕ ಕಂಪನಿಗಳು ಈಗಾಗಲೇ ತಮ್ಮ ಸಿಎನ್‌ಜಿ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ದೇಶಿಯ ಮಾರುಕಟ್ಟೆಯಲ್ಲಿ ರೂ.8 ಲಕ್ಷದೊಳಗೆ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

1. ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಸಿಎನ್‌ಜಿ

ಈ ಕಾರನ್ನು ಈ ವರ್ಷ ಸಿಎನ್‌ಜಿ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹ್ಯುಂಡೈ ಕಂಪನಿಯು ಈ ಕಾರ್ ಅನ್ನು ಮೂರು-ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಿದೆ. 1.2-ಲೀಟರಿನ ಸಿಎನ್‌ಜಿ ಎಂಜಿನ್ ಜೊತೆಗೆ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

ಈ ಎಂಜಿನ್ 68 ಬಿಹೆಚ್‌ಪಿ ಪವರ್ ಹಾಗೂ 95 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಕಾರ್ ಅನ್ನು ಮ್ಯಾಗ್ನಾ ಹಾಗೂ ಸ್ಪೋರ್ಟ್ಜ್‌ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಮ್ಯಾಗ್ನಾ ಮಾದರಿಯ ಬೆಲೆ ಏಕ್ ಶೋರೂಂ ದರದಂತೆ ರೂ.6.64 ಲಕ್ಷಗಳಾದರೆ, ಸ್ಪೋರ್ಟ್ಜ್ ಮಾದರಿಯ ಬೆಲೆ ರೂ.7.18 ಲಕ್ಷಗಳಾಗಿದೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

2. ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ

ಮಾರುತಿ ಸುಜುಕಿ ಕಂಪನಿಯು ತನ್ನ ಹಲವಾರು ಕಾರುಗಳನ್ನು ಸಿಎನ್‌ಜಿ ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಿದೆ. ಅವುಗಳಲ್ಲಿ ಸೆಲೆರಿಯೊ ಕಾರು ಕೂಡ ಒಂದು. 1.0-ಲೀಟರಿನ ಸಿಎನ್‌ಜಿ ಎಂಜಿನ್ ಜೊತೆಗೆ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಪೆಟ್ರೋಲ್ ಎಂಜಿನ್ 67 ಬಿಹೆಚ್‌ಪಿ ಪವರ್ ಹಾಗೂ 90 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

ಸಿಎನ್‌ಜಿ ಎಂಜಿನ್ 59.2 ಬಿಹೆಚ್‌ಪಿ ಪವರ್ ಹಾಗೂ 78 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರ್ ಅನ್ನು ವಿಎಕ್ಸ್‌ಐ ಹಾಗೂ ವಿಎಕ್ಸ್‌ಐ (ಒ) ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ವಿಎಕ್ಸ್‌ಐ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.6 ಲಕ್ಷಗಳಾದರೆ, ವಿಎಕ್ಸ್‌ಐ (ಒ) ಬೆಲೆ ರೂ.5.68 ಲಕ್ಷಗಳಾಗಿದೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

3. ಹ್ಯುಂಡೈ ಒರಾ ಸಿಎನ್‌ಜಿ

ಹ್ಯುಂಡೈ ಕಂಪನಿಯು ತನ್ನ ಒರಾ ಕಾರ್ ಅನ್ನು ಈ ವರ್ಷದ ಜನವರಿ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹ್ಯುಂಡೈ ಒರಾ ಗ್ರ್ಯಾಂಡ್ ಐ 10 ನಿಯೋಸ್‌ನ ಸೆಡಾನ್ ಆವೃತ್ತಿಯಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

ಈ ಕಾರಿನಲ್ಲಿ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಸಿಎನ್‌ಜಿ ಎಂಜಿನ್ ಅಳವಡಿಸಲಾಗಿದೆ. ಹ್ಯುಂಡೈ ಕಂಪನಿಯು ಕೇವಲ ಒಂದು ಮಾದರಿಯಲ್ಲಿ ಮಾತ್ರ ಸಿಎನ್‌ಜಿ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.7.28 ಲಕ್ಷಗಳಾಗಿದೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

4. ಹ್ಯುಂಡೈ ಸ್ಯಾಂಟ್ರೊ ಸಿಎನ್‌ಜಿ

ಹ್ಯುಂಡೈ ಕಂಪನಿಯು ಭಾರತದಲ್ಲಿ ಸ್ಯಾಂಟ್ರೊ ಕಾರ್ ಅನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಈ ಕಾರ್ ಅನ್ನು 1998 ರಲ್ಲಿ ಟಾಲ್‌ಬಾಯ್ ಹ್ಯಾಚ್‌ಬ್ಯಾಕ್ ಆಗಿ ದೇಶಿಯ ಮಾರುಕಟ್ಟೆಯಲ್ಲಿ ಮರು ಬಿಡುಗಡೆಗೊಳಿಸಲಾಯಿತು. ಕಂಪನಿಯು ತನ್ನ ಮೂರನೇ ತಲೆಮಾರಿನ ಕಾರನ್ನು 2018ರಲ್ಲಿ ಬಿಡುಗಡೆಗೊಳಿಸಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

ಈ ಕಾರಿನಲ್ಲಿ 1.1-ಲೀಟರಿನ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 68 ಬಿಹೆಚ್‌ಪಿ ಪವರ್ ಹಾಗೂ 99 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಸಿಎನ್‌ಜಿ ಎಂಜಿನ್ 59 ಬಿಹೆಚ್‌ಪಿ ಪವರ್ ಹಾಗೂ 85 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

ಈ ಕಾರ್ ಅನ್ನು ಮ್ಯಾಗ್ನಾ ಹಾಗೂ ಸ್ಪೋರ್ಟ್ಜ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಮ್ಯಾಗ್ನಾ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.84 ಲಕ್ಷಗಳಾದರೆ, ಸ್ಪೋರ್ಟ್ ಮಾದರಿಯ ಬೆಲೆ ರೂ.6.2 ಲಕ್ಷಗಳಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

5. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ

ಮಾರುತಿ ಸುಜುಕಿ ಕಂಪನಿಯು ವ್ಯಾಗನ್ಆರ್ ಕಾರ್ ಅನ್ನು 4-ಸಿಲಿಂಡರಿನ 1.2-ಲೀಟರ್, 3-ಸಿಲಿಂಡರಿನ 1.0-ಲೀಟರ್, ಪೆಟ್ರೋಲ್ ಎಂಜಿನ್ ನಲ್ಲಿ ಬಿಡುಗಡೆಗೊಳಿಸಿದೆ. ಸಿಎನ್‌ಜಿ ಎಂಜಿನ್ 1.0-ಲೀಟರ್ ಆಗಿದ್ದು, ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎರಡೂ ಮಾದರಿಗಳಲ್ಲಿ 59 ಬಿಹೆಚ್‌ಪಿ ಪವರ್ ಹಾಗೂ 78 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಟಾಪ್ 5 ಸಿಎನ್‌ಜಿ ಕಾರುಗಳಿವು

ಈ ಕಾರ್ ಅನ್ನು ಎಲ್‌ಎಕ್ಸ್‌ಐ ಹಾಗೂ ಎಲ್‌ಎಕ್ಸ್‌ಐ (ಒ) ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಎಲ್‌ಎಕ್ಸ್‌ಐ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.25 ಲಕ್ಷಗಳಾದರೆ, ಎಲ್‌ಎಕ್ಸ್‌ಐ (ಒ) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.32 ಲಕ್ಷಗಳಾಗಿದೆ.

Most Read Articles

Kannada
English summary
Best 5 CNG cars in India available under Rs 8 Lakhs. Read in Kannada.
Story first published: Monday, July 13, 2020, 10:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X