ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

ಭಾರತೀಯ ಮಾರುಕಟ್ಟೆಯಲ್ಲಿ 2020ರ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಪಟ್ಟಿ ಬಹಿರಂಗವಾಗಿವೆ. ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

2020ರ ಆಗಸ್ಟ್ ತಿಂಗಳ ಅತಿ ಹೆಚ್ಚು ಮಾರಾಟವಾದ ಕಾರುಗಳ ಟಾಪ್-10 ಪಟ್ಟೆಯಲ್ಲಿ ಮಾರುತಿ ಸುಜುಕಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಹ್ಯುಂಡೈ ಮತ್ತು ಕಿಯಾ ಸಂಸ್ಥೆಯ ಕಾರುಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶ್ವಸಿಯಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ತನ್ನ ಸರಣಿಯ ಆಲ್ಟೋ ಕಾರನ್ನು ಹಿಂದುಕ್ಕಿ ನಂ.1 ಸ್ಥಾನವನ್ನು ಗಳಿಸಿದೆ. ಮಾರುತಿ ಸುಜುಕಿ ಆಲ್ಟೋ ಕಳೆದ ತಿಂಗಳ ಮಾರಾಟದಲ್ಲಿ ಅಗ್ರಸ್ಥಾನವನ್ನು ಗಳಿಸಿತ್ತು.

ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

2020ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸ್ವಿಫ್ಟ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ತಿಂಗಳು ಸ್ವಿಫ್ ಮಾದರಿಯ 14,869 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಸ್ವಿಫ್ ಜನಪ್ರಿಯ ಮಾದರಿಯಾಗಿದೆ. ಪ್ರಸ್ತುತ ಮೂರನೇ ತಲೆಮಾರಿನ ಸ್ವಿಫ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

ಈ ಟಾಪ್-10 ಕಾರುಗಳ ಪಟ್ಟೆಯಲ್ಲಿ ಎಂಟ್ರಿ ಲೆವಲ್ ಮಾರುತಿ ಸುಜುಕಿ ಆಲ್ಟೋ ಮಾದರಿಯು ಎರಡನೇ ಸ್ಥಾನವನ್ನು ಗಳಿಸಿದೆ. ಸ್ವಿಫ್ಟ್ ಕಾರಿಗಿಂತ ನೂರು ಯುನಿಟ್‌ಗಳ ಅಂತರಗಳಲ್ಲಿ ಅಗ್ರಸ್ಥಾನವನ್ನು ಗಳಿಸುವಲ್ಲಿ ವಿಫಲವಾಗಿದೆ. 2020ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ಆಲ್ಟೊ ಕಾರಿನ 14,397 ಯುನಿಟ್‌ಗಳು ಮಾರಾಟವಾಗಿವೆ.

ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

ಟಾಪ್-10 ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 2020ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನ 13,770 ಯುನಿಟ್‌ಗಳು ಮಾರಾಟವಾಗಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

2020ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ಡಿಜೈರ್ ಮಾದರಿಯ 13,629 ಯುನಿಟ್‌ಗಳು ಮಾರಾಟವಾಗಿವೆ. ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ಗೆ ಹೋಲಿಸಿದರೆ ಕೇವಲ 71 ಯುನಿಟ್ ಕಡಿಮೆಯಾಗಿದೆ. ಮಾರುತಿ ಸುಜುಕಿ ಡಿಜೈರ್ ಭಾರತೀಯ ಮಾರುಕಟ್ಟೆಯ ಕಾಂಪ್ಯಾಕ್ಟ್-ಸೆಡಾನ್ ವಿಭಾಗದಲ್ಲಿ ಪ್ರಾಬಲ್ಯ ಮುಂದುವರೆಸಿದೆ. ಪ್ರತಿ ತಿಂಗಳು ಡಿಜೈರ್ ಮಾದರಿಗಳು ಉತ್ತಮವಾಗಿ ಮಾರಾಟವಾಗುತ್ತಿದೆ.

Rank Model August 2020
1 Maruti Swift 14,869
2 Maruti Alto 14,397
3 Maruti WagonR 13,770
4 Maruti Dzire 13,629
5 Hyundai Creta 11,758
6 Maruti Baleno 10,742
7 Kia Seltos 10,655
8 Hyundai Grand i10 10,190
9 Maruti Ertiga 9,302
10 Maruti Eeco 9,115
ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

ಟಾಪ್-10 ಕಾರುಗಳ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಮಾರುತಿ ಸುಜುಕಿ ಕಾರುಗಳು ವಶಪಡಿಸಿಕೊಂಡರೆ, ಐದನೇ ಸ್ಥಾನವನ್ನು ಹ್ಯುಂಡೈ ಕ್ರೆಟಾ ಪಡೆದುಕೊಂಡಿದೆ. 2020ರ ಆಗಸ್ಟ್ ತಿಂಗಳಲ್ಲಿ ಹ್ಯುಂಡೈ ಕ್ರೆಟಾ ಮಾದರಿಯ 11,758 ಯುನಿಟ್‌ಗಳು ಮಾರಾಟವಾಗಿವೆ. ಅಪ್ದೇಡ್ ಕ್ರೆಟಾ ಮಾದರಿಯನ್ನು ಹ್ಯುಂಡೈ ಪರಿಚಯಿಸಿದ ಬಳಿಕ ಈ ಮಾದರಿಯ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

ಟಾಪ್-10 ಕಾರುಗಳ ಪಟ್ಟಿಯಲ್ಲಿ ಮತ್ತೆ ಆರನೇ ಸ್ಥಾನವನ್ನು ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರು ಪಡೆದುಕೊಂಡಿದೆ. ಬಲೆನೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. 2020ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ಬಲೆನೊ ಕಾರಿನ 10,742 ಯುನಿಟ್‌ಗಳು ಮಾರಾಟವಾಗಿವೆ.

ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

ಭಾರತೀಯ ಮಾರುಕಟ್ಟೆಯಲ್ಲಿ ಒಂದು ವರ್ಷದ ಮಾರಾಟವನ್ನು ಪೂರ್ಣಗೊಳಿಸಿದ ಕಿಯಾ ಸೆಲ್ಟೋಸ್ ಈ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. 2020ರ ಆಗಸ್ಟ್ ತಿಂಗಳಲ್ಲಿ ಕಿಯಾ ಸೆಲ್ಟೋಸ್ ಮಾದರಿಯ 10,665 ಯುನಿಟ್‌ಗಳು ಮಾರಾಟವಾಗಿವೆ.

ಕಾರು ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ ಮಾರುತಿ ಸುಜುಕಿ

ಟಾಪ್-10 ಕಾರುಗಳ ಪಟ್ಟಿಯಲ್ಲಿ ಹ್ಯುಂಡೈ ಗ್ರ್ಯಾಂಡ್ ಐ 10 ಹ್ಯಾಚ್‌ಬ್ಯಾಕ್ 2020ರ ಆಗಸ್ಟ್ ತಿಂಗಳಲ್ಲಿ 10,190 10,190 ಯುನಿಟ್‌ಗಳು ಮಾರಾಟವಾಗಿ ಎಂಟನೇ ಸ್ಥಾನವನ್ನು ಪಡೆದಿದೆ. ಇನ್ನು ನಂತರದ ಸ್ಥಾನಗಳಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಮತ್ತು ಇಕೋ ಕ್ರಮವಾಗಿ 9,302 ಮತ್ತು 9,115 ಯುನಿಟ್ ಯುನಿಟ್‌ಗಳು ಮಾರಾಟವಾಗಿವೆ.

Most Read Articles

Kannada
English summary
Best-Selling Cars In India For August 2020. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X